Seetha Rama Serial: ರಾಮನಿಂದ ಸೀತಾಗೆ ಹಣ ಕೊಡಿಸುವ ಪ್ರಯತ್ನ.. ಸ್ನೇಹಕ್ಕಿಂತ ಪ್ರಿಯಾಗೆ ಹಣವೇ ಮುಖ್ಯವಾದರೆ..?
ಹಣ ಎಂಥವರನ್ನು ಬದಲಾಯಿಸಿ ಬಿಡುತ್ತದೆ ಎಂಬ ಮಾತು ಇದೆ. ಅದಕ್ಕೆ ಸಂಬಂಧಗಳ ಅರಿವು ಇರುವುದಿಲ್ಲ. ಅಣ್ಣ-ತಮ್ಮಂದಿರೆಂಬ ಬಾಂಧವ್ಯವೂ ಬೇಕಾಗಿಲ್ಲ, ಸ್ನೇಹಿತರೆಂಬ ಭಾವವೂ ಮುಖ್ಯವಾಗುವುದಿಲ್ಲ. ಹಣ ಮಾತ್ರ ಮುಖ್ಯವಾಗುತ್ತದೆ. ಇದು ಉದಾಹರಣೆ ಮಾತ್ರ ಅಲ್ಲ. ಸಾಕಷ್ಟು ಕಡೆ ಸತ್ಯವೂ ಆಗಿದೆ. 'ಸೀತಾ ರಾಮ' ಧಾರಾವಾಹಿಯ ಟ್ವಿಸ್ಟ್ ಏನಾಗಬಹುದು ಎಂಬುದೇ ಕಾರಣ.
ಸೀತಾಗೆ ಕೊಡಿಸಬೇಕಾದ ಹಣದಲ್ಲಿ ಭಾರ್ಗವಿ ಗೇಮ್ ಪ್ಲ್ಯಾನ್ ಮಾಡಿದ್ದಾಳೆ. ಈ ಆಟದಿಂದ ಸೀತಾಳ ಕಷ್ಟಕ್ಕೆ ಬರಬೇಕಾದ ಹಣ, ಪ್ರಿಯಾಳ ಅಕೌಂಟ್‌ಗೆ ಹೋಗಿದ್ದು, ಬೇರೆ ರೀತಿಯ ಭಾವನೆಯನ್ನೇ ಉಂಟು ಮಾಡಿದೆ. ಈಗ ಪ್ರಿಯಾಳಿಂದ ಹಣ ತೆಗೆದುಕೊಂಡು ಸೀತಾಳಿಗೆ ಕೊಡುವುದೇ ಶ್ರೀರಾಮನಿಗಿರುವ ದೊಡ್ಡ ಸವಾಲಿನ ಕೆಲಸವಾಗಿದೆ.

