5 ಲಕ್ಷ ಸಬ್‌ಸ್ಕ್ರೈಬರ್ಸ್ ಹೊಂದಿರುವ ವೈಷ್ಣವಿ ಗೌಡ ಯೂಟ್ಯೂಬ್ ಆದಾಯ ಎಷ್ಟು?
ಜನ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಹಣ ಗಳಿಸುತ್ತಿದ್ದಾರೆ. ಕೆಲವರು ಪಾರ್ಟ್‌ಟೈಮ್, ಮತ್ತೆ ಕೆಲವರು ಫುಲ್ ಟೈಮ್ ಸೋಶಿಯಲ್ ಮೀಡಿಯಾ ನಂಬಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಯೂಟ್ಯೂಬ್‌ನಿಂದ ಪ್ರತಿತಿಂಗಳು ಲಕ್ಷ ಲಕ್ಷ ಎಣಿಸುವವರು ಇದ್ದಾರೆ. ಕೆಲ ಸಿನಿಮಾ, ಕಿರುತೆರೆ ತಾರೆಯರು ಕೂಡ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ.
ಜನ ಸಾಮಾನ್ಯರ ಸೋಶಿಯಲ್ ಮೀಡಿಯಾ ಖಾತೆಗಳಿಗಿಂತ ತಾರೆಯರ ಖಾತೆಗಳಿಗೆ ಹೆಚ್ಚಿನ ಫಾಲೋಯಿಂಗ್ ಇರುತ್ತದೆ. ಯೂಟ್ಯೂಬ್ ಸಬ್‌ಸ್ಕ್ರೈಬರ್ಸ್ ಜಾಸ್ತಿ ಇರ್ತಾರೆ. ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆಗಳ ಜೊತೆಗೆ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಅದರಲ್ಲಿ ವಾರಕ್ಕೆ ಒಂದು ಎರಡು ವೀಡಿಯೋ ಪೋಸ್ಟ್ ಮಾಡುತ್ತಿದ್ದಾರೆ.

5 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ 'ವೈಷ್ಣವಿ' ಯೂಟ್ಯೂಬ್ ಚಾನಲ್‌ಗೆ ಇದ್ದಾರೆ. ತಮ್ಮ ಯೂಟ್ಯೂಬ್ ತಿಂಗಳ ಆದಾಯ ಎಷ್ಟು ಎನ್ನುವುದನ್ನು ವೀಡಿಯೋ ಮಾಡಿ ತಿಳಿಸಿದ್ದಾರೆ. ಆ ವೀಡಿಯೋ ಕೂಡ 25 ಸಾವಿರಕ್ಕೂ ಅಧಿಕ ವೀವ್ಸ್ ಗಿಟ್ಟಿಸಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿ ವೈಷ್ಣವಿ ಮನೆ ಮಾತಾಗಿದ್ದರು.
ಸದ್ಯ ಜೀ ಕನ್ನಡ ವಾಹಿನಿಯ 'ಸೀತಾರಾಮ' ಧಾರಾವಾಹಿಯಲ್ಲಿ ಸೀತಾ ಆಗಿ ವೈಷ್ಣವಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇನ್ನು ತಮ್ಮ ಯೂಟ್ಯೂಬ್ ಗಳಿಕೆ ಬಗ್ಗೆ ಆಕೆ ಮಾತನಾಡಿದ್ದಾರೆ. ತಾವು ಬಳಸುವ ಕ್ಯಾಮರಾ, ಟ್ರೈಪಾಡ್, ಲೈಟ್ ಎಲ್ಲದನ್ನು ಪ್ರದರ್ಶಿಸಿದ್ದಾರೆ. ಅದರ ದರಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಆಗಾಗ್ಗೆ ವ್ಲಾಗ್ಸ್ ವೀಡಿಯೋಗಳನ್ನು ಹಾಕುತ್ತಾರೆ.
