Seetha Rama serial: ರುದ್ರಪ್ರತಾಪನ ಅಡ್ಡವನ್ನು ರಾಮ್ ಕಂಡು ಹಿಡಿಯೋದು ಹೇಗೆ?
ಸೀತೆಯನ್ನು ಇಕ್ಕಟ್ಟಿಗೆ ಸಿಲುಕಿಸಿ, ತನ್ನ ಕಾರ್ಯ ಸಾಧನೆ ಮಾಡಿಕೊಳ್ಳುವುದು ಸೀತಾಳ ಅತ್ತಿಗೆಯ ಮಹಾ ಪ್ಲ್ಯಾನ್ ಆಗಿದೆ. ಅದಕ್ಕಾಗಿಯೇ ಈಗ ಮನೆಗೆ ನೋಟೀಸ್ ಕೊಡಿಸಿ, ವಾಪಾಸ್ ರುದ್ರಪ್ರತಾಪನ ಬಳಿಯೇ ಹೋಗುವಂತೆ ಮಾಡಿದ್ದಾಳೆ. ಇದು ಮೊದಲೇ ನಿಶ್ಚಯವಾದಂತ ನೋಟೀಸ್.
ಸೀತಾ ಬ್ಯಾಂಕ್‌ನಲ್ಲಿ ಮನೆಯ ಮೇಲೆ ಲೋನ್ ತೆಗೆದುಕೊಂಡಿದ್ದಾಳೆ. ಸಿಹಿಗೆ ಈಗಿನಿಂದಾನೇ ಸಕ್ಕರೆ ಕಾಯಿಲೆ. ಆಫೀಸ್‌ನಿಂದ ಬರುವ ಹಣವೆಲ್ಲಾ ಜೀವನಕ್ಕೆ ಸಾಕಾಗಿರುತ್ತದೆ. ಹೀಗಿರುವಾಗ ಬ್ಯಾಂಕ್ ಲೋನ್ ಸಂಪೂರ್ಣವಾಗಿ ತೀರಿಸುವುದಾದರೂ ಹೇಗೆ? ಇದನ್ನೇ ಬಂಡವಾಳ ಮಾಡಿಕೊಂಡ ಸೀತಾಳ ಅತ್ತಿಗೆ ಈಗ ಹಣದ ಆಸೆಗಾಗಿ ಸೀತಾಗೆ ಮರು ಮದುವೆ ಮಾಡಿಸಲು ಹೊರಟಿದ್ದಾಳೆ.

ಎದುರು ಸಿಕ್ಕರು ಸೀತಾಗೆ ರಾಮ್ ಕಾಣಿಸುತ್ತಿಲ್ಲ
ಮನೆಗೆ ನೋಟೀಸ್ ಬಂದಿರುವದನ್ನು ಸೀತಾ ಸೀಕ್ರೇಟ್ ಆಗಿನೇ ಎಲ್ಲರಿಂದ ಇಟ್ಟುಕೊಂಡಿದ್ದಾಳೆ. ರಾಮ್‌ಗೆ ಮಾತ್ರ ಈ ವಿಚಾರ ಗೊತ್ತು. ಏನಾದರೂ ಸಹಾಯ ಮಾಡುತ್ತೀನಿ ಅಂತಾನೆ ಹೇಳಿದ್ದಾನೆ. ಆದರೆ, ಸೀತಾ ಯಾರಿಗೂ ತೊಂದರೆ ಕೊಡುವುದಕ್ಕೆ ಇಷ್ಟಪಡುವವಳಲ್ಲ. ಹೀಗಾಗಿಯೇ ತನ್ನ ಕಷ್ಟವನ್ನೆಲ್ಲಾ ತನ್ನೆಡೆಗೆ ಎಳೆದುಕೊಂಡು ಕೊರಗುತ್ತಿದ್ದಾಳೆ. ಇದರ ಮಧ್ಯೆ ಅತ್ತಿಗೆ ಬಂದು ಜೈಲಿನ ಬಗ್ಗೆ ಭಯ ಬೇರೆ ಹುಟ್ಟಿಸಿದ್ದಾಳೆ. ರುದ್ರಪ್ರತಾಪನನ್ನು ಭೇಟಿ ಮಾಡಲು ಹೊರಟಾಗ, ರಾಮ್ ಎದುರು ಬಂದರು ಸೀತಾಗೆ ಗಮನವೇ ಇಲ್ಲ. ಹಾಗೇ ಓಡಿಬಿಟ್ಟಿದ್ದಾಳೆ.
ಸೀತಾ ಕೇಸ್‌ಗೆ ರುದ್ರಪ್ರತಾಪನೇ ಲಾಯರ್
ಸೀತಾಳನ್ನು ಹೇಗಾದರೂ ಮಾಡಿ ಲಾಕ್ ಮಾಡಲೇಬೇಕೆಂದು ಅತ್ತಿಗೆ, ರುದ್ರಪ್ರತಾಪನದ್ದು ಪ್ಲ್ಯಾನ್. ಹೀಗಾಗಿಯೇ ಮನೆಗೆ ನೋಟೀಸ್ ಬರುವುದಕ್ಕೂ ರುದ್ರಪ್ರತಾಪನೇ ಕಾರಣವಾಗಿದ್ದಾನೆ. ನೋಟೀಸ್ ಬಂದ ಮೇಲೂ ಆ ಕೇಸ್‌ಗೆ ರುದ್ರಪ್ರತಾಪನೇ ಲಾಯರ್ ಆಗಿದ್ದಾನೆ. ಸೀತಾಳನ್ನು ತನ್ನ ಆಫೀಸಿಗೆ ಕರೆಸಿಕೊಂಡಿದ್ದಾನೆ. ಆದರೆ, ಅವನ ಭಾವನೆಯೂ ಕೆಟ್ಟದಾಗಿಯೇ ಕಾಣುತ್ತಿದೆ. ನಿಂಗೋಸ್ಕರ ಏನು ಬೇಕಾದರೂ ಮಾಡ್ತೀನಿ ಅಂತ ಮನಸ್ಸಲ್ಲಿಯೇ ಅಂದುಕೊಳ್ಳುತ್ತಿದ್ದಾನೆ. ಸೀತಾಳ ಹೆಗಲ ಮೇಲೆ ಕೈ ಹಾಕುವುದಕ್ಕೆ ನೋಡುತ್ತಿದ್ದಾನೆ. ಆದರೆ, ಸೀತಾ ಸಾಕಷ್ಟು ಆತಂಕದಲ್ಲಿದ್ದಾನೆ.

