Seetha Rama: ರಾಮ-ಸೀತಾ ಇಂದಿನಿಂದ ಅಕ್ಕಪಕ್ಕ.. ಸಿಹಿ ಮಾಡಿದ ಚಪಾತಿಯಿಂದ ಹೊಸ ಬಂಧ ಆರಂಭ?
'ಸೀತಾ ರಾಮ' ಈಗೀಗ ಫ್ರೆಂಡ್ಸ್ ಆಗುತ್ತಿದ್ದಾರೆ. ಆಫೀಸಲ್ಲಿ ಆಗುತ್ತಿರುವ ಅನಾಹುತಗಳನ್ನು ಕಂಡು ಹಿಡಿಯುವುದಕ್ಕೆಂದೇ ರಾಮ ಸಾಮಾನ್ಯ ಕೆಲಸಗಾರನಾಗಿ ಸೇರಿಕೊಂಡಿದ್ದಾನೆ. ಚಿಕ್ಕಮ್ಮನೇ ಮಾಡಿರುವ ಮೋಸವನ್ನು ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ. ಆದರೂ, ಕಂಡು ಹಿಡಿಯುವುದು ರಾಮನಿಗೆ ಕಷ್ಟವೇನು ಆಗುವುದಿಲ್ಲ. ಹೀಗಾಗಿಯೇ ದಾರಿಯನ್ನು ಸುಗಮ ಮಾಡಿಕೊಳ್ಳುತ್ತಿದ್ದಾನೆ.
ತನ್ನ ಸ್ನೇಹಿತನನ್ನೇ ಆಫೀಸಿನ ಎಂಡಿ ಮಾಡಿದ್ದಾನೆ. ತಾನೂ ಎಂಡಿಯ ಸ್ನೇಹಿತನಾಗಿದ್ದಾನೆ. ಬಂದಾಗಿನಿಂದ ಸೀತಾಳ ಮೇಲೆ ಏನೋ ಒಂಥರ ಸ್ಪೆಷಲ್ ಕಾಳಜಿ. ಸೀತಾಳ ಮಗಳು ಸಿಹಿ ಬೇರೆ ಫ್ರೆಂಡ್ ಆಗಿ ಬಿಟ್ಟಿದ್ದಾಳೆ. ಹೀಗಾಗಿ ಸೀತಾಳ ಬಗೆಗೆ ವಿಶೇಷ ಒಲವು ತೋರುವುದಕ್ಕೆ ಶುರು ಮಾಡಿದ್ದಾನೆ.

ರಾಮ್-ಸೀತಾ ಈಗ ಅಕ್ಕಪಕ್ಕ
ರಾಮ್ ಸದ್ಯ ತನ್ನದೇ ಆಫೀಸಲ್ಲಿ ಕೆಲಸಗಾರನಾಗಿ ಸೇರಿಕೊಂಡಿದ್ದಾನೆ. ಆಫೀಸಲ್ಲಿ ಮ್ಯಾನೇಜರ್ ಆಗಿರುವ ವ್ಯಕ್ತಿ ಏನೋ ಗೇಮ್ ಆಡುತ್ತಿದ್ದಾನೆ ಅನ್ನೋದು ತಾತ ಮೊಮ್ಮಗನಿಗೆ ಗೊತ್ತಾಗಿದೆ. ಹೀಗಾಗಿಯೇ ಆಫೀಸಲ್ಲಿ ಯಾರಿಗೂ ತಿಳಿಯದಂತೆ ರಾಮ್ ಸೇರಿಕೊಂಡಿದ್ದಾರೆ. ಈಗ ಆಫೀಸಲ್ಲಿ ರಾಮ್‌ಗೆ ಕುಳಿತುಕೊಳ್ಳುವುದಕ್ಕೆ ಒಂದು ಜಾಗ ಬೇಕಾಗಿದೆ. ಆದರೆ, ಆ ಜಾಗ ಸೀತೆಯ ಪಕ್ಕದಲ್ಲಿಯೇ ಸಿಕ್ಕಿರುವುದು ವಿಶೇಷ. ಆಫೀಸಲ್ಲೆಲ್ಲಾ ಹುಡುಕಾಡಿ, ಕಡೆಗೆ ಒಂದು ಜಾಗ ಕಣ್ಣಿಗೆ ಕಂಡಿದೆ. ಅಲ್ಲಿಗೆ ಬಂದು ಆಸೀನರಾಗಿ ಆಗಿದೆ.
ರಾಮ್‌ಗೆ ಸಹಾಯ ಮಾಡಿದ ಸೀತಾ
ಮೊದ ಮೊದಲಿಗೆ ರಾಮ್‌ಗೆ ಆ ಜಾಗದಲ್ಲಿ ಕೂರುವುದಕ್ಕೆ ಕಷ್ಟವಾಗಿತ್ತು. ಸೀತೆ ಹೊಸ ಪರಿಚಯ. ಸಿಹಿಯೇನೋ ಫ್ರೆಂಡ್. ಆದರೆ, ಸೀತಾ ಅಷ್ಟು ಕ್ಲೋಸ್ ಅಲ್ಲ. ಹೀಗಾಗಿಯೇ ಸೀತಾ ಪಕ್ಕದಲ್ಲಿ ಇದ್ದ ಜಾಗದಲ್ಲಿ ಕುಳಿತುಕೊಳ್ಳುವುದಕ್ಕೆ ಹಿಂಜರಿಕೆ ಮಾಡಿದ್ದ. ಆಗ ಬಾಸ್ ಅಂತ ಹೇಳುತ್ತಿರುವ ಫ್ರೆಂಡ್, ರಾಮನ ಬಳಿ ಬಂದು, ಇದೇ ನಿನ್ನ ಜಾಗ ರಾಮ್. ಇನ್ಮುಂದೆ ರಾಮ್ ಇಲ್ಲಿಯೇ ಕುಳಿತುಕೊಳ್ಳುತ್ತಾರೆ ಅಂತ ಹೇಳಿ ಎಲ್ಲರಿಗೂ ಪರಿಚಯ ಮಾಡಿಸಿ ಆಗಿದೆ.

