Seetha Rama Serial: ಸೀತಾ ಬಾಡಿಗೆ ಮನೆ ಹುಡುಕ್ತಾ ಇದ್ರೆ ರಾಮ್ ಮನೆ ಉಳಿಸುವ ಪ್ರಯತ್ನದಲ್ಲಿದ್ದಾನೆ..!
ಸಿಹಿಗೆ ಅರಮನೆಯ ಕನಸಿದೆ. ದೇವರ ಬಳಿ ಯಾವಾಗಲೂ ಅರಮನೆಯನ್ನೇ ಕೇಳುತ್ತಾ ಇರುತ್ತಾಳೆ. ಆಗಾಗ ಪ್ಯಾಲೇಸ್‌ಗೆ ಪತ್ರ ಕೂಡ ಬರೆಯುತ್ತಾ ಇರುತ್ತಾಳೆ. ಸದ್ಯಕ್ಕೆ ವಠಾರದಲ್ಲಿಯೇ ಸ್ವಂತ ಮನೆ ಹೊಂದಿದ್ದಾಳೆ. ಆ ಪುಟ್ಟ ಸ್ವಂತ ಮನೆಯಲ್ಲಿಯೇ ನೆಮ್ಮದಿಯಾಗಿದ್ದಾರೆ. ಆದರೆ, ಆ ಮನೆಯನ್ನು ಎಲ್ಲಿ ಕಳೆದುಕೊಂಡು ಬಿಡುತ್ತೀವೋ ಎಂಬ ಆತಂಕ ಸೀತಾಳಲ್ಲಿದೆ. ಸಿಹಿಗೆ ಹೇಳೋದು ಹೇಗೆ ಎಂಬ ಭಯದಲ್ಲಿದ್ದಾಳೆ.
ಮನೆಯ ಮೇಲಿನ ಲೋನ್ ತೀರಿಸುವುದಕ್ಕೆ ಸಮಯ ಕಡಿಮೆ ಇದೆ. ಈಗ ಲೋನ್ ಕಟ್ಟಲೇಬೇಕಾಗಿದೆ. ಆದರೆ, ಸೀತಾಳ ಬಳಿ ಅಷ್ಟೆಲ್ಲಾ ಹಣ ಇಲ್ಲ. ಹೀಗಾಗಿಯೇ ಕನಸಿನ ಮನೆಯನ್ನೇ ಬಿಟ್ಟು ಬಾಡಿಗೆ ಮನೆಗೆ ಹೋಗಲು ನಿರ್ಧರಿಸಿದ್ದಾಳೆ.

ಬ್ಯಾಂಕ್‌ನಿಂದ ಮತ್ತೆ ಬಂತು ನೋಟೀಸ್
ಮನೆ ಮೇಲೆ ಮಾಡಿರುವ ಸಾಲದಿಂದಾಗಿ ಸೀತಾಗೆ ಈಗ ತಲೆನೋವಾಗಿದೆ. ಲಾಯರ್ ಆಫೀಸ್‌ಗೆ ಮನೆಗೆ ತಿರುಗುವುದೇ ಸೀತಾಳ ಕೆಲಸವಾಗಿದೆ. ಯಾರೊಂದಿಗೂ ತನ್ನ ಸಮಸ್ಯೆಯನ್ನು ಹಂಚಿಕೊಳ್ಳುತ್ತಿಲ್ಲ. ತಾನೊಬ್ಬಳೇ ಆ ಕಷ್ಟವನ್ನು ಅನುಭವಿಸುತ್ತಿದ್ದಾಳೆ. ಅದಷ್ಟೇ ಅಲ್ಲ ರುದ್ರಪ್ರತಾಪ ಪರೋಕ್ಷವಾಗಿ ಸಹಾಯ ಮಾಡ್ತೀನಿ ಎಂದು ಬಂದಿದ್ದಾನೆ. ಆದರೆ, ಯಾರ ಮೇಲೂ ಡಿಪೆಂಡ್ ಆಗಬಾರದು ಎಂಬ ಕಾರಣಕ್ಕಾಗಿಯೇ ಮನೆಯನ್ನೇ ಮಾರೋದಕ್ಕೆ ಸೀತಾ ಮುಂದಾಗಿದ್ದಾಳೆ. ಈಗ ಬ್ಯಾಂಕ್‌ನಿಂದ ರಿಮೈಂಡರ್ ನೋಟೀಸ್ ಬೇರೆ ಬಂದಿದೆ.
ಬಾಡಿಗೆ ಮನೆ ಸಿಗುತ್ತಾ ಸೀತಾಗೆ?
ಸಿಹಿಗೆ ಇನ್ನು ಮನೆಯ ವಿಚಾರ ಗೊತ್ತಿಲ್ಲ. ಸೀತಾಗೆ ಅದನ್ನು ಹೇಳುವ ಧೈರ್ಯವೂ ಇಲ್ಲ. ಯಾಕಂದ್ರೆ, ಅವತ್ತು ಆಟಿಕೆ ಮನೆಯನ್ನೇ ಬಿಟ್ಟುಕೊಡುವುದಕ್ಕೆ ಸಿಹಿ ಒಪ್ಪಲಿಲ್ಲ. ಶ್ರೇಯಸ್‌ಗೆ ಹೊಡೆದೇ ಬಿಟ್ಟಳು. ಇನ್ನು ನಿಜವಾದ ಮನೆಯನ್ನು ಬಿಡಬೇಕು ಎಂದರೆ ಅವಳನ್ನು ಸಮಾಧಾನ ಮಾಡುವುದೇ ಸೀತಾಗೆ ದೊಡ್ಡ ಸವಾಲು. ಈಗ ಸಿಹಿಯೇ ಆ ನೋಟೀಸ್ ಅನ್ನು ತಂದು ಕೊಟ್ಟಿದ್ದಾಳೆ. ಇದನ್ನು ಸಿಹಿಗೆ ಹೇಳದೆ, ರಾಮ್ ಬಳಿ ಬಾಡಿಗೆಗೆ ಮನೆ ಹುಡುಕಲು ಕೇಳಿದ್ದಾಳೆ.

