Seetha Rama Serial: ಸೀತೆಗೆ ಯಾವಾಗಲೂ ರಾಮನೇ ಕಾವಲು ಅಲ್ಲವೇ.. ಇವತ್ತಿನ ಎಪಿಸೋಡಿನಲ್ಲಿ ನಡೆಯೋದೇನು?
ಪುರಾತನ ಕಾಲದಿಂದಾನೂ ರಾಮನಿಗೆ ಸೀತೆ, ಸೀತೆಗೆ ರಾಮನೇ ಜೊತೆಯಾಗುತ್ತಾನೆ. ಇನ್ನು ಸೀರಿಯಲ್‌ನಲ್ಲಿ ರಾಮ-ಸೀತೆ ದೂರವಾಗುವುದು ಉಂಟೇ. ಅದರ ಜೊತೆಗೆ ಸೀತೆ ಕಷ್ಟದಲ್ಲಿದ್ದಾಗ ರಾಮ ಸುಮ್ಮನೆ ಇರುವುದು ಉಂಟೇ. ಸಾಧ್ಯವೇ ಇಲ್ಲ ಅಲ್ವಾ. ಈಗ ಕೂಡ ಅದೇ ಆಗಿದೆ. ಸೀತೆಯ ಕಷ್ಟ ರಾಮನ ಮನಸ್ಸನ್ನು ಕಾಡುತ್ತಿದೆ.
ಸೀತಾ ತನ್ನ ಮಗಳೊಂದಿಗೆ ಅಷ್ಟೋ ಇಷ್ಟೋ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾಳೆ. ಮಗಳನ್ನೇ ದೊಡ್ಡ ಪ್ರಪಂಚ ಎಂದುಕೊಂಡಿದ್ದಾಳೆ. ಅವಳಿಗಾಗಿಯೇ ತನ್ನ ಜೀವನ ಸವೆಸುತ್ತಿದ್ದಾಳೆ. ಮಗಳಿಗೆ ಬೇರೆ ಚಿಕ್ಕ ವಯಸ್ಸಿನಲ್ಲಿಯೇ ಶುಗರ್ ಬೇರೆ ಇರುವುದರಿಂದ ತನ್ನ ವೈಯಕ್ತಿಕ ಜೀವನದ ಬಗ್ಗೆ ಚಿಂತೆಯೇ ಮಾಡಿಲ್ಲ.

ರುದ್ರಪ್ರತಾಪನಿಂದ ಸೀತಾಗೆ ಸಂಕಷ್ಟ
ಸೀತಾ ಬೇಡದ ವಯಸ್ಸಿಗೆ ಗಂಡನನ್ನು ಕಳೆದುಕೊಂಡಳು. ಮಗಳ ಜವಾಬ್ದಾರಿ ಬೇರೆ. ತನ್ನವರು ಎಂದು ಹೇಳಿಕೊಳ್ಳುವುದಕ್ಕೂ ಯಾರೂ ಇಲ್ಲ. ಆದರೆ, ಎಷ್ಟೇ ಕಷ್ಟ ಇದ್ದರೂ ನೋವನ್ನು ನುಂಗಿಕೊಂಡು ನಗುವನ್ನೇ ಬೀರುತ್ತಾಳೆ. ಅದು ಅಕ್ಕ ಪಕ್ಕದ ಮನೆಯವರಿಗೂ ಗೊತ್ತು. ಹೀಗಾಗಿಯೇ ಸೀತಾಗೊಂದು ಮದುವೆಯಾಗಬಾರದಾ ಎಂದೇ ಆಶಿಸುತ್ತಾರೆ. ಅದಕ್ಕೆ ತಕ್ಕನಾಗಿ ಸೀತಾಳ ಅತ್ತಿಗೆ ಒಂದು ಹುಡುಗನನ್ನು ಕರೆತಂದಿದ್ದಳು. ಅವನೇ ರುದ್ರಪ್ರತಾಪ. ಆದರೆ, ಅಂದೇ ಸೀತಾ ಅವನನ್ನು ರಿಜೆಕ್ಟ್ ಮಾಡಿದ್ದಳು.
ಸೀತೆಯನ್ನು ಹುಡುಕಿ ಬಂದ ರಾಮ
ರಾಮ್‌ಗೆ ಸದ್ಯಕ್ಕೆ ಬೆಸ್ಟ್ ಫ್ರೆಂಡ್ ಅಂದ್ರೆ ಸಿಹಿ. ಜೊತೆಗೆ ಸೀತಾ ಕೂಡ. ಸಿಹಿ ಯಾವಾಗಲೂ ತನ್ನ ಫ್ರೆಂಡ್‌ಗಾಗಿ ಸ್ಪೆಷಲ್ ಚಪಾತಿ ಮಾಡಿ ಕಳುಹಿಸುತ್ತಾಳೆ. ಆ ಚಪಾತಿ ತಿಂದು ಅದೆಷ್ಟು ಬಾರಿ ಆ ಸಿಹಿಯಾದ ಫ್ರೆಂಡ್‌ಗೆ ಸಹಿಯಾದ ಥ್ಯಾಂಕ್ಸ್ ಹೇಳಿದ್ದಾನೋ ಏನೋ. ಆದರೆ, ಈಗ ದೊಡ್ಡ ಗಿಫ್ಟ್ ಅನ್ನೇ ಹಿಡಿದು ಸ್ಪೆಷಲ್ ಫ್ರೆಂಡ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಸೀತಾ ಇರುವ ವಠಾರವನ್ನು ಹುಡುಕಿ ಬಂದಿದ್ದಾನೆ. ಸೀತಾ ಅಂತು ರಾಮನನ್ನು ಕಂಡು ಖುಷಿ ಪಟ್ಟಿದ್ದಾಳೆ.

