Seetha Rama Serial: 'ಸೀತಾ ರಾಮ' ಧಾರಾವಾಹಿವಲ್ಲಿ ಸಿಹಿಗೆ ಟ್ರೈನಿಂಗ್ ಕೊಟ್ಟು ಕೊಟ್ಟು ಕೊರಿಯೋಗ್ರಾಫರ್‌ಗೆ ಸುಸ್ತು!
ಮಕ್ಕಳು ಅಂದ್ರೆ ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ. ಅದರಲ್ಲೂ ಅವುಗಳ ತುಂಟಾಟ, ತರಲೆ ಅಬ್ಬಬ್ಬಾ ಎಲ್ಲಾ ನೋಡುವುದಕ್ಕೆ ಆನಂದವೋ ಆನಂದ. ಈ ಮೊದಲೆಲ್ಲಾ ಹೆಚ್ಚು ಟ್ಯಾಲೆಂಟ್ ಇರುವಂತ ಮಕ್ಕಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬೇಬಿ ಶಾಮಿಲಿ ಜಮಾನದಲ್ಲಿ ಮಕ್ಕಳ ನಟನೆ ನೋಡುವುದಕ್ಕೇನೆ ಅದೆಷ್ಟು ಖುಷಿ ಆಗುತ್ತಿತ್ತು.
ಇದು ಧಾರಾವಾಹಿ ಜಮಾನ. ಕಿರುತೆರೆಯಲ್ಲಿಯೇ ಅದ್ದೂರಿತನವನ್ನು ಸೃಷ್ಟಿಸುತ್ತಿದೆ. ಎಲ್ಲಾ ವರ್ಗದವರು ಕೂಡ ಈಗ ಧಾರಾವಾಹಿ ಪ್ರಿಯರಾಗಿದ್ದಾರೆ. ಧಾರಾವಾಹಿಗಳಲ್ಲೂ ಈಗ ಕಾಂಪಿಟೇಷನ್ ಶುರುವಾಗಿದೆ. ಒಳ್ಳೊಳ್ಳೆ ಧಾರಾವಾಹಿಗಳನ್ನು ನೀಡುತ್ತಾ ಪ್ರೇಕ್ಷಕರ ಮನಸ್ಸಲ್ಲಿ ಕುಳಿತುಕೊಳ್ಳುತ್ತಿವೆ. ಅದರಲ್ಲೂ ಮಕ್ಕಳನ್ನು ಬಳಸಿಕೊಂಡು ಮೂಡಿ ಬರುತ್ತಿರುವ ಧಾರಾವಾಹಿಗಳು ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ 'ಸೀತಾರಾಮ' ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ಸಿಹಿಗೆ ಡ್ಯಾನ್ಸ್ ಹೇಳಿಕೊಡುವಲ್ಲಿ ಮಾಸ್ಟರ್ ಸುಸ್ತು
ಮಕ್ಕಳನ್ನು ಹಾಕಿಕೊಂಡು ಧಾರಾವಾಹಿ ಮಾಡುವುದು ಸುಲಭವಲ್ಲ. ಅದರಲ್ಲೂ ಎಲ್ ಕೆ ಜಿ ಮಗುವಿನ ಬಳಿ ನಟನೆ ಮಾಡಿಸುವುದು ಎಂದರೆ ಸುಮ್ನೆನಾ. ಆದರೆ 'ಸೀತಾ ರಾಮ' ಧಾರಾವಾಹಿಯಲ್ಲಿ ಸಿಹಿಯ ಮಾತುಗಳನ್ನು ಕೇಳುವುದೇ ಚೆಂದ. ಅದರಲ್ಲೂ ಸಿಹಿಯ ಡ್ಯಾನ್ಸ್ ಅಂದ್ರೆ ಕೇಳ್ಬೇಕಾ. ಕೃಷ್ಣಾ ಜನ್ಮಾಷ್ಠಮಿಯಂದು ಸಿಹಿ ಮತ್ತು ಅವರ ಅಮ್ಮನ ಪಾತ್ರಧಾರಿ ಸೀತಾ ಡ್ಯಾನ್ಸ್ ಮಾಡಿದ್ದಾರೆ. ಯಶೋಧೆಯಾಗಿ ವೈಷ್ಣವಿ, ಕಳ್ಳ ಕೃಷ್ಣನಾಗಿ ರಿತು ಡ್ಯಾನ್ಸ್ ಮಾಡಿದ್ದಾರೆ. ಇದರ ಹಿಂದಿನ ಸರ್ಕಸ್ ಎಷ್ಟು ಕಷ್ಟವಾಗಿತ್ತು ಎಂಬುದನ್ನು ಇದೀಗ ವಿಡಿಯೋ ಹಂಚಿಕೊಂಡಿದ್ದಾರೆ.
