Seetha Rama: ಹೆಲಿಕಾಪ್ಟರ್ ನಲ್ಲಿ ಓಡಾಡೋ ರಾಮ್, ಸೀತಾ ಮನೇಲಿ ಕಸ ಗುಡಿಸೋ ಥರ ಆಯ್ತು..!
ಸಿಹಿಯ ಮಾತುಗಳೆಂದರೆ ರಾಮ್‌ಗೆ ತುಂಬಾನೇ ಇಷ್ಟ. ಅವಳು ಕಳುಹಿಸುವ ಚಪಾತಿ ಅಂದ್ರೆ ಇನ್ನು ಇಷ್ಟ. ಸಿಹಿ ಚಪಾತಿ ಕಳಿಸೋದೆ ಹೆಲಿಕಾಪ್ಟರ್‌ನಲ್ಲಿ ರಾಮ್ ಕರೆದುಕೊಂಡು ಹೋಗ್ತಾರೆ ಅಂತ, ಸ್ವಿಮ್ಮಿಂಗ್ ಪೂಲ್‌ಗೆ ಹೋಗ್ತಾರೆ ಅಂತ. ಅದನ್ನು ಈಗಾಗಲೇ ಸಿಹಿ, ರಾಮ್ ಹತ್ರ ಹೇಳಿದ್ದು ಆಗಿದೆ.
ರಾಮ್‌ಗೆ ಕೊಟ್ಟ ಮಾತನ್ನು ತಪ್ಪುವ ಯಾವ ಉದ್ದೇಶವೂ ಇಲ್ಲ. ಅದರಲ್ಲೂ ಪುಟಾಣಿ ಅಂದ್ರೆ ರಾಮ್‌ಗೂ ಇಷ್ಟಾನೇ. ಹೀಗಾಗಿ ಸಿಹಿಯನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗೋದಕ್ಕೆ ರಾಮ್ ಬಂದೇ ಬಿಟ್ಟಿದ್ದಾನೆ. ಆದರೆ, ಸಿಕ್ಕಿ ಬಿದ್ದಿದ್ದು ಮಾತ್ರ ಸೀತಾಳ ಕೈಲಿ, ಮಾಡಿದ್ದು ಮಾತ್ರ ಮನೆ ಕೆಲಸ.

ರಾಮ್ ಪ್ರೀತಿ ಬಗ್ಗೆ ಅನುಮಾನ
ಆಫೀಸ್ ರಜೆ. ಬೆಳಗ್ಗೆ ಮನೆಯಲ್ಲಿ ನೋಡಿದ್ರೆ ರಾಮ್ ನಾಪತ್ತೆ. ಯಾರನ್ನು ಕೇಳಿದ್ರು ರಾಮ್ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೆ, ಭಾರ್ಗವಿ ಅದನ್ನು ತಿಳಿಯಲೇಬೇಕು ಎಂದು ಹಠ ತೊಟ್ಟು, ಮಾವನ ಬಳಿ ನೈಸ್ ಮಾಡಿದ್ದಾಳೆ. ರಜೆ ಇದ್ರು ಎಲ್ಲಿ ಅಂತ ಹುಡುಕಾಟ ಶುರು ಮಾಡಿದಾಗ, ತಾತ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ರಾಮ್ ಇತ್ತೀಚೆಗೆ ಲವ್‌ನಲ್ಲಿ ಬಿದ್ದಿರಬೇಕು. ಅದಕ್ಕೆ ವಿಚಿತ್ರವಾಗಿ ಆಡ್ತಾ ಇದ್ದಾನೆ ಅಂತ. ಈಗ ಭಾರ್ಗವಿ ಆ ಹುಡುಗಿ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣ್ತಿದೆ.
ಸೀತಾ ಅನುಮತಿ ಕೇಳಿದ ರಾಮ್
ರಾಮ್‌ಗೆ ಈಗ ಸಿಹಿಯನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗುವ ಸಮಯ. ಸಿಹಿ ಬೇರೆ ಬ್ಯೂಟಿಫುಲ್ ಆಗಿ ರೆಡಿಯಾಗಿದ್ದಾಳೆ. ರಾಮ್ ಈಗ ಹೊಸ ಕಥೆಯನ್ನೇ ಕಟ್ಟಿದ್ದಾನೆ. ಬಾಸ್ ದೆಹಲಿಗೆ ಹೋಗ್ತಾರೆ. ಅದೇ ಹೆಲಿಕಾಪ್ಟರ್‌ನಲ್ಲಿ ಸಿಹಿಯನ್ನು ಒಂದು ರೌಂಡ್ ಹಾಕಿಸಿಕೊಂಡು ಬರೋದಕ್ಕೆ ಪರ್ಮಿಷನ್ ಇದೆ ಎಂದಿದ್ದಾನೆ. ಆದರೆ, ಸೀತಾ ಅದೇಗೆ ಸಾಧ್ಯ ಬೇಡ ಎಂದೇ ಹೇಳಿದ್ದಾಳೆ. ಬಾಸ್‌ಗೆ ನಾನೇಗೋ ಹೇಳಿಕೊಳ್ತೀನಿ ಅಂದ್ರೂ ಸೀತಾ ಒಪ್ಪುತ್ತಾ ಇಲ್ಲ.
ಸಿಹಿ ಒಪ್ಪಿದ್ರು ಸೀತಾ ಒಪ್ತಿಲ್ಲ
ಸಿಹಿಗೆ ಅದೆಷ್ಟು ದಿನದ ಕನಸೋ. ಫ್ರೆಂಡ್ ಅದ್ಯಾವಾಗ ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ನೋ ಅವತ್ತಿನಿಂದ ಸ್ಪೆಷಲ್ ಫ್ರೆಂಡ್‌ಗೆ ಅಂತ ಸ್ಪೆಷಲ್ ಬಾಕ್ಸ್ ರೆಡಿ ಮಾಡಿ ಕೊಡ್ತಾ ಇದ್ಲು. ಈಗ ಆ ಕನಸು ನನಸಾಗುವ ದಿನ ಬಂದಿದೆ. ಅದಕ್ಕೆ ಸಿಹಿ ಕೂಡ ಸ್ಪೆಷಲ್ ಆಗಿನೇ ರೆಡಿಯಾಗಿದ್ಲು. ಆದರೆ, ಸೀತಮ್ಮ ಬೇಡ ಅಂತಿದ್ದಾಳೆ. ಇದು ಸಿಹಿಗೆ ಬೇಸರ ತರಿಸಿದೆ. ಈಗ ಸೀತಮ್ಮನ ಒಪ್ಪಿಸಲೇಬೇಕಾದ ಅನಿವಾರ್ಯತೆ ಇದೆ.

