Seetha Rama Serial: ಸಿಹಿಯಿಂದ ಮಾತ್ರ ರಾಮ್ ಮನಸ್ಸಿಗೆ ಶಾಂತಿ.. ಅಡ್ಡ ಬಂದ ಸೀತಾಗೆ ಫ್ರೆಂಡ್ ಹೇಳಿದ್ದೇನು?

By ಎಸ್ ಸುಮಂತ್

ಶ್ರೀರಾಮ್‌ನ ಇತ್ತೀಚೆಗಿನ ಸ್ಥಿತಿ ಕಂಡ ಜನ ಮರುಗಿದ್ದಂತು ನಿಜ. ಸೀತಾ ಸಿಕ್ಕ ಮೇಲೆ ಖುಷಿಯಾಗಿದ್ದಾನೆ ಎಂದುಕೊಳ್ಳುವಾಗಲೇ ಹಳೆಯ ಪ್ರೀತಿ ಅವನನ್ನು ಇನ್ನು ಕೆಣಕಿದೆ ಅನ್ನೋದಂತು ಗೊತ್ತಾಯ್ತು. ಒಂದೇ ಒಂದು ವಾಚ್ ಕಾಣಿಸುತ್ತಿಲ್ಲ ಎಂಬ ಕಾರಣಕ್ಕೆ ಸತ್ತೆ ಹೋದವನಂತೆ ರಾಮ್ ಒದ್ದಾಡಿದ್ದ. ಈ ಎಲ್ಲಾ ಜಂಜಾಟಗಳಿಂದ ರಾಮ್‌ಗೆ ಸಂಪೂರ್ಣ ನೆಮ್ಮದಿ ಬೇಕು ಎಂದರೆ ಅದು ಸಿಹಿಯಿಂದ ಮಾತ್ರ.

ಭಾರ್ಗವಿಗೆ ರಾಮ್ ವಿಕ್ನೆಸ್ ಎಲ್ಲವೂ ತಿಳಿದಿದೆ. ಸೀತಾಳ ಜೊತೆಗೆ ಕ್ಲೋಸ್ ಆಗಿರುವುದರಿಂದಾನೇ ರಾಮ್ ಇಷ್ಟೆಲ್ಲ ಸಂತೋಷವಾಗಿ ಇರೋದು ಅನ್ನೋದಂತು ಭಾರ್ಗವಿಗೆ ಗೊತ್ತಾಗಿದೆ. ‌ಹೀಗಾಗಿಯೇ ಹೇಗಾದರೂ ಮಾಡಿ ಅವಳಿಂದ ದೂರ ಮಾಡುವ ಹುನ್ನಾರ ಮಾಡಿದ್ದಾಳೆ.

seetha-rama-kannada-serial

ಸಿಹಿಗೆ ಕೋಪ ಬಂದಿದ್ದೇಕೆ..?

ಸಿಹಿಗೆ ಯಾವಾಗಲೂ ಒಂದು ಆಸೆ. ಅದು ಅಮ್ಮನಿಗೆ ನೆರವಾಗಬೇಕೆಂಬ ಬಯಕೆ. ಅದಕ್ಕಾಗಿಯೇ ಇತ್ತೀಚೆಗೆ ಮನೆಯ ಕೆಲಸಕ್ಕೂ ಹೋಗಿದ್ದಳು. ಈಗ ಗಣೇಶ ಹಬ್ಬದ ಸಂಭ್ರಮ. ಗಣೇಶನನ್ನು ಕೂರಿಸಿದವರಿಗೆ, ಆಯ್ಕೆಯಾದ ಗಣಪತಿಗೆ ಐದು ಸಾವಿರ ಬಹುಮಾನ ಘೋಷಣೆಯಾಗಿದೆ. ಹೀಗಾಗಿ ತನ್ನ ಸಂಘವನ್ನು ಕಟ್ಟಿಕೊಂಡ ಸಿಹಿ, ಗಣೇಶ ಕಲೆಕ್ಷನ್ ಮಾಡಲು ಹೊರಟಿದ್ದಳು. ಬಂದ ಹಣವೇ ಸಾಕಾಗುತ್ತಿಲ್ಲ ಎಂದು ಯೋಚನೆ ಮಾಡುವಾಗಲೇ ಮಾಮಾ ಬಂದು ಕಲೆಕ್ಟ್ ಆಗಿದ್ದ ಹಣವನ್ನು ಕಿತ್ತುಕೊಂಡು ಹೋಗಿಬಿಟ್ಟ.

