Seetha Rama: ಗೊಂಬೆ ಭವಿಷ್ಯ ನುಡಿದಿದ್ದೇನು? 'ರಾಮ್' ಬಾಳಲ್ಲಿ 'ಸೀತಾ' ಎಂಟ್ರಿ ಕೊಡುತ್ತಾಳಾ?

By ಎಸ್ ಸುಮಂತ್

ಒಂದು ಗಾದೆ ಮಾತಿದೆ. ಕಡಲೆ ಇದ್ದವರಿಗೆ ಹಲ್ಲು ಇಲ್ಲ. ಹಲ್ಲು ಇದ್ದವರಿಗೆ ಕಡಲೆ ಇಲ್ಲ. ಅದೆಷ್ಟೋ ಜನರ ಬದುಕಿಗೆ ಇದು ಅನ್ವಯವಾಗುತ್ತದೆ. ಅದೆಷ್ಟೋ ಜನ ಈ ಬೇಸರವನ್ನು ಅನುಭವಿಸುತ್ತಾರೆ. ರಾಮ್ ಬದುಕಿಗೂ ಈ ಗಾದೆ ಮಾತು ಹೇಳಿ ಮಾಡಿಸಿದ ಹಾಗೆ ಇದೆ.

ಹುಟ್ಟು ಶ್ರೀಮಂತನಾದರೂ ರಾಮ್ ಬಯಸುವುದು ಸಿಗುತ್ತಿಲ್ಲ. ಅದೆಷ್ಟೇ ದುಬಾರಿಯಾದರೂ ಅದನ್ನು ಕೊಂಡುಕೊಳ್ಳುವ ಹಣ ರಾಮ್‌ನಲ್ಲಿದೆ. ಆದರೆ, ಯಾವಾಗಲೂ ಕಾಡುವ ಆ ಸಂತೋಷ, ನೆಮ್ಮದಿ ಮಾತ್ರ ಅವನ ಬಳಿ ಇಲ್ಲ. ಪ್ರಯತ್ನ ಪಟ್ಟರು ಸಿಗುತ್ತಿಲ್ಲ. ಈಗ ಅದನ್ನೆಲ್ಲ ಕೊಡುತ್ತಿರುವುದು ಸಿಹಿ ಪುಟಾಣಿ.

seetha-rama-serial-august-31st-episode

ಸೀತಾ-ರಾಮ ಕಲ್ಯಾಣ ಯಾವಾಗ..?

ವೀಕೆಂಡ್‌ನಲ್ಲಿ ಸೀತಾಮಾತಾ ಅಪರೂಪಕ್ಕೆ ಸಿಹಿಯನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾಳೆ. ಈಗ ಪರಿಚಯವಾಗಿರುವ ಫ್ರೆಂಡ್ ಬೇರೆ ಜೊತೆಗೆ ಬಂದಿದ್ದಾನೆ. ಇದು ಸಿಹಿಗೆ ಡಬ್ಬಲ್ ಧಮಾಕ. ಆಟವಾಡುತ್ತಾ ಗೊಂಬೆ ಆಡಿಸುವವನ ಬಳಿ ಬಂದಿದ್ದಾಳೆ. ಸಿಹಿಗೆ ಆ ಗೊಂಬೆ ಹೇಳಿದ ಜಾತಕ ಕನಸಿನ ಜಾತಕವೇ ಸರಿ. ಅರಮನೆ ಜಾತಕ ಕುತೂಹಲ ಹೆಚ್ಚಾಗಿ ರಾಮ್ ಭವಿಷ್ಯವನ್ನು ನೋಡಿದಾಗ ಸೀತಾ-ರಾಮ ಕಲ್ಯಾಣ ಬಂದಿದೆ. ಇದು ಸೀತಾಗೆ ಖುಷಿಯಾದ್ರೆ ಸಿಹಿಗೆ ಗೊಂದಲ. ಅಮ್ಮನ ಹೆಸರು ಸೀತಾ, ಫ್ರೆಂಡ್ ಹೆಸರು ರಾಮ್. ಸೀತಾರಾಮ ಕಲ್ಯಾಣ ಅಂದ್ರೆ "ಫ್ರೆಂಡ್ ನೀನು ನಮ್ಮ ಅಮ್ಮನ ಮದುವೆಯಾಗ್ತೀಯಾ" ಅಂತ ಕೇಳಿದ್ದಾಳೆ.

