Seetha Rama Serial: ಸಿಹಿ ಜೊತೆ ಸುತ್ತಾಡೋಕೆ ಬಂದ ಸೀತಾ ಕೈಲಿ ಸಿಕ್ಕಿ ಬೀಳ್ತಾನಾ ರಾಮ್ ?

By ಎಸ್ ಸುಮಂತ್

ಸಿಹಿ‌ ಮತ್ತು ರಾಮ ಇಬ್ಬರು ಬೆಸ್ಟ್ ಫ್ರೆಂಡ್ಸ್. ಫ್ರೆಂಡ್ ಕರೆದ್ರೆ ಸಾಕು ರಾಮ್ ಎಲ್ಲಿಯೇ ಇದ್ದರೂ, ಓಡೋಡಿ ಬಂದು ಬಿಡ್ತಾನೆ. ಅಷ್ಟು ಇಷ್ಟ. ಅದರ ಜೊತೆಗೆ ಗಿಫ್ಟ್‌ಗಳನ್ನು ಮರೆಯದೆ ತರ್ತಾನೆ ರಾಮ್. ಸೀತಾಳನ್ನು ಹೆಲಿಕಾಪ್ಟರ್‌ನಲ್ಲಿ, ಸ್ವಿಮ್ಮಿಂಗ್ ಪೂಲ್ ಹತ್ರಕ್ಕೆ ಕರೆದುಕೊಂಡು ಹೋಗಿದ್ದ ರಾಮ್‌ಗೀಗ ಸಿಹಿಯನ್ನು ಕರೆದುಕೊಂಡು‌ ಹೋಗಲೇಬೇಕಾಗಿದೆ. ಯಾಕಂದ್ರೆ, ಪಿಂಕಿ ಪ್ರಾಮೀಸ್ ಬೇರೆ ಮಾಡಿಟ್ಟಿದ್ದಾನೆ.

ಸಿಹಿ ಫ್ರೆಂಡ್‌ಶಿಪ್ ಬೆಳೆದ ಮೇಲೆ ಸೀತಾಳ ಗೆಳೆತನ ಕೂಡ ಬೆಳೆದಾಗಿದೆ. ಅಷ್ಟೇ ಅಲ್ಲ ಸೀತಾಳ ಅಪ್ಪ ಅಮ್ಮ ಕೂಡ ರಾಮ್‌ನನ್ನು ಬಹಳ ಆತ್ಮೀಯವಾಗಿಯೇ ಮಾತಾಡಿಸುತ್ತಾರೆ. ಹೀಗಾಗಿ ವಠಾರದಲ್ಲಿ ಈಗ ರಾಮ್ ಕೂಡ ಮನೆ ಮಗನೇ. ಆದರೆ, ಈಗ ರಾಮ್ ಸೀತಾ ಬಳಿ ತಗಲಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

Seetha Rama serial Written Update on August 21st episode

ಭಾನುವಾರವೂ ಸಿಹಿ ಬೇಗ ಎದ್ದಿದ್ದೇಕೆ ?

ರಾಮ್ ಮತ್ತೆ ಸಿಹಿ ಮಾಡಿರುವ ಪ್ಲ್ಯಾನ್ ಸೀತಾಗೆ ಗೊತ್ತೇ ಇಲ್ಲ. ಅಮ್ಮನ ಫೋನ್‌ನಿಂದ ಕಾಲ್ ಮಾಡಿ, ನಾಳೆ ರಜೆ ಇದೆ. ಮನೆಗೆ ಬಾ. ಇಲ್ಲಂದ್ರೆ ಸೀತಮ್ಮ ಸಿಕ್ಕಾಪಟ್ಟೆ ಹೋಂ ವರ್ಕ್ ಕೊಡ್ತಾಳೆ ಅಂತ ಕಂಪ್ಲೈಟ್ ಮಾಡಿದ್ಲು. ಅದರಂತೆ, ರಾಮ್ ಕೂಡ ಬರೋದಕ್ಕೆ ಒಪ್ಪಿಕೊಂಡಿದ್ದ. ಈ ಕಡೆ ರಾಮ್ ಬಂದು ಕರೆದುಕೊಂಡು ಹೋಗ್ತಾನೆ ಅನ್ನೋದು ನೆನಪಾಗಿ‌ ಸಿಹಿಗೆ ನಿದ್ದೆ ಬರ್ತಿಲ್ಲ. ಭಾನುವಾರ ಇನ್ನು ಸ್ವಲ್ಪ ಹೊತ್ತು ಮಲಗು ಅಂದ್ರೆ, ಅದನ್ನ ಸೋಮವಾರ ಹೇಳು ಅಂತಾಳೆ.