ಇತ್ತೀಚೆಗೆ 'ಸೀತಾರಾಮ' ಧಾರಾವಾಹಿ ತಂಡ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಹೋಗಿತ್ತು. ಅಲ್ಲೇ ಧಾರಾವಾಹಿಯ ಕೆಲ ಎಪಿಸೋಡ್‌ಗಳನ್ನು ಚಿತ್ರೀಕರಿಸಲಾಗಿತ್ತು. ಈ ಬಗ್ಗೆ ಕೂಡ ವೈಷ್ಣವಿ ವ್ಲಾಗ್ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಯೂಟ್ಯೂಬ್ ವೀಡಿಯೋಗಳಿಂದ ಮಾತ್ರವಲ್ಲ ಬೇರೆ ವಿಧದಲ್ಲಿ ಹಣ ಗಳಿಸುತ್ತಿರುವುದಾಗಿ ವೈಷ್ಣವಿ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಯೂಟ್ಯೂಬ್ ಚಾನಲ್ ಆರಂಭಿಸಿದೆ. ಇಷ್ಟು ಕಡಿಮೆ ಸಮಯದಲ್ಲಿ 5 ಲಕ್ಷದ 75 ಸಾವಿರ ಸಬ್‌ಸ್ಕ್ರೈಬರ್ಸ್ ಗಳಿಸಿರುವುದು ತಮಾಷೆ ಮಾತಲ್ಲ. ನನ್ನನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ. ಜನ ಕೇಳುವ ಟಾಪಿಕ್ ಬಗ್ಗೆ ವೀಡಿಯೋ ಮಾಡುವುದು ಉತ್ತಮ. ನಾನು ಅದನ್ನೇ ಮಾಡ್ತೀನಿ. ನಿಖರವಾಗಿ ನಾನು ಯೂಟ್ಯೂಬ್‌ನಿಂದ ಎಷ್ಟು ಆದಾಯ ಗಳಿಸುತ್ತೀನಿ ಎಂದು ಹೇಳೋಕೆ ಸಾಧ್ಯವಿಲ್ಲ. ಯಾಕಂದರೆ ಅದು ಅವರವರ ವೈಯಕ್ತಿಯ ವಿಚಾರ ಎಂದು ವೈಷ್ಣವಿ ತಿಳಿಸಿದ್ದಾರೆ.
ವೈಷ್ಣವಿ ಯೂಟ್ಯೂಬ್‌ನಿಂದ 5 ಅಂಕಿಯ ಆದಾಯ ಗಳಿಸುತ್ತೇನೆ ಎಂದು ಹೇಳಿದ್ದಾರೆ. ಯೂಟ್ಯೂಬ್‌ನಲ್ಲಿ ಸಾಕಷ್ಟು ಉತ್ಪನ್ನಗಳ ಪ್ರಚಾರವನ್ನು ಮಾಡುತ್ತಾರೆ. ಒಂದೊಂದು ಬ್ರ್ಯಾಂಡ್ ಒಂದೊಂದು ರೀತಿಯ ಸಂಭಾವನೆ ಕೊಡುತ್ತಾರೆ. ನೇರವಾಗಿ ಯೂಟ್ಯೂಬ್ ಆದಾಯ, ವಿವಿಧ ಬ್ರ್ಯಾಂಡ್‌ಗಳ ಪ್ರಚಾರದಿಂದ ಬರುವ ಆದಾಯ ಹೀಗೆ ಬಗೆ ಬಗೆಯಾಗಿ ಆದಾಯ ಬರುತ್ತದೆ ಎಂದು ವೈಷ್ಣವಿ ವಿವರಿಸಿದ್ದಾರೆ.
ನನ್ನ ವೀಡಿಯೋಗಳನ್ನು ಎಡಿಟ್ ಮಾಡಲು ಒಂದು ತಂಡ ಇದೆ. ಆರಂಭದಲ್ಲಿ ನಾನೇ ವೀಡಿಯೋ ಎಡಿಟ್ ಮಾಡುತ್ತಿದ್ದೆ. ಬಳಿಕ ಅದು ಕಷ್ಟ ಆಗುತ್ತದೆ ಎಂದು ಆ ತಂಡದ ಜೊತೆ ಕೈ ಜೋಡಿಸಿದೆ. ಎರಡನೇ ಆದಾಯದ ಮೂಲವಾಗಿ ಯೂಟ್ಯೂಬ್ ಅನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಯಾರು ಬೇಕಾದರೂ ಯೂಟ್ಯೂಬ್ ಚಾನಲ್ ಶುರು ಮಾಡಿ ಆದಾಯ ಗಳಿಸಬಹುದು ಎಂದಿದ್ದಾರೆ. ಅವರಿವರ ಆದಾಯದ ಬಗ್ಗೆ ಮಾತನಾಡೋದು ಬಿಟ್ಟು ನಾವು, ನೀವು ಎಲ್ಲರೂ ದುಡಿಯಬಹುದು. ಅದಕ್ಕಾಗಿ ಪರಿಶ್ರಮ ಬೇಕು ಎಂದು ಹೇಳಿದ್ದಾರೆ.


Click it and Unblock the Notifications