ಸೀತಾಳ ಹಣಕ್ಕಾಗಿ ರಾಮ ಟೆನ್ಶನ್
ರಾಮನಿಗೆ ಕೊಟ್ಟ ಮಾತು ಬಹಳ ಮುಖ್ಯವಾಗುತ್ತಿದೆ. ಸಿಹಿಯ ಕನಸನ್ನು ಉಳಿಸುವುದು, ಸೀತಾಳ ಕಷ್ಟ ಕಡಿಮೆ ಮಾಡುವುದು ಎಲ್ಲವೂ ಬಹಳ ಮುಖ್ಯವಾಗಿದೆ. ಹೀಗಾಗಿ ಸೀತಾಳಿಗೆ ಬರಬೇಕಾದ ಹಣ ಬಹಳ ಬೇಗ ಒದಗಿಸಬೇಕಾಗಿದೆ. ಆದರೆ, ಆ ಹಣ ಈಗ ಪ್ರಿಯಾ ವಾಪಾಸ್ ಕೊಡದ ಹೊರತಾಗಿ ಬೇರೆ ದಾರಿಯಿಲ್ಲ. ಕಂಪನಿಯಿಂದ ಒಮ್ಮೆಸ್ಯಾಲರಿ ನೀಡಿದರೆ, ಮತ್ತೊಮ್ಮೆ ನೀಡುವುದು ಬಹಳ ಮುಖ್ಯವಾಗುತ್ತದೆ.
ಭಾರ್ಗವಿಯಿಂದ ದಿನೇ ದಿನೆ ಹೊಸ ಪ್ಲ್ಯಾನ್
ಭಾರ್ಗವಿಗೆ ಇದ್ದ ಅನುಮಾನ ದಟ್ಟವಾಗಿದೆ. ಶ್ರೀರಾಮ ಯಾರದ್ದೋ ಬಲೆಗೆ ಬಿದ್ದಿದ್ದಾನೆ ಅನ್ನೋದು ಗೊತ್ತಿತ್ತು. ಆದರೆ, ಅದು ಯಾರು ಅನ್ನೋದು ಗೊತ್ತಿರಲಿಲ್ಲ. ಅದು ಸೀತಾ ಎಂದು ಗೊತ್ತಾದ ಮೇಲೆ ಈಗ ಆಫೀಸಿನ ಒಳಗೆ ಏನೆಲ್ಲಾ ಗೇಮ್ ಪ್ಲ್ಯಾನ್ ಮಾಡಬಹುದು, ಅದೆಲ್ಲವನ್ನು ಮಾಡುತ್ತಿದ್ದಾಳೆ. ಸೀತಾಳ ಅಡ್ವಾನ್ಸ್ ಸ್ಯಾಲರಿ ಮಾತ್ರವಲ್ಲ, ಬರುವ ತಿಂಗಳ ಸ್ಯಾಲರಿಗೂ ಕನ್ನ ಹಾಕುವುದಕ್ಕೆ ಹೊರಟಿದ್ದಾಳೆ. ಇದು ರಾಮನಿಗೆ ಗೊತ್ತಾದರೆ ಸಮಸ್ಯೆ ಬಗೆಹರಿದಂತೆ, ಇಲ್ಲವಾದರೆ ಸೀತಾಳ ಜೀವನ ಕಷ್ಟ ಆಗುತ್ತೆ.
ಮೀಟಿಂಗ್ ಮಾಡಲು ಹೊರಟ ಶ್ರೀರಾಮ
ರಾಮ್‌ಗೆ ಸಾಕಷ್ಟು ಸಮಯ ಇಲ್ಲ. ಸೀತಾ ಅಕೌಂಟ್‌ಗೆ ವಾಪಸ್ ಹಣ ಬರಲೇಬೇಕಾಗಿದೆ. ಹೀಗಾಗಿ ಏನಾದರೂ ಮಾಡುವ ಪ್ಲ್ಯಾನ್‌ನಲ್ಲಿದ್ದಾನೆ. ಅದಕ್ಕೆ ನಾಲ್ಕು ಜನ ಕೂತು ಮಾತನಾಡಿದರೆ ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾನೆ. ಪ್ರಿಯಾಳ ಅಕೌಂಟ್‌ನಿಂದ ಯಾವುದೇ ಹಣ ಹೊರಗೆ ಹೋಗದಂತೆ ಲಾಕ್ ಮಾಡಿಸಲಾಗಿದೆ. ಆದರೂ, ಪ್ರಿಯಾಳಿಂದ ಹಣ ವಾಪಾಸ್ ಪಡೆಯುವುದು ಕೂಡ ಅಷ್ಟೆ ಮುಖ್ಯವಾಗಿದೆ. ಅದಕ್ಕೆ ಅಶೋಕನಿಗೆ ಮೆಸೇಜ್ ಹಾಕಿ, ಮೀಟಿಂಗ್ ಅರೇಂಜ್ ಮಾಡಿಸಿದ್ದಾನೆ. ಆ ಮೀಟಿಂಗ್‌ನಲ್ಲಿ ಸೀತಾ, ರಾಮ್, ಪ್ರಿಯಾ ಇರುವಂತೆ ಸೂಚನೆ ನೀಡಿದ್ದಾನೆ.

ಪ್ರಿಯಾಳ ಮನಸ್ಥಿತಿ ಬದಲಾದರೆ..!
ಪ್ರಿಯಾ ಹಣಕ್ಕೂ ಹೆಚ್ಚಿನ ಮಹತ್ವವನ್ನೇ ನೀಡುತ್ತಾಳೆ. ಇಷ್ಟು ದಿನದ ಎಪಿಸೋಡ್‌ನಲ್ಲಿ ಗಮನಿಸಿದಾಗ ಸ್ನೇಹ ಅನ್ನೋ ವಿಚಾರದಲ್ಲಿ ಪ್ರಿಯಾ, ಸೀತಾಳ ಕಷ್ಟಗಳಿಗೆ ಸ್ಪಂದಿಸಿದ್ದು ಕಂಡೇ ಇಲ್ಲ. ಮನೆ ಹುಡುಕುವುದಕ್ಕೆ ಆಗಲಿ, ಲಾಯರ್ ವಿಚಾರದಲ್ಲಿಯೇ ಆಗಲಿ ಯಾವುದರಲ್ಲೂ ಪ್ರಿಯಾಳ ಇನ್ವಾಲ್ ಮೆಂಟ್ ಕಾಣಿಸಲೇ ಇಲ್ಲ. ಹೀಗಾಗಿ ಹಣದ ವಿಚಾರ ಅಂತ ಬಂದಾಗ ಪ್ರಿಯಾ ಮೊದಲು ಹಣಕ್ಕೆ ಪ್ರಾಮುಖ್ಯತೆ ನೀಡಬಹುದು. ಜೊತೆಗೆ ಪ್ರಿಯಾಳಿಗೆ ಆ ಹಣ ಸೀತಾಗೆ ಯಾವ ಬೇಸಿಕ್ ಮೇಲೆ ಕೊಡುತ್ತಿದ್ದೀವಿ ಎಂದು ಹೇಳಬೇಕಾಗುತ್ತದೆ. ಆಗ ನನಗೂ ಅಡ್ವಾನ್ಸ್ ಸ್ಯಾಲರಿ ಇಷ್ಟೇ ಬೇಕು ಎನ್ನಬಹುದು. ಇದೆಲ್ಲ ಚಾಲೆಂಜಸ್ ಎದುರಿಸಲು ರಾಮ್ ಮತ್ತು ಅಶೋಕ ರೆಡಿ ಇರಬೇಕಾಗಿದೆ.


Click it and Unblock the Notifications