ರಾಮ್ ಜೊತೆ ಊಟ ಹಂಚಿಕೊಂಡ ಸೀತಾ
ರಾಮ್ ತನ್ನ ವಸ್ತುಗಳನ್ನೆಲ್ಲಾ ಒಂದು ಬುಟ್ಟಿಯಲ್ಲಿ ಹಾಕಿಕೊಂಡು ಬಂದು, ಸೀತಾಳ ಪಕ್ಕದಲ್ಲಿಯೇ ಕುಳಿತುಕೊಂಡ. ಆದರೆ, ಯಾವ ವಸ್ತುಗಳನ್ನು ಎಲ್ಲಿ ಇಡಬೇಕು ಅನ್ನೋದು ಗೊತ್ತಾಗದೆ ತಡಕಾಡುತ್ತಿದ್ದ. ಹಾಗೇ ಲ್ಯಾಪ್ ಟಾಪ್ ಪ್ಲಗ್ ಹಾಕುವುದಕ್ಕೂ ತಿಣುಕಾಡುತ್ತಿದ್ದ. ಇದೆಲ್ಲವನ್ನು ನೋಡಿದ ಸೀತಾ, ತಾನೇ ಮುಂದೆ ಹೋಗಿ ಸಹಾಯ ಮಾಡಿದಳು. ಅಷ್ಟರ ಒಳಗೆ ಊಟದ ಸಮಯವಾಗಿತ್ತು. ರಾಮ್ ಫ್ರೆಂಡ್ ಬಂದು ಊಟಕ್ಕೆ ಕರೆದಾಗ, ಸೀತಾನೇ ಅವರು ಇವತ್ತು ನಮ್ಮ ಜೊತೆಗೆ ಊಟ ಮಾಡ್ತಾರೆ ಅಂತ ಹೇಳಿದಳು.
ರಾಮ್‌ನನ್ನು ರೇಗಿಸಿದ ತಾತ
ಎಲ್ಲರೂ ಊಟಕ್ಕೆ ಕುಳಿತಿದ್ದಾಗ ರಾಮ್ ಕೂಡ ಸೀತಾ ಮತ್ತು ಪ್ರಿಯಾಳ ಜೊತೆಗೆ ಊಟಕ್ಕೆ ಕುಳಿತ. ಅಲ್ಲಿಗೆ ತಾತ ಕೂಡ ಬಂದರೂ. ಓ ಏನಪ್ಪ ನೀನು ಇವತ್ತು ಅಲ್ಕಿನೇ ಊಟ ಮಾಡ್ತೀಯ ಅಂತ ಕೇಳಿದಾಗ, ಹೌದು, ಸರ್ ಅವ್ರು ಇವತ್ತು ಮೊದಲ ದಿನ ಅಲ್ವಾ. ಅವರು ಬಾಕ್ಸ್ ತಂದಿಲ್ಲ. ಹೀಗಾಗಿ ನಮ್ಮ ಜೊತೆಗೆ ಊಟ ಮಾಡುತ್ತಾರೆ ಎಂದಿದ್ದಾಳೆ. ಆಗ ತಾತ, ರಾಮ್‌ನನ್ನು ರೇಗಿಸಿದ್ದಾರೆ. ನಮ್ಮ ಮನೆಯಂದು ಸ್ವಲ್ಪ ರುಚಿ ನೋಡಿ ಅಂತ ಹೇಳಿದ್ದಾರೆ. ಅದನ್ನು ಕೇಳಿ ರಾಮ್‌ಗೆ ಊಟ ನೆತ್ತಿಗೇರಿದೆ. ಅದರ ಮಧ್ಯೆ ಸೀತಾ ಬಾಕ್ಸ್‌ನಲ್ಲಿ ಸಣ್ಣ ಚಪಾತಿ ನೋಡಿ ಖುಷಿಯಾಗಿದ್ದಾನೆ. ಅದನ್ನು ಸಿಹಿಯೇ ಮಾಡಿದ್ದು ಎಂದು ಗೊತ್ತಾದಾಗ ಇನ್ನಷ್ಟು ಖುಷಿಯಾಗಿದ್ದಾನೆ.


Click it and Unblock the Notifications











