ಅಲ್ನೋಡಿದ್ರೆ ಗೌರಮ್ಮ, ಇಲ್ನೋಡಿದ್ರೆ ಬಿಚ್ಚಮ್ಮ ; ಸೀತಾ ಫೋಟೋಗೆ ಟೀಕೆ ಟಿಪ್ಪಣಿ..!
ತಮ್ಮ ಒರಿಜಿನಲ್ ಹೆಸರನ್ನೇ ಮರೆಯಾಗಿಸುವಂತೆ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದೇ ಖ್ಯಾತಿಯನ್ನ ಗಳಿಸಿದವರು ವೈಷ್ಣವಿ ಗೌಡ. ತಮ್ಮ ಅಭಿನಯದಿಂದ ಕನ್ನಡಿಗರ ಮನೆ ಮತ್ತು ಮನವನ್ನ ತಲುಪಿದ ವೈಷ್ಣವಿ ಗೌಡ ಭರ್ಜರಿ ಕಾಮಿಡಿ ಎಂಬ ಕಾರ್ಯಕ್ರಮದ ನಿರೂಪಕಿಯೂ ಹೌದು. ಬಿಗ್ ಬಾಸ್ ನ ಮಾಜಿ ಸ್ಫರ್ಧಿಯೂ ಹೌದು.
ಕಿರುತೆರೆಯಿಂದ ಹಿರಿತೆರೆಗೆ ತೆರಳಿ ಆ ನಂತರ ಮತ್ತೆ ಮರಳಿ ಕಿರುತೆರೆಗೆ ಬಂದ ವೈಷ್ಣವಿ ಗೌಡ ಸದ್ಯಕ್ಕೆ ಸೀತಾ ಎಂದೇ ಜನಪ್ರಿಯರಾಗಿದ್ದಾರೆ. ಸೀತಾ ರಾಮ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಪಾಲಿಗಿವರು ಮನೆಮಗಳೇ ಆಗಿ ಹೋಗಿದ್ದಾರೆ. ಇಂಥ ವೈಷ್ಣವಿ ಗೌಡ ಡೀಪ್ ಫೇಕ್‌ಗೆ ಬಲಿಯಾಗಿರುವುದು ದುರ್ದೈವ.

ಹೌದು. ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಗೌಡ ಹೆಸರಿನಲ್ಲಿ ಫೋಟೋವೊಂದು ವೈರಲ್ ಆಗಿದೆ. ವೈಷ್ಣವಿ ಗೌಡ ಅವರ ಎದೆ ಭಾಗ ಕಾಣುವಂತೆ ಎಡಿಟ್ ಮಾಡಿ, ವೈಷ್ಣವಿ ಗೌಡ ಎಂಬ ಫೇಕ್ ಪೇಸ್ ಬುಕ್ ಪೇಜ್ ಕ್ರಿಯೇಟ್ ಮಾಡಿ ಫೋಟೋವನ್ನೂ ಹರಿಬಿಡಲಾಗಿದೆ.
ಮೇಲ್ನೋಟಕ್ಕೆ ಇದು ಡೀಪ್ ಫೇಕ್ ತಂತ್ರಜ್ಞಾನದ ಸಹಾಯದ ಮೂಲಕ ಸೃಷ್ಟಿಸಲಾದ ಫೋಟೋ ಎಂದು ಗೊತ್ತಾಗದ ಕಾರಣ ಅನೇಕರು ಫೋಟೋದಲ್ಲಿರುವುದು ವೈಷ್ಣವಿ ಗೌಡ ಅವರೇ ಎಂದುಕೊಂಡಿದ್ದಾರೆ. ಕೆಟ್ಟಾ ಕೊಳಕಾಗಿ ಬೈಯ್ಯುತ್ತಿದ್ದಾರೆ.

