Seetha Rama Serial: ಮನೆಯ ವಿಚಾರಕ್ಕೆ ಸೀತಾ ಅಲೆದಾಟ.. ಆ ಜಾಗದಲ್ಲಿ ಇಬ್ಬರೂ ಮುಖಾಮುಖಿ ಆದ್ರೆ ಏನು ಗತಿ?
ರಾಮನ ಚಿಕ್ಕಿಗೆ ಎಲ್ಲಾ ವೈಭೋಗವನ್ನು ತಾನೇ ಅನುಭವಿಸಬೇಕು ಎಂಬ ದುರಾಸೆ ಇದೆ. ಹೀಗಾಗಿಯೇ ರಾಮನನ್ನು ಆಫೀಸಿಗೆ ಬರದಂತೆ, ಬೇರೆಲ್ಲೋ ವಾಸಿಸುವಂತೆ ಮಾಡಿದ್ದಳು. ತಾತನಿಗೆ ಏನು ತಿಳಿಯದಂತೆ ಮ್ಯಾನೇಜರ್ ಕಡೆಯಿಂದ ಎಲ್ಲಾ ಕೆಲಸವನ್ನು ಸುಲಭವಾಗಿ ಮಾಡಿಸಿಕೊಳ್ಳುತ್ತಿದ್ದಳು. ಆದರೆ, ಈಗ ರಾಮ ಬಂದು ಮನೆಯಲ್ಲಿ, ಆಫೀಸಲ್ಲಿ ಕೂತಿದ್ದಾನೆ. ಇದನ್ನು ತಪ್ಪಿಸುವುದಕ್ಕೆ ಭಾರ್ಗವಿ ನಾನಾ ಕಸರತ್ತು ನಡೆಸುತ್ತಿದ್ದಾಳೆ.
ಆಫೀಸಲ್ಲಿ ರಾಮ್ ಬಾಸ್ ಆಗಿಲ್ಲ ಅನ್ನೋದು ಇನ್ನು ಕೂಡ ಭಾರ್ಗವಿಗೆ ಗೊತ್ತಿಲ್ಲ. ಭಾರ್ಗವಿಗೆ ಸಹಾಯ ಮಾಡುತ್ತಿರುವ ಚರಣ್ ಡಿ ಕೂಡ ಆ ವಿಚಾರವನ್ನು ತಿಳಿಸುತ್ತಿಲ್ಲ. ಈ ಎಲ್ಲದರ ನಡುವೆ ಈಗ ಸೀತಾ -ರಾಮ ಒಂದೇ ಕಡೆ ಬಂದು ಕೂತಿದ್ದಾರೆ. ಒಬ್ಬರಿಗೊಬ್ಬರು ಮುಖ ನೋಡಿಕೊಂಡರೆ ಮುಗೀತು. ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಡಲೇ ಬೇಕಾಗುತ್ತದೆ.

ಮನೆಯ ವಿಚಾರಕ್ಕೆ ಸೀತಾ ಅಲೆದಾಟ
ರುದ್ರಪ್ರತಾಪನಿಗೆ ಈಗ ಸೀತೆಯನ್ನು ಹೇಗೆ ಬೇಕೋ ಹಾಗೇ ಆಡಿಸುವ ಅಸ್ತ್ರವೊಂದು ಸಿಕ್ಕಿದೆ. ಅದುವೇ ಮನೆಯ ತೆರವು ನೋಟೀಸ್. ಬ್ಯಾಂಕ್‌ನಲ್ಲಿ ಸೀತೆ ಹಣ ಪಡೆದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ರುದ್ರಪ್ರತಾಪ, ಪದೇ ಪದೇ ಸೀತಾಳನ್ನು ತನ್ನ ಬಳಿಗೆ ಕರೆಸಿಕೊಳ್ಳುತ್ತಿದ್ದಾನೆ. ಆಫೀಸ್‌ಗೆ ಕರೆಸಿಕೊಂಡಿದ್ದ ರುದ್ರಪ್ರತಾಪ, ಈಗ ಹೊಟೇಲ್ ಒಂದಕ್ಕೆ ಕರೆಸಿಕೊಂಡಿದ್ದಾನೆ. ಬ್ಯಾಂಕ್‌ನವರು ಬರುತ್ತಾರೆ, ಮಾತನಾಡಬೇಕು ಬಾ ಎಂದಿದ್ದಾನೆ.
ರಾಮ್‌ನನ್ನು ಕರೆದ ಚಿಕ್ಕಮ್ಮ
ಇವತ್ತು ರಾಮ್ ಫ್ಯಾಮಿಲಿಯಲ್ಲಿ ಒಂದೊಳ್ಳೆ ಊಟದ ವ್ಯವಸ್ಥೆಯಾಗಿತ್ತು. ಕುಟುಂಬಸ್ಥರೆಲ್ಲಾ ಸೇರಿ, ಒಟ್ಟಿಗೆ ಊಟ ಮಾಡುವುದು. ಅದು ಮನೆಯಲ್ಲಿ ಅಲ್ಲ, ಹೊಟೇಲ್‌ನಲ್ಲಿ. ಅದಕ್ಕೆ ಎಂದು ಭಾರ್ಗವಿ, ರಾಮ್‌ಗೆ ಬೇಗನೇ ನೆನಪಿಸಿದ್ದಾಳೆ. ರಾಮ್ ಕೂಡ ಆಫೀಸ್ ಮುಗಿದ ಕೂಡಲೇ ಹೋಟೆಲ್‌ಗೆ ಹೊರಟಿದ್ದಾನೆ. ಆದರೆ, ಮೊದ ಮೊದಲಿಗೆ ಸೀತೆಯ ಕೈಗೆ ಸಿಕ್ಕಿ ಬಿದ್ದಿಲ್ಲ. ಫ್ಯಾಮಿಲಿ ಎಲ್ಲಾ ಕಾಯುತ್ತಿದ್ದ ಜಾಗಕ್ಕೆ ಹೋಗಿದ್ದಾನೆ.

