Seetha Raama: ಸಿಹಿ ಹುಟ್ಟಿನ ರಹಸ್ಯ ರಾಮನಿಗೆ ತಿಳಿಯುತ್ತಾ? ಭಾರ್ಗವಿಯ ಆಟ ಶುರು
ರಾಮನ ಬಳಿ ಸಿಹಿ ಹುಟ್ಟಿನ ಬಗ್ಗೆ ಎಲ್ಲಾ ಸತ್ಯವನ್ನು ಹೇಳಬೇಕು ಎನ್ನುವ ತವಕ ಸೀತಾಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮುಚ್ಚಿಟ್ಟಿರುವ ವಿಚಾರವನ್ನು ಹೇಗಾದರೂ ಮಾಡಿ ರಾಮ್ ಬಳಿ ಹೇಳಿದರೆ ಅದುವೇ ಬಹಳ ದೊಡ್ಡ ಸಮಾಧಾನ ಆಗಿರುತ್ತದೆ. ಭಾರ್ಗವಿಗೆ ಇರುವುದು ಒಂದೇ ಒಂದು ಆಲೋಚನೆ. ಅದು ರಾಮ ಹಾಗೂ ಸೀತಾನನ್ನು ದೂರ ಮಾಡುವುದು, ಸೀತಾ ಯಾವತ್ತೂ ಈ ಮನೆಗೆ ಸೊಸೆ ಆಗಬಾರದು, ನನ್ನ ಅಪ್ಪುವಿನ ಜೊತೆ ಸೀತಾನನ್ನು ಯಾವತ್ತೂ ನೋಡಬಾರದು ಎನ್ನುವುದು ಆಕೆಯ ಆಲೋಚನೆ.
ರಾಮ, ಸೀತಾ ಜೊತೆ ಇಲ್ಲದೇ ಇದ್ದರೆ ಹೇಗೆ? ರಾಮ ಸುಮ್ಮನೆ ಇರುತ್ತಾನೆ, ಆತನನ್ನು ಸೋಲಿಸುವುದು ಮತ್ತಷ್ಟು ಸುಲಭ ಆಗುತ್ತದೆ, ಆದ ಕಾರಣದಿಂದಾಗಿ ರಾಮನ ಚಿಕ್ಕಮ್ಮ ಪ್ಲಾನ್ ಮಾಡುತ್ತಾ ಇರುತ್ತಾಳೆ. ಹೇಗಿದ್ದರೂ ರಾಮನ ಹಳೆಯ ಲವರ್ ಬಂದಿದ್ದಾಳೆ, ಆಕೆಯ ಜೊತೆ ರಾಮ್ ಮದುವೆ ಮಾಡಿ ಬಿಡಬೇಕು ಎಂದು ಪ್ಲಾನ್ ಮಾಡುತ್ತಾ ಇರುತ್ತಾಳೆ. ಹಾಗೆಯೇ ಇದರ ಬಗ್ಗೆ ರಾಮನ ತಾತನ ಬಳಿ ಮಾತನಾಡುತ್ತಾಳೆ,

