SeethaRaama: ರಾಮನ ಪ್ರೀತಿಗೆ ಒಲಿಯುತ್ತಾಳಾ ಸೀತಾ? ಮಲ್ಲಿಗೆ ಹೂವು ಸೇರಿದ್ದೆಲ್ಲಿಗೆ..?
ಸೀತಾ ರಾಮ ಧಾರಾವಾಹಿಯಲ್ಲಿ ರಾಮ ಮತ್ತು ಸೀತಾಳನ್ನು ಒಂದು ಮಾಡಲು ಅಶೋಕ ಬಹಳ ಪ್ರಯತ್ನ ಪಡುತ್ತಿದ್ದಾನೆ. ಸ್ನೇಹಿತನ ಬದುಕು ಸರಿ ಹೋಗಲಿ ಎಂಬುದೇ ಅಶೋಕನ ಆಲೋಚನೆ.
ಟ್ರಾನ್ಸ್ ಫರ್ ಆಗುತ್ತಿದ್ದ ಸೀತಾ ಬಗ್ಗೆ ರಾಮ ಕೊರಗುವಂತೆ ಮಾಡಿ, ತನ್ನ ಪ್ರೀತಿಯನ್ನು ಅಶೋಕನ ಮುಂದೆ ಹೇಳಿಕೊಳ್ಳುವಂತೆ ಮಾಡುತ್ತಾನೆ. ಸೀತಾಳನ್ನು ಬಿಟ್ಟುಕೊಡಲಾಗದೇ ರಾಮ ಟ್ರಾನ್ಸ್‌ಫರ್ ಅನ್ನು ಕ್ಯಾನ್ಸಲ್ ಮಾಡಿಸಿದ್ದಾನೆ. ಸಿಹಿ ಹೆಸರಿನಲ್ಲಿ ಸೀತಾಳನ್ನು ತನ್ನ ಆಫೀಸಿನಲ್ಲೇ ಉಳಿಸಿಕೊಂಡಿದ್ದಾನೆ.

ಆಫೀಸಿನಲ್ಲಿ ಅಶೋಕ ಬಾಸ್ ಆಗಿಯೂ, ರಾಮ ನೌಕರನಂತೆಯೂ ನಟಿಸುತ್ತಿರುವುದು ವಿಶ್ವನಿಗೆ ಗೊತ್ತಾಗಿದೆ. ಆದರೆ, ಈ ವಿಚಾರವನ್ನು ಭಾರ್ಗವಿಗೆ ತಿಳಿಸಿದರೆ ಮಜಾ ಇರುವುದಿಲ್ಲ. ಎಷ್ಟು ದಿನ ಅಶೋಕ ಮತ್ತು ರಾಮ ಆಟ ಆಡುತ್ತಾರೋ ಆಡಲಿ ಎಂದು ಬಿಟ್ಟಿದ್ದಾನೆ.
ವಿಶ್ವನ ಮಾತಿಗೆ ತಬ್ಬಿಬ್ಬಾದ ಅಶೋಕ
ಮಾತಿಗೆ ಸಿಕ್ಕಾಗಲೆಲ್ಲಾ ವಿಶ್ವ, ಅಶೋಕ ಮತ್ತು ರಾಮನ ಕಾಲು ಎಳೆಯುತ್ತಿರುತ್ತಾನೆ. ಇದು ಅಶೋಕನಿಗೆ ಅರ್ಥವಾಗುತ್ತಿದೆ. ಆದರೆ, ರಾಮನಿಗೆ ತಿಳಿಯುತ್ತಿಲ್ಲ. ಅದಲು ಬದಲು ಆಟ ಚೆನ್ನಾಗಿದೆ. ಬಾಸ್ ಎಂಪ್ಲಾಯಿಯಂತೆ ಇರಬೇಕು ಎಂದೆಲ್ಲಾ ಭಾರ್ಗವಿ ಇರುವಾಗಲೇ ಒಗಟು ಒಗಟಾಗಿ ವಿಶ್ವ ಮಾತನಾಡುತ್ತಾನೆ. ಇದರಿಂದ ಅಶೋಕನಿಗೆ ಬಹಳ ಮುಜುಗರವುಂಟಾಗುತ್ತದೆ. ಈ ವಿಚಾರವನ್ನು ಅಶೋಕ ಎಷ್ಟೇ ತಿಳಿಸಿ ಹೇಳಿದರೂ ರಾಮ ನಂಬುತ್ತಿಲ್ಲ.
ಸೀತಾ ಮದುವೆ ಮಾಡಿಸಲು ಪ್ಲಾನ್
ಇನ್ನು ಸೀತಾಳ ಟ್ರಾನ್ಸ್‌ಫರ್ ಕ್ಯಾನ್ಸಲ್ ಆಗಿರುವುದಕ್ಕೆ ಸಿಹಿ ಬಹಳ ಖುಷಿಯಾಗಿದ್ದಾಳೆ. ತನ್ನ ಫ್ರೆಂಡ್ ರಾಮ್ ಮುಗುಳು ನಗೆ ಮ್ಯಾಜಿಕ್ ಮಾಡಿದ್ದಾರೆ ಎಂದು ತಿಳಿದುಕೊಂಡಿದ್ದಾಳೆ. ಇನ್ನು ಅಜ್ಜಿ ಹಾಗೂ ತಾತನಿಗೂ ಸೀತಾ ಮತ್ತು ಸಿಹಿ ಇಬ್ಬರೂ ವಾಪಸ್ ಬಂದಿದ್ದಕ್ಕೆ ಖುಷಿಯಾಗಿದೆ. ಸೀತಾ ಅಣ್ಣ ಮತ್ತು ಅತ್ತಿಗೆ ಹೇಗಾದರೂ ಮಾಡಿ ಸೀತಾಳನ್ನು ಲಾಯರ್ ಗೆ ಕೊಟ್ಟು ಮದುವೆ ಮಾಡಬೇಕು. ಲಕ್ಷಾಂತರ ರೂಪಾಯಿ ಹಣ ಪಡೆಯಬೇಕು ಎಂದು ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿಯೇ ಸೀತಾ ಅತ್ತಿಗೆ ಪದೇ ಪದೇ ಅಜ್ಜಿಯ ಬಳಿಗೆ ಬಂದು ಸೀತಾ ಮದುವೆ ಬಗ್ಗೆ ಮಾತನಾಡುತ್ತಲೇ ಇರುತ್ತಾಳೆ.

