Seetha Rama Serial: ರಾಮ Vs ಭಾರ್ಗವಿ.. ಸತ್ಯ ಕೇಳಿಸಿಕೊಂಡ ಅಶೋಕ ಏನ್ಮಾಡ್ತಾನೆ?

By ಎಸ್ ಸುಮಂತ್

ಒಂದು ಮನೆಯಲ್ಲಿ ಇಬ್ಬರು ದುಡಿದರೆ ಮಾತ್ರ ಮನೆ ನಿಭಾಯಿಸುವುದಕ್ಕೆ ಸಾಧ್ಯ ಅನ್ನೋದು ಸಿಹಿ ಕಿವಿಗೆ ಬಿದ್ದು ಬಿಟ್ಟಿದೆ. ಅದಕ್ಕಾಗಿಯೇ ಅಮ್ಮನಿಗೆ ನೆರವಾಗುತ್ತೀನಿ ಅಂತ ಆ ಪುಟ್ಟ ಕಂದಮ್ಮ ಮನೆ ಕೆಲಸ ಮಾಡುವುದಕ್ಕೆ ಹೊರಟಿದ್ದಳು. ಸಿಹಿಯ ನಿರ್ಧಾರ ಸೀತಾಳ ಮನಸ್ಸನ್ನು ಘಾಸಿಗೊಳಿಸಿದೆ. ರಾಮ್‌ಗೂ ಸಿಹಿಯ ಮಾತು ನೋವುಂಟು ಮಾಡಿದೆ.

ರಾಮ್ ಜೊತೆಗಿರುವಾಗ ಸೀತಾಗೆ ಯಾವ ಭಯವೂ ಇಲ್ಲ. ಆದರೆ ಸೀತಾಳ ಸ್ವಾಭಿಮಾನ ಯಾವುದನ್ನು ಒಪ್ಪುತ್ತಿಲ್ಲ. ಆದರೂ, ಪ್ರಿಯಾಗೂ ಹೇಳದ ವಿಚಾರಗಳನ್ನು ಈಗ ರಾಮ್ ಬಳಿ ಹಂಚಿಕೊಳ್ಳುವಷ್ಟು ಬಾಂಧವ್ಯ ಅಂತು ಬೆಳೆದಿದೆ.

seetharama-kannada-serial

ದೇವರು ಕೊಟ್ಟರು ಪೂಜಾರಿಯಿಂದ ಅಡ್ಡಿ

ಸೀತಾಗೆ ಮನೆ ಉಳಿಸಿಕೊಳ್ಳುವ ಯಾವ ದಾರಿಯೂ ಇಲ್ಲ ಎಂದೇ ನಂಬಿದ್ದಾಳೆ. ಮನೆಯನ್ನು ಮಾರಿ, ಸಾಲ ತೀರಿಸುವ ನಿರ್ಧಾರ ಮಾಡಿದ್ದಾಳೆ. ಆದರೆ, ರಾಮ್ ಒಳಗೆ ನಿಂತು ಅಡ್ವಾನ್ಸ್ ಸ್ಯಾಲರಿಗೆ ಎಲ್ಲಾ ಸಿದ್ಧತೆ ನಡೆಸಿದ್ದಾನೆ. ರಾಮ್‌ಗೆ ಯಾವುದೇ ಬೇಸರ ಆಗುವುದು ಬೇಡ ಅಂತ ತಾತ ಕೂಡ ಅಡ್ವಾನ್ಸ್ ಸ್ಯಾಲರಿ ಕೊಡುವುದಕ್ಕೆ ಒಪ್ಪಿದ್ದಾರೆ. ಯಾಕಂದ್ರೆ, ತಾತನಿಗೂ ಸೀತಾ ಮೇಲೆ‌ ನಂಬಿಕೆ ಬಂದಿದೆ. ಅವಳ ಮುಗ್ಧತೆ, ಬದ್ಧತೆಗೆ ತಾತಾ ಕೂಡ ಬೆಸ್ಟ್ ಮಾರ್ಕ್ಸ್ ಕೊಟ್ಟಿದ್ದಾರೆ.

ಅಡ್ವಾನ್ಸ್ ಸ್ಯಾಲರಿಗೆ ಮತ್ತೆ ಒತ್ತಾಯಿಸಿದ ರಾಮ್

ಅಡ್ವಾನ್ಸ್ ಸ್ಯಾಲರಿ ಏನೋ ಸಿಗುತ್ತಿದೆ. ಆದರೆ, ಸಿಹಿಗೆ ಹಣ ಇಲ್ಲದೆ ಇದ್ದರೆ ಮನೆಗೆ ಏನೋ ತೊಂದರೆ ಆಗುತ್ತೆ ಎಂದು ನಂಬಿದ್ದಾಳೆ. ಅದಕ್ಕೆ ದುಡಿಯುವುದಕ್ಕೂ ಹೋಗಿದ್ದಾಳೆ. ಇದನ್ನೆಲ್ಲಾ ಕಂಡ ರಾಮ್‌ಗೆ ಜೀವನದ ಬೆಲೆ ಗೊತ್ತಾಗಿದೆ. ಅಶೋಕನಿಗೆ ಆದಷ್ಟು ಬೇಗ ಸ್ಯಾಲರಿ ಫಂಡ್ ರಿಲೀಸ್ ಮಾಡುವುದಕ್ಕೆ ಸೂಚನೆ ನೀಡಿದ್ದಾನೆ. ಎಲ್ಲಾ ನಿಯಮಗಳೇನೋ ಮುಗಿದಿದೆ. ಮ್ಯಾನೇಜರ್ ಗಮನಕ್ಕೂ ತರಲಾಗಿದೆ. ಸೀತಾಗೂ ವಿಷಯ ತಿಳಿಸಲಾಗಿದೆ. ರಾಮ್ ಕಾಳಜಿ ಮುಂದೆ ಭಾರ್ಗವಿಯ ಆಟ ನಡೆಯುವುದು ಕಷ್ಟವೇ.

seetharama-kannada-serial

ಕೊಡದಂತೆ ಭಾರ್ಗವಿ ಆಜ್ಞೆ

ಮ್ಯಾನೇಜರ್ ಚರಣ್, ಭಾರ್ಗವಿಯ ಪಿಎ ರೀತಿಯೇ ಕೆಲಸ ಮಾಡುತ್ತಾರೆ. ಆಫೀಸಲ್ಲಿ ಎಲ್ಲೆಲ್ಲೋ ಹೋಗುತ್ತಿರುವ ಹಣದ ಹಿಂದೆಲ್ಲಾ ಇದೇ ಚರಣ್ ಇದ್ದಾನೆ. ಆದರೆ, ನಂಗೇನು ಗೊತ್ತಿಲ್ಲ ಎಂದೇ ಹೇಳಿದ್ದಾನೆ. ಆಫೀಸಲ್ಲಿ ಆಗುವ ಎಲ್ಲಾ ವಿಚಾರಗಳನ್ನು ಭಾರ್ಗವಿಗೆ ತಿಳಿಸುತ್ತಾನೆ. ಈಗ ಸೀತಾಗೆ ಸಿಗುತ್ತಿರುವ ಅಡ್ವಾನ್ಸ್ ಸ್ಯಾಲರಿಯ ಬಗ್ಗೆಯೂ ಹೇಳಿದ್ದಾನೆ‌. ಇದಕ್ಕೆ ಭಾರ್ಗವಿ ಅಡ್ಡಗಾಲು ಹಾಕಿದ್ದಾಳೆ. ರಾಮನ ಮನಸ್ಸು ಸೆಳೆಯುತ್ತಿರುವ ಸೀತಾ ಇವಳೆ ಅನ್ನುವುದು ಭಾರ್ಗವಿಗೆ ಗೊತ್ತಾಗಿದೆ. ಹೀಗಾಗಿ ಆ ಸ್ಯಾಲರಿಯನ್ನು ತಡೆಹಿಡಿದಿದ್ದಾಳೆ.

ಸತ್ಯ ತಿಳಿದ ಅಶೋಕ ಏನು ಮಾಡುತ್ತಾನೆ?

ಫ್ರೆಂಡ್ ಅನ್ನೋ ನಂಬರ್‌ನಿಂದ ಕಾಲ್ ಬಂದರೆ ರಾಮ ಓಡೋಡಿ ಹೋಗುತ್ತಾನೆ. ಇದು ಭಾರ್ಗವಿಯ ಅನುಮಾನಕ್ಕೆ ಕಾರಣವಾಗಿತ್ತು. ಅದರ ಜೊತೆಗೆ ಈಗ ಮ್ಯಾನೇಜರ್ ಚರಣ್ ಹೇಳಿದ ವಿಚಾರವೂ ಭಾರ್ಗವಿಯ ತಲೆ ಕೆಡಿಸಿದೆ. ಹೀಗಾಗಿ ಸ್ಯಾಲರಿ ತಡೆಹಿಡಿದಿದ್ದಾಳೆ‌. ಅಶೋಕ್‌ಗೆ ಮೊದಲೇ ಭಾರ್ಗವಿ‌ ಮೇಲೆ ಅನುಮಾನವಿತ್ತು. ರಾಮ್ ಬಳಿ ಈ ಎಲ್ಲಾ ಅವಾಂತರದ ಹಿಂದೆ ಮನೆಯವರು ಇದ್ದಾರೆ ಎಂದಾಗ ಯಾವುದೇ ಕಾರಣಕ್ಕೂ ಆ ರೀತಿ ಅನುಮಾನ ಪಡಬೇಡ ಎಂದಿದ್ದಾನೆ. ಈಗ ಅಶೋಕನ ಕಿವಿಗೆ ಸತ್ಯ ಬಿದ್ದಿದೆ. ಆದರೆ, ಹೇಳುವಂತೆ ಇಲ್ಲ. ಹೇಳದೆ ಫ್ರೆಂಡ್‌ ಆಫೀಸ್, ಸಂಸಾರ ಉಳಿಸುತ್ತಾನೆ. ಸೀತೆಯನ್ನು ಕಾಪಾಡುತ್ತಾನೆ ಎಂಬ ನಂಬಿಕೆ ವೀಕ್ಷಕರಲ್ಲಿ ಇದೆ.

More from Filmibeat

English summary
Seetha Rama Serial Written Update on September 8th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X