ರಾಮನ ತಾತನಿಗೆ ಮೊಮ್ಮಗನ ಮದುವೆ ಯಾವಾಗ ಮಾಡುವುದು ಎನ್ನುವ ತವಕ ಹೆಚ್ಚಾಗುತ್ತಿದೆ. ಹಾಗೆಯೇ ರಾಮನಿಗೆ ಸೀತಾ ಮೇಲೆ ಲವ್ ಆಗಿರುವ ವಿಚಾರ ತಿಳಿದಿರುತ್ತದೆ. ಭಾರ್ಗವಿ ಮೆತ್ತಗೆ ತನ್ನ ಮಾವನ ಬಳಿ ಬಂದು ರಾಮ್ ಮದುವೆ ವಿಚಾರ ಮಾತನಾಡಿದಾಗ ಟೈಮ್ ಬರಲಿ ನಾನೇ ಮಾತನಾಡುತ್ತೇನೆ ಎಂದು ಹೇಳುತ್ತಾರೆ. ಇತ್ತ ಸೀತಾ, ರಾಮ್ ಬಳಿ ಸಿಹಿ ಹುಟ್ಟಿನ ಬಗ್ಗೆ ನಿಜ ಹೇಳಲು ಬರುತ್ತಾಳೆ. ಆದರೆ ರಾಮ್ ಎಲ್ಲೇ ಹೋದರು ಆತನ ಹಳೆಯ ಗರ್ಲ್ ಫ್ರೆಂಡ್ ಆತನ ಹಿಂದೆ ಹಿಂದೆ ಸುತ್ತುತ್ತಿರುತ್ತಾಳೆ.
ರಾಮ್ ಗರಂ
ಹಳೇ ಪ್ರೇಯಸಿಯನ್ನು ನೋಡಿದ ರಾಮ್‌ಗೆ ಬಹಳ ಕೋಪ ಬರುತ್ತಿರುತ್ತದೆ. ರಾಮ್ ಬಳಿ ಸೀತಾ ಇನ್ನೇನು ನಿಜ ಹೇಳಬೇಕು ಎಂದುಕೊಂಡಾಗ ಅಲ್ಲಿಗೆ ರಾಮ್ ಹಳೆಯ ಗೆಳತಿ ಎಂಟ್ರಿ ಆಗುತ್ತದೆ. ಸೀತಾ, ರಾಮ ಬಳಿ ಮಾತನಾಡಬೇಕು ಎನ್ನುವ ವಿಚಾರ ಮರೆತು ಹೋಗಿಬಿಡುತ್ತದೆ. ಇತ್ತ ಸಿಹಿ, ರಾಮ ನನ್ನ ತಂದೆ ಆಗುವುದು ಇಷ್ಟ ಇಲ್ಲ, ರಾಮ ನನ್ನ ಗೆಳೆಯನಾಗಿ ಇರಲಿ ಎಂದು ಅಳುತ್ತಾಳೆ. ಆಕೆಗೆ ರಾಮನ ಮೇಲೆ ಆಗಾಧವಾದ ಪ್ರೀತಿ, ಗೆಳೆಯನಾಗಿ ರಾಮ, ಸಿಹಿಗೆ ಬಹಳ ಹತ್ತಿರ ಆಗಿದ್ದಾನೆ. ಇನ್ನೂ ಅಪ್ಪ ಎಂದರೆ ಕೊಂಚ ಭಯ ಪಡುತ್ತಿರುವ ಸಿಹಿಯ ಮನಸ್ಸು ಗೆಲ್ಲುತ್ತಾನ ರಾಮ?

ಚಾಂದಿನಿ - ರಾಮ ಮದುವೆಗೆ ತಾತ ಒಪ್ತಾರಾ?
ಅಪ್ಪು ಹಾಗೂ ಚಾಂದಿನಿ ಒಂದಾಗಬೇಕು ಎನ್ನುವ ಹಾಗೆ ಭಾರ್ಗವಿ ತಾತನ ಬಳಿ ಮಾತನಾಡುತ್ತಾ ಇರುತ್ತಾಳೆ. ಆದರೆ ಇದನ್ನೆಲ್ಲ ಕೇಳಿದ ತಾತ, ನಾನು ಇದರ ಬಗ್ಗೆ ಎಲ್ಲಾ ಯೋಚನೆ ಈಗಾಗಲೇ ಮಾಡಿದ್ದೇನೆ. ನೀನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ನಗುತ್ತಾ ಹೇಳುತ್ತಾರೆ. ಚಾಂದಿನಿ ಮಾಡಿಟ್ಟು ಹೋದ ಘನಂಧಾರಿ ಕೆಲಸದಿಂದಾಗಿ ರಾಮ ಬಹಳ ದೂರ ಹೋಗಿರುತ್ತಾನೆ. ಬಳಿಕ ಎಲ್ಲವನ್ನೂ ಮರೆತು ಮತ್ತೆ ಭಾರತಕ್ಕೆ ಮರಳಿದ್ದಾರೆ .
ಸೀತಾ ಮದುವೆಗೆ ಸಿಹಿ ಪರ್ಮಿಷನ್?
ಇದೀಗ ರಾಮನ ಜೀವನ ಬದಲಾಗಿ ಹೋಗಿದೆ. ರಾಮನಿಗೆ ಸೀತಾ ಪ್ರಪಂಚ ಆಗಿಬಿಟ್ಟಿದ್ದಾಳೆ. ಸೀತಾಳನ್ನು ತನ್ನ ಜೀವನದಲ್ಲಿ ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಾನೆ. ಅದಕ್ಕಾಗಿ ಸಿಹಿಯ ಪರ್ಮಿಷನ್ ಬೇರೆ ಕೇಳುತ್ತಾನೆ. ಆದರೆ ಸಿಹಿ ಅದಕ್ಕೆ ಪರ್ಮಿಷನ್ ಕೊಡದೆ ಇದ್ದಾಗ ರಾಮನಿಗೆ ಬಹಳ ಬೇಸರ ಆಗುತ್ತದೆ. ಹೇಗಪ್ಪಾ ನಾನು ಸಿಹಿಗೆ ಅರ್ಥ ಮಾಡಿಸಲಿ ಎಂದು ಆಲೋಚನೆ ಮಾಡುತ್ತಾ ಇರುತ್ತಾನೆ.


Click it and Unblock the Notifications











