Seetha Rama Serial: ಅಮ್ಮನ ಕಷ್ಟಕ್ಕೆ ಹೆಗಲಾಗಲೂ ಹೊರಟ ಸಿಹಿ.. ಪುಟಾಣಿ ಮಾತಿಗೆ ವೀಕ್ಷಕರ ಕಣ್ಣಲ್ಲಿ ನೀರು!
'ಸೀತಾ ರಾಮ' ಧಾರಾವಾಹಿ ನೋಡುಗರಿಗೆಲ್ಲಾ ಒಂದಲ್ಲ ಒಂದು ಸಲ ಇದ್ದರೆ ಇಂಥ ಮಗಳು ಇರಬೇಕು ಎನಿಸದೆ ಇರುವುದಿಲ್ಲ. ಸೀತಾಳ ಕಷ್ಟ ನೋಡಿ. ಇದೇ ಬೇಕು, ಅಲ್ಲಿಗೆ ಹೋಗಬೇಕು ಎಂದು ಮಗಳು ಯಾವತ್ತು ಕೇಳುವುದಿಲ್ಲ. ವರ್ಷಕ್ಕೊಮ್ಮೆ ತಿನ್ನುವ ಕೇಕ್ ತಿಂದರೂ ಅದಕ್ಕೆ ತೃಪ್ತಿ ಪಡುತ್ತಾಳೆ. ಪ್ರತಿ ದಿನ ಐಸ್ ಕ್ರೀಂ ಸಿಗದೆ ಹೋದಲ್ಲೂ ಬೇಸರ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಎಲ್ಲರ ಅಚ್ಚು ಮೆಚ್ಚು ಸಿಹಿ.
ಸಿಹಿ ರಿಯಲ್ ಲೈಫ್‌ನಲ್ಲೂ ತುಂಬಾ ದೊಡ್ಡ ಮಗು ಅಲ್ಲ. ಯುಕೆಜಿ ಓದುತ್ತಿದ್ದಾಳೆ. ಆದರೆ, ಅವಳ ನಟನೆ ನೋಡಿದರೆ ಎಲ್ಲರಿಗೂ ಆಶ್ಚರ್ಯವೆನಿಸುತ್ತದೆ. ಅಷ್ಟು ಪ್ರಬುದ್ಧತೆ ಅವಳ ನಟನೆಯಲ್ಲಿ ಇದೆ. ಇಂದಿನ ಎಪಿಸೋಡ್‌ನಲ್ಲಂತೂ ಸಿಹಿಯ ನಟನೆ ನೋಡಿದವರು ಖಂಡಿತ ಕಣ್ಣಲ್ಲಿ ನೀರು ಹಾಕದೆ ಇರುವುದಿಲ್ಲ.

ರಾಮ್ ಇದ್ದರೆ ಸೀತಾ ಸೇಫ್
ರುದ್ರ ಪ್ರತಾಪನಿಗೆ ಸೀತಾ ಮೇಲೆ ಇರುವುದು ಪ್ರೀತಿಯಾಗಲೀ, ಕಾಳಜಿಯಾಗಲೀ ಅಲ್ಲ. ಬದಲಿಗೆ ಮೋಹ. ಹೇಗಾದರೂ ಮಾಡಿ ಅವಳನ್ನು ಪಡೆಯಲೇಬೇಕೆಂಬ ಹಂಬಲ. ಹೀಗಾಗಿಯೇ ಅವಳನ್ನು ಎಲ್ಲಾ ಕಡೆಯಿಂದಾನೂ ಲಾಕ್ ಮಾಡುತ್ತಿದ್ದಾನೆ. ಮನೆಗೆ ಕೊನೆಯ ನೋಟೀಸ್ ಕಳುಹಿಸಿದ್ದಾನೆ. ಸೀತಾ ಮನೆ ಹುಡುಕುತ್ತಿರುವ ವಿಚಾರ ತಿಳಿದು, ಮನೆಯನ್ನು ಕೊಡಿಸುವ ನಾಟಕವಾಡಿದ್ದಾನೆ. ಒಬ್ಬಳನ್ನೇ ಮನೆಯಲ್ಲಿ ಲಾಕ್ ಮಾಡಲು ನೋಡಿದಾಗ ರಾಮ್ ಬಂದು ಕಾಪಾಡಿದ್ದಾನೆ.
ಸಿಹಿಯ ಪ್ರಬುದ್ಧತೆಗೆ ಪ್ರೇಕ್ಷಕರು ಫಿದಾ
ಆ ಕಡೆ ಸಿಹಿಗೆ ಅಮ್ಮನ ಬಗ್ಗೆಯೇ ಚಿಂತೆ ಹೆಚ್ಚಾಗಿದೆ. ಅಮ್ಮನ ಒಬ್ಬಳ ದುಡಿಮೆ ಸಾಕಾಗಲ್ಲ ಎಂದು ಅಜ್ಜ-ಅಜ್ಜಿ ಹೇಳಿದ್ದೇ ತಡ. ಸಿಹಿಗೆ ಚಿಂತೆ ಶುರುವಾಗಿದೆ. ಶಾಲೆಯಲ್ಲೇ ಪಾಠ ಕೇಳುವುದಕ್ಕೂ ಸಿಹಿಗೆ ಆಗಲಿಲ್ಲ. ಅಮ್ಮನದ್ದೇ ಚಿಂತೆ. ಕಡೆಗೆ ಹೊಟ್ಟೆ ನೋವು ಅಂತ ಹೇಳಿ, ಮನೆಗೆ ಬಂದಿದ್ದಾಳೆ. ಅಮ್ಮನಿಗೋಸ್ಕರ ಸುಳ್ಳು ಹೇಳಿದ್ದಕ್ಕೆ ದೇವರ ಬಳಿ ಕ್ಷಮೆ ಕೇಳಿದ್ದಾಳೆ.