ಹೆಲಿಕಾಪ್ಟರ್ ಓನರ್ ಮಾಡ್ತಿರೋದೇನು..?
ರಾಮ್‌ಗೆ ಸೀತಾ ಮಾತು ಮೀರುವುದು ಸುಲಭವಲ್ಲ, ಹೆದರುತ್ತಾನೆ. ಬಂದ ಕೂಡಲೇ ಮೂರ್ತಿ ಅಂಕಲ್ ಹತ್ತಿರ ಸಿಕ್ಕಿಬಿದ್ದ. ವಾಷಿಂಗ್ ಮಷಿನ್ ಪೂಜೆಯನ್ನು ಮುಗಿಸಿದ. ಆದರೆ, ಈಗ ಸೀತ ಬಳಿ ತಗಲಾಕಿಕೊಂಡಿದ್ದಾನೆ. ಸಿಹಿ ಹೇಳಿದರೂ ಸೀತಾ ಒಪ್ತಿಲ್ಲ. ಸರಿ ಅಂತ ಮನೆಗೆ ಹೋಗಿ ಆಯ್ತು. ಹೇಗಾದ್ರೂ ಮಾಡಿ ಒಪ್ಪಿಸೋಣಾ ಅಂತಾಯ್ತು. ಆದರೆ ಸೀತಾ ಮಗಳು ಸಿಹಿಗೆ ಮನೆ ಕೆಲಸ ನೆನಪಿಸಿದ್ದಾಳೆ. ಆಗ ರಾಮ್ ಇಬ್ವರು ಸೇರಿ ಮನೆ ಕೆಲ ಮಾಡೋಣಾ ಅಂತ, ಪಂಚೆ ಕಟ್ಟಿ, ತಲೆಗೆ ಟವೆಲ್ ಸುತ್ತಿಕೊಂಡು, ಪೊರಕೆ ಹಿಡಿದು ನಿಂತೆ ಬಿಟ್ಟಿದ್ದಾನೆ. ಅದು ಬೇಗ ಬೇಗ ಕೆಲಸ ಮುಗಿಸಿ, ಹೆಲಿಕಾಪ್ಟರ್ ರೈಡ್ ಹೋಗೋದಕ್ಕೆ ಕಾಯ್ತಿದ್ದಾನೆ. ಹೇಗೆ ಕೆಲಸ ಮಾಡಿದ ಅಂದ್ರೆ ಮನೆಯಲ್ಲೆಲ್ಲಾ ಮತ್ತೆ ಎಲ್ಲಾ ಐಟಂ ಅನ್ನೂ ಚೆಲ್ಲಾಡಿದ್ದಾನೆ.


Click it and Unblock the Notifications











