Seetha Rama Serial: ಸೀತಾ ಜೈಲಿಗೆ ಹೋಗ್ತಾಳಾ? ಸಿಹಿ ಜೊತೆ ನಿಲ್ತಾನಾ ಫ್ರೆಂಡ್ ರಾಮ್?
ಸೀತಾಳ ಅತ್ತಿಗೆಗೆ ಹಣದ ಮೇಲೆ ಆಸೆಯಾಗಿದೆ. ಇದೆ ಕಾರಣಕ್ಕೆ ಸೀತಾಳಿಗೆ ಮತ್ತೊಂದು ಮದುವೆ ಮಾಡಿಸಲು ಹೊರಟಿದ್ದಾಳೆ. ಅದಷ್ಟೇ ಅಲ್ಲ ಅದಾಗಲೇ ಹುಡುಗನನ್ನು ಹುಡುಕಿ ಕರೆತಂದಿದ್ದಳು. ರುದ್ರಪ್ರತಾಪನಿಗೆ ಗಂಟು ಹಾಕಲು ನೋಡುತ್ತಿದ್ದಾಳೆ. ಆದರೆ, ಸೀತಾಗೆ ಎರಡನೇ ಮದುವೆಯ ಯಾವ ಯೋಚನೆಯೂ ಇಲ್ಲ. ಹೀಗಾಗಿ ಮದುವೆ ಬೇಡ ಎಂದೇ ಹೇಳಿದ್ದಾಳೆ.
ಆದರೆ ರುದ್ರಪ್ರತಾಪನಿಗೆ ಸೀತೆಯ ಮೇಲೆ ಕಣ್ಣು ಬಿದ್ದಿದೆ. ಅದಕ್ಕೆ ಸಿಕ್ಕ ಸಿಕ್ಕ ದಾರಿಯಲ್ಲೆಲ್ಲಾ ಸೀತೆಯನ್ನು ಕಾಡುತ್ತಿದ್ದಾನೆ. ನಿಮಗೆ ನನ್ನಿಂದ ಸಹಾಯ ಬೇಕು ಎಂದಾಗ ಮುಕ್ತವಾಗಿ ಕೇಳಿ ಎಂದಿದ್ದಾನೆ. ಸೀತಾ ಅವೈಡ್ ಮಾಡಿ ಮುಂದೆ ಸಾಗಿದರೆ, ಸಿಹಿ ಹಾಗಲ್ಲ, ಕೋಪವನ್ನು ಹೊರ ಹಾಕಿಯೇ ಮುಂದೆ ಸಾಗಿದ್ದಾಳೆ. ಈಗ ಸೀತಾ ತನ್ನ ಬಳಿ ಬರಲೇಬೇಕೆಂಬ ರೀತಿಯಲ್ಲಿ ನೋಟೀಸ್ ನೀಡಿದ್ದಾನೆ.

ಮನೆ ತೆರವಿನ ಪ್ಲ್ಯಾನ್ ಅತ್ತಿಗೆಯದ್ದೇನಾ..?
ಸೀತಾಳನ್ನು ಹೇಗಾದರೂ ಮಾಡಿ ರುದ್ರಪ್ರತಾಪನಿಗೆ ಮದುವೆ ಮಾಡಿಸಿ ಕೊಡಲೇಬೇಕೆಂದು ಅತ್ತಿಗೆ ಪಣ ತೊಟ್ಟಿದ್ದಾಳೆ. ಹೀಗಾಗಿಯೇ ಸೀತಾಳಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾಳೆ. ಸಮಸ್ಯೆಗಳು ಶುರುವಾದರೆ, ತಲೆ ಬಾಗಿ ಮದುವೆಗೆ ಒಪ್ಪಿಕೊಳ್ಳುತ್ತಾಳೆ ಎಂಬ ಅಭಿಪ್ರಾಯ ಅತ್ತಿಗೆಯದ್ದು. ಹೀಗಾಗಿಯೇ ರುದ್ರಪ್ರತಾಪನ ಕಾಂಟ್ಯಾಕ್ಟ್ ಬಳಸಿಕೊಂಡು ಮನೆ ತೆರವು ನೋಟೀಸ್ ಕಳುಹಿಸಿದ್ದಾಳೆ.
ಅತ್ತಿಗೆ ಮಾತಿಗೆ ಸೀತಾಗೆ ಅನುಮಾನ
ಮನೆ ಬಾಗಿಲಿಗೆ ನೋಟೀಸ್ ಅಂಟಿಸಿರುವುದು ರಾಮ್‌ಗೆ ಮತ್ತು ಸೀತಾಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಆದರೆ, ಇದ್ದಕ್ಕಿದ್ದ ಹಾಗೇ ಅತ್ತಿಗೆಗೆ ಗೊತ್ತಾಗಿದೆ. ಅಲ್ಲಿಂದ ಓಡೋಡಿ ಬಂದ ಸೀತಾಳ ಅತ್ತಿಗೆ, ಇರೋದು ಒಂದೇ ಮನೆ. ಈ ಮನೆ ಕೂಡ ಹೋದ್ರೆ ಏನೇ ಮಾಡ್ತೀಯಾ ಸೀತಾ ಎಂದು ಕೇಳಿದ್ದಾಳೆ. ಮನೆಗೆ ನೋಟೀಸ್ ಬಂದಿರೋದು ನಿನಗೆ ಹೇಗೆ ಗೊತ್ತಾಯ್ತು ಎಂದಿದ್ದಕ್ಕೆ, ಲಾಯರ್ ಕಡೆಯಿಂದ ಗೊತ್ತಾಯ್ತು ಎಂದು ಕೇಳಿದ್ದಾಳೆ. ಇದಕ್ಕೆ ಲಾಯರ್‌ನನ್ನು ಮಧ್ಯದಲ್ಲಿ ಎಳೆದು ತಂದಿದ್ದಾಳೆ. ಲಾಯರ್‌ನಿಂದ ಗೊತ್ತಾಯ್ತು. ಮೊದಲು ಲಾಯರ್ ಕಾಲ್ ಮಾಡು ಇಲ್ಲಂದ್ರೆ ಜೈಲು ಪಾಲಾಗಬೇಕಾಗುತ್ತೆ ಅಂತಾನೇ ಹೆದರಿಸಿದ್ದಾಳೆ.

