Seetha Rama Serial: ಸೀತಾ ಮಗಳು ಸಿಹಿ ಎಷ್ಟು ಸ್ವೀಟೋ ಅಷ್ಟೇ ರಗಡ್.. ಈ ವಿಡಿಯೋ ನೋಡಿ ಗೊತ್ತಾಗುತ್ತೆ..!

By ಎಸ್ ಸುಮಂತ್

ಜೀ ಕನ್ನಡದಲ್ಲಿ 'ಸೀತಾ ರಾಮ' ಧಾರಾವಾಹಿ ಇತ್ತೀಚೆಗಷ್ಟೇ ಪ್ರಸಾರ ಆಗ್ತಾ ಇದೆ. ಆದರೆ, ಶುರುವಾದ ಕಡಿಮೆ ಸಮಯದಲ್ಲಿಯೇ ಎಲ್ಲರ ಮನಸ್ಸು ಗೆದ್ದಿದೆ. ಅದಕ್ಕೆ ಮುಖ್ಯವಾದ ಕಾರಣ ಅಂದ್ರೆ ಅದು ಪುಟಾಣಿ ಸಿಹಿ. ಹೆಸರಿಗೆ ತಕ್ಕ ಹಾಗೇ ಸ್ವೀಟ್ ಆಗಿ, ಮುದ್ದಾಗಿ ಮಾತಾಡ್ತಾಳೆ. ಎಷ್ಟೇ ಬೇಸರ ಇದ್ರು ಸಿಹಿಯ ಮಾತುಗಳನ್ನು ಕೇಳಿದ್ರೆ ಸಾಕು ಆ ಬೇಸರ ಓಡಿ ಹೋಗುತ್ತೆ.

'ಸೀತಾ ರಾಮ' ಧಾರಾವಾಹಿಯಲ್ಲಿ ಸಿಹಿಯೇ ಹೈಲೈಟ್. ಪಕ್ಕಾ ನ್ಯಾಚುರಲ್ ಎಂಬಂತೆ ನಟನೆ ಮಾಡ್ತಾಳೆ. ವಯಸ್ಸು ತೀರಾ ದೊಡ್ಡದಲ್ಲ. ಆದರೂ ನವರಸಗಳನ್ನು ಅರೆದು ಕುಡಿದವಳಂತೆ ತನ್ನ ನಟನೆಯಿಂದಾನೇ ಎಲ್ಲರೂ ಸೆಳೆಯುತ್ತಾಳೆ ಸಿಹಿ ಅಲಿಯಾಸ್ ರಿತು. ಆದರೆ, ಕೋಪ ಬಂದ್ರೆ ಸ್ವೀಟ್ ಅಲ್ಲ ಖಾರ ಖಾರ ಅಂತ ಬಾಯಿ ಬಡ್ಕೊಳೋ ಥರ ಬಡೀತಾಳೆ. ಹೇಗೆ ಅಂತ ನೀವೇ ಓದಿ.

Seetha Rama serial Written Update on August 16th episode

ಸೀತಾಳ ಮನೆಗೆ ಬ್ಯಾಂಕ್ ನೋಟೀಸ್

ಸೀತಾಳದ್ದು ಮಧ್ಯಮ ವರ್ಗದ ಬದುಕು. ತಾನೂ ದುಡಿದು, ಜೀವನ ಕಟ್ಟಿಕೊಳ್ಳುವುದರ ಜೊತೆಗೆ ಮಗುವಿನ ಶಿಕ್ಷಣವನ್ನು ನೋಡಿಕೊಳ್ಳಬೇಕು. ಇರೋದಕ್ಕೆ ಅಂತ ಒಂದು ಪುಟ್ಟ ಸ್ವಂತವಾದ ಮನೆ ಇದೆ. ಅದು ವಠಾರದಲ್ಲಿ. ಮಿಡಲ್ ಕ್ಲಾಸ್ ಜೀವನ ಅಂದ್ರೆ ಎಲ್ಲರಿಗೂ ಗೊತ್ತಿರೋದೇ ಅಲ್ವಾ? ಸಾಲ ಇಲ್ಲದೆ ಜೀವನ ಸಾಗಿಸೋದು ಸುಲಭದ ಮಾತಲ್ಲ. ಇಎಂಐ ಕಟ್ಟೋಣಾ ಅಂತ ಸೀತಾ ಕೂಡ ಮನೆ‌ ಮೇಲೆ ಲೋನ್ ತೆಗೆದಿದ್ದಳು. ಆದರೆ ಈಗ ಲೋ‌ನ್ ಕಟ್ಟುವುದಕ್ಕೆ ಆಗದೆ ಮನೆ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾಳೆ.