ಮನೆ ಕೆಲಸಕ್ಕೆ ಸೇರಿದ ಸಿಹಿ
ಅಮ್ಮನ ಒಬ್ಬಳ ಸಂಬಳ ಮನೆ ನಡೆಸುವುದಕ್ಕೆ, ಶಾಲೆಗೆ ಫೀಸ್ ಕಟ್ಟುವುದಕ್ಕೆ ಸಾಧ್ಯವಾಗಲ್ಲ ಎಂದು ತಿಳಿದ ಸಿಹಿ, ಮನೆ ಕೆಲಸಕ್ಕೆ ಸೇರಿದ್ದಾಳೆ. ಮನೆಗೆ ಬಂದ ಸೀತಾ ಮತ್ತು ರಾಮ್ ಸಿಹಿ ಎಲ್ಲಿ ಎಂದು ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸಿಗದೆ ಕಂಗಲಾಗಿದ್ದರು. ಕಸ ನೀಟಾಗಿ ಗುಡಿಸು ಸಿಹಿ ಎಂಬ ಮಾತು ಕೇಳಿಸಿಕೊಂಡು ಬಂದ ಸೀತಾಗೆ ಶಾಕ್ ಆಗಿದೆ. ಬೇರೆಯವರ ಮನೆಯ ಕೆಲಸ ಮಾಡುತ್ತಿದ್ದಾಳೆ. ಇದನ್ನು ಕಂಡ ಸೀತಾಗೆ ಕಣ್ಣೀರು ಬಂದಿದೆ. ಆ ಆಂಟಿಯ ಬಗ್ಗೆಯೂ ಬೇಸರ ಮಾಡಿಕೊಂಡು, ಮಗಳನ್ನು ಕರೆದುಕೊಂಡು ಹೋಗಿದ್ದಾಳೆ.
ಮಗಳ ಕೆಲಸಕ್ಕೆ ಸೀತಾ ಮೌನ
ಮನೆಗೆ ಹೋದ ಸೀತಾಳ ಮುಖದಲ್ಲಿ ಮೌನವೇ ಆವರಿಸಿದೆ. ಆದರೆ, ಈ ಸಮಯದಲ್ಲಿ ಸಿಹಿ ಆಡಿದ ಮಾತುಗಳು ಎಂಥವರ ಕಣ್ಣಲ್ಲೂ ನೀರು ತರಿಸಿದೆ. "ಸೀತಮ್ಮ ನಿನ್ನ ಒಬ್ಬಳಿಗೆ ಕಷ್ಟ ಆಗುತ್ತೆ ಅಂತ ನಾನು ಕೆಲಸಕ್ಕೆ ಸೇರಿದ್ದು. ಪ್ಲೀಸ್ ನನ್ನ ಕ್ಷಮಿಸು. ಅಮ್ಮನಿಗೆ ಕಷ್ಟ ಆಗುತ್ತೆ ಅಂತ ಮಕ್ಕಳು ಸುಮ್ಮನೆ ಇರುವುದಕ್ಕೆ ಆಗುತ್ತಾ" ಎಂದು ಹೇಳಿದ ಮಾತುಗಳು ನೋಡುಗರಿಗೂ ಕಣ್ಣೀರು ತರಿಸಿದೆ. ಸಿಹಿಯ ಮುಗ್ಧತೆಗೆ ಸೀತಾಗೂ ಕಣ್ಣಲ್ಲಿ ನೀರು ಬಂದಿದೆ. ನೋವಿನಲ್ಲಿ ಬೈಯ್ಯುತ್ತಿದ್ದ ಸೀತಾಳನ್ನು ರಾಮ್ ತಡೆದು ಸಮಾಧಾನ ಮಾಡಿದ್ದಾನೆ.


Click it and Unblock the Notifications











