Seetha Rama Serial: ಸಿಹಿಯ ಅರಮನೆಯಲ್ಲಿ ರಾಮನೇ ಮಗು.. ಮುಂದೆ ರಾಜಕುಮಾರಿ ಆಗ್ತಾಳಾ ಮುದ್ದು ಬಂಗಾರಿ?
ಆಫೀಸ್‌ನಲ್ಲಿ ನಡೆಯುತ್ತಿರುವ ಕಳ್ಳಾಟವನ್ನು ಕಂಡು ಹಿಡಿಯುವುದಕ್ಕೋಸ್ಕರ ರಾಮ್ ಆಫೀಸಿಗೆ ಎಂಪ್ಲಾಯ್ ಆಗಿ ಬಂದಿದ್ದಾನೆ. ಅದು ಟೆಂಪ್ರವರಿಯಾಗಿ. ಆದರೆ, ರಾಮ್‌ಗೆ ಈಗ ಬಾಸ್ ಆಗುವುದಕ್ಕೆ ಮನಸ್ಸೇ ಆಗುತ್ತಿಲ್ಲ. ಎಂಪ್ಲಾಯ್ ಆಗಿನೇ ಉಳಿದು ಬಿಡುವ ಸಾಹಸಕ್ಕೆಕೈ ಹಾಕಿದ್ದಾನೆ. ಇದು ತಾತನಿಗೂ ಆಶ್ಚರ್ಯವಾಗಿದೆ. ಆದರೂ, ರಾಮ್‌ನನ್ನು ಸಾಕಷ್ಟು ರೇಗಿಸುತ್ತಿದ್ದಾನೆ.
ಆಫೀಸ್‌ನಲ್ಲಿ ರಾಮ್‌ಗಾಗಿ ಒಂದು ಟೀಂ ರೆಡಿಯಾಗಿದೆ. ಸೀತಾಳೇ ಬೆಸ್ಟ್ ಫ್ರೆಂಡ್. ರಾಮ್‌ನನ್ನು ರೇಗಿಸುವುದಕ್ಕೆ ಸಾಕಷ್ಟು ಜನ ಇದ್ದಾರೆ. ಅದರಲ್ಲಿ ಪ್ರಿಯಾ ಕೂಡ ಒಬ್ಬಳು. ಸೀತೆಯ ಸ್ನೇಹಿತೆ ಪ್ರಿಯಾ. ಸೀತಾ ಸಪೋರ್ಟ್ ಮಾಡಿದರೆ, ಪ್ರಿಯಾ ರಾಮ್‌ನನ್ನು ರೇಗಿಸುತ್ತಲೇ ಇರುತ್ತಾಳೆ. ಇದೀಗ ಸಿಹಿಗಾಗಿ ರಾಮ್ ಸ್ಪೆಷಲ್ ಗಿಫ್ಟ್ ತಂದಿದ್ದಾನೆ.

ರಾಮ್ ಕಂಡು ಫ್ರೆಂಡ್ ಖುಷಿ
ಸಿಹಿಗೆ ಈಗ ಟೈಮ್ ಪಾಸ್ ತುಂಬಾ ಸುಲಭ. ಬೇಜಾರಾದಾಗೆಲ್ಲಾ ಫ್ರೆಂಡ್ ನೆನಪಾಗುತ್ತಾನೆ. ಕಷ್ಟ ಎಂದಾಗೆಲ್ಲಾ ಫ್ರೆಂಡ್ ನೆನಪಾಗುತ್ತಾನೆ. ಅದಕ್ಕೆ ಈಗ ಅಮ್ಮನಿಂದ ಫ್ರೆಂಡ್‌ಗೆ ಕರೆ ಮಾಡಿಸಿದ್ದಾಳೆ. ಫ್ರೆಂಡ್ ಅಂದ್ರೆ ಸುಮ್ನೆನಾ, ಚೋಟಾ ಫ್ರೆಂಡ್‌ಗಾಗಿ ರಾಮ್ ಓಡೋಡಿ ಬಂದಿದ್ದಾನೆ. ವಠಾರಕ್ಕೆ ಬಂದು ಅಭ್ಯಾಸವೇ ಇಲ್ಲದ ರಾಮ್, ಚೋಟಾ ಫ್ರೆಂಡ್ ಗಾಗಿ ಹುಡುಕಿ ಬಂದಿದ್ದಾನೆ.
ಸಿಹಿಗಾಗಿ ಗಿಫ್ಟ್ ತಂದ ರಾಮ್
ಚೋಟಾ ಫ್ರೆಂಡ್ ನೋಡಲು ಬಂದ ರಾಮ್ ಸ್ಪೆಷಲ್ ಗಿಫ್ಟ್ ಕೂಡ ತಂದಿದ್ದಾನೆ. ಗಿಫ್ಟ್ ಎಲ್ಲಾ ಯಾಕೆ ಅಂತ ಸೀತಾ ಕೇಳಿದ್ರೆ, ಸಿಹಿ ಫ್ರೆಂಡ್ ಸಪೋರ್ಟ್‌ಗೆ ಬಂದಿದ್ದಾಳೆ. ಸುಮ್ನೆ ಇರು ಫ್ರೆಂಡ್ ಈ ಫ್ರೆಂಡ್ಸ್ ಬಾಂಡಿಂಗ್ ಇವ್ರಿಗೆಲ್ಲಾ ಹೇಗೆ ಗೊತ್ತಾಗುತ್ತೆ ಎಂದು ರೇಗಿಸಿದ್ದಾಳೆ. ತನ್ನ ಫ್ರೆಂಡ್ ತಂದುಕೊಟ್ಟ ವಸ್ತುವಿನಲ್ಲೆಲ್ಲಾ ತನ್ನ ಕನಸಿನ ಗೂಡನ್ನು ಕಟ್ಟಿದ್ದಾಳೆ. ಅದು ಅಂತಿಂಥ ಮನೆಯಲ್ಲಾ ದೊಡ್ಡ ಅರಮನೆಯನ್ನೇ ಕಟ್ಟಿದ್ದಾಳೆ.

