Seetha Rama Serial: ಟೆನ್ಶನ್‌ನಲ್ಲಿ ರಾಮ.. ಸಂತಸದಲ್ಲಿ ಭಾರ್ಗವಿ.. ಸೀತಾ ಸ್ಥಿತಿ ಏನು..?
ಸೀತಾಳಿಗೆ ಮನೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಮನೆ ಮಾರುವುದಕ್ಕೆ ಸೀತಾ ಸಿದ್ಧಳಾಗಿದ್ದಾಳೆ. ಆದರೆ, ರಾಮ್ ತಡೆಯುತ್ತಿದ್ದಾನೆ. ಅಡ್ವಾನ್ಸ್ ಸ್ಯಾಲರಿ ಕೊಡಿಸುವ ಭರವಸೆ ನೀಡಿದ್ದಾನೆ. ಅದರ ಪ್ರಯತ್ನವೂ ನಡೆಯುತ್ತಿದೆ. ಆದರೆ, ಭಾರ್ಗವಿ ತನ್ನ ಅಸಲಿ ಆಟ ಶುರು ಮಾಡಿದ್ದಾಳೆ. ಸ್ಯಾಲರಿ ಏನೋ ಬಂದಿದೆ. ಆದರೆ ಅದು ಸೀತಾಗಲ್ಲ. ಸೀತಾ ಫ್ರೆಂಡ್‌ಗೆ.
ಸೀತಾಳಿಗೆ ಅತ್ತಿಗೆಯ ಕಾಟ ಒಂದು ಕಡೆ. ಪದೇ ಪದೇ ಲಾಯರ್‌ನ ಮದುವೆಯಾಗು ಎಂಬ ಮಾತನ್ನೇ ಹೇಳುತ್ತಿದ್ದಾಳೆ. ಆದರೆ, ಸೀತಾಳಿಗೆ ಅದು ಇಷ್ಟವಿಲ್ಲ. ಆಫೀಸಿನ ತನಕ ಹುಡುಕಿಕೊಂಡು ಬಂದಿದ್ದಾಳೆ. ಸೀತಾಗೆ ಅತ್ತಿಗೆಯನ್ನು ನಿಭಾಯಿಸುವುದೇ ದೊಡ್ಡ ಸಾಹಸವಾಗಿತ್ತು.

ಪ್ರಿಯಾಗೆ ಹಣ ಹೋಗಿದ್ದು ಹೇಗೆ..?
ಭಾರ್ಗವಿಯ ಪ್ಲ್ಯಾನ್ ಪ್ರಕಾರ ಚರಣ್.ಡಿ ಹಣವನ್ನು ಬದಲಾಯಿಸಿದ್ದಾನೆ. ಸೀತಾಳ ಅಕೌಂಟ್‌ಗೆ ಹೋಗುವ ಬದಲು ಪ್ರಿಯಾಳ ಅಕೌಂಟ್‌ಗೆ ಹಾಕಿಸಿದ್ದಾನೆ. ಪ್ರಿಯಾಳಿಗೆ ಕುಣಿಯುವಂತೆ ಆಗಿದೆ. ಹಣ ಬಂದಿದ್ದಕ್ಕೆ ಬಾಸ್ ನನ್ನ ಮೇಲಿನ ಲವ್‌ಗೆ ಹಾಕಿದ್ದಾರೆ ಎಂದುಕೊಂಡು ರಾಮ್ ಬಳಿ ಹೇಳಿದ್ದಾಳೆ. ಅಷ್ಟು ಸಮಯ ತಣ್ಣಗಿದ್ದ ರಾಮ್‌ಗೆ ಟೆನ್ಶನ್ ಜಾಸ್ತಿಯಾಗಿದೆ. ಅಶೋಕನ ಬಳಿ ಜೋರು ಗಲಾಟೆ ಮಾಡಿದ್ದಾನೆ. ಎಲ್ಲಾ ಡಾಕ್ಯುಮೆಂಟ್ ನೋಡಿದ್ದೀಯ ಅಲ್ವಾ. ಈಗ ಹೇಗಾಯ್ತು ಅಂತ. ಆದರೆ ಅಶೋಕನಿಗೂ ಇದು ಗೊತ್ತಿಲ್ಲ.
ಅಶೋಕನಿಗೆ ತಲೆ ತಿನ್ನುತ್ತಿರುವ ರಾಮ
ಸದ್ಯಕ್ಕೆ ಸೀತಾಳ ಬಳಿ ಮನೆ ಉಳಿಸಿಕೊಳ್ಳುವುದಕ್ಕೆ ಜಾಸ್ತಿ ಸಮಯ ಇಲ್ಲ. ರಿಮೈಂಡರ್ ನೋಟೀಸ್ ಕೂಡ ಬಂದಿದೆ. ಹೀಗಾಗಿ ಆ ಕಡಿಮೆ ಸಮಯದಲ್ಲಿ ಹಣ ಒದಗಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ಆಗಿರುವ ಸಮಸ್ಯೆಯನ್ನು ಪಕ್ಕಕ್ಕೆ ಇಟ್ಟು ಈಗ ಮತ್ತೆ ಸೀತಾಳ ಅಕೌಂಟ್‌ಗೆ ಹಣ ಹಾಕುವಂತೆ ರಾಮ್ ಒತ್ತಾಯಿಸುತ್ತಿದ್ದಾನೆ. ಆದರೆ, ಆ ಅವಕಾಶ ತುಂಬಾ ಕಡಿಮೆ ಇದೆ.