ಪ್ರೀತಿ ಇದೆ ಎಂದು ತೋರಿಸಿಕೊಂಡ ರಾಮ
ರಾಮ, ಅಶೋಕನ ಎದುರಿಗೆ ಸೀತಾ ಮೇಲೆ ಇರುವ ಪ್ರೀತಿಯನ್ನು ತಿಳಿಸಿದ್ದಾನೆ. ಅದೂ ಅಲ್ಲದೇ, ಹಲವು ವರ್ಷಗಳಿಂದ ಪ್ರೀತಿಗಾಗಿ ತಾನು ಕಟ್ಟಿಕೊಳ್ಳುತ್ತಿದ್ದ ವಾಚನ್ನು ಎತ್ತಿಟ್ಟು ಬೇರೆ ವಾಚ್ ಅನ್ನು ಬಳಸಿದ್ದಾನೆ. ಇದನ್ನೆಲ್ಲಾ ಗಮನಿಸುತ್ತಿರುವ ಅಶೋಕನಿಗೆ ಬಹಳ ಖುಷಿಯಾಗಿದೆ. ಇನ್ನು ರಾಮ ಆಫೀಸಿಗೆ ಹೋಗುವ ದಾರಿಯಲ್ಲಿ ಮಲ್ಲಿಗೆ ಹೂವನ್ನು ಸೀತಾಳಿಗೋಸ್ಕರ ಖರೀದಿಸುತ್ತಾನೆ. ಅಶೋಕನಿಗೆ ಆದಷ್ಟು ಬೇಗ ರಾಮ ಮತ್ತು ಸೀತಾ ಇಬ್ಬರೂ ಬೇಗನೇ ಒಂದಾಗಲಿ ಎಂದು ಬಯಸುತ್ತಿದ್ದಾನೆ.
ಸೀತಾಳಿಗೆ ತಂದ ಮಲ್ಲಿಗೆ ಹೂವು
ಮಲ್ಲಿಗೆ ಹೂವನ್ನು ಸೀತಾಳಿಗೋಸ್ಕರ ತರುವ ರಾಮ, ಟೇಬಲ್ ಮೇಲೆ ಇಡುತ್ತಾನೆ. ಆದರೆ ಸೀತಾಳಿಗೆ ಹೇಗೆ ಕೊಡುತ್ತಾನೋ ಎಂಬ ಕುತೂಹಲ ಇರುವಾಗಲೇ, ಸೀತಾ ಹೂವನ್ನು ರಾಮನಿಗೆ ಮುಡಿಸುತ್ತಾಳೆ. ಇದನ್ನು ನೋಡಿದ ರಾಮನಿಗೂ ಖುಷಿಯಾಗುತ್ತದೆ. ಸೀತಾ ಮತ್ತು ರಾಮ ಒಂದಾಗಲು ಒಂದು ಕಡೆಯಿಂದ ಸಿಹಿ ಸೇತುವೆಯಾಗಿದ್ದರೆ, ಮತ್ತೊಂದು ಕಡೆಯಿಂದ ಅಶೋಕ ಕೂಡ ಸೇತುವೆಯಂತೆ ರಾಮನ ಮನಸ್ಸಿನಲ್ಲಿ ಪದೇ ಪದೇ ಪ್ರೀತಿ ಬಗ್ಗೆ ಹೇಳುತ್ತಲೇ ಇರುತ್ತಾನೆ. ಆದರೆ, ಸೀತಾ- ರಾಮ ಒಂದಾಗದಂತೆ ಭಾರ್ಗವಿ ತಡೆಯುತ್ತಿದ್ದು, ಮುಂದೆ ಯಾವೆಲ್ಲಾ ಸವಾಲುಗಳನ್ನು ಎದುರಿಸುತ್ತಾರೋ ಕಾದು ನೋಡಬೇಕಿದೆ.


Click it and Unblock the Notifications











