Seetha Raama: ಸಿಹಿ ಸ್ಕೂಲ್ ಡೇಗೆ ಬರುವಂತೆ ರಾಮ್‌ಗೆ ಸಿಕ್ತು ಆಹ್ವಾನ
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಬೇಕಂತಲೇ ಎಲ್ಲವನ್ನೂ ತನ್ನ ಸುಪರ್ಧಿಗೆ ತೆಗೆದುಕೊಳ್ಳುತ್ತಿದ್ದಾನೆ. ಕಂಪನಿಯಲ್ಲಿ ಮತ್ತೆ ಯಾವುದೇ ಮೋಸವಾಗದಂತೆ ನೋಡಿಕೊಳ್ಳುತ್ತಿದ್ದಾನೆ.
ಭಾರ್ಗವಿ, ವಿಶ್ವನ ಮೇಲೆ ಅನುಮಾನ ಮೂಡುವಂತೆ ಮಾಡಿರುವ ಪ್ಲಾನ್ ಕೂಡ ಸಕ್ಸಸ್ ಆಗಿದೆ. ರಾಮ್‌ಗೆ ವಿಶ್ವ ಚಿಕ್ಕಪ್ಪನೇ ಫ್ರಾಡ್ ಮಾಡುತ್ತಿರುವುದು ಎಂದು ನಂಬಿದ್ದಾನೆ.
ಈಗ ಭಾರ್ಗವಿ ಸದ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದು, ತನ್ನ ಅಧಿಕಾರಕ್ಕೆ ಕುತ್ತು ಬರುವುದಂತೂ ಸತ್ಯ ಎಂಬುದನ್ನು ಅರ್ಥಮಾಡಿಕೊಂಡಿದ್ದಾಳೆ.

ಸೇಡಿನ ಹಿಂದೆ ಬಿದ್ದ ಭಾರ್ಗವಿ
ಭಾರ್ಗವಿಗೆ ರಾಮನ ಮೇಲೆ ದ್ವೇಷವಿದ್ದು, ಮನೆಯ ಆಸ್ತಿ ತಾನೇ ಅನುಭವಿಸಬೇಕು ಎಂದು ಆಸೆ ಪಟ್ಟಿದ್ದಾಳೆ. ಆದರೆ, ಅದು ಸಾಧ್ಯವಾಗದ ಕಾರಣ, ಕಂಪನಿಯಲ್ಲಿ ಸಾಕಷ್ಟು ಫ್ರಾಡ್‌ಗಳನ್ನು ನಡೆಸುತ್ತಿದ್ದಾಳೆ. ಈಗ ಸೀತಾಳ ಮನೆಯನ್ನು ಖರೀದಿಸಲು ಪ್ಲಾನ್ ಮಾಡಿರುವ ಸೀತಾಳಿಗೆ ಮತ್ತೆ ರಾಮ್ ಅಡ್ಡವಾಗಿದ್ದಾನೆ. ಸೂರಿ, ರಾಮ್‌ನನ್ನು ಕೇಳಿ ಎಲ್ಲಾ ಕೆಲಸದಲ್ಲೂ ಮುಂದುವರೆಯುವಂತೆ ಸೂಚನೆ ಕೊಟ್ಟಿದ್ದಾನೆ. ಇದರಿಂದ ಭಾರ್ಗವಿ ಸಿಟ್ಟಾಗಿದ್ದಾಳೆ. ಮನದಲ್ಲಿರುವ ಸೇಡಿನ ರೋಷವನ್ನು ಹೆಚ್ಚಿಸಿಕೊಂಡಿದ್ದಾಳೆ. ವಿಶ್ವ ಬೇರೆ ಆಗಾಗ ಭಾರ್ಗವಿಯನ್ನು ಚುಚ್ಚಿ ಚುಚ್ಚಿ ಮಾತನಾಡಿಉತ್ತಿರುತ್ತಾನೆ. ಆದರೆ, ಅವನ ತಲೆ ಮೇಲೆ ಭಾರ್ಗವಿ ಚಪ್ಪಡಿ ಕಲ್ಲು ಎಳೆದಿರುವ ವಿಚಾರ ಇನ್ನೂ ಗೊತ್ತಾಗಿಲ್ಲ.
