ಆಪತ್ತಿನಲ್ಲಿ ಇರುವ ರಾಮ: ಸೀತಾಗೆ ರಾಮನ ಪ್ರೀತಿ ಅರ್ಥ ಆಗೋದ್ಯಾವಾಗ?

By ಪೂರ್ವ

ರಾಮನಿಗೆ ಸೀತಾ ಮೇಲೆ ಒಲವಾಗಿದೆ. ಆದರೆ, ಅದಕ್ಕೆ ಪ್ರತಿಫಲವಾಗಿ ಅವಮಾನ ಎಲ್ಲವನ್ನೂ ಸಹಿಸಿಕೊಂಡು ಸಿಹಿ ಹಾಗೂ ಸೀತಾ ಪ್ರೀತಿಗಾಗಿ ರಾಮ್ ಬಹಳ ಫೈಟ್ ಮಾಡುತ್ತಿದ್ದಾನೆ. ಹೇಗಾದರೂ ಮಾಡಿ ಸೀತಾಗೆ ಸತ್ಯ ಹೇಳಿ ಬಿಡಬೇಕು .. ಇಲ್ಲವಾದರೆ ಸೀತಾ ಕೈ ತಪ್ಪಿ ಹೋಗುವ ಎಲ್ಲಾ ಲಕ್ಷಣಗಳು ಇದೆ. ಹಾಗೆಯೇ ರಾಮ್‌ಗೆ ಆತನ ತಾತ ಕೂಡ ಇದೀಗ ಆರ್ಡರ್ ಮಾಡಿದ್ದಾರೆ. ಅದೇನೆಂದರೆ ನೀನು ಸೀತಾಗೆ ಈ 24 ಗಂಟೆಯಲ್ಲಿ ಲವ್ ಪ್ರಪೋಸ್ ಮಾಡಿಬಿಡಬೇಕು. ಇಲ್ಲವಾದರೆ, ಸೀತಾ ಮನೆಗೆ ಹೋಗಿ ನಾನೇ ಹೆಣ್ಣು ಕೇಳಿ ಬಿಡುತ್ತೇನೆ ಎಂದು ಹೇಳಿ ಬಿಡುತ್ತಾರೆ.

ಇದನ್ನು ಕೇಳಿದ ರಾಮ್ ಮಾತ್ರ ಶಾಕ್ ಆಗಿದ್ದಾನೆ. ಆ ಕಾರಣಕ್ಕೆ ರಾಮ್ ಸೀತಾಗೆ ಹೇಗೆಲ್ಲಾ ಪ್ರಪೋಸ್ ಮಾಡಬೇಕು ಎನ್ನುವುದನ್ನು ಯೋಚನೆ ಮಾಡುತ್ತಾನೆ. ಪ್ರಾಕ್ಟೀಸ್ ಕೂಡ ಮಾಡುತ್ತಾ ಇರುತ್ತಾನೆ. ಇದಕ್ಕೆಲ್ಲ ಅಶೋಕ್ ಸಾಥ್ ಬೇರೆ. ಆದರೆ, ಭಾರ್ಗವಿ ಮಾತ್ರ ರಾಮನನ್ನು ಸಾಯಿಸಲು ಪ್ಲಾನ್ ಮೇಲೆ ಪ್ಲಾನ್ ಮಾಡುತ್ತಲೇ ಇರುತ್ತಾಳೆ. ಅದಕ್ಕಾಗಿ ರುದ್ರ ಪ್ರತಾಪನನ್ನು ಕೂಡ ಭಾರ್ಗವಿ ಜೈಲಿನಿಂದ ರಿಲೀಸ್ ಮಾಡಿಸಿದ್ದಾಳೆ. ರಾಮನ ವಿರುದ್ಧ ಯಾರೋ ಬೇಕಂತಲೇ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅಶೋಕನಿಗೆ ಇದಕ್ಕೂ ಮೊದಲೇ ತಿಳಿದಿತ್ತು.

Seetharaama serial February 19th update about their love in danger

ಆದರೆ, ಅದು ಯಾರು ಎನ್ನುವ ವಿಚಾರ ಆತನಿಗೆ ತಿಳಿದಿಲ್ಲ. ಆದರೂ ರಾಮನ ಸೇಫ್ಟಿಗೆ ಬಾಡಿ ಗಾರ್ಡ್ ಅನ್ನು ಇಟ್ಟಿದ್ದಾನೆ. ರಾಮ ಮಾತ್ರ ಇದೆಲ್ಲ ಬೇಡ ಎಂದರು ಅಶೋಕ್ ಮಾತ್ರ ಕೇಳುವುದೇ ಇಲ್ಲ. ಇತ್ತ ಅಶೋಕ್ ಹಾಗೂ ಪ್ರಿಯ ಇಬ್ಬರು ಒಂದಾಗಿದ್ದಾರೆ. ಪ್ರಿಯ ಎಂದರೆ ಅಶೋಕ್‌ಗೆ ಬಹಳ ಇಷ್ಟ. ಆದರೆ, ಅದನ್ನು ಆತ ಪ್ರಿಯ ಜೊತೆ ಶೇರ್ ಮಾಡಿ ಇರಲಿಲ್ಲ. ಆದರೆ ಇಬ್ಬರು ಇದೀಗ ಒಬ್ಬರಿಗೊಬ್ಬರು ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಇದರಿಂದ ಮತ್ತಷ್ಟು ಇಬ್ಬರು ಆನಂದದಿಂದ ಇರುತ್ತಾರೆ. ರಾಮ ಆಫೀಸಿನಲ್ಲಿ ಕುಳಿತು ಟೈಮ್ ನೋಡುತ್ತಿರುತ್ತಾನೆ.

