Meghana shankarappa:ದಿಢೀರನೇ ಸೀತಾ ರಾಮ, ಡಿಕೆಡಿಗೆ ಮೇಘನಾ ಬ್ರೇಕ್ ಕೊಟ್ಟಿದ್ದೇಕೆ? ಅಂತಹದ್ದೇನಾಯ್ತು?
'ಸೀತಾ ರಾಮ' ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ಚೆಲುವೆ ಮೇಘನಾ ಶಂಕರಪ್ಪ. 'ಸೀತಾ ರಾಮ' ಧಾರಾವಾಹಿಯಲ್ಲಿ ಸೀತೆಯ ಮುದ್ದಿನ ಗೆಳತಿಯಾಗಿ ಹಾಗೆಯೇ ರಾಮನ ನೆಚ್ಚಿನ ಗೆಳೆಯನ ಮಡದಿಯ ಪಾತ್ರದಲ್ಲಿ ಮೇಘನಾ ಶಂಕರಪ್ಪ ಅದ್ಭುತವಾದ ಪಾತ್ರವನ್ನು ನಿರ್ವಹಿಸಿದ್ದರು. ಯಾವುದೇ ಪಾತ್ರ ಕೊಟ್ಟರೂ, ಬಹಳ ಅಚ್ಚುಕಟ್ಟಾಗಿ ಪಾತ್ರ ಮಾಡುವ ಮೇಘನಾ ಶಂಕರಪ್ಪ ಈಗ ಸೀತಾ ರಾಮ ಹಾಗೂ ಡಿಕೆಡಿಯಿಂದ ಬ್ರೇಕ್ ಕೊಟ್ಟಿದ್ದಾರೆ.
ಮೇಘನಾ ಶಂಕರಪ್ಪ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿ ಕೂಡ ಅಭಿನಯ ಮಾಡುತ್ತಾರೆ. ಹಲವಾರು ಸಿನಿ ತಾರೆಯರ ಜೊತೆ ಮೇಘನಾ ಮಿಂಚಿದ್ದು ಸಖತ್ ಆಗಿ ಆಕ್ಟಿಂಗ್ ಮಾಡುತ್ತಿದ್ದಾರೆ. ಇನ್ನೂ 'ಸೀತಾ ರಾಮ' ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಮೇಘನಾ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಪ್ರಿಯಾಗೆ ಅಮ್ಮ ಆಗಬೇಕು ಎನ್ನುವ ಕನಸು ಇರುತ್ತೆ. ಆದರೆ ಆಕೆಗೆ ಕ್ಯಾನ್ಸರ್ ಇರುವ ವಿಷಯ ಆಕೆಯ ಗಂಡನಿಗೆ ತಿಳಿದಿದೆ. ಸೀರಿಯಲ್‌ನಲ್ಲಿ ಬಂದ ಈ ಟ್ವಿಸ್ಟ್‌ಗೆ ಮೇಘನಾ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಆದರೆ ಇದನ್ನು ಕೆಲವರು ಸುಳ್ಳು ರಿಪೋರ್ಟ್ ಎಲ್ಲೋ ಅದಲು ಬದಲು ಆಗಿರಬಹುದು ಎಂದೆಲ್ಲ ಜನ ಮಾತನಾಡಿಕೊಂಡಿದ್ದರು. ಇದೀಗ ಮೇಘನಾ ಶಂಕ್ರಪ್ಪ ದಿಢೀರನೇ ಸೀರಿಯಲ್‌ನಿಂದ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಿಂದ ಕಣ್ಮರೆಯಾಗಿದ್ದಾರೆ. ಅದು ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಟಿ ಮೇಘನಾಗೆ ದಿಢೀರನೇ ಕಣ್ಣಿನ ಭಾಗದಲ್ಲಿ ಹರ್ಪಿಸ್ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಸೀರಿಯಲ್ ಹಾಗೂ ರಿಯಾಲಿಟಿ ಶೋಗೆ ಬ್ರೇಕ್ ಕೊಟ್ಟು ಆರೋಗ್ಯ ಕೆಡದ ಹಾಗೆ ನೋಡಿಕೊಳ್ಳುತ್ತಿದ್ದಾರೆ.

ಚಿಟ ಪಟನೆ ಮಾತನಾಡುತ್ತಿರುವ ಗುಂಡು ಮುಖದ ಚೆಲುವೆ ಸೀರಿಯಲ್‌ನಿಂದಾ ಕೊಂಚ ಬ್ರೇಕ್ ತೆಗೆದುಕೊಂಡಿದ್ದೆ ತಡ ಅಭಿಮಾನಿಗಳಿಗೆ ಇದು ಬಹಳ ಬೇಸರ ಕಾಡತೊಡಗಿದೆ. ಇನ್ನೂ ಕೆಲವರು "ಮೇಘನಾ ಅವರೇ ಆರೋಗ್ಯದಲ್ಲಿ ಆದಷ್ಟು ಬೇಗ ಚೇತರಿಕೆ ಕಾಣಲಿ". ಹಾಗೆಯೇ "ಮುಂದಿನ ದಿನಗಳಲ್ಲಿ ನೀವು ಇನ್ನಷ್ಟು ಉತ್ತಮವಾಗಿ ನಟನೆ ಮಾಡಿ "ಎಂದು ಹೇಳಿಕೊಂಡಿದ್ದಾರೆ.
ಮೇಘನಾ ಶಂಕರಪ್ಪ ಮೊದಲು ನಿರೂಪಕಿಯಾಗಿ ಎಲ್ಲರ ಮನಗೆದ್ದಿದ್ದರು, ಹಾಗೆಯೇ ಆಕೆಯ ಮಾತುಗಾರಿಕೆಗೆ ಜನರು ಬಹಳಷ್ಟು ಆಕರ್ಷಿತರಾಗಿದ್ದರೆ, ಆದಾದ ಬಳಿಕ ಮೊದಲನೇ ಬಾರಿಗೆ 'ಕಿನ್ನರಿ' ಧಾರಾವಾಹಿಯ ಮೂಲಕ ಎಲ್ಲರ ಮನಸ್ಸನ್ನೂ ಗೆದ್ದಿದ್ದರು.
ಅದಾದ ಬಳಿಕ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಮುಂತಾದ ಧಾರಾವಾಹಿಯ ಮೂಲಕ ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ. ಇದಾದ ಬಳಿಕ ಸಿನಿಮಾಗಳಲ್ಲಿ ನಟಿಗೆ ಡಿಮ್ಯಾಂಡ್ ಹೆಚ್ಚುತ್ತದೆ. ಮೇಘನಾ ಶಂಕರಪ್ಪಗೆ ಯಾವುದೇ ಪಾತ್ರ ಕೊಟ್ಟರು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ.


Click it and Unblock the Notifications