ಅರಮನೆ ನಿರ್ಮಿಸಿದ ಸಿಹಿ
ಸಿಹಿಗೆ ದೊಡ್ಡ ಕನಸಿದೆ. ಮನೆಗೆ ರಾಜಕುಮಾರನೇ ಬರಬೇಕು. ಆ ರಾಜಕುಮಾರ ನಮ್ಮ ಅಮ್ಮನಿಗೆ ಸಿಗಬೇಕು ಎಂಬುದು. ಅದಕ್ಕೆ ಯಾವಾಗಲೂ ಜಪಿಸುತ್ತಾ ಇರುತ್ತಾಳೆ. ಅದಕ್ಕೆ ತಕ್ಕ ಹಾಗೇ ಸೀತಾ ಕೂಡ ಯಾವಾಗಲೂ ನಮ್ಮ ಬಳಿ ಜಾಸ್ತಿ ದುಡ್ಡಿದೆ. ಜಾಸ್ತಿ ಫುಡ್ ಇದೆ ಅಂತ ಮಗಳಿಗೆ ಹೇಳ್ತಾನೇ ಇರ್ತಾಳೆ. ಈಗ ಫ್ರೆಂಡ್ ಕೊಟ್ಟಿರುವ ವಸ್ತುವಿನಲ್ಲಿ ಅದ್ಭುತವಾದ ಅರಮನೆಯನ್ನೇ ನಿರ್ಮಿಸಿದ್ದಾಳೆ. ಆ ಅರಮನೆಯಲ್ಲಿ ನಗುವೇ ಚೆಲ್ಲುವಂತೆ ಮಾಡಿದ್ದಾಳೆ. ಮನೆಯವರೆಲ್ಲಾ ಸೇರಿ ಅರಮನೆಯೊಳಗೆ ಸಂಭ್ರಮಿಸಿದ್ದಾರೆ. ಸಿಹಿಯ ಸಂಭ್ರಮದ ಜೊತೆಗೆ ರಾಮ್ ಇನ್ನಷ್ಟು ಮಗುವಾಗಿದ್ದಾನೆ. ಸಿಹಿಗೆ ಥ್ಯಾಂಕ್ಸ್ ಕೂಡ ಹೇಳಿದ್ದಾನೆ.
ಅರಮನೆಯ ಕನಸು ನನಸಾಗುತ್ತಾ..?
ಆ ಕಡೆ ರುದ್ರಪ್ರತಾಪ ಮನೆ ತೆರವು ಆದೇಶವನ್ನು ಬಾಗಿಲಿಗೆ ಅಂಟಿಸಿ ಹೋಗಿದ್ದ. ಆದರೆ, ರಾಮ್ ಇರುವಾಗ ಆ ತೆರವು ಸಾಧ್ಯತೆ ಇದೆಯಾ. ಅದನ್ನು ನೋಡಿದ ಕೂಡಲೇ ರಾಮ್ ಅದನ್ನು ಮರೆಮಾಚಿದ್ದಾನೆ. ಆದೇಶ ಪ್ರತಿ ಇರುವ ಜಾಗದಲ್ಲಿ ಅರಮನೆಯ ಚಿತ್ರವನ್ನು ಅಂಟಿಸಿದ್ದಾನೆ. ಇನ್ಮೇಲೆ ರುದ್ರಪ್ರತಾಪನಿಗೂ ಗ್ರಹಚಾರ ಕಾದಿದೆ ಎಂದೇ ಅರ್ಥ. ಸಂಭ್ರಮ ಮುಗಿದ ಮೇಲೆ ರಾಮ್ ಮನೆಗೆ ಹೊರಟಿದ್ದಾನೆ. ಆಗ ಸೀತಾ ತನ್ನ ಬೇಸರ ಹೊರ ಹಾಕಿದ್ದಾಳೆ. ಅರಮನೆಯ ಕನಸು ಕಾಣುತ್ತಿದ್ದಾಳೆ ಎಂದಾಗ ರಾಮ್ ಭರವಸೆಯ ಮಾತುಗಳನ್ನಾಡಿದ್ದಾನೆ. ಮಕ್ಕಳು ದೇವರಿಗೆ ಸಮಾನ. ಕನಸು ನನಸು ಆಗಬಹುದು ಎಂದಿದ್ದಾನೆ.


Click it and Unblock the Notifications











