Seetha Raama: ಸತ್ಯ ತಿಳಿದು ಸೀತಾ ಶಾಕ್: ಆಕೆಯ ಮುಂದಿನ ನಡೆಯೇನು?
ಭಾರ್ಗವಿ ಮಾಡಿದ ಕೆಲಸಕ್ಕೆ ರಾಮ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಿದೆ. ಸೀತಾ ಹಾಗೂ ಆಕೆಯ ಕುಟುಂಬಕ್ಕೆ ನಿಜ ವಿಚಾರ ತಿಳಿಸಬೇಕು, ಆಕೆಯ ಬಳಿ ಎಲ್ಲ ವಿಚಾರವನ್ನು ಹೇಳಿ ತನ್ನ ಮನದಲ್ಲಿರುವ ಭಾರವನ್ನ ಇಳಿಸಿಕೊಳ್ಳಬೇಕು ಎಂದು ರಾಮ್ ಅಂದುಕೊಂಡಿರುತ್ತಾನೆ.
ದೇಸಾಯಿ ಕುಟುಂಬದ ಕುಡಿ ರಾಮ ಎಂದು ಇಡೀ ಪ್ರಪಂಚಕ್ಕೆ ಮಾಧ್ಯಮದವರ ಮೂಲಕ ತಿಳಿದು ಹೋಗುತ್ತದೆ. ರಾಮನಿಗೆ ಹೇಳುವ ಮುಂಚೆಯೇ ಸೀತಾ ಹಾಗೂ ಆಕೆಯ ಕುಟುಂಬಕ್ಕೆ ರಾಮ ದೇಸಾಯಿ ಕುಟುಂಬದ ಕುಡಿ ಎನ್ನುವ ವಿಚಾರ ತಿಳಿದು ದಂಗಾಗಿ ಹೋಗುತ್ತಾರೆ. ಸೀತಾ ರಾಮನನ್ನು ಬಹಳ ಹಚ್ಚಿಕೊಂಡಿರುತ್ತಾಳೆ. ಆದರೆ ಸೀತಾ, ಬಾಸ್ ರಾಮ್ ಎಂದು ತಿಳಿದು ಶಾಕ್ ಆಗುತ್ತಾಳೆ. ಇಷ್ಟರವರೆಗೆ ನಮ್ಮ ಜೊತೆ ಇದ್ದ ರಾಮ್ ನನ್ನ ಬಾಸ್ ಎನ್ನುವುದನ್ನು ಅರಗಿಸಿಕೊಳ್ಳಲು ಕೂಡ ಆಕೆಗೆ ಆಗುವುದಿಲ್ಲ.

ಸೀತಾಗೆ ಏನು ಮಾಡಬೇಕು ಎಂದು ದಿಕ್ಕು ತೋಚಿದಾಗುತ್ತದೆ. ಸಿಹಿಗೆ ರಾಮ್ ಎಂದರೆ ಪಂಚಪ್ರಾಣ. ಸಿಹಿಗೋಸ್ಕರ ರಾಮ್ ಏನು ಮಾಡಲು ಸಿದ್ದನಿರುತ್ತಾನೆ. ಸೀತಾ ಹಾಲು ಹಾಗೂ ಮೊಸರು, ತುಪ್ಪವನ್ನು ತೆಗೆದುಕೊಂಡು ಹೋಗಲು ಅಂಗಡಿಗೆ ಬಂದಿರುತ್ತಾಳೆ. ರಾಮ್ ಬರುತ್ತಾರೆ ಅವರಿಗೋಸ್ಕರ ಕ್ಯಾರೆಟ್ ಹಲ್ವಾ ಮಾಡಬೇಕೆಂದು ಸಿಹಿ ಹಠ ಹಿಡಿದಿರುತ್ತಾಳೆ.
ರಾಮ್‌ಗಾಗಿ ಕಾದು ಕುಳಿತ ಸಿಹಿ
ಇತ್ತ ರಾಮ್ ಬರುವ ವೇಳೆ ಕ್ಯಾರೆಟ್ ಹಲ್ವಾ ಮಾಡಬೇಕೆಂದು ಸೀತಾ ಅಂಗಡಿಗೆ ಹೋಗಿ ಬರುತ್ತಿರಬೇಕಾದರೆ ರಾಮ್ ಅವಾರ್ಡ್ ಸ್ವೀಕಾರ ಮಾಡುತ್ತಿರುವುದನ್ನ ಟಿವಿ ಮೂಲಕ ನೋಡುತ್ತಾಳೆ. ಇದನ್ನ ನೋಡಿದ ಆಕೆ ಹುಬ್ಬೇರಿಸುತ್ತಾಳೆ. ನಮ್ಮೊಟ್ಟಿಗೆ ಇದ್ದಿದ್ದು ದೇಸಾಯಿ ಕುಟುಂಬದ ಕುಡಿ ರಾಮ್ ಎನ್ನುವುದು ಸೀತಾಗೆ ನುಂಗಲಾರದ ಬಿಸಿ ತುಪ್ಪದಂತಾಗುತ್ತದೆ.
