Kannada Serials: ಸಿಹಿ - ಖುಷಿ ಒಂದಾದ್ರು.. ಈ ಮುದ್ದು ಜೋಡಿ ನೋಡಿ ಫ್ಯಾನ್ಸ್ ಏನಂದ್ರು?
ಸಿಹಿ ಅಂದ್ರೆ ಈಗಂತೂ ಎಲ್ಲರ ಅಚ್ಚುಮೆಚ್ಚಿನ ಪುಟಾಣಿ. ಸಿಹಿಯ ಮಾತು ಕೇಳ್ತಾ ಇದ್ರೆ ಎಷ್ಟೇ ಬೇಸರ ಇದ್ದರೂ ಮುಖದಲ್ಲೊಂದು ನಗು ಮೂಡದೆ ಇರುವುದಿಲ್ಲ. ಅಷ್ಟು ಮುದ್ದಾದ ಮಗು. 'ಸೀತಾ ರಾಮ' ಧಾರಾವಾಹಿಯಲ್ಲಂತು ಬಿಗ್ ಹೈಲೈಟ್ ಅಂದ್ರೆ ಅದು ಸಿಹಿ.
'ಸೀತಾ ರಾಮ' ಒಂದಾಗುವುದಕ್ಕೆ ಈ ಸಿಹಿಯೇ ಕಾರಣವಾಗುತ್ತಾಳೆ. ಯಾಕಂದ್ರೆ ರಾಮ್‌ಗೆ ಬೆಸ್ಟ್ ಫ್ರೆಂಡ್ ಆಗಿರೋದು ಇದೇ ಸಿಹಿ. ಆದರೆ, ಈಗ ವಿಚಾರ ಅದಲ್ಲ. ಸಿಹಿ ಮತ್ತು ಖುಷಿ ಒಂದಾಗಿದ್ದಾರೆ. ಎರಡು ಬೇರೆ ಬೇರೆ ಚಾನೆಲ್, ಬೇರೆ ಬೇರೆ ಧಾರಾವಾಹಿ. ಆದರೂ ಇಬ್ಬರ ನಡುವಿನ ಆತ್ಮೀಯತೆ ಅನ್ನು ಒಮ್ಮೆ ನೋಡಬೇಕು. ಎಷ್ಟು ಚೆಂದ ಅಂತೀರಾ. ಆ ಆತ್ಮೀಯತೆ ಬಗ್ಗೆ ಮುಂದೆ ಓದಿ.

ವೈರಲ್ ಆಗ್ತಿದೆ ಸಿಹಿ-ಖುಷಿ ಫೋಟೋ
ಇದು ಧಾರಾವಾಹಿಗಳ ಯುಗ. ಒಂದೊಂದು ಧಾರಾವಾಹಿ ಒಂದೊಂದು ರೀತಿ ಕಾಂಪಿಟೇಷನ್ ನೀಡುತ್ತಿವೆ. ಕಿರುತೆರೆ ಪ್ರಿಯರು ಜಾಸ್ತಿಯಾಗಿರುವ ಈ ಕಾಲದಲ್ಲಿ ವಿಭಿನ್ನವಾದ ಧಾರಾವಾಹಿಗಳನ್ನೇ ನೀಡುತ್ತಾ ಬರುತ್ತಿವೆ ವಾಹಿನಿಗಳು. ಅದರಲ್ಲೂ ಸ್ಟಾರ್ ಸುವರ್ಣದಲ್ಲಿ 'ನೀನಾದೆ ನಾ' ಇತ್ತೀಚೆಗಷ್ಟೇ ಶುರುವಾಗಿದೆ. ವಿದೇಶದಲ್ಲಿದ್ರೂ ಭಾರತೀಯ ಸಂಸ್ಕೃತಿಯನ್ನು ಮೀರದ ಖುಷಿಯ ಕಥೆ ಇದು. ಇನ್ನು 'ಸೀತಾ ರಾಮ' ಧಾರಾವಾಹಿ ಕೂಡ ಇತ್ತೀಚೆಗಷ್ಟೇ ಶುರುವಾಗಿದೆ. ಇದರಲ್ಲಿ ಸಿಹಿ ಎಲ್ಲರ ಗಮನ ಸೆಳೆಯುತ್ತಾಳೆ. ಆದರೆ, ಈ ಇಬ್ಬರು ಒಂದೆ ಕಡೇ ಸೇರುವುದು ಅಂದ್ರೆ ಸುಲಭನಾ? ಆದ್ರೂ ಜೊತೆಯಾಗಿದ್ದಾರೆ.
ರೀಲ್ಸ್‌ನಲ್ಲಿ ಬ್ಯುಸಿಯಾದ ಸಿಹಿ-ಖುಷಿ
ಇತ್ತೀಚೆಗೆ ಧಾರಾವಾಹಿಗಳ ಜಮಾನ ಹೇಗಿದೆಯೋ ರೀಲ್ಸ್ ಜಮಾನವೂ ಅಷ್ಟೇ ಇದೆ. ಅದಕ್ಕೆಂದೇ ಸಾಮಾನ್ಯರು, ಸೆಲೆಬ್ರೆಟಿಗಳು ಎಲ್ಲರೂ ಸೈಕಲ್ ಗ್ಯಾಪ್‌ನಲ್ಲಿ ರೀಲ್ಸ್ ಮಾಡುವುದನ್ನು ಮಾತ್ರ ಮರೆಯುವುದಿಲ್ಲ. ಇನ್ನು ಖುಷಿಗೆ ಸಿಹಿ ಸಿಕ್ಕಿದರೆ ಸುಮ್ಮನೆ ಇರುತ್ತಾರಾ ನೋವೇ. ಇಬ್ಬರು ಬೇಜಾನ್ ರೀಲ್ಸ್ ಮಾಡಿದ್ದಾರೆ. "ಸುಂದ್ರಿನೇ ಕಣೇ ನೀನು.." ಅನ್ನೋ ಡೈಲಾಗ್‌ಗೆ ಎಲ್ಲರೂ ಹಾರ್ಟ್ ನೀಡಿದ್ದಾರೆ. ಅಷ್ಟೇ ಅಲ್ಲ ಜನಕ್ಕೆ ಅನುಮಾನ ಬೇರೆ ಬಂದಿದೆ. ಅಲ್ಲ ನೀನಾದೆನಾ ಸ್ಟಾರ್ ಸುವರ್ಣ. ಸೀತಾ ರಾಮ ಜೀ ಕನ್ನಡ. ಎರಡು ಒಂದಾಗಿದ್ದು ಹೇಗೆ ಎಂದು ಕೇಳುತ್ತಿದ್ದಾರೆ.

ಸಿಹಿಗೆ ಲಾಂಗ್ ಹೇರ್ ಬೇಕಂತೆ
ಸಿಹಿ ಸದ್ಯಕ್ಕೆ ಮುದ್ದು ಮುದ್ದಾಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಅವಳಿಗೆ ಅವಳ ಹೇರ್ ಸ್ಟೈಲ್ ಮತ್ತಷ್ಟು ಲುಕ್ ಹೆಚ್ಚಿಸಿದೆ. ಆದರೆ, ಅವಳಿಗೆ ಬೇಬಿ ಕಟ್ ಬೇಡವಾಗಿತ್ತಂತೆ. ನಂಗೆ ಲಾಂಗ್ ಹೇರ್ ಇಷ್ಟ ಅಂತ ಖುಷಿ ಅಕ್ಕ ಹಾಗೇ ವಿಕ್ರಂ ಅಣ್ಣನ ಬಳಿ ಹೇಳಿ ಕೊಳ್ಳುತ್ತಿದ್ದಾಳೆ. ಆದರೆ, ಪಾಪ ಸಿಹಿಗೆ ಬೇಬಿ ಕಟ್ ಮಾಡಿಸಿ, ಲಾಂಗ್ ಹೇರ್ ಆಸೆಯನ್ನೇ ಕಳೆದುಬಿಟ್ಟಿದ್ದಾರೆ.
ಖುಷಿ ಬಳಿ ಸಿಹಿ ಹಂಚಿಕೊಂಡಿದ್ದೇನು..?
ಸಿಹಿಯನ್ನು ನೋಡಿದ್ರೆ ಯಾರಿಗೆ ಆಗಲಿ ವಾವ್ ಎನಿಸದೆ ಇರುವುದಿಲ್ಲ. ಮಕ್ಕಳ ಆಟ -ತುಂಟಾಟ ಎಲ್ಲರಿಗೂ ತುಂಬಾನೇ ಇಷ್ಟವಾಗುತ್ತೆ. ಅದರಲ್ಲೂ ಮಕ್ಕಳು ಮುದ್ದು ಮುದ್ದಾಗಿ ಮಾತಾಡಿದ್ರೆ ಇನ್ನಷ್ಟು ಇಷ್ಟವಾಗುತ್ತೆ. ಆದರೆ, ಸಿಹಿಯ ಮಾತುಗಳು ಅದಕ್ಕೂ ಮೀರಿದ್ದು. ಅಂದ್ರೆ ಸಿಹಿ ತುಂಬಾ ಮೆಚ್ಯೂಡ್ ಆಗಿ ಮಾತಾಡ್ತಾಳೆ. ಕೋಪ ಬಂದಾಗ, ನಗು ಬಂದಾಗ ಅಬ್ಬಬ್ಬ ನವರಸಗಳು ಅಂದ್ರೆ ಅದು ಖುಷಿಯ ಭಾವಾಭಿನಯದಲ್ಲಿಯೇ ಎಲ್ಲವನ್ನು ಕಾಣಬಹುದು. ಇದೆಲ್ಲ ನೋಡಿದಾಗ ಓ ಸಿಹಿ ದೊಡ್ಡವಳು ಎನಿಸದೆ ಇರುವುದಿಲ್ಲ. ಆದರೆ, ಸಿಹಿ ಈಗ ಇನ್ನು UKG. ಖುಷಿ ಬಳಿ ಅದನ್ನು ಹೇಳಿಕೊಂಡಿದ್ದಾಳೆ ನಮ್ಮ ಸಿಹಿ.


Click it and Unblock the Notifications











