Seetha Rama Serial: 'ಸೀತಾ - ರಾಮ' ಸಿಹಿಗೆ ನಟನೆಯಷ್ಟೇ ಅಲ್ಲ ಸೇಲ್ಸ್ ಕೆಲಸನೂ ಗೊತ್ತು.. ಕಸ್ಟಮರ್ ಯಾರು?
'ಸೀತಾ ರಾಮ' ಧಾರಾವಾಹಿಯಲ್ಲಿ ಈಗಾಗಲೇ ಸಿಹಿಯ ಪರಿಚಯ ಎಲ್ಲರಿಗೂ ಆಗಿರುತ್ತೆ. ಎಷ್ಟು ಸ್ಟೀಟ್ ಆಗಿರುತ್ತಾಳೋ ಅಷ್ಟೇ ರಗಡ್ ಆಗಿರುತ್ತಾಳೆ ಅನ್ನೋದನ್ನು ಎಲ್ಲರೂ ನೋಡಿರ್ತೀರಾ. ಅಮ್ಮನಿಗೆ ಇವಳೇ ಮುದ್ದಿನ ಮಗಳು. ತಾತ-ಅಜ್ಜಿಗೆ ಇವಳೇ ದಿವ್ಯೌಷಧ. ಅಷ್ಟು ಕ್ಯೂಟ್. ಅತ್ತಾಗಲೂ ಮುದ್ದು, ನಕ್ಕಾಗಲೂ ಮುದ್ದು. ಯಾರಾದ್ರೂ ಹೊಗಳಿದರಂತು ನಾಚಿಕೆ ಮಾಡಿಕೊಳ್ಳುವಾಗ ಇನ್ನಷ್ಟು ಬ್ಯೂಟಿಫುಲ್ ಆಗಿ ಕಾಣ್ತಾಳೆ.
ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿಯ ಪ್ರೋಮೋಗಳನ್ನ ಬಿಡಲಾಗುತ್ತದೆ. ಆ ಪ್ರೋಮೋದಲ್ಲಿ ಸಿಹಿಯ ಮಾತನ್ನೇ ರಿಪೀಟ್ ರಿಪೀಟ್ ಕೇಳುವ ಬಳಗವೂ ಇದೆ. ಅಷ್ಟೆ ಅಲ್ಲ ಸಿಹಿಗಿರುವ ಫ್ಯಾನ್ಸ್ ಅರಿತುಕೊಂಡಿರುವ ಜೀ ಕನ್ನಡ ಸಿಹಿಯ ಮಾತು ಅಂತಾನೇ ಒಂದಷ್ಟು ವಿಡಿಯೋಗಳನ್ನು ಬಿಡುತ್ತೆ. ಆ ವಿಡಿಯೋದಲ್ಲಿ ಸಿಹಿ ಮಾತ್ರ ಇರುತ್ತೆ.

ಸಿಹಿಗೆ ಸೇಲ್ಸ್ ಕೆಲಸನೂ ಗೊತ್ತು
ಯಾವುದೇ ಆಗಲಿ ವ್ಯಾಪಾರ ವ್ಯವಹಾರ ಮಾಡುವುದಕ್ಕೆ ಒಂದಷ್ಟು ಹೆಚ್ಚಿನ ಜ್ಞಾನ ಹೊಂದಿರಬೇಕಾಗುತ್ತದೆ. ಅದರಲ್ಲೂ ಮಾತಿನ ಚಾಕ ಚಕ್ಯತೆ ಚೆನ್ನಾಗಿರಬೇಕು. ಅದೆಲ್ಲಾ ಗೊತ್ತಿದ್ರೆ ತಮ್ಮ ಟಾರ್ಗೆಟ್ ರೀಚ್ ಮಾಡಬಹುದು. ಆದರೆ, ಏನು ಗೊತ್ತಿಲ್ಲದೆ ಇದ್ದಾಗ ಆ ವ್ಯವಹಾರ ಕಷ್ಟ. ಆದರೆ, ನಮ್ಮ ಸಿಹಿಗೆ ಆ ಥರ ಏನು ಕಷ್ಟ ಆಗೋಕೆ ಸಾಧ್ಯವೇ ಇಲ್ಲ. ಅವಳ ಮಾತೇ ಬಂಡವಾಳ. ಬಂದಂತ ಕಸ್ಟಮರ್‌ಗಳನ್ನು ಹೇಗೆಲ್ಲಾ ಪುಸಲಾಯಿಸಿ ವ್ಯಾಪಾರ ಮಾಡ್ತಾಳೆ ಅನ್ನೋದೆ ಜಾಣತನ. ನಟನೆ ಮಾತ್ರ ಅಲ್ಲ, ಈಗ ಸೇಲ್ಸ್ ವರ್ಕ್ ಕೂಡ ಮಾಡ್ತಾ ಇದ್ದಾಳೆ.
ಸೀತಮ್ಮನೇ ಸಿಹಿಯ ಗಿರಾಕಿ
ಸಿಹಿ ಈಗ ಜ್ಯುವೆಲ್ಲರಿ ಶಾಪ್ ನಲ್ಲಿ ಕೆಲಸ ಮಾಡ್ತಾ ಇದ್ದಾಳೆ. ಹಾಗಂತ ಶಾಕ್ ಆಗ್ಬೇಡಿ. ತುಂಬಾ ದೊಡ್ಡ ಮಟ್ಟದಲ್ಲೇನು ಕೆಲಸ ಮಾಡೋಕೆ ಹೋಗಿಲ್ಲ. ಹಾಗಂತ ತುಂಬಾ ಚಿಕ್ಕದು ಅಂತ ಏನಿಲ್ಲ. ಎರಡು ಜ್ಯುವೆಲ್ಲರಿ ಸಿಹಿಯ ಬಳಿ ಇದೆ. ಅದನ್ನು ಸೇಲ್ ಮಾಡಬೇಕು. ಈಗ ಸಿಹಿಗೆ ಹೊಸ ಗಿರಾಕಿ ಬೇರೆ ಸಿಕ್ಕದ್ದಾರೆ. ಅವರು ಬೇರೆ ಯಾರೂ ಅಲ್ಲ, ಸೀತಮ್ಮ.

