Seetharaama: ಸೀತಾಳನ್ನು ಭೇಟಿ ಮಾಡಲು ಹೊರಟ ತಾತ; ಭಾರ್ಗವಿಗೆ ಶುರು ಹೊಸ ಸಂಕಷ್ಟ
ಸೀತಾಗೆ ತನ್ನ ಮಗಳು ಸಿಹಿಯೇ ಪ್ರಪಂಚ. ಆಕೆಗೆ ಸಿಹಿ ಒಬ್ಬಳು ಜೊತೆಗಿದ್ದರೆ ಆಕೆ ಇಡೀ ಪ್ರಪಂಚವನ್ನು ಗೆಲ್ಲುತ್ತಾಳೆ. ಆದರೆ ಆಕೆಗೆ ಇದೀಗ ಹೊಸ ಟೆನ್ಷನ್ ಶುರುವಾಗಿದೆ. ತಾತ ಸಿಹಿ ಬೇಕೋ ಅಥವಾ ರಾಮ ಬೇಕೋ ಎನ್ನುವ ಆಪ್ಷನ್ ಇಟ್ಟರೆ ನಾನೇನು ಮಾಡಲಿ ಎನ್ನುವ ಗೊಂದಲದಲ್ಲಿ ಆಕೆ ಸಿಕ್ಕಿ ಹಾಕಿಕೊಂಡಿದ್ದಾಳೆ.
ಸಿಹಿಯ ಜೊತೆ ಉತ್ತಮವಾಗಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದ ಸೀತಾಗೆ ಮೊದಲು ರುದ್ರ ಪ್ರತಾಪನ ಕಾಟವಿದ್ದಿದ್ದು ನಿಜ. ಅದಾದ ಬಳಿಕ ಅವರಿಬ್ಬರೂ ಬಹಳ ಖುಷಿಯಾಗಿದ್ದರು. ಇದೀಗ ಇಬ್ಬರ ಜೀವನದ ನಡುವೆ ರಾಮ್ ಎಂಟ್ರಿ ಕೊಟ್ಟಿದ್ದಾನೆ. ರಾಮನಿಗೆ ಸಿಹಿ ಅಂದರೆ ಬಹಳ ಅಚ್ಚುಮೆಚ್ಚು. ಸೀತಾ ಬೇರೆ ಯಾರನ್ನೇ ಮದುವೆ ಆದರೂ ಸಿಹಿಯನ್ನು ರಾಮ್ ನಷ್ಟು ಪ್ರೀತಿ ಮಾಡುವ ಹುಡುಗ ಆಕೆಗೆ ಸಿಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ರಾಮ್ ಎಂದರೆ ಸಿಹಿಗೆ ಬಹಳ ಅಚ್ಚುಮೆಚ್ಚು.

ಇತ್ತ ರಾಮ್ ತಾತನಿಗೆ ಸೀತಾಗೆ ಮದುವೆ ಆಗಿ ಒಂದು ಮಗುವಿರುವ ವಿಚಾರ ಯಾರಿಗೂ ಕೂಡ ತಿಳಿದಿರುವುದಿಲ್ಲ . ಆದರೆ ಕೊನೆಗೆ ತಿಳಿದ ಕ್ಷಣ ಮಾತ್ರ ತಾತ ಬಹಳ ಕೋಪ ಮಾಡಿಕೊಂಡಿದ್ದರು. ಹಾಗೆಯೇ ಭಾರ್ಗವಿ ಮೇಲೆ ಬಹಳಷ್ಟು ಕೂಗಾಡಿದ್ದರು. ಅದಾದ ಬಳಿಕ ಸೀತಾ ಮನೆಗೆ ಹೋಗುತ್ತಾರೆ. ಸಿಹಿಯೇ ಸೀತಾ ಮಗಳು ಎನ್ನುವ ಸತ್ಯ ತಾತನಿಗೆ ತಿಳಿಯುತ್ತದೆ.
ಆಕೆಯ ಸಂಸ್ಕಾರ ನೋಡಿದ ತಾತನಿಗೆ ಮನದಲ್ಲಿ ಬಹಳ ಖುಷಿ ಆದರೂ ಅದನ್ನು ತೋರಿಸುವುದು ಇಲ್ಲ. ಕೊನೆಗೆ ಅಲ್ಲಿಗೆ ಸೀತಾ ಆಫೀಸ್‌ನಿಂದ ಬಹಳ ಆತುರವಾಗಿ ಬರುತ್ತಾಳೆ. ಸೀತಾಳನ್ನು ನೋಡಿದ ತಾತ ನಿನ್ನ ಬಳಿ ನಾಳೆ ನಾನು ಚೂರು ಮಾತನಾಡಬೇಕಿತ್ತು ಎನ್ನುತ್ತಾರೆ. ಸೀತಾ ಸರಿ ಎಂದು ಹೇಳುತ್ತಾಳೆ. ಹಾಗೆಯೇ ಅಲ್ಲಿಂದ ತಾತ ಹೋಗುತ್ತಾರೆ. ಇತ್ತ ಸಿಹಿ ಮಾತ್ರ ಬಹಳ ಖುಷಿಯಲ್ಲಿ ಇದ್ದರೆ ಸೀತಾಗೆ ಭಯ ಆವರಿಸಿಕೊಳ್ಳುತ್ತದೆ. ಆಕೆ ರಾತ್ರಿ ವೇಳೆ ರಾಮ್‌ಗೆ ಕರೆ ಮಾಡುತ್ತಾಳೆ.
ರಾಮನ ಬಳಿ ಅಳಲು ತೋಡಿಕೊಂಡ ಸೀತಾ
ರಾಮ್ ಮಲಗಿದ್ರಾ? ತಾತ ಮನೆಗೆ ಬಂದು ನನ್ನ ಮೀಟ್ ಮಾಡಬೇಕು ಎಂದು ಹೇಳಿದ್ದಾರೆ. ನನಗೆ ಬಹಳ ಭಯ ಆಗುತ್ತಿದೆ. ನನ್ನ ಮಗಳು ಸಿಹಿ ಮಾತ್ರ ಬಹಳ ಖುಷಿಯಲ್ಲಿ ಇದ್ದಾಳೆ . ನನ್ನ ಮನದ ಆತಂಕ ಏನೆಂದರೆ ನಿಮ್ಮಿಬ್ಬರ ಮಧ್ಯೆ ಆಯ್ಕೆಗಳು ಬಂದರೆ ನನಗೆ ಯಾರು ಇಂಪಾರ್ಟೆಂಟ್ ಎನ್ನುವುದು ನಿಮಗೆ ಸ್ಪಷ್ಟವಾಗಿ ತಿಳಿದಿದೆ. ಆ ರೀತಿಯ ದಿನ ಬಾರದೇ ಇರಲಿ. ಆದರೂ ನಾನು ಈ ವಿಚಾರವನ್ನು ನಿಮ್ಮ ಬಳಿ ಹೇಳಬೇಕಿತ್ತು ಎನ್ನುತ್ತಾಳೆ.

ರಾಮನ ಮಾತು ಕೇಳಿ ಸೀತಾ ನಿರಾಳ
ಸೀತಾ ಮಾತಿಗೆ ಸರಿ ನೀವು ಅದರ ಬಗ್ಗೆ ಏನು ಟೆನ್ಷನ್ ಮಾಡಿಕೊಳ್ಳಬೇಡಿ. ಹಾಗೆಲ್ಲ ಏನು ಆಗಲ್ಲ. ಹಾಗೆ ಏನಾದರು ಆಯ್ಕೆಗಳನ್ನು ಕೊಟ್ಟರೆ ನೀವು ಸಿಹಿಯನ್ನೇ ಆಯ್ದುಕೊಳ್ಳುವುದು ಉತ್ತಮ ಎಂದು ಹೇಳುತ್ತಾನೆ. ಇನ್ನೂ ಸೀತಾಗೆ ರಾಮನ ಉತ್ತರದಿಂದ ಕೊಂಚ ನಿರಾಳ ಆಗುತ್ತದೆ. ಇತ್ತ ಭಾರ್ಗವಿಗೆ ರಾಮನ ತಾಯಿಯ ಕನಸು ಬೀಳುತ್ತದೆ. ಭಾರ್ಗವಿ ನನ್ನ ಸ್ಥಾನವನ್ನು ಕಸಿದುಕೊಳ್ಳಲು ನೀನು ನನ್ನನ್ನು ಸಾಯಿಸಿ ಬಿಟ್ಟೆಯಲ್ಲ. ನನ್ನ ಮಗನ ಜೀವನ ಹಾಳು ಮಾಡಲು ಪ್ರಯತ್ನಿಸಿದೆ ಹಾಗೆಯೇ ಆತನನ್ನು ಅನಾಥನನ್ನಾಗಿ ಮಾಡಿದೆ. ಇದೆಲ್ಲ ನೀನು ಮಾಡಿದ ಕುತಂತ್ರ. ನಿನ್ನ ಬಂಡವಾಳ ಇಡೀ ಮನೆಯವರಿಗೆ ತಿಳಿಯಲು ನನ್ನ ಸೊಸೆ ಬರಬೇಕು. ಆಕೆ ಈ ಮನೆಗೆ ಬಂದ ಗಳಿಗೆ ಮಾತ್ರ ನನ್ನ ಸ್ಥಾನವನ್ನು ಆಕೆ ಪಡೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ. ನಿನ್ನ ಕೈಯಿಂದ ನನ್ನ ಮಗನನ್ನು ರಕ್ಷಣೆ ಮಾಡುತ್ತಾಳೆ ಎಂದು ಹೇಳಿ ನಗುತ್ತಾಳೆ ಅದೃಶ್ಯ ಆಗುತ್ತಾಳೆ.
ಭಾರ್ಗವಿಗೆ ಬಿದ್ದಿದೆ ಭಯಾನಕ ಕನಸು
ಭಾರ್ಗವಿಕನಸಿನಲ್ಲಿ ತನ್ನ ಅಕ್ಕನನ್ನು ನೋಡಿ ಭಯ ಪಟ್ಟುಕೊಂಡು ಚೀರಿಕೊಂಡು ಎಚ್ಚರಗೊಳ್ಳುತ್ತಾಳೆ. ಇದನ್ನು ನೋಡಿದ ಆಕೆಯ ಗಂಡನಿಗೆ ಶಾಕ್ ಆಗುತ್ತದೆ. ಹಾಗೆಯೇ ಆಕೆಯನ್ನು ಸಮಾಧಾನ ಪಡಿಸುತ್ತಾನೆ.


Click it and Unblock the Notifications











