Seetha Rama Serial: ಸೀತಾ ಕುಡಿಯ ಜ್ಯೂಸ್ ಮತ್ತಿನೌಷಧಿ ಬೆರೆಸಿದ ರುದ್ರಪ್ರತಾಪ.. ಕಾಪಾಡ್ತಾನಾ ರಾಮ್ ?
ರುದ್ರಪ್ರತಾಪ ತನ್ನ ಆಟವನ್ನು ಮುಂದುವರೆಸಿದ್ದಾನೆ. ಸೀತಾಳನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಕೈಬಿಟ್ಟಿಲ್ಲ. ಸೀತಾ ತನ್ನ ಮನೆಯನ್ನೇ ಕೈಬಿಡುವುದಕ್ಕೆ ಹೊರಟಿರುವಾಗ, ಬಲೆ ಹೆಣೆದ ರುದ್ರ ಪ್ರತಾಪ ಮಾತ್ರ ಹಿಂದೆ ಸರಿಯುತ್ತಿಲ್ಲ. ಪದೇ ಪದೆ ಸೀತಾಳನ್ನು ಆಫೀಸಿಗೆ ಕರೆಸಿಕೊಳ್ಳುತ್ತಿದ್ದಾನೆ. ಪದೇ ಪದೆ ಅವಳಿಂದ ನಿರೀಕ್ಷೆ ಮಾಡುತ್ತಿದ್ದಾನೆ. ಮದುವೆ ವಿಚಾರ ಬಂದಾಗಲೂ ಸೀತಾ ನೇರವಾಗಿಯೇ ನಿರಾಕರಿಸಿದ್ದಾಳೆ. ಆದರೆ, ಸಹಾಯ ಮಾಡುವ ನೆಪದಲ್ಲಿ ಸೀತಾಳಿಗೆ ಹಿಂಸೆ ಕೊಡಲು ಹೊರಟಿದ್ದಾನೆ.
ಸಿಹಿಗೆ ರಾಮ್ ಅಂದ್ರೆ ಅದೆಷ್ಟು ಇಷ್ಟನೋ ರುದ್ರಪ್ರತಾಪ್ ಕಂಡ್ರೆ ಅಷ್ಟೇ ಕೋಪವಿದೆ. ಮನೆಗೆ ಬಂದಾಗಲೂ ಮನಬಂದಂತೆ ನಡೆದುಕೊಂಡಿದ್ದಳು ಸಿಹಿ. ಈಗ ಹೊರಗೆ ಜಾಲಿಯಾಗಿ ಹೋಗಬೇಕೆಂದು ಕಾಯುತ್ತಿದ್ದ ಸಿಹಿಗೆ ರುದ್ರಪ್ರತಾಪ ಮತ್ತೊಮ್ಮೆ ವಿಲನ್ ಆಗಿದ್ದಾನೆ.

ಫ್ರೆಂಡ್ ಜೊತೆಗೆ ಬಂದ ಸಿಹಿ-ಸೀತಾ
ಸ್ಯಾಲರಿ ಸ್ಲಿಪ್ ಬೇಕು ಎಂದು ರುದ್ರ ಪ್ರತಾಪ ಕೇಳಿದ್ದ ಕಾರಣಕ್ಕೆ ಸೀತಾ ಆಫೀಸಿಗೆ ಹೋಗಿದ್ದಳು. ಸಿಹಿ ಕೂಡ ಜೊತೆಗೆ ಹೋಗಿದ್ದಳು. ಫ್ರೆಂಡ್ ನೆನಪಿಸಿಕೊಂಡಾಕ್ಷಣ ಕಣ್ಣ ಮುಂದೆ ಬಂದಿದ್ದಾನೆ. ಬಾಸ್ ಹತ್ರ ಬೇರೆ ಪರ್ಮಿಷನ್ ತೆಗೆದುಕೊಂಡು ಮೂವರು ಹೊರಗೆ ಬಂದಿದ್ದಾರೆ. ಸಿಹಿ ಜೊತೆ ಸೇರಿ ಪಾನಿಪೂರಿಯನ್ನು ತಿಂದಾಗಿದೆ. ಈಗ ಮುಖ್ಯವಾದ ವಿಚಾರ ಅಂದ್ರೆ ರುದ್ರಪ್ರತಾಪನನ್ನು ಭೇಟಿಯಾಗಬೇಕಿರುವುದು. ಭೇಟಿಯಾಗಲು ಬಂದಾಗ ಸಿಹಿ ಮತ್ತು ರಾಮ್‌ನನ್ನು ಹೊರಗೆ ಇರಲು ಹೇಳಿ ಹೋಗಿದ್ದಾಳೆ.
ಖುಷಿಯಿಂದ ಸ್ವಾಗತಿಸಿದ ರುದ್ರಪ್ರತಾಪ
ಸೀತಾಳನ್ನು ನೋಡುವುದೇ ಕೆಟ್ಟ ದೃಷ್ಟಿಯಿಂದ ರುದ್ರಪ್ರತಾಪ. ಸೀತಾ ಬಂದಾಕ್ಷಣಾ ತುಂಬಾ ಖುಷಿ ಪಟ್ಟಿದ್ದಾನೆ. ರಜೆ ಅಂತ ಅವಳನ್ನು ನೆಮ್ಮದಿಯಾಗಿ ಇರುವುದಕ್ಕೂ ಬಿಡುತ್ತಿಲ್ಲ. ಮನೆಯ ವಿಚಾರವನ್ನೇ ಹಿಡಿದುಕೊಂಡು ಹಿಂಸೆ ಕೊಡುತ್ತಿದ್ದಾನೆ. ಪದೇ ಪದೆ ಆ ವಿಚಾರ ಮಾತಾಡಬೇಕು. ಈ ವಿಚಾರ ಮಾತಾಡಬೇಕು ಅಂತ ಕರೆಯುತ್ತಲೇ ಇರುತ್ತಾನೆ. ಈಗ ಸ್ಯಾಲರಿ ಸ್ಲಿಪ್ ನೆಪ ಹೇಳಿ ಕರೆಸಿಕೊಂಡವ, ಸೀತಾ ಬಂದ ಕೂಡಲೇ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಾನೆ. ಸೀತಾ ಅದನ್ನು ನೋಡಿದರೆ ಕಪಾಳಮೋಕ್ಷ ತಪ್ಪಿದ್ದಲ್ಲ. ಆದರೆ, ಸೀತಾಳ ಮುಂದೆ ಆ ರೀತಿ ಕೆಲಸ ಮಾಡುತ್ತಿಲ್ಲ.

