Seetha Rama Serial: ರಾಮ್‌ಗೆ ಭಯ ಬೀಳಿಸಿದ ಸಿಹಿ.. ಪಿಂಕಿಗೆ ಮಾಡಿರೋ ಪ್ರಾಮೀಸ್ ಉಳಿಸಿಕೊಳ್ತಾನಾ ರಾಮ್?
ಸಿಹಿಯ ಕನಸಿಗೆ ಈಗ ರಾಮನೇ ಜೊತೆಯಾಗುತ್ತಿದ್ದಾನೆ. ಮದುವೆಯೆಂದರೆ ಜೀವನದಲ್ಲಿ ಆಲಸ್ಯ ತೋರಿಸುವ ರಾಮನಿಗೆ ಈಗ ಸೀತೆ ಬೆಸ್ಟ್ ಎನಿಸಿದ್ದಾಳೆ. ಸೀತಾ ಇಲ್ಲದ ಜಾಗ ರಾಮ್‌ಗೆ ಬೋರ್ ಹೊಡೆಸುತ್ತೆ. ಸೀತಾ ಜೊತೆಗಿದ್ದರೆ ರಾಮ್‌ಗೆ ಸಮಯ ಕಳೆಯುವುದೇ ಗೊತ್ತಾಗಲ್ಲ. ಜಗತ್ತು ಹೊಸದಾಗಿಯೇ ಕಾಣಿಸುವುದಕ್ಕೆ ಶುರುವಾಗುತ್ತೆ.
ದೊಡ್ಡ ಮನೆಯ ಮಗ ರಾಮ್. ಬೇಕು ಅಂದ್ರೆ ಕಣ್ಣುಗೆ ಬೇಕಾದ ಊಟ ತಟ್ಟೆಯಲ್ಲಿರುತ್ತೆ. ಆದರೆ, ಸೀತಾ ಮಾಡುವ ಅಡುಗೆ, ಸಿಹಿ ಪ್ಯಾಕ್ ಮಾಡಿ ಕಳುಹಿಸುವ ಬಾಕ್ಸ್ ಎಂದರೆ ರಾಮನಿಗೆ ಅದೇನೋ ಮೋಹ. ಅಷ್ಟಿಲ್ಲದೆ ಈ ಗಾದೆ ಮಾತನ್ನು ಹೇಳ್ತಾರಾ? ಶ್ರೀಮಂತರ ಮನೆ ನೋಟಕ್ಕೆ ಚೆಂದ, ಬಡವರ ಮನೆ ಊಟಕ್ಕೆ ಚೆಂದ ಅಂತ. ಭಾವಿಸುವ ವಿಚಾರಕ್ಕಷ್ಟೇ ಅಲ್ಲ, ಈಗ ರುಚಿಯ ವಿಚಾರಕ್ಕೂ ಈ ಗಾದೆ ಮಾತನ್ನ ಅನುಸರಿಸಬಹುದು.

ರಾಮನನ್ನು ಹೆದರಿಸಿದ ಸಿಹಿ
ಸಿಹಿಯ ಮಾತುಗಳೇ ಚೆಂದ. ಒಂದೇ ಸಮನೇ ಮಾತಾಡುತ್ತಲೇ ಇರುತ್ತಾಳೆ. ಅದರಲ್ಲೂ ಸಿಹಿ ಬೆಸ್ಟ್ ಫ್ರೆಂಡ್ ರಾಮ್ ಎಂದರೆ ಇನ್ನಿಲ್ಲದ ಇಷ್ಟ. ರಾಮ್‌ಗೂ ಅಷ್ಟೇ ಸಿಹಿ ಎಂದರೆ ಪ್ರೀತಿ. ಅವಳಿಗಾಗಿ ಬಂದಾಗೆಲ್ಲ ಗಿಫ್ಟ್ ತಂದು ಕೊಡುತ್ತಾ ಇರುತ್ತಾನೆ. ಈಗ ಸಿಹಿ ಕೊಟ್ಟು ಕಳುಹಿಸಿದ್ದ ಟಿಫನ್ ಬಾಕ್ಸ್ ಕಳೆದು ಹಾಕಿದ್ದಾನೆ. ಸೀತಾಗೆ ಕೋಪ ಬಂದಿದೆ. ಸೀತಾಗೆ ಕೋಪ ಬಂದ್ರೆ ಏನು ಮಾಡ್ತಾಳೆ ಅನ್ನೋದನ್ನು ರಾಮ್ ತಿಳಿಸಿದ್ದಾಳೆ.
ಬಾಕ್ಸ್‌ಗಾಗಿ ಮನೆ ಬಳಿ ಬರ್ತಾಳಾ ಸೀತಾ?
ಸಿಹಿ, ರಾಮ್‌ನನ್ನು ಅದೆಷ್ಟು ಹೆದರಿಸಿದ್ದಾಳೆ ಅಂದ್ರೆ ಅಬ್ಬಬ್ಬಾ.. ರಾಮ್ ಅಜ್ಜನ ರೂಮಿಗೆ ಹೋಗಿ, ಮಂಚದ ಕೆಳಗೆಲ್ಲಾ ಬಾಕ್ಸ್ ಹುಡುಕು ರೇಂಜಿಗೆ ಹೆದರಿಸಿದ್ದಾಳೆ. ರಾಮ್‌ಗೆ ಒಂದೇ ಭಯ. ಅಲ್ಲ ಒಂದೇ ಒಂದು ಟಿಫನ್ ಬಾಕ್ಸ್‌ಗೆ ಇಷ್ಟೆಲ್ಲ ಕಾಟ ಕೊಡ್ತಾರಾ? ಅದು ಸ್ಕೂಲ್ ಬಾಗಿಲನ್ನೇ ತೆಗೆಸಿದ್ರಾ? ಇನ್ನು ಆ ಟಿಫನ್ ಬಾಕ್ಸ್ ಸಿಕ್ಕಿಲ್ಲ ಅಂತ ನಮ್ಮ ಮನೆಯ ತನಕ ಹುಡುಕಿಕೊಂಡು ಬಂದರೆ ಏನು ಮಾಡೋದು ಎಂಬ ಆತಂಕದಲ್ಲಿದ್ದಾನೆ.

ಪಿಂಕಿ ಪ್ರಾಮಿಸ್ ನೆನಪಿಸಿದ ಸಿಹಿ
ರಾಮ್‌ಗೆ ಸಿಹಿ ಪರಿಚಯ ಆಗಿದ್ದೆ ಹೆಲಿಕಾಪ್ಟರ್ ವಿಷಯವಾಗಿ. ಅಂದ ಸೀತಾ, ಸಿಹಿಯ ಹುಟ್ಟುಹಬ್ಬದ ದಿನ ಹೆಲಿಕಾಪ್ಟರ್‌ನಲ್ಲಿ ಬಂದ್ಲು ಎಂದು ಗೊತ್ತಾದ ಮೇಲೆ ಸೀದಾ ಸಿಹಿ ಆಫೀಸ್‌ಗೆ ಬಂದಿದ್ಲು. ಅಲ್ಲಿ ರಾಮ್ ಪರಿಚಯವಾಗಿದ್ದ. ಅಲ್ಲಿಂದ ಇಬ್ಬರು ಫ್ರೆಂಡ್ಸ್ ಆದ್ರೂ. ಸಿಹಿಯ ಹಠಕ್ಕೆ ಆಸೆಯನ್ನು ಎರೆದ ರಾಮ್, ಪಿಂಕಿ ಪ್ರಾಮೀಸ್ ಮಾಡಿ, ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗ್ತೀನಿ ಎಂದಿದ್ದ. ಅಷ್ಟೇ ಅಲ್ಲ ಇತ್ತಿಚೆಗೆ ಹೋಟೆಲ್‌ಗೆ ಹೋಗಿದ್ದಾಗ ವಿಡಿಯೋ ಕಾಲ್‌ನಲ್ಲಿ ಸ್ವಿಮ್ಮಿಂಗ್ ಪೂಲ್ ನೋಡಿ ಅದಕ್ಕೂ ಪಿಂಕಿ ಪ್ರಾಮೀಸ್ ಮಾಡಿಸಿಕೊಂಡಿದ್ದಳು.
ಅಂತು ಸಿಹಿಯ ನಂಬಿಕೆ ಉಳೀತು
ಸಿಹಿ ಈಗ ಜವಾಬ್ದಾರಿಯುತ ಹುಡುಗಿಯಾಗಿದ್ದಾಳೆ. ಅದಕ್ಕೆ ಎಲ್ಲಾ ಕೆಲಸವನ್ನು ಅವಳೇ ಮಾಡುತ್ತಾಳೆ. ಇವತ್ತು ಅಷ್ಟೇ ಬೇಗ ಬೇಗ ಸ್ನಾನ ಮಾಡಿ, ಫುಲ್ ಸ್ಟೈಲಿಶ್ ಆಗಿ ರೆಡಿಯಾಗಿ ನಿಂತಿದ್ಲು. ಆದರೆ, ಇದೆಲ್ಲ ಸೀತಾಗೆ ಯಾಕೆ ಅನ್ನೋದು ಗೊತ್ತೆ ಇಲ್ಲ. ಯಾಕಂದ್ರೆ ಸಿಹಿ ತನ್ನ ಫ್ರೆಂಡ್‌ಗೆ ಕಾಲ್ ಮಾಡಿ, ತನ್ನ ಪಿಂಕಿ ಪ್ರಾಮೀಸ್ ನೆನಪು ಮಾಡಿದ್ಲು. ಅದಕ್ಕೆ ರಾಮ್ ಹೆಲಿಕಾಪ್ಟರ್ ಹಾಗೂ ಸ್ವಿಮ್ಮಿಂಗ್ ಪೂಲ್‌ಗೆ ಕರೆದುಕೊಂಡು ಹೋಗೋದಕ್ಕೆ ಬಂದಿದ್ದಾನೆ. ರಾಮ್‌ನನ್ನು ಕಂಡು ಸಿಹಿ ಫುಲ್ ಖುಷಿ.


Click it and Unblock the Notifications











