Seetha Rama Serial: ರಾಮ್‌ಗೆ ಬೋನಸ್ ಬಂದಿಲ್ಲ ಅಂತ ಪರಿತಪಿಸುತ್ತಿರೋ ಸೀತಾ.. ಇನ್ನೇನು ಲವ್ ಆಗುತ್ತಾ?
ರಾಮ್ ಸೀತಾ ಆದಷ್ಟು ಬೇಗ ಒಂದಾಗಲಿ ಅನ್ನೋದೆ ಪ್ರೇಕ್ಷಕರ ಒತ್ತಾಯವಾಗಿದೆ. ಅದಕ್ಕೆ ತಕ್ಕಂತೆ ರಾಮ್ ಸೀತಾ ಒಂದಾಗುವ ಎಲ್ಲಾ ಲಕ್ಷಣಗಳು ಜೋರಾಗಿಯೇ ಕಾಣಿಸುತ್ತಿವೆ. ರಾಮ್ ಆಫೀಸಿಗೆ ಬಂದಾದ ಮೇಲೆ ಸೀತಾ ಜೊತೆಯಾಗಿದ್ದಾಳೆ. ರಾಮ್‌ಗೆ ಕಷ್ಟ ತಾಗದಂತೆ ನೋಡಿಕೊಳ್ಳುತ್ತಿದ್ದಾಳೆ. ಅವನಿಗೆ ಊಟ ಇಲ್ಲ ಅಂದ್ರೆ ಊಟ, ಬೋನಸ್ ಬರದೆ ಇದ್ದರೆ ಬೋನಸ್ ಎಲ್ಲದರಲ್ಲೂ ಸೀತಾ, ಆತನ ಜೊತೆಗಿದ್ದಾಳೆ.
ಬಾಸ್ ಬಳಿ ರಾಮ್ ಬಗ್ಗೆ ಸೀತಾ ಚೆನ್ನಾಗಿ ಬಿಲ್ಡಪ್ ಕೊಟ್ಟಿದ್ದಾಳೆ. ಪಾಪ ಸರ್ ಹುಡುಗ. ಬಹಳ ಕಷ್ಟದಲ್ಲಿದ್ದಾನೆ. ಆದರೆ, ಹಾರ್ಡ್ ವರ್ಕರ್ ಸರ್. ಹೇಗಾದರೂ ಮಾಡಿ ಅವನ ಕೆಲಸ ಉಳಿಸಿ ಸರ್ ಅಂತೆಲ್ಲಾ ರಾಮ್‌ಗಾಗಿ ಮನವಿ ಮಾಡಿದ್ದಾಳೆ. ಇದು ರಾಮ್‌ನ ಬಹಳ ಇಂಪ್ರೆಸ್ ಮಾಡುತ್ತಿದೆ.

ಬೋನಸ್ ತೆಗೆದುಕೊಂಡ ಸೀತಾಗೆ ಖುಷಿ
ಆಫೀಸಲ್ಲಿ ಬೋನಸ್ ಹಣಕ್ಕೆ ಸಹಿ ಬಿದ್ದರೂ, ಆ ಹಣ ಮಾತ್ರ ಎಂಪ್ಲಾಯ್ ಕೈಗೆ ಸಿಕ್ಕಿಯೇ ಇರಲಿಲ್ಲ. ಇದು ತಾತನಿಗೆ ಗೊತ್ತಾದ ಮೇಲೆ ಬಹಳ ನೋವು ಮಾಡಿಕೊಂಡಿದ್ದರು. ಬಳಿಕ ಎಲ್ಲರಿಗೂ ಬೋನಸ್ ಹಣ ನೀಡುವುದಕ್ಕೆ ನಿರ್ಧಾರ ಕೂಡ ಮಾಡಿದ್ದರು. ಅದರಂತೆ ಆಫೀಸ್‌ನ ಎಲ್ಲಾ ಸಿಬ್ಬಂದಿಗೂ ಬೋನಸ್ ಹಣ ನೀಡಿದರು. ಬೋನಸ್ ಕಂಡು ಸೀತಾಗಂತೂ ಖುಷಿ ಆಯ್ತು.
ರಾಮ್‌ಗೆ ಸಿಗಲಿಲ್ಲ ಬೋನಸ್
ಎಲ್ಲರಿಗೂ ಬೋನಸ್ ಹಣ ಕೊಟ್ಟಿದ್ದೇ ರಾಮ್ ಸಹಿಯಿಂದ. ಆದರೆ, ಸೀತಾಳ ದೃಷ್ಟಿಯಲ್ಲಿ ರಾಮ್ ಒಬ್ಬ ಕಾಮನ್ ಎಂಪ್ಲಾಯ್. ಹೀಗಾಗಿಯೇ ರಾಮ್‌ಗೆ ಬೋನಸ್ ಸಿಗಲಿಲ್ಲ ಎಂಬ ಬೇಸರ ಅವಳಲ್ಲಿತ್ತು. ಅದೇ ವೇಳೆ ಹೆಲಿಕಾಪ್ಟರ್ ಕೂಡ ನೆನಪಾಯ್ತು. ಅವತ್ತು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಬಂದಿದ್ದಕ್ಕೆ ಹಣ ಕಟ್ ಮಾಡಿರಬೇಕು. ಈಗ ನಾನೇ ಕೊಡಬೇಕಾ ಎಂದು ಪ್ರಶ್ನೆ ಹಾಕಿಕೊಂಡಳು. ರಾಮ್ ಬಳಿ ಏನಾದರೂ ಕಷ್ಟ ಇದೆಯಾ ಅಂತ ಕೂಡ ವಿಚಾರಿಸಿದಳು.