ರಾಮ್ ಮುಂದೇನು ಮಾಡ್ತಾನೆ
ರಾಮ್ ಮತ್ತು ಸೀತಾ ಈಗ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಈ ಹಿಂದೆಯೇ ರಾಮ್‌ಗೆ ತಾನಿರುವ ಏರಿಯಾದಲ್ಲಿಯೇ ಒಂದು ಪುಟ್ಟ ಬಾಡಿಗೆ ಮನೆ ನೋಡೋದಕ್ಕೆ ಹೇಳಿದ್ದಳು. ಅದು 6-7 ಸಾವಿರ ರೂಪಾಯಿಗೆ. ಈಗ ಮತ್ತೆ ಕೇಳಿದ್ದಾನೆ. ಆ ಏರಿಯಾದಲ್ಲಿ ಸಿಗುವುದೇ 15 ಸಾವಿರಕ್ಕೆ. ಇದನ್ನು ಸೀತಾಗೆ ಹೇಳಿದರೆ ದಿಗಿಲು ಬೀಳುತ್ತಾಳೆ. ಆದರೆ, ರಾಮ್ ಮಾತ್ರ ಶಪಥ ಮಾಡಿದ್ದಾನೆ. ಇರುವ ಮನೆಯನ್ನು ಉಳಿಸುವ ಪ್ರಯತ್ನ ಮಾಡ್ತೀನಿ ಎಂದಿದ್ದಾನೆ. ಅದಕ್ಕೆಂದೇ ಅಡ್ವಾನ್ಸ್ ಸ್ಯಾಲರಿ ಅಂತೆಲ್ಲಾ ಸಹಾಯ ಮಾಡುತ್ತಿದ್ದಾನೆ.
ಅತ್ತಿಗೆಯಿಂದ ಹಾಳಾಗುತ್ತಾ ಸೀತಾ ಜೀವನ?
ರುದ್ರಪ್ರತಾಪನಿಗೆ ಸೀತಾ ಮೇಲೆ ಕಣ್ಣಿದೆ. ಸೀತಾಳ ಅತ್ತಿಗೆಗೆ ಹಣದ ಮೇಲೆ ಕಣ್ಣಿದೆ. ರುದ್ರಪ್ರತಾಪನಿಗೆ ಸೀತಾಳನ್ನು ಕೊಟ್ಟು ಮದುವೆ ಮಾಡಿದರೆ ಹಣ ಸಿಗುತ್ತೆ ಎಂಬ ಕಾರಣಕ್ಕೆ ಏನೇನೋ ಪ್ಲ್ಯಾನ್ ಮಾಡುತ್ತಿದ್ದಾಳೆ. ಆದರೆ, ರುದ್ರಪ್ರತಾಪನನ್ನು ಕಂಡರೆ ಸೀತಾಗೂ ಇಷ್ಟವಿಲ್ಲ, ಸಿಹಿಗೆ ಮೊದಲೇ ಆಗಲ್ಲ. ಹೀಗಾಗಿ ಆ ಮದುವೆ ಮಾತುಕತೆ ಕ್ಯಾನ್ಸಲ್ ಆಗಿದೆ. ಮನೆಯನ್ನೆ ನೆಪವಾಗಿಟ್ಟುಕೊಂಡು ನೋಟೀಸ್ ಕಳುಹಿಸಿದ್ದ. ನೋಟೀಸ್‌ಗೆ ಸೀತಾ ಹೆದರಿಲ್ಲ, ರುದ್ರಪ್ರತಾಪನಿಗೆ ಬೆಂಬಲ ನೀಡಿಲ್ಲ. ಈಗ ಕೋಪಗೊಂಡ ರುದ್ರಪ್ರತಾಪ ಮತ್ತೆ ರಿಮೈಂಡ್ ನೋಟೀಸ್ ಕಳುಹಿಸುವಂತೆ ಮಾಡಿದ್ದಾನೆ ಎನ್ನಲಾಗ್ತಾ ಇದೆ. ಆದರೆ, ರಾಮ್ ಇರುವಾಗ ಇದೆಲ್ಲ ಸಮಸ್ಯೆಯಾಗಲ್ಲ.


Click it and Unblock the Notifications











