Ashok Sharma: ಕೊನೆಗೂ ಸಿಕ್ಕೇಬಿಟ್ರು "ಜಿಂಗಿಚಕ ಜಿಂಗಿಚಕ" ಹಾಡಿನ ಗಾಯಕ.. ನೀವು ಊಹಿಸೋಕೂ ಆಗಲ್ಲ!
'ಸೀತಾ ರಾಮ' ಧಾರಾವಾಹಿಯಲ್ಲಿ ರಾಮನಿಗೆ ಹನುಮನಂತೆ ಜೊತೆಗಿರೋದು ನಟ ಅಶೋಕ. ರಾಮ್‌ಗೆ ಸದಾ ಬೆಂಗಾವಲಾಗಿ ಇರುತ್ತಾನೆ. ರಾಮ್ ಮನೆಯಲ್ಲಿ ದೊಡ್ಡ ವಿಲನ್ ಅಂದ್ರೆ ಅದು ಭಾರ್ಗವಿ. ಆಕೆ ಅವಮಾನ ಮಾಡಿದರು ಸಹ ರಾಮ್‌ಗಾಗಿ, ತಾತನಿಗಾಗಿ ಸಹಿಸಿಕೊಂಡು ಇರುತ್ತಾನೆ. ಈಗ ರಾಮ್ ಜೊತೆಗೆ ಆಫೀಸಿನಲ್ಲೂ ಜೊತೆಯಾಗಿದ್ದಾನೆ.
ಆಫೀಸಿನಲ್ಲಿ ಹಣಕಾಸಿನ ವಿಚಾರದಲ್ಲಿ ಮೋಸ ಆಗ್ತಾ ಇದೆ ಅನ್ನೋ ವಿಚಾರ ಗೊತ್ತಾದ ಮೇಲೆ, ರಾಮ್ ಮತ್ತು ಅಶೋಕ ಅದನ್ನು ಕಂಡು ಹಿಡಿಯುವ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೆಂದೇ ಬೆಸ್ಟ್ ಫ್ರೆಂಡ್ ಆಗಿರುವ ಅಶೋಕ ಬಾಸ್ ಆಗಿದ್ದಾನೆ. ರಾಮ್ ಸಿಬ್ಬಂದಿಯಾಗಿದ್ದಾನೆ. ಈಗ ರಾಮ್‌ಗಿಂತ ಅಶೋಕ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಟ್ರೆಂಡಿಂಗ್‌ನಲ್ಲಿ ಕೂಡ ಇದ್ದಾರೆ.

ಜಿಂಗಿಚಕ ಹಾಡು ಹಾಡಿದ್ದು ಇವರೇ ನೋಡಿ
'5 ಈಡಿಯಟ್ಸ್' ಸಿನಿಮಾ ರಿಲೀಸ್ ಆಗಿ 12 ವರ್ಷ ಆಗಿದೆ. ಆದರೆ, ಆ ಸಿನಿಮಾದ ಹಾಡೊಂದು ಈಗ ವೈರಲ್ ಆಗಿದೆ. Instagram ಬಂದ ಮೇಲಂತೂ ತೀರಾ ಹಳೆ ಹಾಡುಗಳೆಲ್ಲಾ ವೈರಲ್ ಆಗುತ್ತಿವೆ. ಅದರಲ್ಲೂ ಈಗಿನ ಹಾಡುಗಳೆಂಬಂತೆ ಕಿವಿಗೆ ಇಂಪು ಕೊಡುತ್ತಿವೆ. ಅದರಲ್ಲಿ ಜಿಂಗಿಚಕ ಜಿಂಗಿಚಕ ಹಾಡಂತೂ ಎಲ್ಲರೂ ರೀಲ್ಸ್ ಮಾಡುವವರೇ ಆಗಿದ್ದಾರೆ. ಹಾಡೇನೋ ವೈರಲ್ ಆಯ್ತು. ಆದರೆ, ಹಾಡಿಗೆ ಧ್ವನಿ ನೀಡಿದ್ದು ಯಾರು ಎಂಬುದು ಮಾತ್ರ ಗೊತ್ತಿರಲಿಲ್ಲ. ಈಗ ಎಲ್ಲರಿಗೂ ಆ ವ್ಯಕ್ತಿಯ ಪರಿಚಯವಾಗಿದೆ. ಅವರೇ ಅಶೋಕ್ ಶರ್ಮಾ ಅಲಿಯಾಸ್ ರಾಮ್ ಫ್ರೆಂಡ್ ಅಶೋಕ.
ತುಮಕೂರಿನಲ್ಲಿ ಅಶೋಕ್ ಸತ್ಯ ಬಯಲು
ಇತ್ತೀಚೆಗಷ್ಟೇ ತುಮಕೂರಿನಲ್ಲಿ ವರಮಹಾಲಕ್ಷ್ಮೀ ಜಾತ್ರೆ ನಡೆದಿತ್ತು. ಅದರಲ್ಲಿ 'ಭೂಮಿಗೆ ಬಂದ ಭಗವಂತ' ಹಾಗೂ 'ಸೀತಾ ರಾಮ' ಎರಡೂ ಧಾರಾವಾಹಿ ತಾರೆಯರೂ ಭಾಗಿಯಾಗಿದ್ದರು. 'ಸೀತಾ ರಾಮ' ಧಾರಾವಾಹಿಯಲ್ಲಿ ಅಶೋಕ ಬಾಸ್ ಅಂದ್ಕೊಂಡು ಪ್ರಿಯಾ ಹಿಂದೆ ಬಿದ್ದು ಆಗಿದೆ. ತುಮಕೂರಿನ ದೊಡ್ಡ ವೇದಿಕೆಯಲ್ಲಿ ಪ್ರಿಯಾ ಮತ್ತು ಅಶೋಕ್ ಡ್ಯಾನ್ಸ್ ಕೂಡ ಮಾಡಿದ್ದರು. ಈ ವೇಳೆ "ಜಿಂಗಿಚಕ ಜಿಂಗಿಚಕ" ಹಾಡು ಹಾಡಿದ್ದು ಅಶೋಕ್ ಅನ್ನೋದು ಅನಾವರಣವಾಗಿದೆ.

