Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಮುದ್ದು ಮುದ್ದಾಗಿ ನಟಿಸೋ ಸಿಹಿ.. ರೀಲ್ಸ್ ಎಕ್ಸ್‌ಪರ್ಟ್!
ಸೀರಿಯಲ್ ಲೋಕದ ಸುಂದರಿಯಾಗಿದ್ದಾಳೆ ಮುದ್ದು ಸಿಹಿ. ಜೀ ಕನ್ನಡದ ಧಾರಾವಾಹಿಯಲ್ಲಿ ಈಗಂತೂ 'ಸೀತಾರಾಮ' ಧಾರಾವಾಹಿ ಎಲ್ಲರ ಅಚ್ಚುಮೆಚ್ಚು. ಅದಕ್ಕೆ ಅರ್ಧ ಕಾರಣವೇ ಪುಟಾಣಿ ಸಿಹಿ. ಅಮ್ಮನ ಕಷ್ಟವನ್ನು ಅದೆಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾಳೆ ಎಂದರೆ ಪುಟ್ಟ ಮಗುವಿಗೆ ಇಷ್ಟೆಲ್ಲ ಟ್ಯಾಲೆಂಟ್ ಇದೆಯಾ ಎಂದೇ ಎಲ್ಲರೂ ಭಾವಿಸುತ್ತಾರೆ.
ಈಗ ಸಿಹಿಗೆ ಧಾರಾವಾಹಿಯಲ್ಲಿ ಬೆಸ್ಟ್ ಫ್ರೆಂಡ್ ಒಬ್ಬ ಹುಟ್ಟಿಕೊಂಡು ಆಗಿದೆ. ಅವರೇ ರಾಮ್. ಅಮ್ಮನಿಗೆ ಸದಾ ಸಹಾಯಕ್ಕೆ ನಿಲ್ಲುವ ರಾಮ್, ಸಿಹಿಗೆ ಬೆಸ್ಟ್ ಫ್ರೆಂಡ್. ಇದು ಕ್ಯಾಮಾರ ಮುಂದೆ. ಆದರೆ, ಸಿಹಿಗೆ ಮೇಕಪ್ ರೂಮಲ್ಲೂ ಅಂಥದ್ದೇ ಒಬ್ಬ ಬೆಸ್ಟ್ ಫ್ರೆಂಡ್ ಇದ್ದಾನೆ.

ಸಿಹಿ ಎಷ್ಟು ಆಕ್ಟೀವ್ ಗೊತ್ತಾ..?
'ಸೀತಾರಾಮ' ಧಾರಾವಾಹಿಯಲ್ಲಿ ಸಿಹಿ ಪಾತ್ರ ಎಲ್ಲರ ಮನಸ್ಸಲ್ಲೂ ಜಾಗ ಪಡೆಯುವಂತ ಪಾತ್ರ. ಮಕ್ಕಳಾದರೂ ಮನೆಯವರ ಕಷ್ಟಕ್ಕೆ, ಅಮ್ಮನ ಬದುಕಿಗೆ ಹೇಗೆಲ್ಲಾ ಸಹಾಯವಾಗಿರಬೇಕು ಎಂಬುದನ್ನು ಸಿಹಿ ಪಾತ್ರ ತಿಳಿಸುತ್ತೆ. ಆ ಮಗುಗೂ ಆಸೆ ಇರುತ್ತೆ. ತುಂಟಾಟ ಮಾಡುತ್ತಾಳೆ. ತರಲೆ ಮಾಡುತ್ತಾಳೆ. ಕಿತ್ತಾಡುತ್ತಾಳೆ. ಜಗಳ ಮಾಡುತ್ತಾಳೆ. ಇದೆಲ್ಲದ್ದಕ್ಕೂ ಮಿಗಿಲಾಗಿ ಸೀತಮ್ಮನಿಗೆ ತಾಯಿಯಾಗಿ ಕಾಣುತ್ತಾಳೆ. ಸಿಹಿ ಅಲಿಯಾಸ್ ರಿತು ಡ್ರಾಮಾ ಜ್ಯೂನಿಯರ್ ಮೂಲಕ ಜೀ ಕನ್ನಡದ ಪ್ರೇಕ್ಷಕರಿಗೆ ಚಿರಪರಿಚಿತ. ಸೀತಾರಾಮ ಮೂಲಕ ಈಗ ಎಲ್ಲರ ಮನಸ್ಸಿನ ಮಗಳಾಗಿದ್ದಾಳೆ.
