Seetha Rama Serial: ಸೀತಾ ಕೈಗೆ ಸಿಕ್ಕಿಬಿದ್ದ ರಾಮ್ ಬಳಿ ಉತ್ತರವೇ ಇಲ್ಲ.. ಮುಂದೇನಾಗುತ್ತೆ?
ರಾಮ್‌ಗೆ ಸದ್ಯಕ್ಕೆ ಈಗಿನ ಜೀವನ ತುಂಬಾ ಇಷ್ಟವಾಗಿ ಬಿಟ್ಟಿದೆ. ಅಂದ್ರೆ ಇಷ್ಟು ದಿನ ಶ್ರೀಮಂತಿಕೆಯ ಜೀವನ ಕಳೆದಿದ್ದ ರಾಮ್ ಈಗ ಕಾಮನ್ ಎಂಪ್ಲಾಯ್ ಆಗಿದ್ದಾನೆ. ಮಧ್ಯಮ ವರ್ಗದ ಜನರ ಬದುಕು ಹೇಗಿರುತ್ತೆ..? ಜೀವನ ನಡೆಸುವುದಕ್ಕೆ ಎಷ್ಟೆಲ್ಲ ಕಷ್ಟ ಪಡ್ತಾರೆ ಹೀಗೆ ನಾನಾ ವಿಚಾರಗಳನ್ನು ರಾಮ್ ತಿಳಿದುಕೊಳ್ತಾ ಸಾಗುತ್ತಿದ್ದಾನೆ.
ಅದರಲ್ಲೂ ಮಿಡಲ್ ಕ್ಲಾಸ್ ಜೀವನ, ಅದರೊಳಗಿನ ಸಂತೋಷ ಇಷ್ಟವಾಗೋದಕ್ಕೆ ಶುರುವಾಗಿದ್ದೆ ಸಿಹಿಯಿಂದಾಗಿ. ಮಗಳನ್ನು ಫ್ರೆಂಡ್ ಮಾಡಿಕೊಂಡ ಮೇಲೆ ಅಮ್ಮ ಫ್ರೆಂಡ್ ಆಗದೆ ಇರುತ್ತಾಳಾ? ಈಗ ಸಿಹಿ ಜೊತೆಗೆ ರಾಮ್‌ಗೆ ಸೀತೆಯೂ ಫ್ರೆಂಡ್ ಆಗಿದ್ದಾಳೆ. ಸುಳ್ಳನ್ನೆ ಹೇಳಿಕೊಂಡು ಬಂದ ರಾಮ್ ಈಗ ಸೀತಾ ಬಳಿ ತಗಲಾಕಿಕೊಂಡಿದ್ದಾನೆ.

ಒಂದೇ ಹೋಟೆಲ್‌ನಲ್ಲಿ ಸೀತಾ-ರಾಮ್
ರಾಮ್‌ನ ಚಿಕ್ಕಮ್ಮ ಎಲ್ಲರ ಜೊತೆಗೂ ಲಂಚ್ ಪಾರ್ಟಿ ಅರೇಂಜ್ ಮಾಡಿದ್ದರು. ಅದರಂತೆ ರಾಮ್ ಕೂಡ ಜಾಯಿನ್ ಆಗಿದ್ದ. ಅದೇ ಹೋಟೆಲ್‌ಗೆ ಸೀತಾ ಕೂಡ ಬಂದಿದ್ದಳು. ರಾಮ್ ಚಪಾತಿ ಬಿಸಿ ಮಾಡಲು ಕೊಟ್ಟಾಗಲೇ ಸೀತೆಯ ಮೂಗಿಗೆ ತನ್ನ ಮನೆಯ ಸವಿರುಚಿ ಘಮ ಘಮಾಯಿಸಿತ್ತು. ರಾಮ್‌ಗೆ ಹೋಟೆಲ್‌ಗಿಂತ ತನ್ನ ಫ್ರೆಂಡ್ ಕೊಟ್ಟಿದ್ದ ಊಟವೇ ಮುಖ್ಯವಾಗಿತ್ತು. ಒಂದೇ ಹೋಟೆಲ್‌ನಲ್ಲಿದ್ದ ರಾಮ್ ಸೀತಾ, ಮುಖಾ ಮುಖಿಯಾಗಬೇಕಿತ್ತು. ಆದರೆ ಬಚಾವ್ ಆಗಿದ್ದ.
ಒಟ್ಟಿಗೆ ಊಟದ ಹಿಂದಿದೆ ಹೊಸ ರಹಸ್ಯ
ರಾಮ್‌ಗೆ ಮದುವೆಯೊಂದನ್ನು ಮಾಡಿಸಿ, ಅವನನ್ನ ಆಫೀಸಿಂದ ದೂರ ಇಡಬೇಕೆಂದು ಭಾರ್ಗವಿ ಪ್ಲ್ಯಾನ್ ಮಾಡಿದ್ದಾಳೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಮೊದಲ ಪ್ರಪೋಸಲ್ ಅನ್ನು ರಾಮ್, ಹೇಗೋ ಪ್ಲ್ಯಾನ್ ಮಾಡಿ ದೂರ ಮಾಡಿಕೊಂಡ. ಈಗ ಮತ್ತೊಂದು ಸಂಬಂಧ ಬಂದಿದೆ. ಹೋಟೆಲ್‌ಗೆ ಊಟದ ನೆಪದಲ್ಲಿ ಸಂಬಂಧವನ್ನೇ ತಂದಿದ್ದಳು ಭಾರ್ಗವಿ. ಆದರೆ, ಅದು ಯಾರಿಗೂ ಗೊತ್ತಾಗಿಲ್ಲ. ಭಾರ್ಗವಿ ಗಂಡನಿಗೆ ಮಾತ್ರ ಗೊತ್ತಾಗಿದೆ.

