'ಸೀತಾ ರಾಮ' ಧಾರಾವಾಹಿ ನಟಿ ಪ್ರಿಯಾ ಬಜಾರಿಯಂತೆ!
ಸೀತಾ ರಾಮ ಧಾರಾವಾಹಿಯಲ್ಲಿ ಈಗ ಸೀತಾ, ರಾಮನಿಂದ ದೂರ ಹೊರಟಿದ್ದಾಳೆ. ರಾಮನಿಗೆ ಈಗ ಸೀತಾಳ ಮೇಲಿನ ಪ್ರೀತಿಯ ಅರಿವಾಗಿದೆ. ಅಶೋಕ ಬೇಕಂತಲೇ ಪ್ರಿಯಾಳಿಗೆ ಬಂದಿದ್ದ ಟ್ರಾನ್ಸ್‌ಫರ್ ಆರ್ಡರ್ ಅನ್ನು ಸೀತಾ ಒಪ್ಪಿಕೊಳ್ಳುವಂತೆ ಮಾಡಿದ್ದಾನೆ. ಇದೆಲ್ಲವೂ ರಾಮನ ಒಳಿತಿಗಾಗಿ ಮಾಡಿದ್ದಾನೆ.
ಸೀತಾ ಮನದಲ್ಲಿ ರಾಮನ ಬಗ್ಗೆ ಯಾವುದೇ ಪ್ರೀತಿ ಇಲ್ಲದ ಕಾರಣ, ತಾನು ಆರಾಮಾಗಿದ್ದಾಳೆ. ಆದರೆ, ರಾಮನಿಗೆ ತನ್ನ ಸಂಕಟವನ್ನು ಯಾರ ಬಳಿಯೂ ಹೇಳಿಕೊಳ್ಳಲು ಆಗುತ್ತಿಲ್ಲ.
ರಾಮನ ಚಿಕ್ಕಮ್ಮ, ಬೇಕಂತಲೇ ಸೀತಾಳಿಗೆ ಟ್ರಾನ್ಸ್‌ಫರ್ ಮಾಡಲು ಹೇಳಿದ್ದಳು. ಅದು ಮಿಸ್ ಆಗಿ ಪ್ರಿಯಾಳಿಗೆ ಮೇಲ್ ಹೋಗಿತ್ತು.

ಧಾರಾವಾಹಿಯಲ್ಲಿ ಟ್ವಿಸ್ಟ್ ಆಂಡ್ ಟರ್ನ್
ರಾಮನಿಂದ ಸೀತಾಳನ್ನು ದೂರ ಮಾಡುವುದೇ ಚಿಕ್ಕಮ್ಮನ ಉದ್ದೇಶವಾಗಿತ್ತು. ಅಶೋಕನಿಗೆ ಈ ವಿಚಾರ ಕಂಪ್ಲೀಟ್ ಆಗಿ ಅರ್ಥವಾಗದಿದ್ದರೂ, ರಾಮನ ಮೇಲೆ ಷಡ್ಯಂತ್ರ ನಡೀತಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾನೆ. ಇನ್ನು ರಾಮ ಈಗ ಸೀತಾಳನ್ನು ತಡೆಯಲು ಹೊರಟಿದ್ದಾನೆ. ಸಿಹಿಗೂ ಕೂಡ ಬೇರೆ ಊರಿಗೆ ಹೋಗುವುದಕ್ಕೆ ಇಷ್ಟವಿಲ್ಲ. ತನ್ನ ಫ್ರೆಂಡ್ ರಾಮ್‌ನನ್ನು ಭೇಟಿ ಮಾಡದೇ ಹೋಗುತ್ತಿರುವುದು ಮತ್ತಷ್ಟು ಬೇಸರ ತಂದಿದೆ.
ಮುದ್ದಾಗಿ ಕಾಣುವ ಅಶೋಕ್-ಪ್ರಿಯಾ ಜೋಡಿ
ಇನ್ನು ಈ ಧಾರಾವಾಹಿಯಲ್ಲಿ ಅಶೋಕನಿಗೆ ಜೋಡಿಯಾಗಿ ಪ್ರಿಯಾ ಇದ್ದಾಳೆ. ಪ್ರಿಯಾ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬುದು ಅಶೋಕನಿಗೆ ಗೊತ್ತಿದ್ದರೂ, ಸುಮ್ಮನಿದ್ದಾನೆ. ಪ್ರಿಯಾಳಿಗೆ ಶ್ರೀಮಂತನ ಮನೆಯ ಹುಡುಗನನ್ನು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್ ಆಗಬೇಕು ಎನ್ನುವ ಆಸೆ. ಈಗ ಅಶೋಕ್ ಮೇಲೆ ಲವ್ ಆಗಿದ್ದು, ಯಾವಾಗ ಇಬ್ಬರೂ ಡೇಟಿಂಗ್ ಆರಂಭಿಸುತ್ತಾರೋ ಗೊತ್ತಿಲ್ಲ. ಗುಂಡು ಗುಂಡಾಗಿರುವ ನಟಿ ಪ್ರಿಯಾ ಬಹಳ ಮುದ್ದಾಗಿದ್ದು, ಆಕೆಯ ನಟನೆಯನ್ನು ವೀಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಹಾಗಾದರೆ, ಈ ಪ್ರಿಯಾ ಯಾರು.? ಅವರ ಹೆಸರೇನು..? ಇದೇ ಮೊದಲ ಧಾರಾವಾಹಿನಾ ಎಂದು ತಿಳಿಯೋಣ ಬನ್ನಿ..