ರಿಯಲ್ ಸಿಂಗರ್ ಕಂಡು ಖುಷಿ
ಹಾಡು ವೈರಲ್ ಆಗುತ್ತೆ. ಹಾಡು ಹಾಡಿದವರು ಅಷ್ಟೊಂದು ವೈರಲ್ ಆಗಲ್ಲ. ವಾಯ್ಸ್ ಕೇಳಿ ಇವರೇ ಹಾಡಿರೋದು ಅಂದುಕೊಂಡು ಕೇಳಿಸಿಕೊಳ್ಳುತ್ತಾರೆ. ಆದರೆ, ಜಿಂಗಿಚಕ ಹಾಡಲ್ಲಿ ಇದು ಉಲ್ಟಾ ಆಗಿದೆ. ಈ ಹಾಡು ಹಾಡಿದವರು ಫೇಮಸ್ ಸಿಂಗರ್‌ನಲ್ಲಿ ಒಬ್ಬರು ಎಂದೇ ಜನ ನಂಬಿದ್ದರು. ಆದರೆ, ಎಲ್ಲವೂ ಉಲ್ಟಾ ಆಗಿದ್ದು ಅಶೋಕ್ ಶರ್ಮಾ ಅನ್ನೋದು ಗೊತ್ತಾಗಿದೆ. ಈ ವಿಷಯ ಗೊತ್ತಾದಾಗಿನಿಂದ ನೆಟ್ಟಿಗರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇವರೇ ನೋಡಿ ಗಲ್ಬಸ್ಕಿ ಭಾಷೆಯಲ್ಲಿ ಹಾಡಿದೋರು ಅಂತ ವೈರಲ್ ಮಾಡ್ತಾ ಇದ್ದಾರೆ.
ಫ್ರೆಂಡ್ ಸಿನಿಮಾ ಹಾಡು ಹಾಡಿದ್ದು ಇವರೇ
ಇನ್ನು ಅಶೋಕ್ ಶರ್ಮಾ ನಟನೆ ಮಾತ್ರವಲ್ಲ, ಒಳ್ಳೆ ಸಿಂಗರ್ ಅನ್ನೋದು ಪ್ರೂವ್ ಆಗಿದೆ. ಅಶೋಕ್ ಇದೊಂದೆ ಹಾಡಲ್ಲ ಫ್ರೆಂಡ್ಸ್ ಸಿನಿಮಾದ ಓದೋನು ನೀನಲ್ಲ.. ದುಡಿಯೋನು ನೀನಲ್ಲ ಹಾಡನ್ನು ಇವರೇ ಹಾಡಿರೋದು. ಸದ್ಯ ಆ ಹಾಡಂತು ಟ್ರೆಂಡಿಂಗ್ ಕ್ರಿಯೇಟ್ ಮಾಡಿತ್ತು. ತಮ್ಮ ಸ್ಟೋರಿಯಲ್ಲಿ ಆ ಎರಡು ಹಾಡುಗಳನ್ನು ಹಂಚಿಕೊಂಡಿರುವ ಶರ್ಮಾ, ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಸಾಕಷ್ಟು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 'ಕೆಜಿಎಫ್', 'ರತ್ನನ್ ಪ್ರಪಂಚ', 'ವಿಜಯಾನಂದ' ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ, ಈಗ 'ಸೀತಾ ರಾಮ'ದಲ್ಲಿ ಹನುಮಂತನಂತೆ ಫ್ರೆಂಡ್ ಜೊತೆಗೆ ನಿಂತಿದ್ದಾನೆ.


Click it and Unblock the Notifications











