Seetha Rama Serial: ಮನೆಯಲ್ಲಿ ಇಲ್ಲದ ಸಂತಸ ಸಿಹಿ ಮನೆಯಲ್ಲಿ.. ರಾಮ್‌ಗಾಗಿ ಬಾಸ್ ಹತ್ರಾನೇ ಪರ್ಮಿಷನ್
ರಾಮ್‌ನನ್ನು ಸಿಹಿ ತುಂಬಾ ಹಚ್ಚಿಕೊಂಡಿದ್ದಾಳೆ. ರಾಮ್ ಕೂಡ ತನ್ನ ಚೋಟಾ ಫ್ರೆಂಡ್ ಯಾವಾಗ್ಲೇ ಕರೆದ್ರು ಇಲ್ಲ ಅನ್ನಲ್ಲ. ತನ್ನ ಸ್ಪೆಷಲ್ ದಿನಕ್ಕಾಗಿ ರಾಮ್ ಇರಲೇಬೇಕೆಂದು ಬಯಸುತ್ತಾಳೆ. ಸಿಹಿ ಯಾರಿಗೂ ಹೆದರಲ್ಲ. ತನ್ನ ಮುದ್ದು ಮುದ್ದು ಮಾತುಗಳಿಂದ ಪರಿಚಯ ಇಲ್ಲ ಅಂದ್ರು, ಅವರ ಮನಸ್ಸನ್ನು ಗೆದ್ದು ಬಿಡ್ತಾಳೆ. ಅಂತ ಸ್ವೀಟಾಗಿರುವ ಗುಣದವಳು.
ಸೀತಾ ಕೆಲಸ ಮಾಡುವ ಮ್ಯಾನೇಜರ್ ಹೇಗೆ ಅನ್ನೋದು ನೀವೆಲ್ಲಾ ಈಗಾಗಲೇ ನೋಡಿದ್ದೀರಾ ಅಲ್ವಾ. ಚರಣ್ ಡಿ ಆದ್ರೆ ಆಫೀಸಿನವರು ಹೆದರಬಹುದು ಸಿಹಿಯಲ್ಲ. ಚರಣ್ ಡಿಗೇನೆ ಅವಾಜ್ ಹಾಕಿದ್ಲು ನಮ್ಮ ಸಿಹಿ. ಅಂಕಲ್ ನಿಮ್ಮ ತಲೆ ಖಾಲಿ ಆಗಿದೆ ಅಂತ. ಇನ್ನು ಬಾಸ್ ಯಾವ ಲೆಕ್ಕ ನಮ್ಮ ಸಿಹಿಗೆ.

ರಾಮ್‌ಗಾಗಿ ಬಾಸ್ ಹತ್ರಾನೇ ಪರ್ಮಿಷನ್
ಆಫೀಸಲ್ಲಿ ನಡೆಯುತ್ತಿರುವ ಮೋಸದ ಬಲೆಯನ್ನು ಕಂಡು ಹಿಡಿಯುವುದಕ್ಕೋಸ್ಕರ ರಾಮ್ ಸಿಬ್ಬಂದಿಯಾಗಿ ಬೆಸ್ಟ್ ಫ್ರೆಂಡ್ ಅಶೋಕ್, ಬಾಸ್ ಆಗಿ ಗುರುತಿಸಿಕೊಂಡಿದ್ದಾರೆ. ಎಲ್ಲರೂ ಅದನ್ನೇ ನಂಬಿದ್ದಾರೆ. ಭಾರ್ಗವಿ ಆಫೀಸ್‌ಗೆ ಬಂದರೂ ಅದರಲ್ಲಿ ಏನು ಬದಲಾಗಿಲ್ಲ. ಈಗ ಸಿಹಿ ಕೂಡ ಅದನ್ನೇ ನಂಬಿ, ರಾಮ್‌ಗಾಗಿ ಪರ್ಮಿಷನ್ ಕೇಳ್ತಿದ್ದಾಳೆ. ಅಶೋಕ್ ಬಳಿ ಹೋಗಿ ಸರ್, ನನ್ನ ಫ್ರೆಂಡ್‌ಗೆ ರಜೆ ಕೊಡಿ ಪ್ಲೀಸ್ ಅಂತ ಸ್ವೀಟ್ ಆಗಿ ಕೇಳಿದ್ದಾಳೆ. ಸಿಹಿ ಅಷ್ಟು ಸ್ವೀಟಾಗಿ ಕೇಳುವಾಗ, ಅಶೋಕ್‌ಗೆ ಇಲ್ಲ ಅನ್ನೋಕಾದ್ರೂ ಮನಸ್ಸು ಬರುತ್ತಾ..?
ಆಟೋದಲ್ಲಿ ರಾಮ್ ಸುತ್ತಾಟ
ರಾಮ್ ಶ್ರೀಮಂತರ ಮನೆ ಹುಡುಗ. ಐಷಾರಾಮಿ ಕಾರಿನಲ್ಲಿಯೇ ಓಡಾಡಿಕೊಂಡಿದ್ದವ. ಆದರೆ, ಈಗ ಲೈಫ್ ಬದಲಾಗಿದೆ. ಮಿಡಲ್ ಕ್ಲಾಸ್ ಜೀವನ ಹೇಗಿರುತ್ತೆ ಅನ್ನೋದನ್ನ ನೋಡೋದಕ್ಕೆ ಶುರು ಮಾಡಿದ್ದಾನೆ. ಆ ಮಿಡಲ್ ಕ್ಲಾಸ್ ಜೀವನದ ನೆಮ್ಮದಿಯನ್ನು ಕಂಡು ಖುಷಿ ಪಟ್ಟಿದ್ದಾನೆ. ಸಿಹಿ ಜೊತೆಗೆ ಸೇರಿ, ಸೀತಾಳ ಬದುಕನ್ನು ಕಂಡು ಹೀಗೂ ಜೀವಿಸಬಹುದಾ ಎಂದೇ ತನ್ನಲ್ಲಿ ಪ್ರಶ್ನೆ ಹಾಕಿಕೊಂಡಿದ್ದಾನೆ. ಅದಕ್ಕೆ ತಕ್ಕ ಹಾಗೇ ಇವತ್ತು ಆಟೋದ ಪ್ರಯಾಣವನ್ನು ಅನುಭವಿಸಿದ್ದಾನೆ. ಅದು ಒಂದೇ ಆಟೋದಲ್ಲಿ ಮೂರು ಜನ.

ಸಿಹಿ ತಿಂದ ಖಾರಕ್ಕೆ ರಾಮ್ ಸುಸ್ತು
ಇವತ್ತು ಪಾನಿಪೂರಿ ಪಾರ್ಟಿ ಇದೆ ಸಿಹಿ ಕಡೆಯಿಂದ. ಸೀತಾ ಅದ್ಯಾವಾಗ ಸಿಹಿಯನ್ನು ಹೊರಗೆ ಕರೆದುಕೊಂಡು ಹೋಗ್ತೀನಿ ಅಂದ್ಲೋ ಆಗಿಂದ ಸಿಹಿಗೆ ತನ್ನ ಫ್ರೆಂಡ್‌ದೇ ಜಪ. ತನ್ನ ಖುಷಿಯಲ್ಲಿ ಆ ಫ್ರೆಂಡ್ ಜೊತೆಗಿರಬೇಕು ಅಷ್ಟೇ. ಅದಕ್ಕೆ ಈಗ ಪಾನಿಪೂರಿಗೂ ಫ್ರೆಂಡ್‌ನ ಕರೆದುಕೊಂಡು ಹೋಗಿದ್ದಾಳೆ. ಸಿಹಿ ತಿಂತಾ ಇರೋ ಖಾರ ನೋಡಿ, ರಾಮ್ ಶಾಕ್ ಆಗಿದ್ದಾನೆ. ಸ್ವಲ್ಪ ಖಾರ ಆಗಿದ್ದಕ್ಕೆ ರಾಮ್ ಒದ್ದಾಡ್ತಾ ಇದ್ದಾನೆ.
ತುಂಬಾ ಖುಷಿಯಾಗಿರುವ ರಾಮ್
ರಾಮ್ ಮನೆಯಲ್ಲಿ ಎಲ್ಲವೂ ಇದೆ. ನೆಮ್ಮದಿ ಒಂದು ಬಿಟ್ಟು. ನಕಲಿ ಪ್ರೀತಿಯೂ ಕೊಂಚ ಜಾಸ್ತಿಯೇ ಇದೆ. ತಾತನಿಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಆಸೆ. ಆದರೆ, ಒಬ್ಬಬ್ಬರದ್ದು ಒಂದೊಂದು ದಿಕ್ಕು. ಪ್ರೀತಿ ಬೇಕೆಂದರು ಸಿಗುವುದು ಕಷ್ಟ. ಆದರೆ, ನಿಷ್ಕಲ್ಮಶವಾದ ಪ್ರೀತಿ ರಾಮ್‌ಗೆ ಸೀತಾ ಮನೆಯಲ್ಲಿ ಸಿಕ್ಕಿದೆ. ಸಿಹಿ ಅಷ್ಟೇ ಪ್ರೀತಿಯನ್ನು ನೀಡುತ್ತಿದ್ದಾಳೆ. ಇದು ರಾಮನಿಗೆ ಜೀವನವೇ ಸಂತೃಪ್ತಿಯ ಭಾವ ಮೂಡಿಸಿದೆ.


Click it and Unblock the Notifications











