Seetha Rama Serial: 'ಸೀತಾ ರಾಮ' ಸ್ವಮೇಕ್ ಅಲ್ಲ ರಿಮೇಕ್.. ಆದರೂ ಮರಾಠಿಗಿಂತ ಕನ್ನಡವೇ ಸೂಪರ್
ಜೀ ಕನ್ನಡದಲ್ಲಿ 'ಸೀತಾರಾಮ' ಧಾರಾವಾಹಿ ಈಗ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ಎಂದರೆ ತಪ್ಪಾಗುವುದಿಲ್ಲ. ಯಾಕಂದರೆ, ಆ ಧಾರಾವಾಹಿಯಲ್ಲಿ ನಟನೆ ಮಾಡಿರುವ ಮಗುವೇ ಹೆಚ್ಚು ಹೈಲೈಟ್. ಜೊತೆಗೆ ಈ ಧಾರಾವಾಹಿಯನ್ನು ಜೀ ಕನ್ನಡವೇ ನಿರ್ಮಾಣ ಮಾಡುತ್ತಿದೆ. ಇದು ಮತ್ತೊಂದು ವಿಶೇಷ. ಟಿಆರ್‌ಪಿ ವಿಚಾರದಲ್ಲೂ 'ಸೀತಾ ರಾಮ' ಧಾರಾವಾಹಿ ಮುಂದಿದೆ.
ಧಾರಾವಾಹಿಯ ಕಥೆಯೇ ಎಲ್ಲರನ್ನು ಸೆಳೆಯುತ್ತಿದೆ. ವಠಾರದ ಜೀವನದಲ್ಲೂ ಆ ಅಮ್ಮ ಮಗು ನೆಮ್ಮದಿಯಾಗಿದ್ದಾರೆ. ಆದರೆ ಅರಮನೆಯಲ್ಲಿದ್ದರು ರಾಮ ಖುಷಿಯಾಗಿಲ್ಲ. ರಾಮನಿಗೆ ನೆಮ್ಮದಿ, ಸಂತೋಷ ಸಿಕ್ಕಿರುವುದು ಇದೇ ವಠಾರದ ಸಿಹಿಯಿಂದ. ಈ ಧಾರಾವಾಹಿಗೆ ಎಲ್ಲರೂ ಫಿದಾ ಆಗಿದ್ದರು. ಫುಲ್ ಮಾರ್ಕ್ಸ್ ನೀಡಿದ್ದರು. ಇದೀಗ ಧಾರಾವಾಹಿಯ ಬಗ್ಗೆ ವಿಷಯ ಒಂದು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಅದೇನಂದರೆ, 'ಸೀತಾ ರಾಮ' ಇದು ಸ್ವಮೇಕ್ ಅಲ್ಲ ರಿಮೇಕ್.

ಎಲ್ಲರ ಅಚ್ಚು ಮೆಚ್ಚು 'ಸೀತಾರಾಮ'
'ಸೀತಾರಾಮ' ಧಾರಾವಾಹಿಯಲ್ಲಿ ಯಾವಾಗ ಸೀತಾ-ರಾಮ ಒಂದಾಗುತ್ತಾರೋ ಎಂದು ಎಲ್ಲರೂ ಕಾಯುತ್ತಿದ್ದಾರೆ. ಸಿಹಿ ಮಾತಿಗಿಂತ ರಾಮ್‌ಗೆ ಯಾರೂ ಬೇಕಾಗಿಲ್ಲ. ಗಣಪತಿ ಹಬ್ಬದ ದಿನವೇ ಅದು ಎಲ್ಲರಿಗೂ ಗೊತ್ತಾಗಿದೆ. ಭಾರ್ಗವಿ ಚಿಕ್ಕಿ ಬುಕ್ ಮಾಡಿದ್ದ ಗಣೇಶನನ್ನೇ ಸಿಹಿ ಆಸೆ ಪಟ್ಟಳು ಅಂತ ಅಲ್ಲಿಗೆ ಶಿಫ್ಟ್ ಮಾಡಿಬಿಟ್ಟ. 'ಸೀತಾರಾಮ' ಎಲ್ಲರಿಗೂ ಇಷ್ಟವಾಗುವುದೇ ಇದಕ್ಕೆ. ಸಿಹಿ ಮತ್ತು ರಾಮನ ಫ್ರೆಂಡ್‌ಶಿಪ್ ನೋಡಿದರೆ ಎಲ್ಲರಿಗೂ ಖುಷಿಯಾಗುವಂತಿದೆ.