ಸೀತೆಯನ್ನು ಯಾಮಾರಿಸಿ ಹೊರಟ ರಾಮ್
ರಾಮ್ ಹೋಟೆಲ್‌ನಲ್ಲಿ ಊಟ ಮಾಡುವಾಗಲೇ ಸೀತಾಳನ್ನು ನೋಡಿದ್ದಾನೆ. ಆದರೆ ತಕ್ಷಣ ಏನು ಮಾಡಬೇಕು ಎಂದು ಗೊತ್ತಾಗಿಲ್ಲ. ಯಾಕಂದ್ರೆ, ಅಲ್ಲಿ ಸೇವ್ ಮಾಡುವುದಕ್ಕೆ ಫ್ರೆಂಡ್ ಅಶೋಕ ಕೂಡ ಇರಲಿಲ್ಲ. ಭಾರ್ಗವಿ ಅದಕ್ಕೆ ಅವಕಾಶವನ್ನು ಕೊಡಲ್ಲ. ಜೊತೆಗೆ ಭಾರ್ಗವಿ ಮುಂದೆ ರಾಮ್ ನಾಟಕವಾಡುವುದಕ್ಕೂ ಆಗಲ್ಲ. ಹೀಗಾಗಿ ಸೀತಾಳಿಂದ ಕಣ್ತಪ್ಪಿಸಿಕೊಂಡು ಹೊರಗೆ ಬಂದಿದ್ದಾನೆ. ಸೀತಾ, ರುದ್ರಪ್ರತಾಪನ ಬಳಿ ಮಾತನಾಡುವಾಗ, ರಾಮ್ ಕಳ್ಳನಂತೆ ಹೊರಗೆ ಓಡಿ ಬಂದಿದ್ದಾನೆ. ಸದ್ಯ ಹೋಟೆಲ್ ಒಳಗೆ ಇದ್ದಾಗ ಸೀತಾ, ರಾಮ್‌ನನ್ನು ಗಮನಿಸಲು ಆಗಿರಲಿಲ್ಲ.
ಸೀತೆಯ ಪ್ರಶ್ನೆಗೆ ರಾಮ್ ಬಳಿ ಉತ್ತರವಿಲ್ಲ
ರಾಮ್ ಹೊರಗೆ ಬಂದು ನಿಂತಿದ್ದ. ಕಾರು ಬರುವುದು ಕೊಂಚ ತಡವಾಗಿತ್ತು. ಅಷ್ಟರಲ್ಲಿ ಸೀತಾ ಕೂಡ ಹೊರಗೆ ಬಂದಳು. ರಾಮ್‌ನನ್ನು ಕಂಡು, ಪ್ರಶ್ನೆ ಮಾಡಿದ್ದಾಳೆ. ರಾಮ್ ತಡಬಡಾಯಿಸಿ, "ಬಾಸ್ ಇದೇ ಹೋಟೆಲ್‌ಗೆ ಬಂದಿದ್ರು. ಯಾವುದೋ ಫೈಲ್‌ಗೆ ಸಹಿ ಬೇಕಿತ್ತು ಅದಕ್ಕೆ ಬಂದೆ" ಎಂದಿದ್ದಾನೆ. ಆದರೆ ರಾಮ್ ಕೈನಲ್ಲಿ ಆ ಫೈಲ್ ಇರಲಿಲ್ಲ. ಸೀತಾ ಅದನ್ನು ಪ್ರಶ್ನೆ ಮಾಡಿದಾಗ ರಾಮ್‌ಗೆ ಉತ್ತರವೇ ಸಿಗುತ್ತಿಲ್ಲ. ಅದರ ಜೊತೆಗೆ ಕಾರು ಬೇರೆ ನಿಂತಿದೆ. ಡ್ರೈವರ್ ಕರೀತಾ ಇದ್ದಾರೆ. ರಾಮ್ ಕೈ ಸನ್ನೇ ಮಾಡಿ, ಹೋಗಪ್ಪ ಅಂದ್ರು ಅವನಿಗೆ ಅರ್ಥವಾಗುತ್ತಿಲ್ಲ.


Click it and Unblock the Notifications