ಅಮ್ಮನಿಗೆ ಟಾರ್ಚರ್ ಕೊಡುವ ಅತ್ತಿಗೆ
'ಸೀತಾರಾಮ' ಧಾರಾವಾಹಿಯಲ್ಲಿ ಸಿಹಿಗೆ ಅಮ್ಮ ಒಬ್ಬಳೆ ಇರುವುದು. ಅಪ್ಪನನ್ನು ನೋಡುವ ಬಯಕೆ ಇದೆ. ಆದರೆ, ಅದಕ್ಕೆ ಸೀತಮ್ಮನ ಒಪ್ಪಿಗೆ ಇಲ್ಲ. ಅಪ್ಪನನ್ನು ಕಾಣುವ ಬಯಕೆ ಇರುವ ಸಿಹಿಗೆ ರುದ್ರಪ್ರತಾಪನನ್ನು ಮಾತ್ರ ಅಪ್ಪ ಎಂದು ಒಪ್ಪಿಕೊಳ್ಳುವುದಕ್ಕೆ ಸುತರಾಂ ಇಷ್ಟವಿಲ್ಲ. ಆದರೆ, ಸೀತಾಳ ಅತ್ತಿಗೆಯದ್ದು ರುದ್ರಪ್ರತಾಪನನ್ನೇ ಕಟ್ಟುವ ಪ್ಲ್ಯಾನ್. ಈಗ ತನ್ನ ಅತ್ತೆಗೆ ಬಾಟೆಲ್‌ನಲ್ಲಿಯೇ ತಲೆ ತಿರುಗುವಂತೆ ಹೊಡೆದಿದ್ದಾಳೆ.
ಸೆಟ್‌ನಲ್ಲಿ ಸೀತಮ್ಮನ ಜೊತೆಗೆ ಕ್ಲೋಸ್
ಮಕ್ಕಳನ್ನು ಬಳಸಿಕೊಂಡು ಆಕ್ಟಿಂಗ್ ಮಾಡಿಸುವುದು ಅಂದರೆ ಸುಲಭದ ಮಾತಲ್ಲ. ತೆರೆ ಮೇಲೆ ತಾಯಿಯಾಗಬೇಕು ಎಂದರೆ ತೆರೆ ಹಿಂದೆಯೂ ಮಕ್ಕಳಲ್ಲಿ ಆ ಬಾಂಧವ್ಯ ಮೂಡಿಸಲೇಬೇಕಾಗಿರುತ್ತದೆ. ಆದರೆ, ವೈಷ್ಣವಿ ಮತ್ತು ರಿತು ನಡುವೆ ಆ ಬಾಂಧವ್ಯ ಇದೆ. ಯಾವುದೋ ಕಾರಣಕ್ಕೆ ರಿತುಗೆ ಅಳು ಬಂದಿದೆ. ಆದರೆ ಸೀತಾಳನ್ನು ತಬ್ಬಿಕೊಂಡು ಅಳುತ್ತಿದ್ದ ಸಿಹಿಯನ್ನು ಸೀತಾ ಮಗಳಂತೆ ಸಮಧಾನ ಮಾಡಿದ್ದಾಳೆ. ಮಕ್ಕಳ ಜೊತೆಗೆ ಇದ್ದರೆ ಯಾವ ನೋವು ಕಾಡುವುದಿಲ್ಲ.
ಸಿಹಿಗೆ ಮತ್ತೊಬ್ಬ ಬೆಸ್ಟ್ ಫ್ರೆಂಡ್
ಸಿಹಿ ಆಕೆಯ ಅತ್ತೆಗೆ ಹೊಡೆದಿದ್ದು ತಮಾಷೆಗಾಗಿ. ರೀಲ್ಸ್ ಮಾಡುವ ಉದ್ದೇಶಕ್ಕೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ರೀಲ್ಸ್ ಮಾಡುತ್ತಾಳೆ. ಸಿಹಿಗೆ ಇನ್ನೊಬ್ಬ ಬೆಸ್ಟ್ ಫ್ರೆಂಡ್ ಇದ್ದಾರೆ. ಅವರೇ ಸಿಹಿಯ ಮೇಕಪ್ ಆರ್ಟಿಸ್ಟ್. ಮೇಕಪ್ ಮಾಡುವುದಕ್ಕೂ ಮುನ್ನ ಅದೆಷ್ಟು ರೀಲ್ಸ್ ಗಳನ್ನ ಮಾಡುತ್ತಾರೆ ಅನ್ನೋದನ್ನ ಒಮ್ಮೆ ಸೋಷಿಯಲ್ ಮೀಡಿಯಾದಲ್ಲಿ ನೋಡಿ. ಸೀರಿಯಲ್‌ನಲ್ಲಿ ರಾಮ್ ಬೆಸ್ಟ್ ಫ್ರೆಂಡ್. ಡ್ರಾಮಾ ಜ್ಯೂನಿಯರ್‌ನಲ್ಲಿ ಬಂದಾಗ ಫೇಮಸ್ ಆಗಿದ್ದಕ್ಕಿಂತ ಹೆಚ್ಚಾಗಿ 'ಸೀತಾರಾಮ' ಧಾರಾವಾಹಿಯಲ್ಲಿ ಖ್ಯಾತಿ ಪಡೆದಿದ್ದೇ ಹೆಚ್ಚು. ಅದರ ಪ್ರತಿಫಲವಾಗಿಯೇ ಇತ್ತೀಚೆಗೆ ಶುರುವಾದ Instagramನಲ್ಲಿ 50 ಸಾವಿರ ಫಾಲೋವರ್ಸ್ ಆಗಿದ್ದಾರೆ.


Click it and Unblock the Notifications