ನಿಮ್ಮ ಮೇಲೆ ತುಂಬಾ ಗೌರವ ಇದೆ, ಪ್ಲೀಸ್ ಇಂತಹ ಫೋಟೋಗಳನ್ನೆಲ್ಲ ಹಾಕಬೇಡಿ ಎಂಬ ಮನವಿಯನ್ನ ಕೆಲವರು ಮಾಡಿಕೊಂಡರೆ, ಇನ್ನೂ ಕೆಲವರು ಸೀತಾರಾಮ ಧಾರಾವಾಹಿಯಿಂದ ಸಿಕ್ಕಿರುವ ಮರ್ಯಾದೆಯನ್ನ ಉಳಿಸಿಕೊಳ್ಳಿ ಎಂದಿದ್ದಾರೆ. ಈ ತರ ಬಟ್ಟೆ ಧರಿಸ್ಕೊಂಡ್ ಹುಡುಗರನ್ಬು ಕೆರಳಿಸೋದ್ ಬಿಟ್ಟು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಮಾದರಿ ಹೆಣ್ಣಾಗಿ ಬದುಕೋದ್ ಕಲಿರಿ ಎಂಬ ಸಲಹೆಯನ್ನೆಲ್ಲ ನೀಡುತ್ತಿದ್ದಾರೆ.
ಇಷ್ಟೇ ಅಲ್ಲ ಸತ್ಯಾಸತ್ಯತೆ ತಿಳಿಯದೇ, ಕರ್ಮ . ಸೀರಿಯಲ್ ಗಳಲ್ಲಿ ಅಪ್ಪಟ ಗೌರಮ್ಮಗಳು ನಿಜ ಜೀವನದಲ್ಲಿ ಬಿಚ್ಚಮ್ಮಗಳು . ಇವರು ಪಾತ್ರದಲ್ಲಿ ಮಾತ್ರ ಸಭ್ಯ ರಿಯಲ್ ಲೈಫ್ ಈತರದ್ದೆ ಎಂಬ ಅಭಿಪ್ರಾಯವನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವಾಂಶ ಅರಿತು ಅಲ್ಲಲ್ಲಿ ಕೆಲವರು ಇದು ಡೀಪ್ ಫೇಕ್ ತಂತ್ರಜ್ಞಾನದ ಕೈಚಳಕ ಎಂಬ ಮಾತುಗಳನ್ನಾಡಿದ್ದಾರೆ. ಈ ರೀತಿ ಕೆಟ್ಟದಾಗಿ ಬಿಂಬಿಸಿ ಒಂದು ಹೆಣ್ಣಿನ ಮಾನಹರಣ ಮಾಡಿದಂತೆ ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ.

ಅಂದ್ಹಾಗೇ ಕಳೆದ ಅಕ್ಟೋಬರ್ 2023 ರಲ್ಲಿ ಜೀ ಕನ್ನಡದ ಜೀ ಕುಟುಂಬ ಅವಾರ್ಡ್ ಸಮಯದಲ್ಲಿ ವೈಷ್ಣವಿ ಗೌಡ ಕೆಂಪು ಬಣ್ಣದ ಗೌನ್ ಧರಿಸಿದ್ದರು. ಈ ವೇಳೆ ಅದೇ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿಕೊಂಡಿದ್ದರು. ಈ ಫೋಟೋಗಳನ್ನೇ ಕಿರಾತಕರು ದುರ್ಬಳಕೆ ಮಾಡಿಕೊಂಡಿದ್ದಾರೆ.
ಸದ್ಯಕ್ಕೆ ವೈಷ್ಣವಿ ಗೌಡ ಅವರ ಈ ಡೀಪ್ ಫೇಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಚಾರಿತ್ರ್ಯ ಹರಣಕ್ಕೆ ಮುಂದಾದ ಕಿಡಿಗೇಡಿಗಳ ವಿರುದ್ಧ ವೈಷ್ಣವಿ ಗೌಡ ದೂರು ದಾಖಲಿಸುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











