Seetha Raama: 'ಸೀತಾ ರಾಮ' ಧಾರಾವಾಹಿಯ ಈ ಬಾಲ ನಟಿಯ ಮೂಲ ನೇಪಾಳ ಅನ್ನೋದು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿ ಬಹಳ ಪಾಪ್ಯುಲಾರಿಟಿಯನ್ನು ಪಡೆಯುತ್ತಿದೆ. ಇದರಲ್ಲಿ ಬಾಲನಟಿಯಾಗಿ ನಟಿಸುತ್ತಿರುವ ಸಿಹಿ ಪಾತ್ರ ಜನರನ್ನು ಇನ್ನಷ್ಟು ರಂಜಿಸಿದೆ. ಅಂದಹಾಗೆ ಈ ಸಿಹಿ ಪಾತ್ರವನ್ನು ಮಾಡುತ್ತಿರುವ ಬಾಲ ನಟಿಯ ಹೆಸರು ರಿತು ಸಿಂಗ್.
ಮೂಲತಃ ನೇಪಾಳದವಳಾದ ಈಕೆ ಕರ್ನಾಟಕದಲ್ಲಿ ನೆಲೆಸಿರುವುದರಿಂದ ಕನ್ನಡ ಚೆನ್ನಾಗಿ ಕಲಿತಿದ್ದಾಳೆ. ಪುಟಾಣಿ ಮಕ್ಕಳಿಗಾಗಿ ಮಾಡಿದ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ರಿತು ಧಾರಾವಾಹಿಯಲ್ಲಿ ಮಿಂಚುತ್ತಿರುವುದು ಸುಳ್ಳಲ್ಲ.

ಚಿಕ್ಕ ಹುಡುಗಿ ತನ್ನ ನಟನೆ ಹಾಗೂ ಮುಗ್ಧತೆಯಿಂದ ಜನರ ಮನ ಗೆದ್ದಿದ್ದಾಳೆ. ಶಾಲೆ ಹಾಗೂ ಶೂಟಿಂಗ್ ಅನ್ನು ಯಾವ ರೀತಿ ಬ್ಯಾಲೆನ್ಸ್ ಮಾಡುತ್ತಾಳೆ ಎಂಬ ಕುತೂಹಲಕ್ಕೆ ಬಹಳ ಮುದ್ದಾಗಿಯೇ ರಿತು ಸಿಂಗ್ ಉತ್ತರಿಸಿದ್ದಾಳೆ.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತಾನಾಡಿರುವ ಆಕೆ "ನನಗೆ ಶೂಟಿಂಗ್ ಎಂದರೆ ಬಹಳ ಇಷ್ಟ. ಹಾಗಾಗಿ ಶೂಟಿಂಗ್‌ಗೆ ಬರುವ ಮೊದಲೇ ಎಲ್ಲಾ ಹೋಂವರ್ಕನ್ನು ಮುಗಿಸುತ್ತೇನೆ. ನಾನು ನನ್ನ ಟೀಚರ್ಸ್ ಜೊತೆ ಕಾಂಟಾಕ್ಟ್‌ನಲ್ಲಿ ಸದಾ ಇರುವುದರಿಂದ ಸ್ಕೂಲ್ ವರ್ಕ್ ಏನು ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ." ಎಂದಿದ್ದಾರೆ.

"ಮೊದ ಮೊದಲು ನನಗೆ ಆ್ಯಕ್ಟಿಂಗ್ ಅಂದ್ರೆ ಭಯ ಆಗ್ತಾ ಇತ್ತು. ಆದರೆ, ಈಗ ನನಗೆ ಆ್ಯಕ್ಟಿಂಗ್ ಅಂದ್ರೆ ತುಂಬಾ ಇಷ್ಟ. ಶೂಟಿಂಗ್ ಸ್ಪಾಟ್‌ನಲ್ಲಿ ಇರುವುದೆಂದರೆ ತುಂಬಾ ಖುಷಿ ಸಿಗುತ್ತೆ. ಎಲ್ಲರ ಜೊತೆನೂ ತುಂಬಾ ಮಜಾ ಮಾಡಬಹುದು. ಅದರಲ್ಲೂ ವಿಶ್ವ ಚಿಕ್ಕಪ್ಪನ (ನಟರಾದ ಪೂರ್ಣಚಂದ್ರ ತೇಜಸ್ವಿ ) ಜೊತೆ ಮಾತಾಡೋಕೆ ಆಟ ಆಡೋಕೆ ನನಗೆ ತುಂಬಾ ಮಜಾ ಅನಿಸುತ್ತೆ" ಎಂದಿದ್ದಾಳೆ ರಿತು ಸಿಂಗ್.
ಇದರ ಜೊತೆಗೆ "ಚಿಕ್ಕ ಹುಡುಗಿಯಾದ ಕಾರಣ ನನಗೆ ಮೊದ ಮೊದಲು ಕ್ಯಾಮೆರಾ ನೋಡಿದ್ರೆ ಭಯ ಆಗ್ತಿತ್ತು. ಆದರೆ ನನ್ನ ಫೇವರಿಟ್ ನಿರ್ದೇಶಕರು ಹಾಗೂ ಕ್ಯಾಮೆರಾಮೆನ್ ನನಗೆ ಡೈಲಾಗ್‌ಗಳನ್ನು ಚೆನ್ನಾಗಿ ಹೇಳಿ ಕೊಡುತ್ತಾರೆ. ಅವರು ಹೇಳಿದಂತೆ ಡೈಲಾಗ್‌ಗಳನ್ನು ಕಲಿತು ಹೇಳೋದಕ್ಕೆ ತುಂಬಾ ಸುಲಭ ಅನ್ಸುತ್ತೆ. ಹಾಗಾಗಿ ನನಗೆ ಅರ್ಥ ಆಗಿದ್ದು, ನಾವು ಯಾವುದಕ್ಕೂ ಭಯಪಡಬಾರದು" ಎಂದು ತನ್ನ ಮಾತಿನಲ್ಲಿ ಹೇಳುತ್ತಾ, ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ.


Click it and Unblock the Notifications











