Seetha Rama Serial: ವೀಕ್ಷಕರ ಮನಸ್ಸು ಗೆದ್ದ 'ಸೀತಾ ರಾಮ' ಧಾರಾವಾಹಿಯ ಸಿಹಿ.. ಡಾಕ್ಟರ್ ಆಗ್ಬೇಕಂತೆ!
ಸಿಹಿಯ ಮಾತುಗಳೇ ಹೆಚ್ಚಾಗಿ ಸಿಹಿಯಾಗಿರುತ್ತೆ. ಸಿಹಿ ಬರೀ ಸ್ವೀಟ್ ಮಾತ್ರವಲ್ಲ. ಸಿಕ್ಕಾಪಟ್ಟರ ಧೈರ್ಯವಂತೆ. ಆದರೆ, ಅವರಮ್ಮ ಸೀತಾಗೆ ಆ ಧೈರ್ಯ ಇಲ್ಲ. ವಿಪರೀತ ಭಯ ಪಡುತ್ತಾಳೆ. ಮಗಳ ವಿಚಾರದಲ್ಲಿ ಸಂಕಟ ಪಡುತ್ತಾಳೆ. ಸಿಹಿ ಯಾವತ್ತಿಗೂ ಅಮ್ಮನ ಮಾತು ಮೀರುವುದೇ ಇಲ್ಲ. ಇದು ಬೇಡ ಅನ್ಸಿದ್ರೆ ಬೇಡ. ಅಷ್ಟೇ, ಆ ರೀತಿ ಬೆಳೆದಿರುವ ಸಿಹಿ, ಅಮ್ಮನಿಗೆ ಮುದ್ದಿನ ಮಗಳು.
ಸಿಹಿಗೆ ಹುಟ್ಟಿದಾಗಿನಿಂದ ಸಕ್ಕರೆ ಕಾಯಿಲೆ ಇದೆ. ಹೀಗಾಗಿ ಸ್ವಲ್ಪ ತಿಂದರೆ ಹೆಚ್ಚು, ಸ್ವಲ್ಪ ತಿಂದರೆ ಕಡಿಮೆ ಎಂಬಂತ ಪರಿಸ್ಥಿತಿ. ಎಷ್ಟೇ ಆಸೆಯಾದರೂ ಸಿಹಿ ಕೂಡ ಇಂಥದ್ದು ಬೇಕು ಅನ್ನಲ್ಲ. ವರ್ಷಕ್ಕೆ ಒಂದೇ ಬಾರಿ ಕೇಕು ತಿನ್ನೋದು, ಐಸ್ ಕ್ರೀಂ ತಿನ್ನೋದು. ಆದರೂ, ಸೀತಮ್ಮನಿಗೆ ಭಯ ತಪ್ಪಿದ್ದಲ್ಲ.

ಸೀತಾಳಿಗೆ ಮಗಳದ್ದೇ ಚಿಂತೆ
ಸಿಹಿಗೆ ಚಾಕ್ಲೇಟ್, ಕೇಕ್ ತಿನ್ನುವುದಕ್ಕೆ ಇರುವುದು ಒಂದೇ ಅವಕಾಶ. ಅದು ವರ್ಷಕ್ಕೆ ಒಮ್ಮೆ ಬರುವ ಹುಟ್ಟುಹಬ್ಬದ ದಿನ. ಶುಗರ್ ಲೆವೆಲ್ ಜಾಸ್ತಿ ಇರುವ ಕಾರಣ, ಸೀತಮ್ಮ ಆಹಾರ ಕ್ರಮವನ್ನು ಚಾಚು ತಪ್ಪದೆ ಮಾಡುತ್ತಾಳೆ. ಸಿಹಿಗೆ ಹೆಸರಲ್ಲಷ್ಟೇ ಸಿಹಿ. ಆದರೆ, ತಿನ್ನುವುದಕ್ಕೆ ಸಿಹಿಯನ್ನು ನೀಡುವುದೇ ಇಲ್ಲ. ಹುಟ್ಟುಹಬ್ಬದ ದಿನ ಕೇಕ್ ತಿಂದ ಪರಿಣಾಮ ಗಾಬರಿಗೊಂಡ ಸೀತಾ, ಸಿಹಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ.
ಇಂಜೆಕ್ಷನ್ ಹಾಕುವಾಗ ಸಂಕಟ
ಸಿಹಿಗೆ ಶುಗರ್ ಲೆವೆಲ್ ಜಾಸ್ತಿಯಾಗಿದೆ. ಪ್ರತಿ ದಿನ ಸೀತಮ್ಮ ಇಂಜೆಕ್ಷನ್ ಹಾಕುತ್ತಾಳೆ. ಅದು ಸಿಹಿಗೆ ನೋವಾದರೂ ತೋರಿಸಿಕೊಳ್ಳಲ್ಲ. ಆದರೆ ಹೆತ್ತ ಕರುಳು ಸೀತಾಳಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಡಾಕ್ಟರ್ ಬಳಿ ಅದಕ್ಕೊಂದು ಪರಿಹಾರ ಇಲ್ವಾ ಎಂದು ಕೇಳಿದ್ದಾಳೆ. ಆದರೆ, ಸಿಹಿಗೆ ಹೆಚ್ಚಾಗಿರುವ ಸಕ್ಕರೆ ಕಾಯಿಲೆಗೆ ಇನ್ಸುಲಿನ್ ಹಾಕಲೇಬೇಕಾಗಿದೆ.

ಸಿಹಿ ಸೀಕ್ರೆಟ್ ಚೆಕ್ ಮಾಡಿದ ಡಾಕ್ಟರ್
ಡಾಕ್ಟರ್‌ಗೆ ಸಿಹಿ ಅಂದ್ರೆ ಇಷ್ಟ. ಸಿಹಿಗೆ ಡಾಕ್ಟರ್ ಅಂದ್ರೆ ಇಷ್ಟ. ಡಾಕ್ಟರ್ ಬರುವಾಗ ಕಣ್ಣಾ ಮುಚ್ಚಾಲೆ ಆಟ ಆಡಿದ್ದಳು. ಚೆಕ್ ಮಾಡುವಾಗ, "ತನಗೇನು ಆಗಿಲ್ಲ. ಆದರೆ, ಸೀತಮ್ಮ ತುಂಬಾ ಭಯ ಪಡ್ತಾಳೆ. ನಾನು ಕೇಕು, ಐಸ್ ಕ್ರೀಂ ತಿಂದಿದ್ದಕ್ಕೆ ಸಾರಿ. ಹು ಆಂಟಿ ನಾನು ಜಾಸ್ತಿ ತಿಂದಿಲ್ಲ. ಮೂರ್ತಿ ತಾತ ಕೊಡಿಸಿದ ಚಾಕೊಲೇಟ್‌ನ ಫ್ರೆಂಡ್ಸ್ ಗೆಲ್ಲಾ ಕೊಟ್ಟೆ. ನಾನು ಮಾತ್ರ ಒಂದು ತಿಂದಿಲ್ಲ" ಅಂತ ಸೀತಾಗೆ ಗೊತ್ತಿಲ್ಲದ ಸೀಕ್ರೆಟ್ ಹೇಳಿ ತಗಲಾಕಿಕೊಂಡಿದ್ದಾಳೆ.
ತಾನೂ ಡಾಕ್ಟರ್ ಆಗ್ತೀನಿ ಎಂದ ಸಿಹಿ
ಸಿಹಿ ಕೇಕು, ಐಸ್ ಕ್ರೀಂ ತಿಂದಿದ್ದಾಳೆ ಎಂಬ ಭಯಕ್ಕೆ ಸೀತಾ ಕರೆದುಕೊಂಡು ಬಂದಿದ್ದಾಳೆ. ಡಾಕ್ಟರ್ ಕೂಡ ಚೆಕಪ್ ಮಾಡಿದ್ದಾರೆ. ಆದ್ರೆ ಯಾವುದೇ ಸಮಸ್ಯೆ ಆಗಿಲ್ಲ. ಸಿಹಿಗೂ ವೈದ್ಯರಂತೆ ರೋಗಿಗಳನ್ನು ಚೆಕ್ ಮಾಡುವ ಹಂಬಲ. ಅದಕ್ಕೆ ಅವಳೇ ಕಿವಿಗೆ ಹಾಕಿಕೊಂಡು ತನ್ನ ದೇಹ ಪರಿಶೀಲನೆ ಮಾಡಿಕೊಂಡಿದ್ದಾಳೆ. ಆಗ, "ನಾನು ಮುಂದೆ ಓದಿ ಡಾಕ್ಟರ್ ಆಗ್ತೀನಿ. ಡಾಕ್ಟರ್ ಆದ್ಮೇಲೆ ಶುಗರ್‌ಗೆ ಮೆಡಿಸಿನ್ ಕಂಡು ಹಿಡಿತೀನಿ. ಯಾಕಂದ್ರೆ, ಇನ್ಸುಲಿನ್ ಹಾಕುವಾಗ ನಮ್ಮ ಅಮ್ಮನ ಥರ ಯಾರು ಅಳಬಾರದು" ಎಂದಿದ್ದಾಳೆ. ಆ ಮಾತು ಸೀತಮ್ಮನಿಗೆ ಇನ್ನಷ್ಟು ಸಂಕಟ ತಂದಿದೆ. ಬಳಿಕ ಡಾಕ್ಟರ್ ಸಿಹಿಯನ್ನು ಹೊರಗೆ ಕಳುಹಿಸಿ, ಸೀತಾಗೆ ಸಮಾಧಾನ ಮಾಡಿದ್ದಾರೆ. ಏನು ಆಗಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.


Click it and Unblock the Notifications