ಜ್ಯೂಸ್‌ನಲ್ಲಿ ಮತ್ತಿನೌಷಧಿ ಬೆರೆಸಿದ ಪ್ರತಾಪ
ಸೀತಾ ಬಂದಾಕ್ಷಣಾ, ತಿನ್ನುವುದಕ್ಕೆ, ಕುಡಿಯುವುದಕ್ಕೆ ಬಲವಂತ ಮಾಡುತ್ತಾನೆ. ಅವನ ಸಹಾಯಕನನ್ನು ಹೊರಗೆ ಕಳುಹಿಸಿ ಬಿಡುತ್ತಾನೆ. ಈಗಲೂ ಸೀತಾಳಿಗೆ ಜ್ಯೂಸ್ ತರುವುದಕ್ಕೆ ಹೇಳಿದ್ದಾನೆ. ಜ್ಯೂಸ್ ಎಲ್ಲಾ ಏನು ಬೇಡವೆಂದರೂ ಬಲವಂತ ಮಾಡಿದ್ದಾನೆ. ಜ್ಯೂಸ್ ತಂದಾಕ್ಷಣ ಆ ಜ್ಯೂಸ್‌ನಲ್ಲಿ ಮತ್ತು ಬರುವ ಪೌಡರ್ ಹಾಕಿದ್ದಾನೆ. ಆ ಜ್ಯೂಸ್ ಅನ್ನು ಸೀತಾಗೆ ಕುಡಿಯಲು ಕೊಟ್ಟಿದ್ದಾನೆ. ಸೀತಾ ಇದ್ಯಾವುದನ್ನು ಗಮನಿಸದೆ, ಯಾವುದೋ ಯೋಚನೆಯಲ್ಲಿಯೇ ಕಳೆದು ಹೋಗಿದ್ದಳು. ಹೀಗಾಗಿ ರುದ್ರ ಪ್ರತಾಪನ ಆಟಗಳು ಯಾವುದು ಗೊತ್ತಾಗಿಲ್ಲ.
ರುದ್ರ ಪ್ರತಾಪನಿಂದ ರಾಮ್ ಕಾಪಾಡ್ತಾನಾ?
ಸೀತಾಳ ಕಾವಲಿಗೆ ರಾಮ ಯಾವಾಗಲು ಇರುತ್ತಾನೆ. ಅದಕ್ಕೆ ಅನ್ಸುತ್ತೆ ಇವತ್ತು ಆಫೀಸಲ್ಲೂ ಫ್ರೆಂಡ್ ಸಿಕ್ಕಿದ್ದ. ಹೊರಗು ಜೊತೆಯಾಗಿಯೇ ಬಂದಿದ್ದಾನೆ. ರುದ್ರ ಪ್ರತಾಪನಿಗೆ ಸೀತಾಗಾಗಿ ಸಿಹಿ ಮತ್ತೆ ರಾಮ್ ಕಾಯ್ತಿದ್ದಾರೆ ಅನ್ನೋದು ಗೊತ್ತೆ ಇಲ್ಲ. ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾನೆ. ಈ ಕಡೆ ಸಿಹಿ 100 ಎಣಿಸುವುದರೊಳಗೆ ಬರಬೇಕು ಎಂದು ಹೇಳಿ ಕಳುಹಿಸಿದ್ಲು. ಸೀತಾ ಬರದೆ ಇದ್ದಲ್ಲಿ ರಾಮ್ ಹುಡುಕಿಕೊಂಡು ಹೋಗಿಯೇ ಹೋಗ್ತಾನೆ. ಆಗ ರುದ್ರ ಪ್ರತಾಪನ ಆಟವೇನಾದರೂ ಕಣ್ಣ ಮುಂದೆ ಬಿದ್ದರೆ ಸಿಗಿದು ಹಾಕಿ ಬಿಡುತ್ತಾನೆ. ರುದ್ರ ಪ್ರತಾಪನದ್ದು ಕೂಡ ಗ್ರಹಚಾರ ಕೆಟ್ಟಿದೆ ಎನಿಸುತ್ತದೆ. ಅದಕ್ಕೆಂದೆ ಸೀತಾಳ ಜೊತೆ ತಪ್ಪಾಗಿ ನಡೆದುಕೊಳ್ಳುತ್ತಿದ್ದಾನೆ.


Click it and Unblock the Notifications











