'ಸೀತಾ ರಾಮ' ಧಾರಾವಾಹಿಯ ನಟನ ಹೆಸರಲ್ಲಿ ನಕಲಿ ಖಾತೆ.. ಹಣ ಪೀಕಲು ಪ್ಲ್ಯಾನ್.. ಎಚ್ಚರಿಕೆ ನೀಡಿದ ರಾಮ!

By ಎಸ್ ಸುಮಂತ್

ಸೋಷಿಯಲ್ ಮೀಡಿಯಾ ಅನ್ನೋದು ದೊಡ್ಡ ಮಟ್ಟಕ್ಕೆ ಬೆಳೆದು ಬಹಳ ವರ್ಷಗಳೇ ಆಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ. ಹ್ಯಾಕ್ ಮಾಡಿ ಹಣ ಮಾಡುವ ಖದೀಮರಿಗೆ ಇದು ಸುಲಭದ ಫ್ಲಾಟ್ ಫಾರ್ಮ್ ಆಗೋಗಿದೆ. ಈಗ 'ಸೀತಾ ರಾಮ' ಧಾರಾವಾಹಿಯ ರಾಮ್ ಹೆಸರಲ್ಲೂ ಮೋಸ ಮಾಡಲು ಶುರು ಮಾಡಿದ್ದಾರೆ.

'ಸೀತಾರಾಮ' ಧಾರಾವಾಹಿ ಶುರುವಾದಾಗಿನಿಂದ ಶ್ರೀರಾಮನಿಗೆ ಅಭಿಮಾನಿಗಳು ಜಾಸ್ತಿಯಾಗಿದ್ದಾರೆ. ಅವರನ್ನು ಭೇಟಿ ಮಾಡುವ ಆಸೆಯೂ ಅಭಿಮಾನಿಗಳಲ್ಲಿ ಇದೆ. ಫ್ಯಾನ್ ಪೇಜ್ ಗಳಿಗೂ ಲೆಕ್ಕವಿಲ್ಲ. ರಾಮ್ ಖ್ಯಾತಿ ಹೆಚ್ಚಾಗಿರುವಾಗ, ರಾಮ್ ತಾನಾಗಿಯೇ ಮೆಸೇಜ್ ಮಾಡುತ್ತಾರೆ ಎಂದರೆ ಖುಷಿ ಆಗುವುದಿಲ್ಲವೆ. ಅದೇ ಖುಷಿಯಲ್ಲಿ ಯಾಮಾರಿದರೆ ಖಂಡಿತಾ ನಿಮ್ಮ ಗೂಗಲ್ ಪೇ, ಫೋನ್ ಪೇಗೆ ಕತ್ತರಿ ಬೀಳುತ್ತೆ. ಆ ಕತ್ತರಿ ಹಾಕುವುದು ರಾಮ್ ಅಲ್ಲ, ಬದಲಿಗೆ ಖದೀಮರು.

Seetha Rama serial Ram fame Gagan Chinnappa warned fake social Media account

ರಾಮ್ ಹೆಸರಲ್ಲಿ ಫೇಕ್ ಅಕೌಂಟ್

ಸೋಷಿಯಲ್ ಮೀಡಿಯಾದಲ್ಲಿ ಈಗಂತು ಎಲ್ಲರೂ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮೀಡಿಯಾ ಇಲ್ಲದೆ ಇರುವವರು ಯಾರಿಲ್ಲ. ಅಕ್ಕ ಪಕ್ಕ ಜನ ಕುಳಿತಿದ್ದರು, ಪರಿಚಯದವರು ಇದ್ದರು ಮೂಖ ವಸ್ತುಗಳಂತೆ ಕಾಣುತ್ತಾರೆ. ಬದಲಿಗೆ ಸೋಷಿಯಲ್ ಮೀಡಿಯಾನೇ ಮನರಂಜನೆಯ ಅಡ್ಡವಾಗಿದೆ. ಹೀಗಾಗಿ ಸೆಲೆಬ್ರೆಟಿಗಳ ಹೆಸರಲ್ಲೂ ಹಲವರು ಫ್ಯಾನ್ ಪೇಜ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಅದರಂತೆ ಮತ್ತೆ ಕೆಲವರು ಫೇಕ್ ಐಡಿಗಳನ್ನು ಸೃಷ್ಟಿಸಿದ್ದಾರೆ. ಇದೀಗ 'ಸೀತಾರಾಮ' ಧಾರಾವಾಹಿಯ ರಾಮ್ ಹೆಸರಲ್ಲೂ ಫೇಕ್ ಐಡಿ ಸೃಷ್ಟಿಯಾಗಿದೆ.