'ಸೀತಾರಾಮ' ಯಾವ ಧಾರಾವಾಹಿಯ ರಿಮೇಕ್
ಇಷ್ಟು ದಿನಗಳಿಂದ 'ಸೀತಾ ರಾಮ' ಧಾರಾವಾಹಿ ನೋಡಿದವರು ಕಥೆಯನ್ನು ಚೆನ್ನಾಗಿಯೇ ಹೆಣೆಯಲಾಗಿದೆ. ಎಲ್ಲರ ಮನಸ್ಸು ಮುಟ್ಟುವಂತಿದೆ ಎಂದೇ ಭಾವಿಸಿದ್ದರು. ಅಂದರೆ 'ಸೀತಾರಾಮ' ಧಾರಾವಾಹಿಯನ್ನು ಸಂಪೂರ್ಣವಾಗಿ ಸ್ವಮೇಕ್ ಧಾರಾವಾಹಿ ಎಂದೇ ಭಾವಿಸಲಾಗಿತ್ತು. ಜೀ ಕನ್ನಡ ಹೇಗೆ ಸ್ವತಃ ನಿರ್ಮಾಣ ಮಾಡುತ್ತಾ ಇದೆಯೋ ಹಾಗೇ ಧಾರಾವಾಹಿಯ ಕಥೆಯೂ ಅದೇ ರೀತಿಯಾಗಿದೆ ಎನ್ನಲಾಗಿತ್ತು. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಧಾರಾವಾಹಿಯ ಮೂಲ ಹರಿದಾಡುತ್ತಿದೆ. ಅದುವೇ 'ಸೀತಾರಾಮ' ಧಾರಾವಾಹಿ ಮರಾಠಿ ಮೂಲದ ಧಾರಾವಾಹಿಯಾಗಿದೆ.
ಕನ್ನಡಕ್ಕೆ ಹೆಚ್ಚು ಮಾರ್ಕ್ಸ್
ಜೀ ಮರಾಠಿಯಲ್ಲಿ 'majhi tujhi reshimgathi' ಹೆಸರಲ್ಲಿ ಧಾರಾವಾಹಿ ಪ್ರಸಾರವಾಗಿದೆ. ಈಗಾಗಲೇ ಅದು ಮುಗಿದಿರುವ ಸೂಚನೆ ಕಾಣಿಸುತ್ತಿದೆ. ಕಡೆಯ ಎಪಿಸೋಡ್ ಹುಡುಕಿದಾಗಲೂ ಆರು ತಿಂಗಳ ಹಿಂದಿನ ಎಪಿಸೋಡನ್ನಷ್ಟೇ ತೋರಿಸುತ್ತಿದೆ. ಆದರೆ, ಮರಾಠಿಯ ಈ ಧಾರಾವಾಹಿಗಿಂತ ಕನ್ನಡವೇ ಬೆಸ್ಟ್ ಎನಿಸುತ್ತಿದೆ. ಯಾಕಂದರೆ, 'ಸೀತಾರಾಮ' ಧಾರಾವಾಹಿಯಲ್ಲಿ ಮಾಡಿರುವ ಒಂದೊಂದು ಪಾತ್ರಗಳು ಎಲ್ಲರನ್ನು ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತದೆ. ಅದರಲ್ಲೂ ಸಿಹಿ ಪಾತ್ರವಂತೂ ಯಾರೂ ಮೀರಿಸಲು ಸಾಧ್ಯವೇ ಇಲ್ಲ. ಮರಾಠಿಯಲ್ಲಿ ಮೈರಾ ಎಂಬ ಪುಟಾಣಿ ಈ ಪಾತ್ರವನ್ನು ಮಾಡಿದ್ದಾಳೆ. ಆದರೆ ಮೈರಾ ನಮ್ಮ ಸಿಹಿಯಷ್ಟು ಸ್ಟ್ರಾಂಗ್ ಅನ್ನಿಸಲ್ಲ. ಸಿಹಿ ಪಾತ್ರ ರಿತು ನವರಸದಲ್ಲೂ ಫಸ್ಟ್ ಇದ್ದಾಳೆ. ಆದರೆ, ಮೈರಾ ಸಿಕ್ಕಾಪಟ್ಟೆ ಮುಗ್ಧತೆ ಫೀಲ್ ಕೊಡುತ್ತಾಳೆ.
ರಿಮೇಕ್ ಬಗ್ಗೆ ಕೇಳಿ ಪ್ರೇಕ್ಷಕರು ಏನಂದ್ರು ?
'ಸೀತಾರಾಮ' ಧಾರಾವಾಹಿ ನಿರೀಕ್ಷೆ ಮೀರಿ ಎಲ್ಲರನ್ನು ತಲುಪುತ್ತಿದೆ. ಎಲ್ಲರ ಬಾಯಲ್ಲೂ ಸಿಹಿ ಹಾಗೂ ರಾಮ್ ಬಗ್ಗೆಯೇ ಮಾತುಗಳು ಕೇಳಿ ಬರುತ್ತಿವೆ. ರಾತ್ರಿ 9.30 ಆಯ್ತು ಅಂದರೆ, ಸಾಕು ಮೊದಲು 'ಸೀತಾರಾಮ'.. ಆಮೇಲೆ ಊಟ, ಪಾಠ ಅಂತಿದ್ದಾರೆ ಮನೆಯ ಮಹಿಳೆಯರು. ಇದಮ್ನ ಸ್ವಮೇಕ್ ಎಂದುಕೊಂಡಿದ್ದವರಿಗೆ ಕೊಂಚ ಶಾಕ್ ಆಗಿದೆ. ಆದರೂ, ಪರವಾಗಿಲ್ಲ ಕನ್ನಡವೇ ಸೂಪರ್ ಎನ್ನುತ್ತಿದ್ದಾರೆ.


Click it and Unblock the Notifications











