Seetharaama: ಹೊಸ ಸಿಇಒ ಆಗಿ ಅಶೋಕ ನೇಮಕ: ಭಾರ್ಗವಿಗೆ ಚಮಕ್ ಕೊಟ್ಟ ರಾಮ್
ಅಶೋಕ ಹಾಗೂ ಪ್ರಿಯ ಮನದಲ್ಲಿ ಇದೀಗ ಪ್ರೀತಿ ಮೂಡಿದೆ. ಪ್ರಿಯಗೆ ಮೊದಲಿನಿಂದಲೂ ಅಶೋಕನನ್ನು ಕಂಡರೆ ಬಹಳ ಪ್ರೀತಿ. ಮೊದಮೊದಲಿಗೆ ಅಶೋಕನನ್ನು ನೋಡಿ ಇವರೇ ಈ ಕಂಪನಿಯ ಬಾಸ್ ಎಂದು ಅಂದುಕೊಂಡಿರುತ್ತಾಳೆ. ಆದರೆ ಈಗ ಸತ್ಯ ಗೊತ್ತಾಗಿದೆ. ಕಂಪನಿಯ ಮುಖ್ಯಸ್ಥ ಬೇರೆ ಯಾರೂ ಅಲ್ಲ, ಶ್ರೀರಾಮ್ ಎಂದು ಗೊತ್ತಾಗಿದೆ.
ಸತ್ಯ ತಿಳಿದ ಬಳಿಕ ಪ್ರಿಯಾ, ಅಶೋಕನ ಮೇಲೆ ಕೊಂಚ ಮುನಿಸಿಕೊಂಡಿರುತ್ತಾಳೆ. ಅಶೋಕ ತನ್ನದೇನು ತಪ್ಪಿಲ್ಲ ಎಂದು ಪ್ರಿಯ ಬಳಿ ಹೇಳಿಕೊಂಡರೂ, ಆಕೆ ಕೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಬದಲಾಗಿ ಅಶೋಕ ಸುಳ್ಳು ಹೇಳಿದ್ದಾನೆ ಎಂದು ತಪ್ಪು ತಿಳಿದಿದ್ದಳು. ಆದರೆ ಕೊನೆಗೂ ಅಶೋಕ್, ಪ್ರಿಯಾಗೆ ನಿಜ ವಿಚಾರ ಗೊತ್ತು ಮಾಡಿಸಿದ್ದಾನೆ. ಹಾಗಾಗಿ ಪ್ರಿಯಾಗೆ ಅಶೋಕನ ಮೇಲೆ ಪ್ರೀತಿ ಆಗುತ್ತದೆ. ಆಫೀಸಿಗೆ ಬಂದ ಪ್ರಿಯಾ, ಅಶೋಕನನ್ನು ಭೇಟಿ ಮಾಡುತ್ತಾಳೆ.

ಸೂರ್ಯ ಪ್ರಕಾಶ್ ಸರ್ ಅವರು ನಿಮಗೆ ಏನಾಗಬೇಕು ಎಂದೆಲ್ಲ ಪ್ರಿಯಾ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ಇರುತ್ತಾಳೆ. ಇದನ್ನು ನೋಡಿದ ಅಶೋಕ್ ನಿಜ ವಿಚಾರವನ್ನು ಬಿಚ್ಚಿಡುತ್ತಾನೆ. ಸೂರ್ಯ ಪ್ರಕಾಶ ದೇಸಾಯಿ ನನಗೆ ಗಾಡ್ ಫಾದರ್. ಅವರೇ ನನ್ನನ್ನೂ ಓದಿಸಿ ಬೆಳೆಸಿದ್ದು. ಆದರೆ ಸೂರ್ಯ ಪ್ರಕಾಶ್‌ಗೆ ನಾನು ಯಾರೂ ಎಂಬ ವಿಚಾರ ಇದುವರೆಗೆ ನನಗೆ ತಿಳಿದಿಲ್ಲ ಎಂದು ಬಹಳ ಬೇಸರದಿಂದ ಹೇಳುತ್ತಾನೆ. ಇದನ್ನು ಕೇಳಿದ ಪ್ರಿಯಾ ಏನೇ ಆಗಲಿ ಸರ್ ನೀವು ಒಳ್ಳೆಯವರು ಎಂದು ಹೇಳುತ್ತಾಳೆ.