ಸೀತೆಯನ್ನು ರಾಮ್ ನೋಡಿದ್ದಾಯ್ತು
ರಾಮ್ ಮತ್ತು ಸೀತಾ ತುಂಬಾ ದೂರ ಏನು ಕುಳಿತಿಲ್ಲ. ಆದರೆ, ಸೀತಾಗೆ ಮಾತ್ರ ರಾಮ್ ಕಂಡಿಲ್ಲ. ರಾಮ್ ಏನೋ ನೋಡುವುದಕ್ಕೆ ಹೋಗಿ ಸೀತೆಯನ್ನು ನೋಡಿದ್ದಾಗಿದೆ. ಒಂದು ವೇಳೆ ಸೀತಾ, ತಿರುಗಿಸಿ ರಾಮ್‌ನನ್ನು ನೋಡಿದರೆ ಕಥೆ ಮುಗೀತು. ಆಕೆಯನ್ನು ತಡೆಯುವುದಕ್ಕೂ ಆಗಲ್ಲ. ಮೊದಲೇ ಭಾರ್ಗವಿಗೆ ಈ ಕಡೆ ಸೀತಾ ಮೇಲೂ ಗಂಟಲ ತುದಿಯ ತನಕ ಕೋಪವಿದೆ. ರಾಮ್‌ನನ್ನಂತು ಕೊಂದೆ ಬಿಡುವಷ್ಟು ಕೋಪವಿದೆ. ಎದುರು ಬಂದರೆ ಸೀತಾಗೆ ಎಲ್ಲವನ್ನು ಹೇಳಿ ಬಿಡುತ್ತಾಳೆ.
ಸೀತೆಗೆ ಕಾಣಿಸಿಕೊಳ್ಳುತ್ತಾನಾ ರಾಮ್..?
ರಾಮ್, ಸೀತೆಯನ್ನು ನೋಡಿದ್ದೇ ತಡ, ಗಾಬರಿಯಾಗಿದ್ದಾನೆ. ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ನೋಡುತ್ತಿದ್ದಾನೆ. ಊಟಕ್ಕೆ ಬಂದಿದ್ದರಿಂದ, ರಾಮ್ ತನ್ನ ಸ್ಪೆಷಲ್ ಫ್ರೆಂಡ್ ಕೊಟ್ಟಂತ ಊಟದ ಬಾಕ್ಸ್ ಅನ್ನು ಹೋಟೆಲ್‌ಗೆ ತಂದಿದ್ದಾನೆ. ಅದನ್ನು ಬಿಸಿ ಮಾಡಬೇಕಾ ಎಂದು ಹೋಟೆಲ್ ಸಿಬ್ಬಂದಿ ತೆಗೆದುಕೊಂಡು ಹೊರಟಿದ್ದಾರೆ. ಸೀತಾಗೆ ಅದರ ಘಮಲು ದೂರದಿಂದಾನೆ ಬಂದಿದೆ. ಇದು ನಮ್ಮ ಮನೆಯ ಊಟದ ವಾಸನೆ ಇದ್ದಂಗೆ ಇದೆಯಲ್ಲ ಅಂತ ಆಶ್ಚರ್ಯದಿಂದ ನೋಡಿದ್ದಾಳೆ. ಆ ಬಾಕ್ಸ್ ಕೂಡ ಸಿಹಿಯೇ ಕೊಟ್ಟಿರುವಂತದ್ದು. ಆದರೆ, ಸೀತಾಗೆ ಆ ಬಾಕ್ಸ್ ಕಂಡಿಲ್ಲ. ಊಟದ ವಾಸನೆ ಮಾತ್ರ ಕಂಡಿದೆ. ಈಗ ಸೀತಾಳಿಗೆ ಕಾಣದಂತೆ ರಾಮ್ ಬಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ.


Click it and Unblock the Notifications











