Seetharaama: ಸೀತಾರಾಮ ಜೋಡಿಯನ್ನು ಇನ್ನಷ್ಟು ಹತ್ತಿರವಾಗಿಸಿದ ಕ್ರೇಜಿಸ್ಟಾರ್

By Poorva

ಸೀತಾರಾಮ ಧಾರಾವಾಹಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕಂಡು ಸೀರಿಯಲ್ ಪ್ರೇಮಿಗಳು ಸಖತ್ ಖುಷಿ ಹಾಗೂ ಎಂಜಾಯ್ ಮಾಡಿದ್ದಾರೆ. ಸಿಹಿಗೆ ಇದರಿಂದ ಡಬಲ್ ಖುಷಿ ಸಿಕ್ಕಂತಾಗಿದೆ. ಸಿಹಿಗೆ ರಾಮ್ ತನ್ನ ಸ್ಕೂಲ್ ಫಂಕ್ಷನ್‌ಗೆ ಬರಬೇಕು ಎನ್ನುವ ಆಸೆ ಇತ್ತು. ಅದರಂತೆ ರಾಮ್ ಕೂಡ ಗೆಸ್ಟ್ ಆಗಿ ಸ್ಕೂಲ್ ಆನಿಯುವಲ್ ಡೇಗೆ ಹೋಗುತ್ತಾರೆ. ಸ್ಕೂಲ್ ಫಂಕ್ಷನ್‌ಗೆ ಬರಬೇಕು ಎಂದು ಈ ಮೊದಲೇ ರಾಮ್‌ಗೆ ಪತ್ರ ಕೂಡ ಬರೆದಿರುತ್ತಾಳೆ.

ರಾಮ್ ಹೇಗಾದರೂ ಮಾಡಿ ಈ ಕಾರ್ಯಕ್ರಮಕ್ಕೆ ಎಷ್ಟೇ ಕಷ್ಟ ಆದರೂ ತಪ್ಪಿಸಬಾರದು ಎಂದುಕೊಂಡು ಇರುತ್ತಾನೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಮುಖ್ಯ ಅತಿಥಿಯಾಗಿ ಬಂದಿರುತ್ತಾರೆ. ಇತ್ತ ಸೀತಾಗೆ ಇನ್ನೂ ರಾಮನ ಮೇಲೆ ಮುನಿಸು ಹೋದ ಹಾಗೆ ಕಾಣುತ್ತಾ ಇಲ್ಲ. ಇನ್ನು ರಾಮ್ ಹಾಗೂ ಸೀತಾ ಜೊತೆಯಲ್ಲಿ ಇರುವುದನ್ನು ನೋಡಿ ರವಿಚಂದ್ರನ್, ರಾಮ್ ಬಳಿ ಸೀತಾ ಬಗ್ಗೆ ಕೇಳುತ್ತಾರೆ. ರಾಮ್ ಈಕೆ ಯಾರು? ಎಂದಾಗ ಸೀತಾ ಮಾತನಾಡುತ್ತಾಳೆ. ಸರ್ ನಾನು ರಾಮ್ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವರ್ಕರ್ ಎನ್ನುತ್ತಾಳೆ. ನೀನು ಅವನ ಕಂಪನಿ ವರ್ಕರ್ ಹಾಗೆ ಕಾಣುತ್ತಿಲ್ಲ, ಅವನ ಬಾಸ್ ತರ ಕಾಣುತ್ತಾ ಇದ್ದೀಯಾ ಎಂದಾಗ ಸೀತಾಗೆ ಏನು ಅರ್ಥ ಆಗದೆ ರವಿಚಂದ್ರನ್ ಮುಖ ನೋಡುತ್ತಾಳೆ.

Seetharaama kannada serial 30th January written update

ಮೊದಲೇ ಆಕೆಗೆ ಬಹಳ ಪ್ರಿಯವಾದ ವ್ಯಕ್ತಿ ಕೂಡ ಅವರು. ಇನ್ನು ರವಿಚಂದ್ರನ್ ಸರ್ ನೋಡಲು ಇಡೀ ವಠಾರದವರೆ ಬಂದಿರುತ್ತಾರೆ. ಸೀತಾ ಹಾಗೂ ರಾಮ್‌ನನ್ನು ಇನ್ನಷ್ಟು ಹತ್ತಿರ ಮಾಡುವ ಕೆಲಸ ಕ್ರೇಜಿಸ್ಟಾರ್ ಮಾಡಿದ್ದಾರೆ. ರಾಮ್ ಮನದಲ್ಲಿ ನಿಮ್ಮ ಬಗ್ಗೆ ಅಪಾರವಾದ ಕಾಳಜಿ ಇದೆ ಪ್ರೀತಿ ಇದೆ. ಆತನ ಮುಖ ಮಾತ್ರ ನೋಡಬೇಡ ಮನಸನ್ನು ಕೂಡ ಕೊಂಚ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡು. ನಮ್ಮ ಹುಡುಗ ಬಹಳ ಒಳ್ಳೆಯವನು ಎನ್ನುತ್ತಾರೆ. ಹಾಗೆಯೇ ಸೀತಾ ಬಳಿ ಮತ್ತೊಂದು ವಿಚಾರ ಹೇಳುತ್ತಾರೆ.