ಸಪ್ಪೆ ಮುಖ ಹಾಕಿಕೊಂಡ ಪ್ರಿಯಾ
ಅಶೋಕನನ್ನು ಬಾಸ್ ಎಂದು ನಂಬಿಕೊಂಡಿದ್ದ ಪ್ರಿಯಗೂ ಕೂಡ ಇದು ಬಹಳ ದೊಡ್ಡ ಶಾಕ್. ಏಕೆಂದರೆ ಅಶೋಕನನ್ನು ಬಾಸ್ ಎಂದು ನಂಬಿ ಆತನನ್ನು ಪ್ರೀತಿ ಮಾಡುತ್ತಿದ್ದಳು ಪ್ರಿಯಾ. ಆದರೆ ರಾಮ್ ದೇಸಾಯಿ ಕುಟುಂಬದ ಕುಡಿ ಎನ್ನುವುದು ಪ್ರಿಯಾಗೆ ಆದಾಗಲೇ ತಿಳಿದು ಹೋಗಿತ್ತು.
ರಾಮ್‌ನನ್ನು ಸೀತಾ ಕ್ಷಮಿಸುತ್ತಾಳಾ ?
ಪ್ರೊಮೋದಲ್ಲಿ ತೋರಿಸಿದ ಹಾಗೆ ಸೀತಾ ಹಾಗೂ ರಾಮ್ ಹೊಸ ಜರ್ನಿ ಇನ್ನಷ್ಟೇ ಶುರು ಆಗಬೇಕಾಗಿದೆ. ಇದಕ್ಕೆ ಕಾರಣ ಭಾರ್ಗವಿ ಆಗಲು ಬಹುದು. ಹೌದು ಸೀತಾಗೆ ಸುಳ್ಳು ಅಂದರೆ ಇಷ್ಟ ಆಗುವುದಿಲ್ಲ. ರಾಮ್‌ಗೆ ಸೀತಾ ನನ್ನನ್ನು ಖಂಡಿತವಾಗಿಯೂ ಅರ್ಥ ಮಾಡಿಕೊಂಡು ಇರುತ್ತಾಳೆ ಎನ್ನುವ ಕಾನ್ಫಿಡೆನ್ಸ್ ಬರುತ್ತದೆ. ಆಫೀಸ್‌ನಲ್ಲಿ ನಡೆಯುವ ಕಳ್ಳ ವ್ಯವಹಾರ ತಪ್ಪಿಸಲೆಬೇಕು ಎಂದು ರಾಮ್ ಈ ಥರ ನಾಟಕ ಆಡುವ ಅನಿವಾರ್ಯ ಕಾರಣ ಬಂದಿತ್ತು. ಅದನ್ನು ಅಜ್ಜಿ ತಾತ ಬಳಿ ಹೇಳುತ್ತಾನೆ ರಾಮ್.

ರಾಮ್‌ನನ್ನು ಕಂಡು ಖುಷಿ ಪಟ್ಟ ಸೀತಾ
ಇನ್ನೂ ಸೀತಾ ಬಳಿ ಕೂಡ ಇದ್ದ ವಿಚಾರವನ್ನು ಹೇಳಿದರೆ ಸೀತಾ ಅರ್ಥ ಮಾಡಿಕೊಂಡು ಇರುತ್ತಾಳೆ. ಸೀತಾ ಮನೆಗೆ ಬರುವ ವೇಳೆ ರಾಮ್ ಬಂದು ಎಲ್ಲರ ಜೊತೆ ಮಾತನಾಡುತ್ತಾ ಇರುತ್ತಾನೆ . ಸೀತಾಗೆ ರಾಮನನ್ನು ಫೇಸ್ ಮಾಡುವ ಧೈರ್ಯ ಸಾಕಾಗುತ್ತ ಇರಲಿಲ್ಲ. ಗೆಳೆಯ ಎಂದು ಬಹಳ ಖುಷಿ ಪಡುತ್ತಾ ಇದ್ದ ಸೀತಾ ಇನ್ನೂ ಮುಂದೆ ಏನು ಮಾಡುತ್ತಾಳೆ? ಎಂಬುವುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications











