ಸೀತಾಳಿಗೆ ರಾಮ್ ಪ್ರಪೋಸ್ ಮಾಡಲು ಅಡ್ಡಿ ಮಾಡಿದ ಆ ವ್ಯಕ್ತಿ ಯಾರು..?

By ಪ್ರಿಯಾ ದೊರೆ

'ಸೀತಾ ರಾಮ' ಧಾರಾವಾಹಿಯಲ್ಲಿ ಪ್ರಿಯಾ ಮತ್ತು ಅಶೋಕನ ತಂಗಿ ಅಂಜಲಿ ಇಬ್ಬರೂ ಒಂದೇ ಪಿಜಿಯಲ್ಲಿ ಒಂದೇ ರೂಮಿನಲ್ಲಿ ಇದ್ದಾರೆ. ಅಂಜಲಿ ದೈವ ಭಕ್ತೆಯಾಗಿದ್ದು, ಸೂರ್ಯೋದಯಕ್ಕೂ ಮುನ್ನವೇ ಎದ್ದು ರೆಡಿಯಾಗುತ್ತಾಳೆ.

ದೇವರಿಗೆ ಪೂಜೆ ಮಾಡಿ ರೂಮ್ ಅನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತಾಳೆ. ಅಂಜಲಿ ಇರುವ ರೀತಿಯನ್ನು ನೋಡಿದ ಪ್ರಿಯಾಳಿಗೆ ಆಶ್ಚರ್ಯವಾಗುತ್ತದೆ. ಇಬ್ಬರೂ ಕೂಡ ತದ್ವಿರುದ್ಧವಾಗಿದ್ದಾರೆ.

ಮುಂದಿನ ದಿನಗಳಲ್ಲಿ ಇವರಿಬ್ಬರ ಸ್ನೇಹ ಹೇಗಿರುತ್ತದೆ. ಅಶೋಕನ ತಂಗಿಯೇ ಎಂಬ ಸತ್ಯ ಎಂಬುವುದು ಪ್ರಿಯಾಳಿಗೆ ಯಾವಾಗ ತಿಳಿಯುತ್ತದೆ ಹಾಗೂ ಅಂಜಲಿಗೆ ಪ್ರಿಯಾಳೇ ತನ್ನ ಫ್ಯೂಚರ್ ಅತ್ತಿಗೆ ಎಂಬುದು ಯಾವಾಗ ಗೊತ್ತಾಗುತ್ತದೆ?

Seetha Rama serial February 14th episode about Ashok plan

ಅಶೋಕನಿಗೆ ಆರ್ಡರ್ ಮಾಡಿದ ಪ್ರಿಯಾ

ಪ್ರಿಯಾ ಅಂತೂ ಅಶೋಕನಿಗೆ ಫೋನ್ ಮಾಡಿ ಮೆಸೇಜ್ ಮಾಡಿ ಸಾಕಾಗಿದೆ. ಅಶೋಕನಿಂದ ಯಾವುದೇ ರಿಪ್ಲೈ ಬಾರದ ಕಾರಣ ಪ್ರಿಯಾ ಆಫೀಸಿಗೆ ಹೋದ ಕೂಡಲೇ ಸೀದಾ ಕ್ಯಾಬಿನ್‌ಗೆ ನುಗ್ಗಿದ್ದಾಳೆ. ನಿಮಗೆ ನನ್ನ ಭಾಷೆ ಅರ್ಥವಾಗುತ್ತಾ ಇಲ್ವಾ? ನಾನು ನಿಮಗೆ ಡೀಟೈಲ್ ಆಗಿ ಬಿಡಿಸಿ ಹೇಳಬೇಕಾ? ಇವತ್ತು ತಲೆ ಮೇಲೆ ತಲೆ ಬಿದ್ದರೂ ಇಬ್ಬರೂ ಭೇಟಿ ಮಾಡಿ ಮುಕ್ತವಾಗಿ ಮಾತನಾಡಬೇಕು ಎಂದು ಪ್ರಿಯಾ, ಅಶೋಕನಿಗೆ ಆರ್ಡರ್ ಮಾಡಿದ್ದಾಳೆ. ಅಶೋಕ ಕೂಡ ಪ್ರಿಯಾ ಮಾತುಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಮೌನವಾಗಿದ್ದಾನೆ. ವ್ಯಾಲೆನ್ ಟೈನ್ಸ್ ಡೇ ತನಗೂ ಇಂದೇ ಜರುಗಬಹುದು ಎಂದು ಗೆಸ್ ಮಾಡಿದ್ದಾನೆ. ಪ್ರಿಯಾಳನ್ನು ಇಷ್ಟ ಪಡುತ್ತಿರುವ ಅಶೋಕನಿಗೆ ಸತ್ಯ ಹೇಳಲಾಗದೇ ಸುಮ್ಮನಿದ್ದಾನೆ.

ಗೆಳೆಯನಿಗಾಗಿ ಸರ್ಪ್ರೈಸ್ ಕೊಟ್ಟ ಅಶೋಕ

ಅಶೋಕ, ರಾಮನ ಬದುಕು ಚೆನ್ನಾಗಿರಲೆಂದು ತನ್ನ ಕೈಲಾದಷ್ಟು ಪ್ರಯತ್ನಗಳನ್ನು ಪಡುತ್ತಲೇ ಇದ್ದಾನೆ. ಈಗಲಾದರೂ ರಾಮ್, ಸೀತಾ ಬಳಿ ತನ್ನ ಪ್ರೇಮವನ್ನು ಹೇಳಿಕೊಳ್ಳಲಿ ಎಂದು ಪ್ಲಾನ್ ಮಾಡಿದ್ದಾನೆ. ಮೀಟಿಂಗ್ ಇದೆ ಎಂದು ರಾಮ್‌ನನ್ನು ಅಶೋಕ್ ಹೋಟೆಲ್‌ಗೆ ಕಳಿಸಿದ್ದಾನೆ. ಫೈಲ್ ಅನ್ನು ಸೀತಾ ಕೈಯಲ್ಲಿ ಕೊಟ್ಟು ಕಳಿಸಿದ್ದಾನೆ. ಸೀತಾಳನ್ನು ನೋಡಿದ ಕೂಡಲೇ ರಾಮ್‌ಗೆ ಇದೆಲ್ಲವೂ ಅಶೋಕ್ ಕೆಲಸವೇ ಎಂಬುದು ಗೊತ್ತಾಗುತ್ತದೆ. ಗೆಳೆಯ ಕೊಟ್ಟ ಸರ್ಪ್ರೈಸ್‌ನಿಂದ ರಾಮ್‌ಗೆ ಖುಷಿಯಾಗುತ್ತದೆ. ಅಶೋಕ್ ಹೇಳಿದಂತೆಯೇ ತನ್ನ ಮನದ ಮಾತುಗಳನ್ನು ಸೀತಾ ಬಳಿ ಹೇಳಲು ರಾಮ್ ಮುಂದಾಗುತ್ತಾನೆ.

ಪ್ರಪೋಸ್ ಮಾಡಲು ಅಡ್ಡಿಯಾಗಿದ್ಯಾರು..?