ಶ್ರೀರಾಮನಿಗೆ ತಿಳಿಯಿತು ಸಿಹಿಯ ಸಂಕಟ

ಶ್ರೀರಾಮನಿಗೆ ಬೆಸ್ಟ್ ಫ್ರೆಂಡ್ ಅಂದರೆ ಅದು ಸಿಹಿ. ಏನೇ ಬೇಸರ ಇದ್ದರೂ ಸಿಹಿ ಬಳಿ ಹೇಳಿಕೊಂಡರೇ ಆ ಬೇಸರವೆಲ್ಲ ಮಂಗಮಾಯವಾಗಿ ಬಿಡುತ್ತದೆ. ಮನೆಯಲ್ಲಿ ವಾಚ್ ಕಾಣೆಯಾಗಿದ್ದ ಬೇಸರದಲ್ಲಿದ್ದ ರಾಮ್ ರಿಲ್ಯಾಕ್ಸ್ ಆಗುವುದಕ್ಕೆ ಸಿಹಿಗೆ ಕಾಲ್ ಮಾಡಿದ್ದಾನೆ. ಅದು ವಿಡಿಯೋ ಕಾಲ್. ಖುಷಿಯಾಗಿ ಗಣೇಶನ ಬಗ್ಗೆ ಹೇಳಿಕೊಳ್ಳುವಾಗಲೇ ಮಾವ ಬಂದು ಹಣ ಕಿತ್ತುಕಿಂಡು ಹೋಗಿದ್ದು ಗೊತ್ತಾಗಿದೆ. ಫ್ರೆಂಡ್ ಬೇಸರದಲ್ಲಿರುವುದನ್ನು ಕಂಡ ರಾಮ್, ಮನೆಗೆ ಬಂದಿದ್ದಾನೆ.

seetha-rama-kannada-serial

ಫ್ರೆಂಡ್ ಕಣ್ಣೀರು ಒರೆಸಲು ರಾಮ್ ಪ್ಲ್ಯಾನ್

ಶ್ರೀರಾಮ ಮನೆಗೆ ಬರುವಷ್ಟರಲ್ಲಿ ಅಮ್ಮ ಮಗಳ ನಡುವೆ ಮುನಿಸು ತಾರಕಕ್ಕೆ ಏರಿತ್ತು. ಶ್ರೀರಾಮ ಬಂದೊಡನೆ ಸಿಹಿಯ ಮುಖದಲ್ಲಿ ಕೊಂಚ ಸಮಾಧಾನ ಮೂಡಿತ್ತು. ಆದರೆ, ಶ್ರೀರಾಮನಿಗೆ ಈ ವಿಚಾರ ಹೇಗೆ ತಿಳಿಯಿತು ಅನ್ನೋದು ಸೀತಾ ಪ್ರಶ್ನೆ. ಎಲ್ಲದರಲ್ಲೂ ಬುದ್ದಿವಂತೆಯಾದ ನಮ್ಮ ಸಿಹಿ, ಇದಕ್ಕೆ ಉತ್ತರ ಹುಡುಕುವುದಿಲ್ಲವಾ. ರಾಮ್ ತೊದಲಿಸುವಾಗಲೇ ಸಿಹಿಯೇ ಹೇಳಿದ್ದಾಳೆ. ಯಾಕಂದ್ರೆ, ಅವ್ರು ನನ್ನ ಫ್ರೆಂಡ್. ಅದಕ್ಕೆ ಎಲ್ಲಾ ಗೊತ್ತಾಗುತ್ತೆ ಎಂದು ಸಂಭಾಳಿಸಿದ್ದಾಳೆ. ಈ ವೇಳೆ ರಾಮ್ ದೊಡ್ಡ ಗಣಪತಿಯನ್ನೇ ತಂದು ಕೊಡುವುದಾಗಿ ಪ್ರಾಮೀಸ್ ಮಾಡಿದ್ದಾನೆ.

ಅಡ್ಡಿಯಾದ ಸೀತಾಗೆ ರಾಮ್ ಹೇಳಿದ್ದೇನು..?

ಸೀತಾಳಿಗೆ ಈ ಪ್ರಾಮೀಸ್ ಎಲ್ಲಾ ಇಷ್ಟವಾಗಿಲ್ಲ. ರಾಮ್‌ಗೆ ಗದರಿದ್ದಾಳೆ. ಸುಮ್ಮ ಸುಮ್ಮನೆ ಪ್ರಾಮೀಸ್ ಮಾಡಬೇಡಿ ರಾಮ್ ಎಂದು. ಆದರೆ, ರಾಮ್ ಈ ಬಾರಿ ಸುಮ್ಮನೆ ಇಲ್ಲ. ನನ್ನ ಮತ್ತೆ ಸಿಹಿಯ ಫ್ರೆಂಡ್‌ಶಿಪ್ ಅಗಲಿಸಬೇಡಿ ಎಂದೇ ಮನವಿ ಮಾಡಿದ್ದಾನೆ. 'ಅವಳು ಚಿಕ್ಕ ಹುಡುಗಿ. ನಾನು ಚಿಕ್ಕವನಿದ್ದಾಗಲೂ ಯಾರ ಬಳಿ ಏನು ಕೇಳಬೇಕು ಎಂಬುದು ಗೊತ್ತಾಗುತ್ತಿರಲಿಲ್ಲ. ನೀವೇ ಹೇಳಿದ್ದೀರಾ ಅವಳು ಯಾರನ್ನು ಇಷ್ಟೊಂದು ಹಚ್ಚಿಕೊಂಡವಳಲ್ಲ ಎಂದು. ದಯವಿಟ್ಟು ನನ್ನ ಸಿಹಿಯ ಬಾಂಧವ್ಯ ಅಳಿಸಬೇಡಿ' ಎಂದು ಹೇಳಿ ಹೊರಟಿದ್ದಾನೆ.

More from Filmibeat

English summary
Seetha Rama Serial Written Update on September 20th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X