ಸೀತಾ ಹುಡುಕಾಟದಲ್ಲಿ ರಾಮ್
ರಾಮ್‌ಗೆ ಆಫೀಸಿಗೆ ಬಂದಾಗಿನಿಂದ ಸೀತಾಳದ್ದೇ ಚಿಂತೆಯಾಗಿದೆ. ಎದುರು ಸಿಕ್ಕಾಗಲೂ ನೋಡಿದೇ ಓಡಿ ಹೋಗಿದ್ದಾಳೆ. ಆಫೀಸಿಗೆ ಬಂದಾಗಲೇ ಟೆನ್ಶನ್ ಮಾಡಿಕೊಂಡಿದ್ದಳು ಎಂಬುದಂತು ರಾಮ್‌ಗೆ ಗೊತ್ತಾಗಿದೆ. ಪ್ರಿಯಾ ಬಳಿ ಹೋಗಿ ಏನಾಯ್ತು ಅಂತ ಕೇಳಿದ್ರೆ, ಅವಳಿಂದ ಯಾವುದೇ ಉತ್ತರವಿಲ್ಲ. ಫ್ರೆಂಡ್ ಅಂತಾಳೆ ಅಷ್ಟೇ. ಆದರೆ, ಅವಳ ಕಷ್ಟವನ್ನು ಕೊಂಚವೂ ಅರ್ಥ ಮಾಡಿಕೊಂಡಿಲ್ಲ. ಸೀತಾ, ಟೆನ್ಶನ್‌ನಲ್ಲಿ ಹೋದಾಗಲೂ ಪ್ರಿಯಾ ಅದರ ಕಡೆ ತಲೆ ಕೆಡಿಸಿಕೊಂಡಿಲ್ಲ. ರಾಮ್‌ಗೆ ಅವಳು ಎಲ್ಲಿ ಹೋದ್ಲು ಅಂತ ಯಾರೂ ಹೇಳ್ತಾ ಇಲ್ಲ.
ರಾಮ್‌ಗೂ ಗಾಬರಿ ಹುಟ್ಟಿಸಿದ ಸಿಹಿ
ಸೀತಾ, ಮನೆಯ ವಿಚಾರಕ್ಕೆ ಟೆನ್ಶನ್ ಆಗಿದ್ದಾಳೆ ಅನ್ನೋದು ರಾಮ್‌ಗೆ ಅರ್ಥವಾಗಿದೆ. ಈಗ ಎಲ್ಲಿ ಹೋದ್ಲು ಅನ್ನೋದು ಅರ್ಥವಾಗಬೇಕಿದೆ. ಇದರ ನಡುವೆಯೇ ಸಿಹಿ, ರಾಮ್‌ಗೆ ಫೋನ್ ಮಾಡಿದ್ದಾಳೆ. ಅಮ್ಮ ಫೋನ್ ರಿಸೀವ್ ಮಾಡ್ತಿಲ್ಲ. ಪೊಲೀಸರು ಅಮ್ಮನನ್ನು ಎಳೆದುಕೊಂಡು ಹೋದ್ರಾ? ಅಮ್ಮನಿಗೆ ಫೋನ್ ಕೊಡು ಎಂದಿದ್ದಾಳೆ. ಏನೇ ಕಷ್ಟ ಎನಿಸಿದರೂ ಸಿಹಿ ಮೊದಲು ಕಾಲ್ ಮಾಡೋದು ರಾಮ್‌ಗೆ. ಈಗ ಸಿಹಿಗೆ ಧೈರ್ಯ ನೀಡೋದು ಅಲ್ಲದೆ ಸೀತಾ ಎಲ್ಲಿ ಹೋಗಿದ್ದಾಳೆ ಅನ್ನೋದನ್ನು ಹುಡುಕಬೇಕಿದೆ. ರುದ್ರ ಪ್ರತಾಪನಿಂದ ಆಗುವ ತೊಂದರೆಯನ್ನು ರಾಮ್ ತಪ್ಪಿಸಬೇಕಿದೆ.


Click it and Unblock the Notifications











