Seetha Rama Serial: ಸೀತಾ ಕಷ್ಟದಲ್ಲಿದ್ರೆ ರಾಮ ಸುಮ್ಮನೆ ಕೂರೋದನ್ನ ಎಲ್ಲಾದ್ರೂ ನೋಡಿದ್ದೀರಾ..?

By ಎಸ್ ಸುಮಂತ್

ರಾಮ್ ಮನಸ್ಸು ಮಾಡಿದ್ರೆ ಸೀತಾಳ ಕಷ್ಟ ಕ್ಷಣ ಮಾತ್ರದಲ್ಲಿಯೇ ದೂರಾಗಲಿದೆ. ಆದರೆ ಸೀತಾ ಸಿಕ್ಕಾಪಟ್ಟೆ ಸ್ವಾಭಿಮಾನಿ. ತನ್ನ ಕೈಯಿಂದ ಬೇಕಾದರೇ ಸಹಾಯ ಮಾಡಿ ಬಿಡುತ್ತಾಳೆ. ಬೇರೆಯವರಿಂದ ಸಹಾಯ ಪಡೆಯುವವಳಲ್ಲ ನಮ್ಮ ಸೀತಾ. ಅದಕ್ಕಾಗಿಯೇ ಸದ್ಯಕ್ಕೆ ಬಂದಿರುವ ಕಷ್ಟವನ್ನು ಯಾರ ಬಳಿಯೂ ಹೇಳದೆ, ತಾನೇ ನುಂಗಿಕೊಳ್ಳುತ್ತಿದ್ದಾಳೆ. ತಾನೇ ಸಹಿಸಿಕೊಳ್ಳುತ್ತಿದ್ದಾಳೆ.

ಸೀತಾ ಎಷ್ಟೋ ಜನ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯೇ ಸರಿ. ಬೆಳಗ್ಗೆ ಎದ್ದು ತಿಂಡಿ ಮಾಡಿ, ಮಗಳಿಗೆ ಬಾಕ್ಸ್ ರೆಡಿ‌ ಮಾಡಿ, ಮಗಳನ್ನು ರೆಡಿ ಮಾಡಿ, ಶಾಲೆಗೆ ಬಿಟ್ಟು, ತಾನೂ ಆಫೀಸಿಗೆ ಓಡುತ್ತಾಳೆ. ಮಗಳ ಜವಾಬ್ದಾರಿ ನೋಡಿಕೊಳ್ಳುತ್ತಲೆ, ಬರುವ ಹಣದಲ್ಲಿಯೇ ನೆಮ್ಮದಿಯ ಜೀವನ ಕಳೆಯುತ್ತಿದ್ದಾಳೆ. ಆದರೆ ಇದರ ಜೊತೆಗೆ ಕುತ್ತಿಗೆಯವರೆಗೂ ಸಮಸ್ಯೆ ಬಂದರೂ ಯಾರ ಬಳಿಯೂ, ಹಂಚಿಕೊಳ್ಳಯವುದಿಲ್ಲ. ಅಲ್ಲಿಯೂ ತಾನೇ ನುಗ್ಗಿ ಎಲ್ಲಾ ಸಮಸ್ಯೆಯನ್ನು ಸರಿ ಮಾಡುವುದಕ್ಕೆ ಪ್ರಯತ್ನಿಸುತ್ತಾನೆ. ಇದುವೇ ಸೀತಾಳ ಗುಣ. ಆದರೆ ರಾಮ್ ಜೊತೆಯಾದಾಗ ಇದಕ್ಕೆಲ್ಲ ಅವಕಾಶಗಳು ಇದೆಯಾ..?

Seetha Rama serial Written Update on August 10th episode

ಸೀತಾಳನ್ನು ಹುಡುಕಿ ಬಂದ ರಾಮ್

ಸೀತಾ ಆಫೀಸ್‌ನಿಂದ ಹೋದವಳು ಹೇಳದೆ, ಕೇಳದೆ ಹೋಗಿದ್ದಾಳೆ. ಎಲ್ಲಿಗೆ ಹೋಗಿದ್ದಾಳೆ ಗೊತ್ತಿಲ್ಲ. ಟೆನ್ಶನ್‌ನಲ್ಲಿ ಇದ್ದದ್ದು ಮಾತ್ರ ರಾಮ್‌ಗೆ ಗೊತ್ತು. ಕಾಲ್ ಕೂಡ ಟ್ರೈ ಮಾಡಿದ್ದಾನೆ. ಆದರೆ, ಅದಕ್ಕೂ ಸೀತಾಳ ಕಡೆಯಿಂದ ರೆಸ್ಪಾನ್ಸ್ ಇಲ್ಲ. ರುದ್ರಪ್ರತಾಪನ ಬಳಿ ಸಿಕ್ಕಿ ಹಾಕಿಕೊಂಡಿದ್ದ ಸೀತಾ, ಮೊದಲು ಕೆಲಸ ಮುಗಿದರೆ ಸಾಕು ಎಂದು ಕಾದಿದ್ದಳು. ಹಾಗೋ ಹೀಗೋ ಎಲ್ಲ ಸಂಕಷ್ಟಗಳನ್ನು ಮುಗಿಸಿಕೊಂಡು ಮನೆಗೆ ಬಂದಳು. ರಾಮ್‌ಗೂ ಸೀತಾಳನ್ನು ಭೇಟಿ ಮಾಡದೆ ಇರುವುದಕ್ಕೆ ಆಗಲಿಲ್ಲ. ಅದಕ್ಕೆಂದೇ ಮನೆಗೆ ಹುಡುಕಿಕೊಂಡು ಬಂದಿದ್ದಾನೆ. ಸಪ್ರೈಸ್ ವಿಸಿಟ್ ಕೊಟ್ಟಿದ್ದನ್ನು ನೋಡಿ ಸೀತಾ ಖುಷಿಯಾಗಿದ್ದಾಳೆ.

ಫ್ರೆಂಡ್‌ಗಾಗಿ ಸ್ವೀಟ್ ಗಿಫ್ಟ್

ಸಿಹಿ, ರಾಮ್ ಛೋಟಾ ಫ್ರೆಂಡ್. ಸಿಹಿಯ ಮಾತುಗಳು ಎಂದರೆ ರಾಮ್‌ಗೆ ತುಂಬಾ ಇಷ್ಟ. ಸಿಹಿ ಕೂಡ ಭಯ ಆದಾಗೆಲ್ಲಾ ರಾಮ್‌ಗೆ ಕಾಲ್ ಮಾಡ್ತಾಳೆ. ಅಮ್ಮ ಕಾಣ್ತಾ ಇಲ್ಲ ಅಂತ ಟೆನ್ಶನ್ ಆಗಿದ್ದ ಖುಷಿಯನ್ನು ಸಂತೈಸಿದ್ದು ಇದೇ ರಾಮ್. ಸದ್ಯ ಮನೆಗೆ ಬಂದ ರಾಮ್ ಮೊದಲು ಗಿಫ್ಟ್ ಕೊಟ್ಟಿದ್ದು ಸಿಹಿಗೆ. ಸಿಹಿಯಾದ ಸ್ವೀಟ್ ನೀಡಿದ್ದಾನೆ.

Seetha Rama serial Written Update on August 10th episode


ಕಷ್ಟ ಹಂಚಿಕೊಳ್ಳಲು ರಾಮ್ ಮನವಿ

ಸೀತಾ, ಮತ್ತೆ ಏನು ಆಗಿಲ್ಲವೇನೋ ಎಂಬಂತೆ ನಡೆದುಕೊಂಡಿದ್ದಾಳೆ. ತನಗೆ ಯಾವುದೇ ಕಷ್ಟವಿಲ್ಲವೇನೋ ಎಂಬಂತೆ ಫೀಲ್ ಮಾಡಿದ್ದಾಳೆ. ಆದರೆ ರಾಮ್‌ಗೆ ಅದು ಗೊತ್ತಾಗಿದೆ. ಸೀತಾಗೆ ನಿಧಾನವಾಗಿ ವಿವರಿಸಿದ್ದಾನೆ. ನೀವಾಗಿ ನೀವೂ ಸಹಾಯ ಕೇಳುವುದು ಬೇಡ. ಆದರೆ, ಸಹಾಯ ಮಾಡ್ತೀವಿ ಎಂದು ಬಂದವರನ್ನು ದೂರ ತಳ್ಳಬೇಡಿ. ಒಬ್ಬರೇ ಕೂತು ಕಷ್ಟ ಅನುಭವಿಸಬೇಡಿ ಎಂದು ಬುದ್ದಿ ಹೇಳಿದ್ದಾನೆ.

ಸೀತಾಳ ಕಷ್ಟಕ್ಕೆ ಮರುಗಿದ ತಾತ

ಸೀತಾಳ ನೆರೆ ಹೊರೆಯವರೆ ಅವಳಿಗೆ ಅಪ್ಪ ಅಮ್ಮ. ಅದರಲ್ಲೂ ಮೂರ್ತಿ ತಾತನೇ ಹೆಚ್ಚು ಪ್ರಿಯವಾದವರು. ಸೀತಾಳ ಮನೆ ಜಪ್ತಿಗೆ ಬಂದ ವಿಚಾರ ತಿಳಿದು, ತನ್ನ ಮನೆಯ ಪತ್ರವನ್ನು ತಂದು ಕೊಟ್ಟಿದ್ದಾನೆ. ಈ ಮನೆ ಅಡವಿಟ್ಟು, ಸಾಲ ತೀರಿಸು ಎಂದಿದ್ದಾರೆ. ಇದನ್ನು ಕೇಳಿದ, ಸಿಹಿಗೆ ನಮ್ಮ ಮನೆಗೆ ಏನಾಗಿದೆ ಎಂಬ ಆತಂಕ ಶುರುವಾಗಿದೆ. ಆದರೆ ರಾಮ್, ಆ ಆತಂಕಕ್ಕೂ ಮದ್ದು ಕೊಟ್ಟಿದ್ದಾನೆ. ಮನೆಯ ಪರಿಸ್ಥಿತಿ ಏನು ಆಗಿಲ್ಲ. ಚೆನ್ನಾಗಿದೆ ಅಂತ ಹೇಳಿ, ಸಿಹಿಗೆ ಧೈರ್ಯ ತುಂಬಿದ್ದಾನೆ. ಅಂತು ಇಂತೂ ರಾಮ್ ಇದ್ದರೆ, ಸೀತೆಯ ಕಷ್ಟಗಳೆಲ್ಲಾ ಮಂಗ ಮಾಯವಾಗುವುದು ಗ್ಯಾರಂಟಿ.

More from Filmibeat

English summary
Seetha Rama serial Written Update on August 10th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X