ಗಿರಾಕಿನ ಹೇಗೆಲ್ಲಾ ಹ್ಯಾಂಡಲ್ ಮಾಡ್ತಾಳೆ ಸಿಹಿ?
ಬಂದಂತ ಕ್ಲೈಂಟ್‌ಗಳಿಗೆ ಮರ್ಯಾದೆ ಕೊಡುವುದು ತುಂಬಾ ಮುಖ್ಯವಾಗುತ್ತದೆ. ಅದನ್ನೇ ಸಿಹಿ ಕೂಡ ಮಾಡಿದ್ದಾಳೆ. ಸೀತಮ್ಮ ಮನೆಯಲ್ಲಿ ಮಾತ್ರ ಅಮ್ಮ. ಆದ್ರೀಗ ಸಿಹಿಯ ಕ್ಲೈಂಟ್ ಆಗಿರೋದ್ರಿಂದ ರೆಸ್ಪೆಕ್ಟ್ ಸ್ವಲ್ಪ ಜಾಸ್ತೀನೆ ಆಗಿದೆ. ಮೇಡಂ ಇದನ್ನು ನೋಡಿ ಅಂತ ಸೀತಾಳ ಕೊರಳಿಗೆ ಹಾಕಿದ್ದಾಳೆ. ಆಗ ಸೀತಾ ಚೆನ್ನಾಗಿ ಕಾಣ್ತಾ ಇದ್ಯಾ ಅಂತ ಕೇಳಿದ್ರೆ, ನೀವಲ್ವಾ ತಗೊಳೋಕೆ ಬಂದಿರೋದು. ನೀವೆ ಡಿಸೈಡ್ ಮಾಡಿ ಅಂತ ನಾಜೂಕಾಗಿ ಮಾತಾಡಿದ್ದಾಳೆ.
ಸೀತಮ್ಮನಿಗೆ ಬೆಳ್ಳಿ ನೀಡಿದ ಸಿಹಿ
ಸಿಹಿಗೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ಇಲ್ಲಂದ್ರೆ ರಿಟೇಕ್ ತಗೋಳ್ತಾಳೆ. ಈಗ ಸೀತಮ್ಮನಿಗೆ ಗೋಲ್ಡ್ ನೆಕ್ಲೆಸ್ ಹಾಕಿ ನೋಡಿದ್ದಾಳೆ. ಅದು ಸೀತಮ್ಮನಿಗೆ ಇಷ್ಟ ಆಗಲಿಲ್ಲ. ಆಗ ನಿಧಾನವಾಗಿ, ಇದು ಬೇಡ. ಬೇರೆಯದ್ದು ಕೊಡಿ ಅಂತ ನಿಧಾನಕ್ಕೆ ಹೇಳಿದ್ರೆ. ಇದನ್ನೇ ಜೋರಾಗಿ ಹೇಳಿ ಅಂತ ರಿಟೇಕ್ ತಗೊಂಡಿದ್ದಾಳೆ. ಆಮೇಲೆ ಗೋಲ್ಡ್ ಬಿಟ್ಟು ಸಿಲ್ವರ್ ಕೊಟ್ಟಿದ್ದಾಳೆ. ಸಿಲ್ವರ್ ಸೂಪರ್ ಅಂದ್ರೆ ಸರ ಹಾಕ್ಬೇಕಲ್ಲ. ಕುರ್ತಾ ಎಲ್ಲಾ ಸರಿ ಮಾಡಿದ್ದಾಳೆ. ದುಪ್ಪಟ ಈ ಕಡೆ ಹಾಕಬೇಡಿ ಹೀಗೆ ಹಾಕಿ ಅಂತೆಲ್ಲಾ ಸಲಹೆ ನೀಡಿದ್ದಾಳೆ. ಅಬ್ಬಬ್ಬಾ ಕಡೆಗೂ ಸಿಹಿ ಬೇಬಿ ವ್ಯಾಪಾರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಂತೆ ಆಗಿದೆ.


Click it and Unblock the Notifications