ಪ್ರಿಯಾ ಮಾತಿಗೆ ಅಶೋಕ್ ಸೈಲೆಂಟ್
ಬಳಿಕ ಪ್ರಿಯಾ, ಏನೋ ನೆನಪು ಮಾಡಿಕೊಂಡು ಹೇಳುತ್ತಾಳೆ, ಸರ್ ನಿಮಗೆ ನಾನು ಸ್ಯಾಂಡ್ವಿಚ್ ಮಾಡಿದ್ದೀನಿ ಎಂದು ಟಿಫನ್ ಬಾಕ್ಸ್ ಕೊಟ್ಟು ಹೋಗುತ್ತಾಳೆ. ಟಿಫನ್ ಓಪನ್ ಮಾಡಿದ ಅಶೋಕನಿಗೆ ಕೊಂಚ ಶಾಕ್ ಆಗುತ್ತದೆ. ಅದರಲ್ಲಿ ಹಾರ್ಟ್ ಸಿಂಬಲ್ ಇರುವುದನ್ನು ನೋಡಿ ಬಹಳ ಖುಷಿ ಪಡುತ್ತಾನೆ. ಹಾಗೆಯೇ ತಮ್ಮಿಬ್ಬರ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದುಕೊಳ್ಳುತ್ತಾನೆ. ಇತ್ತ ಶ್ರೀ ರಾಮನಿಗಾಗಿ ಸಿಹಿ ಪತ್ರ ಬರೆಯುತ್ತಾ ಇದ್ದಾಳೆ.
ಪತ್ರದ ಮೂಲಕ ರಾಮನಿಗೆ ಸಂದೇಶ
ಸಿಹಿಗೆ ಶ್ರೀ ರಾಮ ಅಂದರೆ ಪಂಚ ಪ್ರಾಣ. ಆದರೆ ಆತನ ಜೊತೆ ಮಾತನಾಡಲು ಆಗದೇ ಪತ್ರ ಬರೆದು ಪೋಸ್ಟ್ ಮೂಲಕ ಕಳುಹಿಸುತ್ತಾ ಇದ್ದಾಳೆ. ಇನ್ನು ಶ್ರೀ ರಾಮ ಎಲ್ಲರನ್ನೂ ಕರೆದು ಹೊಸ ಸಿಇಒ ಹೆಸರನ್ನು ಅನೌನ್ಸ್ ಮಾಡಿದ್ದಾನೆ. ಆ ಹೆಸರು ಕೇಳಿದೊಡನೆ ಭಾರ್ಗವಿ ಬಹಳ ಶಾಕ್ ಆಗುತ್ತಾಳೆ. ಬೇರೆ ಯಾರ ಹೆಸರು ಅಲ್ಲ ಅಶೋಕನ ಹೆಸರು ಎಲ್ಲರ ಮುಂದೆ ಪ್ರಸ್ತಾಪ ಮಾಡುತ್ತಾನೆ ರಾಮ್.

ಅಶೋಕನಿಗೆ ಭಾರ್ಗವಿ ಶುಭಾಶಯ
ಇನ್ನು ಅಶೋಕನಿಗೆ ಭಾರ್ಗವಿ ಸಹ ಶುಭಾಶಯ ತಿಳಿಸಿದ್ದಾಳೆ. ಆದರೆ ಈ ವಿಚಾರ ಅಶೋಕನಿಗೆ ಬಹಳ ಶಾಕ್ ಆಗುತ್ತದೆ.ಏಕೆಂದರೆ ಭಾರ್ಗವಿ ಏನೆಂಬುದು ಅಶೋಕನಿಗೆ ತಿಳಿದಿದೆ. ಏನು ಮಾಡಿದರೆ ಈ ಆಫೀಸ್‌ನಲ್ಲಿ ಶ್ರೀ ರಾಮನ ಮನೆಗೆಲ್ಲಬಹುದು ಎಂಬುದು ಭಾರ್ಗವಿಗೆ ತಿಳಿದಿದೆ. ಆದರೆ ಅಶೋಕನ ಮೇಲಿರುವ ದೂರನ್ನು ಕಂಡು ಅಶೋಕ ಯಾಕೆ ಈ ಆಫೀಸಿನಲ್ಲಿ ಸಿಇಓ ಆಗಬಾರದು ಎಂದು ಜೋರಾಗಿ ಹೇಳುತ್ತಾನೆ. ಆದರೆ ಭಾರ್ಗವಿ ಆಸೆಗೆ ಇದೀಗ ತಣ್ಣೀರು ಎರಚಿದ ಹಾಗೆ ಆಗಿದೆ. ಮುಂದೇನು ಎನ್ನುವುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications











