Seetha Rama Serial: ಸೀತಾ ಬದಲಿಗೆ ಪ್ರಿಯಾ ಅಕೌಂಟ್‌ಗೆ ಹಣ.. ವೀಕ್ಷಕರ ಮನಸ್ಸಿಗೂ ಕಸಿವಿಸಿ.. ಏನಾಗ್ತಿದೆ?

By ಎಸ್ ಸುಮಂತ್

ಧಾರಾವಾಹಿ ಅನ್ನೋದೆ ಹಾಗೇ ಪ್ರತಿದಿನ ನೋಡುಗರಿಗೆ ಅದೊಂದು ಅಕ್ಕಪಕ್ಕದ ಮನೆಯ ಕಥೆಯಂತೆಯೇ ಮನಸ್ಸಲ್ಲಿ ಭಾವನೆ ಹುಟ್ಟು ಹಾಕಿರುತ್ತದೆ. ಧಾರಾವಾಹಿಯ ಹಿಂದೆ ಡೈರೆಕ್ಟರ್, ಆಕ್ಟರ್‌ಗಳು ಇರುತ್ತಾರೆ. ಕಥೆ ಹೆಣೆದಂತೆ ಸಾಗುತ್ತದೆ ಅನ್ನೋದನ್ನೇ ಮರೆತು ಯಾರಿಗಾದರೂ ಅನ್ಯಾಯವಾಗಿದೆ ಎಂದಾಕ್ಷಣಾ‌ ಅಯ್ಯೋ, ಪಾಪ ಅಂತ ಸಿಂಪತಿ ತೋರಿಸುವುದಕ್ಕೆ ಶುರು ಮಾಡಿ ಬಿಡುತ್ತೀವಿ. ಕೆಲವೊಮ್ಮೆ ಯಾರ ಬಳಿಯಾದರೂ ಮಾತನಾಡುವಾಗಲೂ ಅಷ್ಟೇ ರಿಯಲ್ ಸ್ಟೋರಿ ಎಂಬಂತೆ ಕಥೆಯನ್ನು ಹೇಳುತ್ತಾ ಇರುತ್ತಾರೆ. ಕಡೆಯಲ್ಲಿ ಅದು ಸೀರಿಯಲ್ ಸ್ಟೋರಿ ಅನ್ನೋದು ಗೊತ್ತಾಗಿರುತ್ತೆ.

ಇಷ್ಟೆಲ್ಲ ಹೇಳುವುದಕ್ಕೆ ಕಾರಣ 'ಸೀತಾರಾಮ' ಧಾರಾವಾಹಿಯ ಇಂದಿನ ಎಪಿಸೋಡ್. ಮನಸ್ಸಿಗೆ ತುಂಬಾ ಘಾಸಿಗೊಳಿಸಿದಂತಹ, ಬೇಸರ ಉಂಟು ಮಾಡಿದಂತಹ, ಅಯ್ಯೋ ಪಾಪ ಎಂದು ಕೊರಗುವಂತೆ ಮಾಡಿದ ಎಪಿಸೋಡ್. ಸದ್ಯಕ್ಕೆ ಜೀ ಕನ್ನಡದಲ್ಲಿ ಪ್ರೋಮೋ ನೋಡಿನೇ ಹಲವರು ನೊಂದುಕೊಳ್ಳುತ್ತಿದ್ದಾರೆ.

seetha-rama-serial

ಸೀತಾ ಮನೆ ಉಳಿಸಲು ರಾಮ್ ಪ್ರಯತ್ನ

ರಾಮ್‌ಗೆ ಜೀವನ ಅಂದರೆ ಏನು ಅನ್ನುವುದು ಸೀತಾಳಿಂದ ಅರ್ಥವಾಗಿದೆ. ಅಷ್ಟೇ ಅಲ್ಲ ಪುಟಾಣಿ ಸಿಹಿಗಾಗಿ ಯಾವ ಸಹಾಯ ಬೇಕಾದರೂ ಮಾಡುತ್ತಾನೆ. ಸಿಹಿಗೆ ಮನೆ ಎಂದರೆ ಪ್ರಾಣ. ಹೀಗಾಗಿಯೇ ರಾಮ್ ಆ ಮನೆ ಉಳಿಸಿಕೊಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾನೆ.

ಸೀತಾಗೆ ತಲೆ ತಿನ್ನುತ್ತಿರುವ ಅತ್ತಿಗೆ

ಮೊದಲೇ ಬಾಡಿಗೆ ಮನೆ ಸಿಗುತ್ತಿಲ್ಲ, ಮನೆ ಮಾರಾಟ ಹೇಗೆ ಎಂದೆಲ್ಲಾ ಸೀತಾ ತಲೆ ಕೆಡಿಸಿಕೊಂಡು ಕುಳಿತಿದ್ದರೆ, ಸೀತಾಳ ಅತ್ತಿಗೆಯದ್ದೇ ದೊಡ್ಡ ತಲೆನೋವಾಗಿದೆ. ರುದ್ರಪ್ರತಾಪನ ಬಳಿ ಹಣ ಪಡೆದು, ಸೀತಾಳಿಗೆ ಅವನನ್ಬು ಕಟ್ಟಬೇಕು ಎಂದು ಓಡಾಡುತ್ತಿದ್ದಾಳೆ. ಆದರೆ ಸೀತಾ ಅದಕ್ಕೆ ಸೊಪ್ಪು ಹಾಕದೆ ಇದ್ದ ಕಾರಣ, ಮನೆ ಹರಾಜಿಗೆ ಬರುತ್ತಲ್ಲ ಎಂದು ಟೆನ್ಶನ್ ಕೊಡೋಕೆ ಶುರು ಮಾಡಿದ್ದಾಳೆ.

seetha-rama-serial

ಭಾರ್ಗವಿಯಿಂದ ಹೊಸ ಆಟ ಶುರು

ಭಾರ್ಗವಿಗೆ ರಾಮ ತನ್ನ ಕಂಟ್ರೋಲ್‌ನಲ್ಲಿಯೇ ಇರಬೇಕು ಎಂಬ ಹಠ. ಆದರೆ ಜನ್ಮಾಷ್ಠಮಿಯಂದು ಎದ್ದು ಹೋದ ಮೇಲಂತೂ ಹತೋಟಿಗೆ ಸಿಗುವುದಿಲ್ಲ ಅನ್ನುವುದು ಗೊತ್ತಾಗಿದೆ. ಹೀಗಾಗಿ ಹೊಸ ಆಟ ಶುರು ಮಾಡಿದ್ದಾರೆ. ಅದರ ಮೊದಲ ಹೆಜ್ಜೆಯೇ ಸೀತಾಳ ಅಡ್ವಾನ್ಸ್ ಸ್ಯಾಲರಿಯ ಮೇಲೆ ಆಟವಾಡಿದ್ದಾಳೆ. ರಾಮ್‌ಗೆ ಸಿಕ್ಕಾಪಟ್ಟೆ ಟೆನ್ಶನ್. ಸೀತಾಳ ಮೊಬೈಲ್ ಅನ್ನೇ ನೋಡುತ್ತಾ ಕೂತಿದ್ದಾನೆ. ನಿರೀಕ್ಷೆ ಮಾಡಿದಂತೆ ಸ್ಯಾಲರಿ ಇಷ್ಟೊತ್ತಿಗೆ ಕ್ರೆಡಿಟ್ ಆಗಬೇಕಿತ್ತು. ಆದರೆ ಮೊಬೈಲ್‌ಗೆ ಮೆಸೇಜ್ ಬಂದಿಲ್ಲ. ಪಕ್ಕದಲ್ಲಿಯೇ ಇದ್ದ ಪ್ರಿಯಾಳ ಮೊಬೈಲ್ ಮೆಸೇಜ್ ಬಂದಿದೆ. 25 ಲಕ್ಷ ಅಮೌಂಟ್ ಕ್ರೆಡಿಟ್ ಆಗಿದೆ.

ರಾಮ್‌ಗೆ ಶುರುವಾಯ್ತು ಹೊಸ ಚಾಲೆಂಜ್

ಪ್ರಿಯಾ ಅಂದುಕೊಂಡಿದ್ದು ಬಾಸ್ ಲವ್ ಆಗಿ ಹಾಕಿದ್ದಾರೆ ಅಂತ. ಅದನ್ನು ಅಷ್ಟೇ ಖುಷಿಯಿಂದ ರಾಮ್‌ಗೂ ಹೇಳಿದ್ದಾಳೆ. ರಾಮ್ ಕೋಪ, ಬೇಸರ ಎರಡು ಒಟ್ಟೊಟ್ಟಿಗೆ ಆಗಿದೆ. ಯಾಕಂದ್ರೆ, ಸೀತಾಳಿಗೆ ಬರಬೇಕಿದ್ದ ಹಣದ ಕಡೆ ಗಮನ ಕೊಡುವುದನ್ನು ಬಿಟ್ಟು, ಪ್ರಿಯಾಗೆ ಹಾಕಿರುವುದು. ಈಗ ಪ್ರಿಯಾಳ ಅಕೌಂಟ್‌ನಿಂದ ಸೀತಾಳ ಅಕೌಂಟ್‌ಗೆ ಹಣ ಕಳುಹಿಸುವುದೇ ರಾಮ್ ಮುಂದೆ ಇರುವ ದೊಡ್ಡ ಚಾಲೆಂಜ್. ಇದೆಲ್ಲ ಸರಿ ಮಾಡುವುದಕ್ಕೆ ಭಾರ್ಗವಿ ಅಡ್ಡಗಾಲು ಸ್ಟ್ರಾಂಗ್ ಆಗಿದೆ. ರಾಮ್ ಬುದ್ದಿವಂತಿಕೆ ಈಗ ಎಷ್ಟು ವರ್ಕೌಟ್ ಆಗುತ್ತೆ ಎಂಬುದನ್ನು ನೋಡಬೇಕಿದೆ.

More from Filmibeat

English summary
Seetha Rama Serial Written Update on September 12th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X