ಬಾಸ್ ಬಳಿ ಕರೆದುಕೊಂಡು ಹೋದ ಸೀತಾ
ರಾಮ್ ಕೂಡ ಎಲ್ಲಿಯೂ ಅನುಮಾನ ಬಾರದ ರೀತಿ ನಡೆದುಕೊಂಡಿದ್ದಾನೆ. ಬೋನಸ್ ಅಗತ್ಯವಿದೆ, ಹಣದ ಅವಶ್ಯಕತೆ ಇದೆ ಅಂತೆಲ್ಲಾ ಹೇಳಿದ್ದಾನೆ. ಸೀತಾ ಕೊಡ್ತೀನಿ ಎಂದರೂ ಬೇಡ ಎಂದ ರಾಮ್‌ನನ್ನು ಕೈ ಹಿಡಿದು ಬಾಸ್ ರೂಮಿಗೆ ಎಳೆದುಕೊಂಡು ಹೋಗಿದ್ದಾಳೆ. ಸೀತಾ ಒಬ್ಬಳೇ ಮಾತನಾಡುವಾಗ ರಾಮ್ ಹೊರಗೆ ನಿಂತಿದ್ದ. ಮತ್ತೆ ಒಳಗೆ ಕರೆ ತಂದ ಸೀತಾ, ಬಾಸ್ ಮುಂದೆ ಮನವಿ ಮಾಡಿದ್ದಳು. ರಾಮ್‌ಗೂ ಮನವಿ ಮಾಡಿಕೊಳ್ಳಲು ಹೇಳಿದಳು. ಮೊದಲೇ ತಾತ, ಮೊಮ್ಮಗನನ್ನು ರೇಗಿಸುತ್ತಲೇ ಇರುತ್ತಾರೆ. ಚಾನ್ಸ್ ಸಿಕ್ಕಿದರೆ ಕೇಳಬೇಕೆ.
ಸೀತಾ ಮಾತಿಗೆ ರಾಮ್ ಫಿದಾ
ಈಗಾಗಲೇ ಪ್ರೋಮೋದಲ್ಲೆಲ್ಲಾ ರಾಮ್ ಸೀತಾ ಒಂದಾಗುವುದನ್ನು ನೋಡಿದ್ದೇವೆ. ಅವರಿಬ್ಬರು ಒಂದಾಗುವುದಂತು ಗ್ಯಾರಂಟಿ. ಆದರೆ, ಅದಕ್ಕೆ ಸಮಯ ಯಾವಾಗ ಅನ್ನೋದು ನೋಡುಗರ ಪ್ರಶ್ನೆ. ಸದ್ಯದ ಬೆಳವಣಿಗೆ ನೋಡ್ತಾ ಇದ್ರೆ ಆದಷ್ಟು ಬೇಗ ಇಬ್ಬರ ಮನಸ್ಸಲ್ಲೂ ಪ್ರೀತಿ ಹುಟ್ಟುವುದರಲ್ಲಿ ಅನುಮಾನವೇ ಇಲ್ಲ. ಬೆಸ್ಟ್ ಫ್ರೆಂಡ್‌ನನ್ನು ಅಪ್ಪ ಎಂದು ಕರೆಯುವುದಕ್ಕೆ ಸಿಹಿ ಕೂಡ ಒಪ್ಪಿಗೆ ನೀಡಲೇಬೇಕಾಗಿದೆ. ರಾಮ್‌ಗೆ ಸೀತೆ ಬೇಗ ಸಿಗಬಹುದು. ಆದರೆ ಸಿಹಿ ಒಲಿಯುವುದು ಅಷ್ಟು ಸುಲಭವಲ್ಲ.


Click it and Unblock the Notifications