ಸೀತಾಗೆ ಮನವರಿಕೆ ಮಾಡಿದ ರವಿಚಂದ್ರನ್

ರೀ ಸೀತಾ ಅವರೇ, ಇವರು ನಿಮ್ಮ ಬಾಸ್ ಎನ್ನುವುದನ್ನು ತಲೆಯಿಂದ ತೆಗೆದು ಹಾಕಿ ಬಿಡಿ. ಇವರನ್ನು ಕಣ್ಣಿಂದ ನೋಡಬೇಡಿ, ಮನಸ್ಸಿನಿಂದ ನೋಡಿ, ನಾನು ನೋಡದೆ ಇರುವ ಸ್ನೇಹಾನಾ ನಿಮ್ಮ ಇಬ್ಬರದ್ದೂ ಎಂದು ಹೇಳಿ ರಾಮ್‌ಗೆ ಸಲಹೆ ನೀಡುತ್ತಾರೆ. ರಾಮ್ ಮನದಲ್ಲಿ ಇರುವುದನ್ನು ಸೀತಾ ಬಳಿ ಹೇಳು ಎಂದು ಹೇಳುತ್ತಾರೆ. ಆದರೆ ಸೀತಾಗೆ ಮಾತ್ರ ಇದು ಯಾವುದೂ ಅರ್ಥ ಆಗುವುದೇ ಇಲ್ಲ. ಇನ್ನು ರವಿಚಂದ್ರನ್ ಸರ್‌ಗೆ ಅಶೋಕ್ ಸಿಗುತ್ತಾನೆ.

Seetharaama kannada serial 30th January written update

ರಾಮ್‌- ಸೀತಾ ಒಂದಾಗಿಸಲು ಅಶೋಕ್ ನಿರ್ಧಾರ

ರೀ ಅಶೋಕ್ ನಿಮ್ಮ ಫ್ರೆಂಡ್‌ಗೆ ನಾನೇನು ಜ್ಞಾನೋದಯ ಮಾಡುವುದು, ಪಕ್ಕದಲ್ಲಿ ಅವರೇ ಇದ್ದಾರೆ ಅದಕ್ಕೆ. ನೀವು ಮಧ್ಯದಲ್ಲಿ ಕಡ್ಡಿ ಅಲ್ಲಾಡಿಸುತ್ತ ಇದ್ದರೆ ಸಾಕು , ಅವರಿಬ್ಬರ ಮನದಲ್ಲಿ ಪ್ರೀತಿ ಯಾವಾಗ ಅರಳುತ್ತಾ ಅಲ್ಲಿಯವರೆಗೆ ಅವರ ಜೀವನ ಬೊಂಬಾಟ್ ಆಗಿ ಇರುತ್ತದೆ ಎಂದು ಸುಮ್ಮನೆ ಅಶೋಕ್ ಬಳಿ ಕ್ರೇಜಿಸ್ಟಾರ್ ಕಿಚಾಯಿಸುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಸಿಹಿ ಕೂಡ ಓಡಿ ಬರುತ್ತಾಳೆ. ಆಕೆಯ ಬಳಿಯೂ ಕೂಡ ಕೊಂಚ ಮಾತನಾಡಿ ರವಿಚಂದ್ರನ್ ಅಲ್ಲಿಂದ ಹೋಗುತ್ತಾರೆ.

ರವಿಚಂದ್ರನ್ ನೋಡಿ ಫ್ಯಾನ್ಸ್ ಖುಷ್

ರಾಮ್ ಹಾಗೂ ಸೀತಾ ನಡುವಿನ ಬಂಧವನ್ನೂ ಸರಿಪಡಿಸಲು ಕ್ರೇಜಿಸ್ಟಾರ್ ಬರಬೇಕಾಯಿತು ಎಂದು ಜನರು ಮಾತನಾಡುತ್ತಾ ಇರುತ್ತಾರೆ. ಒಟ್ಟಿನಲ್ಲಿ ಸೀತಾ ರಾಮ ಧಾರಾವಾಹಿಯಲ್ಲಿ ಕ್ರೇಜಿಸ್ಟಾರ್ ಅನ್ನು ಕಂಡು ಅಭಿಮಾನಿಗಳು ಮಾತ್ರ ಬಹಳ ಖುಷಿ ಪಟ್ಟಿದ್ದಾರೆ.

More from Filmibeat

English summary
Seetharama serial today episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X