ಸೀತಾ- ರಾಮನನ್ನು ದೂರ ಮಾಡುವುದೇ ಭಾರ್ಗವಿ ಅಲಿಯಾಸ್ ಪೂಜಾ ಲೋಕೇಶ್ ಕಾಯಕ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ನಟಿ ಪೂಜಾ ಲೋಕೇಶ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಲವು ವರ್ಷಗಳ ಬಳಿಕ ನಟಿ ಪೂಜಾ ಲೋಕೇಶ್ ಅವರು ಕಿರುತೆರೆಗೆ ಮರಳಿದ್ದಾರೆ.
ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರ್ಗವಿ ಪಾತ್ರದಲ್ಲಿ ನಟಿ ಪೂಜಾ ಲೋಕೇಶ್ ನಟಿಸಿದ್ದು, ನಾಯಕನ ಚಿಕ್ಕಮ್ಮನಾಗಿದ್ದಾರೆ. ಎಲ್ಲರ ಮೇಲೂ ದ್ವೇಷ ಇಟ್ಟುಕೊಂಡಿರುವ ಭಾರ್ಗವಿ ಖಡಕ್ ಆದ ಪಾತ್ರ ಅದು.

ಪೂಜಾ ನಟನೆಯ ಚಿತ್ರಗಳು, ಧಾರಾವಾಹಿಗಳು
ಪೂಜಾ ಲೋಕೇಶ್ ಕನ್ನಡ ಚಿತ್ರರಂಗದ ನಟಿ ಹಾಗೂ ಕಿರುತೆರೆಯಲ್ಲಿ ನಿರೂಪಕಿಯಾಗಿದ್ದರು. ಪೂಜಾ ತಮಿಳು ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದಾರೆ. ಇವರ ತಂದೆ ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ. ಲೋಕೇಶ್. ತಾಯಿ ಕನ್ನಡ ಚಿತ್ರರಂಗದ ಖ್ಯಾತನಟಿ ಗಿರಿಜಾ ಲೋಕೇಶ್. ಸೃಜನ್ ಲೋಕೇಶ್ ಸಹೋದರಿ ಪೂಜಾ. ಶಾಸ್ತ್ರೀಯ ನೃತ್ಯದಲ್ಲಿ ಪರಿಣಿತಿ ಹೊಂದಿರುವ ಪೂಜಾ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. 'ಯುದ್ಧ', 'ಮ್ಯಾಜಿಕ್ ಅಜ್ಜಿ', 'ಉಲ್ಟಾಪಲ್ಟ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಸೆಲ್ವಿ', 'ಕುಂಗುಮಂ', 'ಮಹಾಭಾರತ' ಸೇರಿದಂತೆ ಹಲವು ತಮಿಳು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.
ಭಾರ್ಗವಿ ಪಾತ್ರದಲ್ಲಿ ಮಿಂಚಿಂಗ್
'ಸೀತಾ ರಾಮ' ಧಾರಾವಾಹಿಯಲ್ಲಿ ಪೂಜಾಗೆ ಭಾರ್ಗವಿ ಎಂಬ ಪಾತ್ರ ಸಿಕ್ಕಿದ್ದು, ಭಾರ್ಗವಿ ದೇಸಾಯಿ ಮನೆತನದ ಎರಡನೇ ಸೊಸೆಯಾಗಿರುತ್ತಾರೆ. ಯಾವುದೋ ಒಂದು ಅಹಿತಕರ ಘಟನೆಯಿಂದ ಆಕೆ ದೇಸಾಯಿ ಮನೆಯನ್ನೇ ನಾಶ ಮಾಡುವುದಾಗಿ ಪಣತೊಟ್ಟಿದ್ದಾಳೆ. ಧಾರಾವಾಹಿಯ ನಾಯಕ ಶ್ರೀರಾಮನ ಜೀವನವನ್ನೂ ಹಾಳು ಮಾಡಲು ಪ್ರಯತ್ನಗಳನ್ನು ಪಡುತ್ತಲೇ ಇರುತ್ತಾಳೆ. ಸೀತಾಳಿಂದ ಶ್ರೀರಾಮನನ್ನು ದೂರ ಮಾಡುವ ಸಲುವಾಗಿ ಭಾರ್ಗವಿ ಹೊಸ ಪ್ಲಾನ್ ಮಾಡಿರುತ್ತಾಳೆ. ಆದರೆ ಶ್ರೀರಾಮ, ಸೀತಾಳನ್ನು ಬಿಟ್ಟು ಕೊಡುವುದಕ್ಕೆ ತಯಾರಿರುವುದಿಲ್ಲ. ಸೀತಾ ಮತ್ತು ರಾಮನ ನಡುವಿನ ಪ್ರೀತಿಗೆ ಸಿಹಿ ಸೇತುವೆಯಾಗಿದ್ದು, ಯಾವೆಲ್ಲಾ ಕಷ್ಟಗಳನ್ನು ಈ ಜೋಡಿ ಅನುಭವಿಸಬೇಕಿದೆಯೋ ಗೊತ್ತಿಲ್ಲ.
ಖುಷಿ ಹಂಚಿಕೊಂಡ ನಟಿ
ದಶಕಗಳ ಬಳಿಕ ಮತ್ತೆ ಧಾರಾವಾಹಿಗೆ ಬಂದಿರುವ ಖುಷಿ ಪೂಜಾ ಹಂಚಿಕೊಂಡಿದ್ದಾರೆ. ಪೂಜಾ ಯೂಟ್ಯೂಬ್ ಚಾನಲ್‌ನಲ್ಲಿ ತಮ್ಮ ತಾಯಿ ಹಾಗೂ ಅತ್ತಿಗೆಯೊಂದಿಗೆ ಆಗಾಗ ಫನ್ನಿ ವಿಡಿಯೋಗಳನ್ನು ಮಾಡುತ್ತಾ ಜನರಿಗೆ ರಂಜಿಸುತ್ತಿರುತ್ತಾರೆ. ಇನ್ನು ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲೂ ಮಾತನಾಡಿರುವ ಪೂಜಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅಮ್ಮ ಗಿರಿಜಾ ಲೋಕೇಶ್ ಅವರಿಂದಲೇ ಪದಕ ಪಡೆದಿದ್ದರು. ತಮ್ಮ ನಟನೆಯ ಬಗ್ಗೆ ಮೊದಲ ಕ್ರಿಟಿಕ್ ಎಂದರೆ ಅಮ್ಮ ಎಂದು ಹೇಳಿದರು. ಈಗ ಅವರಿಂದಲೇ ಬೆಸ್ಟ್ ವಿಲನ್ ಪದಕ ಪಡೆದಿದ್ದಕ್ಕೆ ಖುಷಿ ಪಟ್ಟಿದ್ದರು. ಇನ್ನು ಜನರು ಕೂಡ ಭಾರ್ಗವಿ ಪಾತ್ರಕ್ಕೆ ಬೈದು, ಶಾಪ ಹಾಕುತ್ತಿದ್ದಾರೆ. ಅಂದರೆ ನನ್ನ ಪಾತ್ರ ಜನರ ಮನಸ್ಸಿಗೆ ಇಷ್ಟವಾಗಿದೆ ಎಂದು ಹೇಳಿದರು.
ಪೂಜಾ ಅವರ ಹುಟ್ಟುಹಬ್ಬ
ಅಂದಹಾಗೆ ಪೂಜಾ ಲೋಕೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಕೆಗೆ ಜೊತೆ ಕೆಲಸಗಾರರು ಮತ್ತು ಸ್ನೇಹಿತರು, ಬಂಧು, ಮಿತ್ರರು ಎಲ್ಲರೂ ಕೂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ವೀಕೆಂಡ್‌ನಲ್ಲಿ ಹುಟ್ಟುಹಬ್ಬದ ಹಿನ್ನೆಲೆ ಪಾರ್ಟಿ, ಮಸ್ತಿ ಎಂದು ಫ್ಯಾಮಿಲಿ ಜೊತೆಗೆ ಬ್ಯುಸಿಯಾಗಿದ್ದಾರೆ.


Click it and Unblock the Notifications