ಸಿಹಿ ಜೊತೆ ರೋಡಲ್ಲೆಲ್ಲಾ ಸುತ್ತಾಟ

ಸಿಹಿ ಎಲ್ಲಿದ್ದರು ಚೆಂದ. ಅಮ್ಮನ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಅದು ಬೇಡ ಅಂದ್ರೆ ಅದನ್ನೂ ಒಪ್ಪಿಕೊಳ್ಳುತ್ತಾಳೆ. ಸಿಕ್ಕಾಪಟ್ಟೆ ಅಂತ ಹಠ ಮಾಡಲ್ಲ. ಈಗ ಹೊರಗೆ ಬೇರೆ ಕರೆದುಕೊಂಡು ಬಂದಿರೋದಕ್ಕೆ ಕಾಲು ನಿಲ್ಲುತ್ತಿಲ್ಲ. ಅದು ಬೇರೆ ಸಪೋರ್ಟ್ ಮಾಡೋದಕ್ಕೆ ಫ್ರೆಂಡ್ ಬೇರೆ ಇದ್ಮೇಲೆ ಸಿಹಿಯಾ ಆಟವನ್ನು ಕೇಳ್ಬೇಕಾ ? ಆದರೆ ಸಿಹಿ ಕುಣಿಯುವುದು, ಆಡುವುದನ್ನು ನೋಡಿ ಶ್ರೀರಾಮನೇ ಕಳೆದು‌ ಹೋಗಿದ್ದಾನೆ.

seetha-rama-serial-august-31st-episode

ಸೀತಾಗೆ ಥ್ಯಾಂಕ್ಸ್ ಹೇಳಿದ್ದು ಯಾಕೆ..?

ರಾಮ್‌ಗೆ ಖುಷಿ ಅಂದ್ರೆ ಹೀಗೆಲ್ಲಾ ಇರುತ್ತೆ ಅನ್ನೋದು ಅರಿವಿನಲ್ಲೂ ಇಲ್ಲ. ಮನೆ, ಕಾರು, ನಕಲಿ ಪ್ರೀತಿ, ಬ್ಯುಸಿ ಈ ರೀತಿ ಬೆಳೆದ ರಾಮ್, ಸಿಹಿ ಜೊತೆ ರೋಡ್ ರೋಡ್ ಸುತ್ತಿದ್ದಾನೆ. ಚೌಕಾಸಿ ಮಾಡಿ ಊಟ ಮಾಡಿದ್ದಾರೆ. ಈಗ ಪಾರ್ಕ್‌ನಲ್ಲಿ ಜೋರು ಆಟ ಆಡಿದ್ದಾರೆ. ಇದನ್ನೆಲ್ಲ ಕಂಡ ರಾಮ್ ತುಂಬಾನೇ ಖುಷಿ ಪಟ್ಟಿದ್ದಾನೆ. ಖುಷಿ ಅಂದ್ರೆ ಎಲ್ಲೋ ಸಿಗುತ್ತೆ ಅಂದ್ಕೊಂಡಿದ್ದೆ. ಆ ಖುಷಿ ಫೀಲ್ ಮಾಡಿಸಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾನೆ.

ಮನಸ್ಸಲ್ಲಿ ಮೂಡಿದ ಪ್ರೀತಿ ಅರಿವಾಗುತ್ತಾ..?

ರಾಮ್‌ಗೆ ಸೀತಾ ಹಾಗೂ ಸಿಹಿ ಜೊತೆ ಇದ್ದರೆ ಜಗತ್ತೆ ಮರೆತು ಹೋದಂತೆಯೇ ಸರಿ. ಇದನ್ನ ಅಶೋಕ, ಪ್ರೀತಿ ಎಂದೇ ಅರ್ಥ ಮಾಡಿಕೊಂಡಿದ್ದಾನೆ. ಆದರೆ, ರಾಮ್ ಮನಸ್ಸಲ್ಲಿ ಇನ್ನು ಪ್ರೀತಿಯೊಂದು ಹುಟ್ಟಿಲ್ಲ. ಫ್ರೆಂಡ್‌ಶಿಪ್, ಕಾಳಜಿ, ಸಿಹಿ ಮೇಲೆ ಅತಿಯಾದ ಪ್ರೀತಿ, ಸಲಿಗೆ ಇದೆ. ಗೊಂಬೆ ಭವಿಷ್ಯ ಕೇಳಿದ ಮೇಲೆ ಸಿಹಿ ಕೂಡ ಸೀತಮ್ಮನ್ನ ಮದುವೆಯಾಗ್ತೀಯ ಎಂದು ಕೇಳಿದಾಗ, ರಾಮ್‌ಗೆ ಏನು ಹೇಳಬೇಕು ಎಂಬುದು ತೋಚದಂತೆ ಆಗಿದೆ. ಮುಂದೊಂದು ದಿನ ಈ ಸಲಿಗೆ, ಸ್ನೇಹವೇ ಪ್ರೀತಿಯಾಗಿ ಬದಲಾಗುತ್ತದೆ. ಆ ದಿನಕ್ಕಾಗಿಯೇ ಎಲ್ಲರೂ ಕಾಯ್ತಿದ್ದಾರೆ.

More from Filmibeat

English summary
Seetha Rama serial Written Update on August 31st episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X