ರುದ್ರಪ್ರತಾಪನಿಗೂ ಶಾಕ್ ಕೊಟ್ಟ ಸೀತಾ
ಆ ಕಡೆ ಎಲ್ಲಾ ನಾಟಕವನ್ನು ರುದ್ರಪ್ರತಾಪನೇ ಆಡಿಸುತ್ತಿರುವ ಕಾರಣ, ಈಗ ಮನೆ ಕೊಂಡುಕೊಳ್ಳುವುದಕ್ಕೂ ಪಾರ್ಟಿಯನ್ನು ಅವನೇ ಹುಡುಕಿದ್ದಾನೆ. ಆದರೆ, ಈಗ ಸೀತಾ ಮನೆ ಮಾರುವುದಕ್ಕೆ ರೆಡಿ ಇಲ್ಲ. ಅದನ್ನು ರುದ್ರಪ್ರತಾಪನಿಗೆ ಹೇಳಿದ್ದೇ ತಡ ಕೆಂಡಾಮಂಡಲನಾಗಿದ್ದಾನೆ. ಆಫೀಸಿಂದ ಹಣ ಸಿಗುವುದಕ್ಕೆ ಬಹಳ ಸಮಯ ಆಗುತ್ತೆ. ಆಮೇಲೆ ಅತ್ತ ಮನೆಯೂ ಇಲ್ಲ, ಇತ್ತ ಪಾರ್ಟಿಯೂ ಸಿಗಲ್ಲ ಎಂದೇ ಹೆದರಿಸಿದ್ದಾನೆ. ಸೀತಾ ಬೇಗ ಗೊಂದಲ ಮಾಡಿಕೊಳ್ಳುತ್ತಾಳೆ. ಈಗ ಮನೆ ಮಾರುವುದಾ..? ಆಫೀಸಿಂದ ಬರುವ ಸ್ಯಾಲರಿಗೆ ಕಾಯುವುದಾ ಎಂಬ ಗೊಂದಲಕ್ಕೆ ಬಿದ್ದಿದ್ದಾಳೆ.
ಭಾರ್ಗವಿಯಿಂದ ಸೀತಾಳ ಜೀವನ ಏನಾಗುತ್ತೋ..?
ಮನೆಯಲ್ಲಿಯೇ ಕುಳಿತು ಯಾವುದೇ ಅನುಮಾನ ಬಾರದ ರೀತಿ ಭಾರ್ಗವಿ ಗೇಮ್ ಪ್ಲ್ಯಾನ್ ಅಂತು ಮಾಡಿ ಆಗಿದೆ. ಈಗ ರಾಮ ಒದ್ದಾಡುತ್ತಿರುವುದನ್ನು ಮ್ಯಾನೇಜರ್ ಕಡೆಯಿಂದ ತಿಳಿದುಕೊಂಡ ಭಾರ್ಗವಿ, ಮತ್ತೆ ಸೀತಾಳ ಸ್ಯಾಲರಿಗೂ ಕೈ ಹಾಕುತ್ತಿದ್ದಾಳೆ. ಪ್ರಿಯಾ ಒಂದು ಪೈಸೆಯನ್ನು ಖರ್ಚು ಮಾಡದ ಹಾಗೇ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಎಲ್ಲರ ಮುಂದೆ ಹೇಳುವಂತೆಯೂ ಇಲ್ಲ. ಪ್ರಿಯಾ ಬೇರೆ ಆಫೀಸಿಂದ ಎಲ್ಲೊ ಹೋಗಿದ್ದಾಳೆ. ಭಾರ್ಗವಿ ಮಾಡುವ ಹೊಸ ಹೊಸ ಪ್ಲ್ಯಾನ್‌ಗೆ ಈಗ ರಾಮ್ ಐಡಿಯಾಗಳನ್ನು ಹುಡುಕಲೇಬೇಕಾದ ಅನಿವಾರ್ಯತೆ ಎದುರಾಗಿದೆ.


Click it and Unblock the Notifications