ಅರಮನೆ ಕನಸು ಕಾಣುತ್ತಿರುವ ಸಿಹಿ

ಸಿಹಿ ಎಲ್ಲದ್ದಕ್ಕೂ ಅಡ್ಜೆಸ್ಟ್ ಆಗುವ ಗುಣದವಳು. ಚಿಕ್ಕ ವಯಸ್ಸಿನಲ್ಲಿಯೆ ಶುಗರ್ ಇದ್ರು ಅಮ್ಮನಿಗೆ ಹೆಚ್ಚು ಧೈರ್ಯ ತುಂಬುವುದು ಇದೇ ಮಗು. ವಯಸ್ಸು ಚಿಕ್ಕದಾದರೂ ಕನಸು ಮಾತ್ರ ಬಹಳ ದೊಡ್ಡದು. ಅದಕ್ಕೆ ಯಾವಾಗಲೂ ಪ್ಯಾಲೇಸ್ ಕನಸನ್ನೇ ಕಾಣುತ್ತಾ ಇರುತ್ತಾಳೆ. ಪ್ಯಾಲೇಸ್‌ಗಾಗಿ ಪತ್ರವನ್ನು ಬರೆದಿದ್ದಾಳೆ. ಆ‌ ಪ್ಯಾಲೇಸ್ ಸಿಹಿಯ ಲೆಟರ್ ಓದಿ ಬರುವುದಕ್ಕೆ ಬಹಳ ಸಮಯವೇನು ಬೇಕಾಗಿಲ್ಲ. ಅದಕ್ಕೆಂದೆ ರಾಮ ಇದ್ದಾನಲ್ಲ.

Seetha Rama serial Written Update on August 16th episode

ಹುಡುಗನ ಮೇಲೆ ಸಿಹಿ ಅಟ್ಯಾಕ್

ಸಿಹಿ ನೋಡಿದಾಗೆಲ್ಲಾ ವಾವ್ ಇಂಥೊಬ್ಬ ಮಗಳು ಮನೆಯೊಳಗಿದ್ದರೆ ಯಾವ ಬೇಸರವೂ ಆಗಲ್ಲ. ಕಷ್ಟವೂ ಎನಿಸಲ್ಲ. ಎನಿಸದೆಯೂ ಇರುವುದಿಲ್ಲ. ಇಷ್ಟು ದಿನ ಸಿಹಿಯ ಸಾಫ್ಟ್ ಮುಖವನ್ನೇ ನೋಡಿದ್ವಿ. ಆದರೆ, ಸಿಹಿಗೆ ಕೋಪ ಬಂದಾಗ ಹೇಗಿರ್ತಾಳೆ ಅನ್ನೋದು ಇವತ್ತು ಸಾಬೀತಾಗಿದೆ. ಸಿಹಿ ಯಾರ ತಂಟೆಗೂ ಹೋಗಲ್ಲ. ತನ್ನ ಮನೆ ತಂಟೆಗೆ ಬಂದ್ರೆ ಸುಮ್ನನೆ ಬಿಡೋಳೆ ಅಲ್ಲ. ರಟ್ಟಿನಲ್ಲಿ ಮಾಡಿದ ಮನೆಯನ್ನು ನೆರೆಮನೆಯ ಹುಡುಗ ಮುಟ್ಟೋದಕ್ಕೆ ಬಂದ ಅಂತ ಹೊಡೆಯೋದಕ್ಕೆ ಹೋಗಿದ್ದಾಳೆ.

ರಾಮ ಇದ್ದಾನಲ್ಲ ಎಂದ ಸೀತಾ

ಸಿಹಿಯ ರೌದ್ರವತಾರವನ್ನ ಸ್ವತಃ ಸೀತಾ ಕೂಡ ನೋಡಿರಲಿಲ್ಲ ಎನಿಸುತ್ತೆ. ರಟ್ಟಿನ ಮನೆಗೆ ಸಿಹಿ ಹೊಡೆಯೋದಕ್ಕೆ ಹೋಗಿದ್ದು ನೋಡಿ, ಸೀತಾ ಗಾಬರಿಯಾಗಿದ್ದಾಳೆ. ತಕ್ಷಣ ಓಡಿ ಬಂದು ಜಗಳ ಬಿಡಿಸಿದ್ದಾಳೆ. ಆಗ ಸಿಹಿ ಹೇಳಿದ್ದು ಒಂದೇ, ನೋಡು ಸೀತಮ್ಮ ಮನೆ ಬೇಕು ಅಂತ ಕೇಳ್ತಾನೆ ಅಂತ. ಸೀತಾಗೆ ಅಲ್ಲಿಯೇ ಭಯವಾಗಿದೆ. ರಟ್ಟಿನ ಮನೆಗೆ ಇಷ್ಟೊಂದು ಕೋಪ ಮಾಡಿಕೊಳ್ಳುವ ಸಿಹಿ, ಇನ್ನು ಇರುವ ಸ್ವಂತ ಮನೆಯೂ ಹೋಗುತ್ತೆ ಅಂದ್ರೆ ಹೇಗೆ ಸ್ವೀಕರಿಸುತ್ತಾಳೆ ಎಂಬ ಭಯ. ಆದರೂ ರಾಮನಿದ್ದಾನಲ್ಲ ಎಂಬ ನಂಬಿಕೆಯೂ ಅವಳಲ್ಲಿದೆ. ದೇವರನ್ನು ನಂಬುವ ಸೀತಾಗೆ ಮನುಷ್ಯನ ರೂಪದಲ್ಲೂ ಅದೇ ರಾಮ ಸಹಾಯಕ್ಕೆ ಬಂದಾಗಿದೆ.

More from Filmibeat

English summary
Seetha Rama serial Written Update on August 16th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X