ಭಾರ್ಗವಿ ಹೊಸ ಪ್ಲಾನ್
ಸತ್ಯನಿಗೆ ಭಾರ್ಗವಿ ಆಟಗಳೆಲ್ಲವೂ ಗೊತ್ತಿದೆ. ಆದರೆ, ಬಾಯಿ ಬಿಟ್ಟು ಹೇಳಿದರೆ, ನಂಬುವವರು ಯಾರೂ ಇಲ್ಲ. ಹಾಗಾಗಿ ಸತ್ಯ, ರಾಮನಿಗೆ ಎಲ್ಲಾ ನಿಜಾಂಶವೂ ದಿನ ಬರುತ್ತದೆ ಎಂದು ಎದುರು ನೋಡುತ್ತಲೇ ಇದ್ದಾನೆ. ಆಗಾಗ ಭಾರ್ಗವಿಯನ್ನು ರೇಗಿಸಿ ಮಜಾ ತೆಗೆದುಕೊಳ್ಳುತ್ತಿರುತ್ತಾನೆ. ಈಗ ಭಾರ್ಗವಿ, ಸೀತಾ ಮನೆಯನ್ನು ಖರೀದಿಸಲು ಹೊಸ ಪ್ಲಾನ್ ಮಾಡಿದ್ದಾಳೆ. ಚರಣ್ ಡಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ಅವನೇ ಸೀತಾ ಮನೆಯನ್ನು ಖರೀದಿಸುವಂತೆ ಪ್ಲಾನ್ ಹೇಳಿದ್ದಾಳೆ. ಚರಣ್ ಅಕೌಂಟ್‌ನಲ್ಲೂ ಭಾರ್ಗವಿ ಹಣ ಇಟ್ಟಿದ್ದು, ಈಗ ಸೀತಾ ಮನೆಯನ್ನು ಖರೀದಿಸಲು ಮುಂದಾಗಿದ್ದಾಳೆ.

ಸಿಹಿ ಶಾಲೆಯಲ್ಲಿ ಕ್ರೇಜಿಸ್ಟಾರ್
ಸೀತಾ ಮನೆ ಹರಾಜಿಗೆ ಬಂದಿರುವ ವಿಚಾರ ರಾಮ್‌ಗೆ ಗೊತ್ತಾಗಿದೆ. ಆದರೆ ಸೀತಾ ಮನೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದೇ ಗೊತ್ತಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಸಹಿ ಸ್ಕೂಲ್ ಡೇಗೆ ಬರುವಂತೆ ರಾಮ್‌ನನ್ನು ಆಹ್ವಾನಿಸಿದ್ದಾಳೆ. ಅಲ್ಲಿಗೆ ಹೋದರೆ, ಸೀತಾ ಕೋಪ ಮಾಡಿಕೊಳ್ಳಬಹುದು ಎಂಬ ಆತಂಕದಲ್ಲಿ ರಾಮ್ ಇದ್ದಾನೆ. ಇನ್ನು ಶಾಲೆಯ ವಾರ್ಷಿಕೋತ್ಸವಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಗೆಸ್ಟ್ ಆಗಿ ಆಹ್ವಾನಿಸಲಾಗಿದೆ. ಸಿಹಿ ಜೊತೆಗೆ ರವಿಚಂದ್ರನ್ ಕೂಡ ಎಂಜಾಯ್ ಮಾಡುವುದಂತೂ ಪಕ್ಕಾ ಆಗಿದೆ.
ಸಿಹಿ ಫ್ರೆಂಡ್ ರಾಮ್ ಶಾಲೆಗೆ ಬರುತ್ತಾನಾ..?
ರಾಮ್ ಕೂಡ ಗೆಸ್ಟ್ ಆಗಿ ಆಹ್ವಾನಿಸಲಾಗಿದ್ದು, ಈ ಮೂಲಕವಾದರೂ ತಾನೂ ಸ್ಕೂಲ್ ಡೇ ಫಂಕ್ಷನ್‌ಗೆ ಹೋಗಬಹುದು ಎಂದು ರಾಮ್ ಖುಷಿಯಿಂದ ಇದ್ದು, ಸಿಹಿ ಅಂತೂ ರಾಮ್ ನೆನಪಲ್ಲೇ ದಿನ ಕಳೆಯುತ್ತಿದ್ದಾಳೆ. ರಾಮ್ ಇವತ್ತು ಬರಬಹುದು, ನಾಳೆ ಬರಬಹುದು. ತನ್ನ ಪತ್ರ ತಲುಪಿರಬಹುದು ಎಂದು ನಿತ್ಯ ಯೋಚಿಸುತ್ತಲೇ ಇದ್ದಾಳೆ. ಯಾವುದೇ ಅಡ್ಡಿ ಆತಂಕವಿಲ್ಲದೇ ರಾಮ್ ಸಿಹಿ ಶಾಲೆಗೆ ಬಂದರೆ, ಸಿಹಿ ಫುಲ್ ಹ್ಯಾಪಿ ಆಗುವುದಂತೂ ಗ್ಯಾರೆಂಟಿ. ಆದರೆ, ಸೀತಾ, ಸಿಹಿ ಮತ್ತು ರಾಮ್ ಮತ್ತೆ ಮಾತನಾಡಲು ಅವಕಾಶ ಮಾಡಿಕೊಡುತ್ತಾಳಾ ಇಲ್ಲ, ದೂರವೇ ಇರಬೇಕು ಎಂದು ಗಟ್ಟಿ ಮನಸ್ಸು ಮಾಡಿ, ರಾಮ್ ಬದುಕಿನಿಂದ ಬಹಳ ದೂರ ಹೋಗುತ್ತಾಳಾ? ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