ರಾಮ್ ಬಂದ್ರೆ ರುದ್ರಪ್ರತಾಪ ಔಟ್
ರುದ್ರ ಪ್ರತಾಪನಿಗೆ ಸದ್ಯ ಸೀತೆಯ ಮೇಲೆ ಕಣ್ಣು ಬಿದ್ದಿದೆ. ಮನಸ್ಸಾಗಿದ್ದರೆ ಅವಳನ್ನು ಗೆಲ್ಲುವುದಕ್ಕೆ ಪ್ರಯತ್ನ ಮಾಡುತ್ತಿದ್ದ. ಆದರೆ, ಈಗ ಟಾರ್ಚರ್ ಕೊಡುವುದಕ್ಕೆ ಶುರು ಮಾಡಿದ್ದಾನೆ. ಆಫೀಸಿಗೆ ಹೊರಟಾಗ ಅಡ್ಡ ಬರುವುದು, ಅವಳಿಗೆ ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಮಾಡುತ್ತಿದ್ದಾನೆ. ಸಿಹಿಗಂತು ರುದ್ರಪ್ರತಾಪನನ್ನು ಕಂಡರೆ ಆಗುವುದೇ ಇಲ್ಲ. ಈಗ ಮತ್ತೊಂದು ಘಟ್ಟಕ್ಕೆ ಬಂದು ನಿಂತಿದ್ದಾನೆ. ಮನೆಯನ್ನು ತೆರವು ಮಾಡಿಸಲು ಹೊರಟಿದ್ದಾನೆ. ಮನೆಯ ಬಾಗಿಲ ಮೇಲೆ ಮನೆ ತೆರವು ಆದೇಶವನ್ನು ಅಂಟಿಸಿದ್ದಾನೆ.
ರಾಮ್ ಇದ್ರೆ ಸೀತೆ ಬಚಾವ್
ರಾಮ್ ಈಗಾಗಲೇ ಸೀತೆಯ ಕಷ್ಟಕ್ಕೆ ಮರುಗಿದ್ದಾನೆ. ಸಿಹಿಯ ಬ್ಯಾಡ್ ಅಂಕಲ್‌ಗೆ ಒಂದು ಗತಿ ಕಾಣಿಸಿದ್ದಾನೆ. ಅವನು ಇನ್ಯಾವತ್ತು ಸೀತಾ ಮನೆಗೆ ಬಾರದಂತೆ ಮಾಡಿದ್ದಾನೆ. ಈಗ ರುದ್ರಪ್ರತಾಪನ ಸರದಿ. ಸುಮ್ಮನೆ ಬಿಡುತ್ತಾನೆಯೇ. ಮನೆಯ ತೆರವು ಆದೇಶ ಹೊರಡಿಸಿದ ಸಮಯದಲ್ಲಿಯೇ ಸೀತಾಳ ಮನೆ ಬಾಗಿಲನ್ನು ರಾಮ್ ತಟ್ಟಿದ್ದಾನೆ. ಈಗ ಆ ಆದೇಶವನ್ನು ನೋಡಿ ರಾಮ್ ಸುಮ್ಮನೆ ಇರುತ್ತಾನಾ. ಅದರ ಹಿಂದಿನ ಹಿಸ್ಟರಿಯನ್ನು ಹುಡುಕಿ, ಜಾಲಾಡದೇ ಬಿಡುತ್ತಾನಾ..? ರೌಡಿಗೆ ಕಾದಂತೆ ರುದ್ರಪ್ರತಾಪನಿಗೂ ರಾಮ್ ಗ್ರಹಚಾರ ಬಿಡಿಸುತ್ತಾನೆ ಎಂದೇ ಅರ್ಥ. ಇದರ ನಡುವೆ ಸೀತಾ ಮಾತ್ರ ರಾಮ್‌ನನ್ನು ಕಂಡು ಖುಷಿ ಪಟ್ಟಿದ್ದಾಳೆ.


Click it and Unblock the Notifications