ಜೈಲಿನ ಬಗ್ಗೆ ಕೇಳಿ ಸಿಹಿಗೆ ಆತಂಕ
ಸಿಹಿಗೆ ಜೈಲು ಎಂದಾಕ್ಷಣಾ ಆತಂಕ ಶುರುವಾಗಿದೆ. ಜೈಲಿನ ವಿಚಾರವೂ ಅವಳಿಗೆ ಗೊತ್ತಿಲ್ಲ. ಅದಕ್ಕೆ ಜೈಲು ಅಂದ್ರೆ ಏನು, ಜೈಲಿನಲ್ಲಿ ಹೇಗಿರುತ್ತೆ ಎಂದು ತಾತನ ಬಳಿ ಕೇಳಿದ್ದಾಳೆ. ತಾತ, ಆ ಜೈಲಿನ ಕರಾಳ ಜೀವನವನ್ನು ತಿಳಿಸಿದ್ದಾರೆ. ಜೈಲಿನಲ್ಲಿ ಹಿಂಸೆ ಕೊಡೋದು, ಒಂಟಿ ಜೀವನ ಎಲ್ಲವನ್ನು ಕೇಳಿ ಸಿಹಿಗೆ ಆತಂಕ ಹೆಚ್ಚಾಗಿದೆ. ಕಣ್ಣಲ್ಲಿ ನೀರು ಬಂದಿದೆ.
ರಾಮ್ ಸೀತೆಯನ್ನು ಕೈ ಬಿಡುತ್ತಾನಾ?
ರಾಮ್ ತನ್ನ ಚೋಟಾ ಫ್ರೆಂಡ್‌ಗಾಗಿ ಸದಾ ಸಹಾಯಕ್ಕೆ ನಿಲ್ಲುತ್ತಾನೆ. ಈಗ ಮನೆಗೆ ನೋಟೀಸ್ ಬಂದಿರುವ ವಿಚಾರದಲ್ಲೂ ಅಷ್ಟೇ. ಹೇಗಾದರೂ ಮಾಡಿ ನಾನು ಸಹಾಯ ಮಾಡುತ್ತೇನೆ ಎಂದು ಸೀತಾಗೆ ಮಾತು ಕೊಟ್ಟು ಬಂದಿದ್ದಾನೆ. ಅದರಂತೆ ಸೀತಾ ಜೊತೆಗೆ ರಾಮ್ ನಿಂತೇ ನಿಲ್ಲುತ್ತಾನೆ. ಈಗಾಗಲೇ ಸೀತಾ ಮಾತಿನಂತೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಅಷ್ಟೇ ಯಾಕೆ ತಾನೇ ಅಡುಗೆ ಮನೆಗೆ ಹೋಗಿ ಕಾಫಿಯನ್ನು ಮಾಡಿದ್ದಾನೆ. ತಾತನಿಗೆ, ಫ್ರೆಂಡ್‌ಗೆ ಕಾಫಿ ಕೊಟ್ಟು ಮಿಡಲ್ ಕ್ಲಾಸ್ ಲೈಫ್ ಬಗ್ಗೆ ಪಾಠ ಮಾಡಿದ್ದಾನೆ. ಸಿಹಿಯ ಅರಮನೆ ಕನಸು ನನಸಾಗುತ್ತದೆ ಎಂದೇ ಮಾತು ಕೊಟ್ಟಿದ್ದ ರಾಮ್, ಈಗ ಆ ಕನಸನ್ನು ನನಸು ಮಾಡಲು ದಾರಿ ಹುಡುಕುತ್ತಾನೆ.


Click it and Unblock the Notifications