ತಾತನ ಮಾತಿಗೆ ತಲೆ ಕೆಡಿಸಿಕೊಂಡ ರಾಮ

ಇದೇನಿದು ಟೈಮ್ ಇವತ್ತು ಸಿಕ್ಕಾಪಟ್ಟೆ ಸ್ಪೀಡ್ ಆಗಿ ಹೋಗುತ್ತಿದೆ ಎಂದೆಲ್ಲ ರಾಮ ಮನದಲ್ಲಿ ಅಂದುಕೊಂಡಿದ್ದಾನೆ. ರಾಮ, ಸೀತಾ ಮನೆಗೆ ಹೋಗುವ ತವಕದಲ್ಲಿ ಇರುತ್ತಾನೆ. ಆದರೆ ಕ್ಯಾಬಿನಿಂದಾ ಹೊರಗಡೆ ಬಂದಾಗ ಸೀತಾ ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡುತ್ತಾ ಇರುತ್ತಾರೆ. ತಾತ ಹೇಳಿರುವ ವಿಚಾರ ಮನದಲ್ಲಿ ಪದೇ ಪದೆ ಗುಯ್ ಗುಡುತ್ತಿದೆ. ಇನ್ನು ಆಫೀಸ್ ಬಿಡುವ ಹೊತ್ತು ಬಂದೆ ಬಿಡುತ್ತೆ.

Seetharaama serial February 19th update about their love in danger

ಸೀತಾ ಬಳಿ ಮಾತನಾಡಲು ತೊದಲಿದ ರಾಮ

ರಾಮ, ಸೀತಾ ಬಳಿ ಬಂದು "ನಾಳೆ ಫ್ರೀ ಮಾಡಿಕೊಳ್ಳಬಹುದ ಸೀತಾ? ಸ್ವಲ್ಪ ಮಾತನಾಡಬೇಕಿತ್ತು" ಎಂದು ಹೇಳಿದಾಗ, "ಈಗಲೇ ಮಾತನಾಡಬಹುದು ಎನ್ನುತ್ತಾಳೆ ಸೀತಾ. ಆದರೆ, ರಾಮ್‌ಗೆ ಸತ್ಯ ಹೇಳಲು ಆಗದೆ ತೊಳಲಾಡುತ್ತಾನೆ. ಇನ್ನು ಏನಿಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಸೀತಾ ಮನೆಗೆ ಡೈರೆಕ್ಟ್ ಆಗಿ ರಾಮ ಬರುತ್ತಾನೆ. ರಾಮ ಬರುವುದನ್ನು ನೋಡಿ ಅಕ್ಕಪಕ್ಕದ ಮನೆಯವರೆಲ್ಲ ಒಟ್ಟಾರೆ ಮಾತನಾಡಲು ಶುರು ಮಾಡುತ್ತಾರೆ. ಆ ವೇಳೆ ಅಲ್ಲಿಗೆ ಸೀತಾ ಬರುತ್ತಾಳೆ. ರಾಮ ಬಂದಿದ್ದನ್ನು ನೋಡಿ ಸೀತಾ ಬಹಳ ಕೋಪ ಮಾಡಿಕೊಳ್ಳುತ್ತಾಳೆ.

ರಾಮನನ್ನು ನೋಡಿ ಮುನಿಸಿಕೊಂಡ ಸೀತಾ

"ಇದೇನಿದು.. ಆಗಾಗ ನಮ್ಮ ಮನೆಗೆ ಬರುತ್ತಿರುತ್ತಿರಾ ರಾಮ್?.. ನಮಗೆ ಇದೆಲ್ಲ ಹಿಡಿಸುವುದು ಇಲ್ಲ.. ದಯವಿಟ್ಟು ಹೊರಟು ಹೋಗಿ" ಎಂದು ಹೇಳಿದಾಗ ರಾಮ್‌ಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ಅವಮಾನದಿಂದ ಬೇಸರಗೊಂಡು ಹೋಗುತ್ತಿರುವುದನ್ನು ರುದ್ರ ಪ್ರತಾಪ ನೋಡುತ್ತಾನೆ. ಮಳೆ ಬೇರೆ ಬಹಳ ಜೋರಾಗಿ ಬರುತ್ತಿರುತ್ತದೆ. ರುದ್ರ ಪ್ರತಾಪ ರೌಡಿಗಳನ್ನು ಚೂ ಬಿಟ್ಟು ಕಾರಿನಿಂದ ಆಕ್ಸಿಡೆಂಟ್ ಮಾಡಿಸಿ ಬಿಡುತ್ತಾನೆ. ರಾಮ್ ಮಾತ್ರ ಇದೀಗ ಜೀವನ್ಮರಣ ಹೋರಾಟದಲ್ಲಿ ಇದ್ದಾನೆ. ಸೀತಾಗೆ ಪ್ರೀತಿ ಹೇಳಲು ಬಂದ ರಾಮ ಆಪತ್ತಿನಲ್ಲಿ ಇದ್ದಾನೆ.

More from Filmibeat

English summary
Seetharaama serial February 19th update about their love in danger
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X