ಸಿಹಿಯ ನಟನೆ ಅಂದ್ರೆ ಎಲ್ಲರಿಗೂ ಪ್ರೀತಿ
ಎಷ್ಟೋ ಜನ ಅಪ್ಪ ಅಮ್ಮಂದಿರು ಸಿಹಿ ಪುಟಾಣಿಯ ನಟನೆಗೆ ವಾವ್ಹ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅದೆಷ್ಟು ಬುದ್ದಿವಂತಿಕೆ, ಅದೆಷ್ಟು ಪ್ರಬುದ್ಧತೆ ಇದೆ ಅಲ್ವಾ ಎಂದೇ ಭಾವಿಸುತ್ತಾರೆ. ಯಾಕಂದರೆ ಸಿಹಿ ಕೂಡ ನಟನೆಯಲ್ಲಿ, ಡೈಲಾಗ್‌ನಲ್ಲಿ ಎಲ್ಲರನ್ನು ಮೀರಿಸುವಂತಹ ಆಕ್ಟಿಂಗ್ ಮಾಡುತ್ತಾಳೆ. ಆದರೆ, ಸಿಹಿ ಒಂದೇ ಟೇಕ್‌ನಲ್ಲಿ ಇಷ್ಟೆಲ್ಲಾ ಮಾಡುತ್ತಾಳಾ ಎಂಬ ಅನುಮಾನ ಎಲ್ಲರಲ್ಲೂ ಇತ್ತು. ಮಕ್ಕಳಿಗೆ ಹೇಳಿ ಕೊಡುವುದು, ನಟನೆ ಮಾಡಿಸುವುದು ಅಷ್ಟು ಸುಲಭವಲ್ಲ ಅನ್ನೋದು ಈ ವಿಡಿಯೋ ಮೂಲಕ ಗೊತ್ತಾಗಿದೆ. ಒಂದು ಡ್ಯಾನ್ಸ್‌ಗೆ ಸಿಹಿಯ ಮೂಡ್ ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಆಗುತ್ತಾ ಇತ್ತು. ಕಡೆಗೂ ಒಂದೊಳ್ಳೆ ಡ್ಯಾನ್ಸ್ ಮಾಡಿದ್ದಾರೆ.
ಸಿಹಿ ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್
ಸಿಹಿ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾಳೆ. ಅವಳ ಮೇಕಪ್ ಮ್ಯಾನ್ ಅವಳ ರೀಲ್ಸ್ ಪಾಟ್ನರ್. ಅಬ್ಬ ದೊಡ್ಡ ದೊಡ್ಡ ಸ್ಟಾರ್‌ಗಳ ಹಾಡಿಗೆ ಹೆಜ್ಜೆ ಹಾಕುತ್ತಾಳೆ ಸಿಹಿ ಪುಟ್ಟ. ದೊಡ್ಡ ದೊಡ್ಡವರ ಡೈಲಾಗ್ ಗಳಿಗೆ ಫಿಲಿಂಗ್ಸ್ ಕೊಡುತ್ತಾಳೆ. ಸಿಹಿಯ ರೀಲ್ಸ್ ನೋಡುವುದಕ್ಕೆ ಚೆಂದ.
ಡ್ರಾಯಿಂಗ್‌ನಲ್ಲಿ ಅಪ್ಪನಿಲ್ಲದೆ ಬೇಸರ
ಸಿಹಿಗೆ ಅಪ್ಪನನ್ನು ನೋಡುವ ಹಂಬಲ ಜಾಸ್ತಿ. ಅಮ್ಮನನ್ನು ಕೇಳಿದರೆ ನೊಂದುಕೊಳ್ಳುತ್ತಾಳೆ. ಇವತ್ತು ಶಾಲೆಯಲ್ಲಿ ಫ್ಯಾಮಿಲಿ ಕುರಿತ ಡ್ರಾಯಿಂಗ್ ಬಿಡಿಸುವ ಕೆಲಸ ಕೊಟ್ಟಿದ್ದರು ಶಿಕ್ಷಕರು. ಈ ವೇಳೆ ಎಲ್ಲರ ಡ್ರಾಯಿಂಗ್ ನಲ್ಲೂ ಅಪ್ಪನ ಚಿತ್ರವೂ ಇತ್ತು. ಆದರೆ ಸಿಹಿ ಚಿತ್ರದಲ್ಲಿ ಅಮ್ಮ ಮತ್ತು ಸಿಹಿ ಮಾತ್ರ. ಫ್ರೆಂಡ್ಸ್ ಎಲ್ಲಾ ನಮ್ಮ ಫ್ಯಾಮಿಲಿಯಲ್ಲಿ ಜಾಸ್ತಿ ಜನ ಇದ್ದಾರೆ. ನಿಂಗೆ ಬೇಕಾದರೆ ತಗೋ ಅಂದ್ರೆ ಸಿಹಿ, ಒಳ್ಳೆ ಮಾತನ್ನೇ ಹೇಳಿದ್ದಾಳೆ. ನಾನು ನಮ್ಮ ಅಮ್ಮ ಸಾಕು, ಖುಷಿಯಾಗಿದ್ದೀವಿ ಎಂದಿದ್ದಾಳೆ.


Click it and Unblock the Notifications











