ಅಮೃತಧಾರೆ - ಸೀತಾರಾಮ ಟೀಮ್ ನಡುವೆ ಬಿಗ್ ಫೈಟ್? ಅಷ್ಟಕ್ಕೂ ಗೆದ್ದಿದ್ದಾದರೂ ಯಾರು?
ಜೀ ಕನ್ನಡ ವಾಹಿನಿಯಲ್ಲಿ ವಾರಾಂತ್ಯ ಆಗುವ ವೇಳೆ ಪ್ರಸಾರ ಆಗುವ ಶೋಗಳೂ ಭರಪೂರ ಮನರಂಜನೆ ನೀಡುತ್ತಿವೆ. ಕಿರುತೆರೆ ವೀಕ್ಷಕರನ್ನು ಮನರಂಜನೆ ಮಾಡುವ ಸಲುವಾಗಿಯೇ ಹೊಸ ಶೋ ವೀಕೆಂಡ್‌ನಲ್ಲಿ ಪ್ರಸಾರ ಆಗುತ್ತೆ. ಅದುವೇ 'ಜೀ ಎಂಟರ್‌ಟೈನರ್ಸ್'. ಪ್ರತಿವಾರ ಜೀ ಕನ್ನಡದ ಜನಪ್ರಿಯ ಧಾರಾವಾಹಿಯ ಕಲಾವಿದರು ಈ ಶೋನಲ್ಲಿ ಭಾಗಿಯಾಗುತ್ತಾರೆ.
'ಜೀ ಎಂಟರ್‌ಟೈನರ್ಸ್' ಕಿರುತೆರೆ ವೀಕ್ಷಕರ ಫೇವರಿಟ್ ಶೋ ಆಗಿಬಿಟ್ಟಿದೆ. ಈ ವಾರ ಅಂತೂ ಸೀರಿಯಲ್ ಪ್ರೇಮಿಗಳ ಕಣ್ಣಿಗೆ ಹಬ್ಬ. ಅದಕ್ಕೆ ಕಾರಣ ಈ ವಾರ 'ಜೀ ಎಂಟಟೈನರ್ಸ್' ಶೋಗೆ 'ಸೀತಾರಾಮ' ಧಾರಾವಾಹಿಯ ತಂಡ ಹಾಗೆಯೇ 'ಅಮೃತಧಾರೆ' ಧಾರಾವಾಹಿಯ ಟೀಮ್ ಒಟ್ಟಾಗಿ ಕಾಣಿಸಿಕೊಂಡಿದೆ. ಈ ಶೋನಲ್ಲಿ ಈ ಎರಡೂ ಧಾರಾವಾಹಿಗಳ ಫೈಟ್ ನೋಡುವುದಕ್ಕೆ ಮಜಾ.