ಬಜಾರಿಯಂತೆ ನಟಿ ಮೇಘನಾ!
ಗುಂಡು ಮುಖದ ಮುದ್ದು ಚೆಲುವೆ ಮೇಘನಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಮೇಘನಾ ಪೂರ್ತಿ ಹೆಸರು ಮೇಘನಾ ಎಸ್. ಶಂಕರಪ್ಪ. ಆಕೆ ಬಜಾರಿಯಂತೆ, ಬೇಗ ಕೋಪ ಬರುತ್ತದೆಯಂತೆ. ಯಾಕೆಂದರೆ, ಜನಿಸಿರುವುದು ದಸರಾ ಹಬ್ಬದ ಸಂದರ್ಭದಲ್ಲಿ ಎಂದು ಹೇಳುತ್ತಾರೆ.
ಮೇಘನಾಗೆ ಪ್ರವಾಸ ಅಂದ್ರೆ ಅಚ್ಚುಮೆಚ್ಚು
'ಸೀತಾ ರಾಮ' ಧಾರಾವಾಹಿಯಲ್ಲಿ ಮಾತನಾಡುವಂತೆಯೇ ಮೇಘನಾ ಅವರು ಕೂಡ ನಿಜ ಜೀವನದಲ್ಲಿ ಪಟಪಟ ಎಂದು ಮಾತನಾಡುತ್ತಿರುತ್ತಾರೆ. ಈಗಾಗಲೇ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಭರತನಾಟ್ಯವನ್ನು ಇಷ್ಟಪಡುವ ಮೇಘನಾ ಬಿಬಿಎಂ ಓದಿದ್ದಾರೆ. ಉದಯ್ ಪುರ್, ಜೈಪುರ, ಕುಂದಾಪುರ ಕಡೆ ಆಗಾಗ್ಗೆ ಪ್ರವಾಸ ಕೈಗೊಳ್ಳುತ್ತಿರುತ್ತಾರೆ.
ಮೇಘನಾ ನಟನೆಯ ಧಾರಾವಾಹಿಗಳು
'ಕಿನ್ನರಿ', 'ಕೃಷ್ಣ ತುಳಸಿ', 'ದೇವಯಾನಿ', 'ರತ್ನಗಿರಿ ರಹಸ್ಯ', 'ಸಿಂಧೂರಿ', 'ನಮ್ಮನೆ ಯುವರಾಣಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮೇಘನಾ ನಟಿಸಿದ್ದಾರೆ. 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟಿದ್ದ ಮೇಘನಾ ಮುಂದೆ ಕಿನ್ನರಿ ಧಾರಾವಾಹಿ ಮೂಲಕ ನಟನೆ ಪ್ರಾರಂಭಿಸಿದರು. ಸದ್ಯ ಸೀತಾ ರಾಮ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ ಪಾತ್ರಗಳಿಗೆ ಬಣ್ಣ ಹಚ್ಚಬೇಕು ಎಂಬುವ ಆಸೆಯ ಜೊತೆಗೆ ಹಿರಿತೆರೆಯಲ್ಲಿ ಮಿಂಚುವ ಕನಸನ್ನು ಕೂಡ ಹೊಂದಿದ್ದಾರೆ.


Click it and Unblock the Notifications