ಹಣ ಪೀಕುವುದಕ್ಕೆ ಹೊರಟ ಖದೀಮರು

ಕಳೆದ ತಿಂಗಳುಗಳ ಹಿಂದೆ ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು, ಫ್ರೆಂಡ್ಸ್ ನಿಮ್ಮ ಹೆಸರಲ್ಲಿ ಯಾರೋ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಗೂಗಲ್ ಪೇ, ಫೋನ್ ಪೇ ನಲ್ಲಿ ಹಣ ಕೇಳುತ್ತಿದ್ದಾರೆ ಎಂಬ ಎಚ್ಚರಿಕೆಯ ಮೆಸೇಜ್ ಗಳು ಬರುತ್ತಿದ್ದವು. ಅದರಲ್ಲೂ ಯಾರಿಗೇ ಮೆಸೇಜ್ ಕಳುಹಿಸಿದರೂ ಒಂದೇ ಸ್ಟೈಲ್. ನಿಮ್ಮಲ್ಲಿ ಗೂಗಲ್ ಪೇ, ಫೋನ್ ಪೇ ಇದ್ದರೆ 5 ಸಾವಿರ ಕಳಿಸಿ, ನಾನು ವಾಪಸ್ ಕಳಿಸುತ್ತೇನೆ. ಇದೇ ಥರ ಮೆಸೇಜ್‌ಗಳು ಬರುತ್ತಿತ್ತು. ಈಗಲೂ ಗಗನ್ ಫೇಕ್ ಅಕೌಂಟ್‌ನಿಂದ ಅದೇ ರೀತಿ ಬಂದಿದೆ.

Seetha Rama serial Ram fame Gagan Chinnappa warned fake social Media account

ಸೋಷಿಯಲ್ ಮೀಡಿಯಾದಲ್ಲಿ ಗಗನ್ ಮಾಹಿತಿ

ಗಗನ್ ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಡಿಯಾಗಿ, ಹಣಕ್ಕೂ ಬೇಡಿಕೆ ಇಟ್ಟಿದ್ದಾರೆ ಎಂಬುದು ರಾಮ್ ಗಮನಕ್ಕೆ ಬಂದಿದೆ. ಹೀಗಾಗಿ ತನ್ನ ಸೋಷಿಯಲ್ ಮೀಡಿಯಾದಲ್ಲಿಯೇ ಅದಕ್ಕೆ ಉತ್ತರಿಸಿದ್ದಾರೆ. ಅದರ ಸ್ಕ್ರೀನ್ ಶಾಟ್ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಫೋನ್ ನಂಬರ್ ಸಹಿತ ಹಂಚಿಕೊಂಡಿದ್ದು, ಬೇರೆಯವರು ಮೋಸ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಮೋಸದ ಜಾಲ ಇನ್ನು ಕಡಿಮೆಯಾಗಿಲ್ಲ

ಫೇಕ್ ಅಲೌಂಟ್ ಸೃಷ್ಟಿಸಿ, ಅವರಿಗೆ ಇರುವ ಕ್ಲೋಸ್ ಸರ್ಕಲ್ ನಲ್ಲಿ ಹಣ ಪೀಕುವುದು ಹ್ಯಾಕರ್ಸ್ ಗಳಿಗೆ ಹೊಸ ಪ್ರಯೋಗವಾಗಿತ್ತು. ಈ ಪ್ರಯೋಗದಿಂದ ಸಾಕಷ್ಟು ಜನ ಹಣ ಕಳೆದುಕೊಂಡಿದ್ದಾರೆ. ಈ ಹಿಂದೆ ಸೆಲೆಬ್ರೆಟಿಗಳು ಎಂಬುದನ್ನು ನೋಡದೆ, ಸಾಮಾನ್ಯರು ಎಂಬುದನ್ನು ನೋಡದೆ ಹ್ಯಾಕರ್ಸ್ ಹಣ ಪೀಕಿದ್ದಾರೆ. ಇದೀಗ ಗಗನ್ ಚಿನ್ನಪ್ಪ ಹೆಸರಲ್ಲೂ ಫೇಕ್ ಐಡಿ ಸೃಷ್ಟಿಸಿ, ಹಣ ಮಾಡಲು ಹೊರಟಿದ್ದಾರೆ.

More from Filmibeat

English summary
Seetha Rama serial Ram fame Gagan chinnappa warned fake social Media account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X