ಈ ಶೋ ಅನ್ನು ಅಕುಲ್ ಬಾಲಾಜಿ ಅವರು ನಡೆಸಿಕೊಡುತ್ತಿದ್ದು ಕಿರುತೆರೆ ವೀಕ್ಷಕರಿಗೆ ಭರಪೂರ ಮನರಂಜನೆ ಸಿಕ್ಕಿದೆ. ಈಗಾಗಲೇ ಈ ರಿಯಾಲಿಟಿ ಶೋನ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಆಗಿದೆ. ಈ ಎರಡೂ ಸೀರಿಯಲ್ ನೋಡುವ ವೀಕ್ಷಕರಿಗಂತೂ ಈ ವೀಕೆಂಡ್ ಹಬ್ಬ ಅಂತಲೇ ಹೇಳಬಹುದು. ನಿಮ್ಮ ನೆಚ್ಚಿನ ನಟ ನಟಿಯರ ರಿಯಲ್ ಆಟವನ್ನು ಜೀ ಎಂಟಟೈನರ್ ರಿಯಾಲಿಟಿ ಶೋನಲ್ಲಿ ನೋಡಬಹುದು.
'ಜೀ ಎಂಟರ್‌ಟೈನರ್ಸ್' ಈ ರಿಯಾಲಿಟಿ ಶೋ ನಲ್ಲಿ ಐದು ಸುತ್ತುಗಳಿವೆ. ಸ್ಮಾರ್ಟರ್, ಸ್ಟ್ರಾಂಗರ್, ಫಾಸ್ಟರ್, ಫ್ಯಾಮಿಲಿಯರ್, ಲಕ್ಕಿಯರ್ ಎಂಬ ಸುತ್ತುಗಳಿವೆ. ಹಾಗೆಯೇ ಸೆಲ್ಫ್ ಡಿಫೆನ್ಸ್, ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಪಟ್ಟ ಟಾಸ್ಕ್ ಕೂಡ ಇರಲಿದೆ. ಇನ್ನೂ 'ಅಮೃತಧಾರೆ' ಹಾಗೂ 'ಸೀತಾರಾಮ' ತಂಡಕ್ಕೆ ಮೊಳೆ ಹೊಡೆಯುವ ಸ್ಪರ್ಧೆ ಕೂಡ ನೀಡಲಾಗಿದೆ. ಮೊದಲಿಗೆ ಸೀತಾರಾಮ ಧಾರಾವಾಹಿಯ ಅಶೋಕ್ ಮೊಳೆ ಹೊಡೆಯುವ ಆಟವನ್ನು ತೋರಿಸಲಾಗಿದೆ. ಅವರು ತಮಾಷೆಗೆ ಮೊಳೆ ಹೊಡೆಯುವುದು ಹೇಗೆ ಅದರ ಸ್ಟ್ರಾಟಜಿ ಏನು ಎಂಬುವುದನ್ನು ನಾನು ತಿಳಿದುಕೊಂಡೆ ಎಂದು ಪ್ರೋಮೊದಲ್ಲಿ ತಮಾಷೆ ಮಾಡಿದ್ದಾರೆ.

ಜೀ ಎಂಟಟೈನರ್ಸ್ ಶೋನಲ್ಲಿ 'ಸೀತಾರಾಮ' ಧಾರಾವಾಹಿಯ ಸೀತಾ ಮಾತ್ರ ಮೊಳೆ ಹೊಡೆಯುವುದು ಅದ್ಕೊಂಡ ಹಾಗೆ ಸುಲಭ ಇಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವು ಫೋಟೋಗಳನ್ನು ಪ್ರೋಮೋದ ತೋರಿಸಲಾಗಿದ್ದು, ಅದನ್ನು ನೋಡಿ ಧಾರಾವಾಹಿಯ ಹೆಸರನ್ನು ಹೇಳುವ ಟಾಸ್ಕ್ ನೀಡಲಾಗಿದೆ. ಇಂತಹದ್ದೇ ಮಜವಾದ ಗೇಮ್ ಇದ್ದು, ಪ್ರೋಮೋ ನೋಡಿದ ಅಭಿಮಾನಿಗಳು ಯಾವ ಟೀಂ ವಿನ್ ಆಗಬಹುದು ಅಂತ ಗೆಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಅಕುಲ್ ಬಾಲಾಜಿ ಶೋಗೆ ನಿರೂಪಕ. ಹೀಗಾಗಿ 'ಜೀ ಎಂಟಟೈನರ್ಸ್ ಮಸ್ತ್ ಮಜಾ ಕೊಡುತ್ತಿದೆ. ಅಕುಲ್ ನಿರೂಪಣೆಯ ಸ್ಟೈಲ್ ಬಹುತೇಕರಿಗೆ ಇಷ್ಟ ಪಟ್ಟಿದ್ದಾರೆ. ಅವರು ಮಾತನಾಡುವ ರೀತಿ ಆಗಿರಬಹುದು ಹಾಗೆಯೇ ತನ್ನದೇ ನಿರೂಪಣೆಯ ಸ್ಟೈಲ್‌ನಲ್ಲಿ ಸಾಕಷ್ಟು ಜನರ ಮನಸ್ಸನ್ನು ಗೆದ್ದ ನಿರೂಪಕ ಇವರು. ವೇದಿಕೆಯಲ್ಲಿ ತನ್ನ ಮಾತಿನ ಪ್ರತಿಭೆಯಿಂದ ಎಲ್ಲರ ಕಾಲೆಳೆಯುತ್ತಾ ಬಹಳ ಖುಷಿಯಿಂದಲೇ ರಿಯಾಲಿಟಿ ಶೋ ವನ್ನು ನಡೆಸಿಕೊಡುವುದು ಇನ್ನೊಂದು ಹೈಲೈಟ್.


Click it and Unblock the Notifications