ಕಡೆಗೂ ವಠಾರಕ್ಕೆ ಬಂದ ಫ್ರೆಂಡ್

ಭಾನುವಾರ ಬೇಗ ಎದ್ದು ಒಬ್ಬಳೇ ಬ್ರೆಶ್ ಮಾಡಿ, ಸ್ನಾನ ಮಾಡಿ ರೆಡಿಯಾಗಿ ಬೇರೆ ನಿಂತಿದ್ದಾಳೆ. ಇದನ್ನು ಕಂಡ ಸೀತಾಗೆ ಆಶ್ಚರ್ಯ. ಆ ಕಡೆ ಸಿಹಿ‌ ಕಿಟಕಿಯಲ್ಲಿಯೇ ನೋಡುತ್ತಾ ನಿಂತಿದ್ದಳು. ಅಷ್ಟರಲ್ಲಿ ರಾಮ್ ಎಂಟ್ರಿಯಾಗಿದೆ. ಹೆಲಿಕಾಪ್ಟರ್ ಮಾತ್ರವಲ್ಲ ಸ್ವಿಮ್ಮಿಂಗ್ ಪೂಲ್ ಗೂ ಕರೆದುಕೊಂಡು ಹೋಗ್ತೀನಿ ಅಂತ ಮಾತು ಕೊಟ್ಟಿದ್ದ ರಾಮ್, ಅದನ್ನು ಉಳಿಸಿಕೊಳ್ಳುವುದಕ್ಕೆ ಬಂದು ನಿಂತಿದ್ದಾನೆ.

Seetha Rama serial Written Update on August 21st episode

ವಾಷಿಂಗ್ ಮಷಿನ್ ಪೂಜೆಗೆ ರಾಮ್ ಗೆಸ್ಟ್

ಸಿಹಿಯ ಕನಸ್ಸನ್ನು ಈಡೇರಿಸುವುದಕ್ಕೆ ರಾಮ್ ಏನೋ ವಠಾರಕ್ಕೆ ಬಂದಾಯ್ತು. ಆದರೆ, ಸಿಕ್ಕಿ ಹಾಕಿಕೊಂಡಿದ್ದು, ಮೂರ್ತಿ ಅಂಕಲ್ ಕೈಲಿ. ಅವರ ಮನೆಯಲ್ಲಿ ಇವತ್ತು ದೊಡ್ಡ ಕಾರ್ಯಕ್ರಮ ಇತ್ತು. ಹಾಗಾಗಿ ರಾಮ್‌ನನ್ನು ಬರಲೇಬೇಕೆಂದು ಕರೆದಿದ್ದರು. ಅದು ವಾಶಿಂಗ್ ಮಷಿನ್ ಉದ್ಘಾಟನಾ ದಿನ. ಇದನ್ನು ಕೇಳಿ ರಾಮ್‌ಗೆ ಶಾಕ್ ಆಗಿತ್ತು. ಚಾಲು ಮಾಡುವುದಕ್ಕೂ ಮುನ್ನ ಹಬ್ಬದ ವಾತಾವರಣ ನಿರ್ಮಿಸಿ, ಬಳಿಕ ವಾಶಿಂಗ್ ಮಷಿನ್ ಬಳಕೆ‌ ಮಾಡಿದ್ದಾರೆ. ಇದನ್ನ ನೋಡಿ ಆಶ್ಚರ್ಯ ಪಟ್ಟಿದ್ದ ರಾಮ್‌ಗೆ ಸೀತಾಳೆ ಮಧ್ಯಮವರ್ಗದ ಜನರ ಬದುಕಿನ ಬಗ್ಗೆ ತಿಳಿಸಿದ್ದಳು.

ಈಗ ರಾಮ್ ಏನಂತಾನೆ ?

ರಾಮ್ ಟಿಪ್ ಟಾಪ್ ಆಗಿನೇ ರೆಡಿಯಾಗಿ ಬರ್ತಾನೆ. ಈಗಲೂ ಫುಲ್ ಸ್ಟೈಲಿಶ್ ಲುಕ್‌ನಲ್ಲಿ ವಠಾರಕ್ಕೆ ಎಂಟ್ರಿ ಕೊಟ್ಟಿದ್ದ. ಬಳಿಕ ಮೂರ್ತಿ ಅಂಕಲ್ ಮನೆಯಲ್ಲಿ ಕಾರ್ಯಕ್ರಮ ಶುರುವಾಗಿತ್ತು. ಸಿಹಿ‌ ಕಡೆಯಿಂದಾನೇ ವಾಶಿಂಗ್ ಮಶಿನ್‌ಗೆ ಚಾಲ್ತಿ ನೀಡಲಾಗಿತ್ತು. ಈ ವೇಳೆ ವಠಾರದ ಇನ್ನೊಬ್ಬ ವ್ಯಕ್ತಿ ರಾಮ್‌ನ ಹ್ಲಾಸ್ ಕಂಡು ಇಷ್ಟ ಪಟ್ಟಿದ್ದ. ಎಷ್ಟಿದು ಎಂದು ಕೇಳಿದಾಗ 25 ಸಾವಿರ ಎಂದು ರಾಮ್ ಮೈಮರೆತು ಸತ್ಯ ಹೇಳಿದ್ದ. ಸೀತಾ ಇದನ್ನು ಕೇಳಿ ಶಾಕ್ ಆಗಿದ್ದಾಳೆ. ಅದೇಗೆ ಸತ್ಯವನ್ನು ಸುಳ್ಳಿನಿಂದ ನಿಭಾಯಿಸುತ್ತಾನೋ ಗೊತ್ತಿಲ್ಲ.

More from Filmibeat

English summary
Seetha Rama serial Written Update on August 21st episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X