ಸೀತಾಳಿಗೆ ರಾಮ್ ಮನಸಲ್ಲಿರುವ ಪ್ರೀತಿ ವಿಚಾರದ ಬಗ್ಗೆ ಕೊಂಚವೂ ಗೊತ್ತಿಲ್ಲ. ಅಶೋಕ್ ರಾಮ್‌ಗೆ ಮೆಸೇಜ್ ಮಾಡಿ ಇಂದೇ ಪ್ರಪೋಸ್ ಮಾಡಿ ಬಿಡು ಎಂದು ಹೇಳುತ್ತಾನೆ. ರಾಮ್ ಕೂಡ ಮನದ ಮಾತುಗಳನ್ನು ಹೇಳಿಕೊಳ್ಳಲು ಮುಂದಾಗುತ್ತಾನೆ. ಆಗ ಊಟ ಮಾಡೋಣ ಸಿಹಿ ಡಬ್ಬಿ ಕಳಿಸಿದ್ದಾಳೆ ಎಂದು ಬಾಕ್ಸ್ ಅನ್ನು ಸೀತಾ ತೆಗೆಯುತ್ತಾಳೆ. ಇಬ್ಬರದ್ದು ಊಟ ಮುಗಿಯುವ ವೇಳೆಗೆ ರಾಮ್ ಇನ್ನೇನು ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುವಷ್ಟರಲ್ಲಿ ತನ್ನ ಕೈಗೆ ಚಾಕುವನ್ನು ಇರಿದ ವ್ಯಕ್ತಿ ತಮ್ಮನ್ನೇ ಗಮನಿಸುತ್ತಿರುವುದನ್ನು ನೋಡುತ್ತಾನೆ. ಆತನನ್ನು ಯಾಮಾರಿಸಲು ಅಲ್ಲಿಂದ ಎದ್ದು ವಾಶ್ ರೂಮ್‌ಗೆ ಹೋಗುತ್ತಾನೆ. ಅಲ್ಲಿ ಆತನನ್ನು ಕೂಡಿ ಹಾಕಿ, ಸೀತಾಳನ್ನು ಕರೆದುಕೊಂಡು ಹೊರಡುತ್ತಾನೆ. ರುದ್ರಪ್ರತಾಪ್ ಕಡೆಯ ಆ ವ್ಯಕ್ತಿ ರಾಮ್ ಮೇಲೆ ಕಣ್ಣಿಟ್ಟಿದ್ದಾನಾ? ಇಲ್ಲ ಸೀತಾಳನ್ನು ಫಾಲೋ ಮಾಡುತ್ತಿದ್ದಾನೋ ಗೊತ್ತಿಲ್ಲ.

ರಾಮ್ ಪ್ರಶ್ನೆಗೆ ಉತ್ತರಿಸುತ್ತಾಳಾ ಸೀತಾ?

ಇನ್ನು ಕಾರಿನಲ್ಲಿ ಹೋಗುವಾಗ ರಾಮ್, ಸೀತಾಳನ್ನು ಮಾತನಾಡಿಸುತ್ತಾನೆ. ಬೇಕಂತಲೇ ಸೀತಾಳ ಜೀವನದ ಹಳೆಯ ಬದುಕಿನ ಬಗ್ಗೆ ಪ್ರಶ್ನೆ ಮಾಡುತ್ತಾನೆ. ನಿಮಗೆ ಮದುವೆಯಾಗುವ ಬಗ್ಗೆ ಆಗಲೀ, ನಿಮ್ಮ ಬದುಕಿನ ನೆನಪುಗಳಾಗಲೀ ಕಾಡುವುದಿಲ್ಲವಾ ಎಂದು ಪ್ರಶ್ನಿಸುತ್ತಾನೆ. ಸೀತಾ ಇದಕ್ಕೆ ತಾನು ಯಾವತ್ತಿಗೂ ಮದುವೆಯಾಗುವ ಅಥವಾ ಮದುವೆಯಾಗುವ ಬಗ್ಗೆ ಯೋಚಿಸುವುದಕ್ಕೆ ಸಾಧ್ಯವೇ ಇಲ್ಲ. ತನಗೇನಿದ್ದರೂ ಸಿಹಿಯ ಭವಿಷ್ಯದ ಬಗ್ಗೆ ಅಷ್ಟೇ ಯೋಚನೆ ಎಂದು ಹೇಳುತ್ತಾಳೆ.

More from Filmibeat

English summary
Seetha Rama serial February 14th episode about Ashok plan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X