SeethaRaama: ಶ್ಯಾಮ್‌ಗೆ ಮಾತು ಕೊಟ್ಟ ರಾಮ್; ಸೀತಾ ಬಾಳಲ್ಲಿ ಅಲ್ಲೋಲ-ಕಲ್ಲೋಲ
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮ್ ಖುಷಿಯಾಗಿರಬೇಕು ಎಂದು ಸಿಹಿ ತನ್ನ ವಯಸ್ಸಿಗೂ ಮೀರಿದ ಆಲೋಚನೆಗಳನ್ನು ಮಾಡುತ್ತಿದ್ದಾಳೆ.
ಭಾರ್ಗವಿ, ಸೀತಾ ಹಾಗೂ ರಾಮ್ ಬದುಕು ಮೂರಾಬಟ್ಟೆಯಾಗಲಿ ಎಂದು ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿದ್ದಾಳೆ. ಇವರಿಬ್ಬರ ಈ ಹಗ್ಗ-ಜಗ್ಗಾಟದಲ್ಲಿ ಯಾರು ಗೆಲ್ಲುತ್ತಾರೋ ಗೊತ್ತಿಲ್ಲ.

ಸೀತಾ ಬದುಕು ಎಲ್ಲಿಂದಲೋ ಎಲ್ಲಿಗೋ ಹೋಗುತ್ತಿದೆ. ಡಾ.ಅನಂತಲಕ್ಷ್ಮೀ ಅವರನ್ನು ಭೇಟಿಯಾದ ಬಳಿಕ ಸೀತಾ ಮನಸ್ಸು ಕಲುಕಿದಂತಾಗಿದ್ದು, ಒಬ್ಬಳೇ ನೀರಿನಿಂದ ಹೊರಗೆ ತೆಗೆದ ಮೀನಿನಂತಾಗಿದೆ.
ರಾಮ್ ಕೊಟ್ಟ ಮಾತು ಸೀತಾಳಿಗೆ ಉರುಳು
ಮೇಘಶ್ಯಾಮ್ ಮಗು ಸತ್ತು ಹೋಗಿದೆ ಎಂದು ಇಷ್ಟು ದಿನ ಭಾವಿಸಿದ್ದ. ಆದರೆ, ಆ ಮಗು ಬದುಕಿದೆ ಎಂಬುದು ತಿಳಿದ ಮೇಲೆ ಬಾಡಿಗೆ ತಾಯಿ ತನಗೆ ಮೋಸ ಮಾಡಿದ್ದಾರೆ ಎಂದು ಭಾವಿಸಿದ್ದಾನೆ. ಇದರ ಬಗ್ಗೆಯೇ ರಾಮ್ ಬಳಿ ಹೇಳಿದ್ದಾನೆ. ಇಷ್ಟು ವರ್ಷ ನನ್ನ ಮಗು ಬದುಕಿಲ್ಲ ಎಂದು ಸುಮ್ಮನಿದ್ದೆ. ಆದರೆ, ಈಗ ಮಗು ಬದುಕಿದೆ ಎಂದಾದ ಮೇಲೆ ನನಗೆ ನನ್ನ ಮಗು ಬೇಕು ಎನಿಸುತ್ತಿದೆ. ಆದರೆ, ವೈದ್ಯರ ಸಹಾಯವಿಲ್ಲದೇ ಆ ಮಗುವನ್ನು ಹೇಗೆ ಪಡೆದುಕೊಳ್ಳುವುದು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾನೆ. ಆಗ ರಾಮ್ ನಿನ್ನ ಮಗು ಸಿಗುವವರೆಗೂ ನಾನು ಮಗು ಮಾಡಿಕೊಳ್ಳುವುದಿಲ್ಲ. ನಾನು ನಿನ್ನ ಜೊತೆಗೆ ಇದ್ದೇನೆ ಎಂದು ಮಾತು ಕೊಟ್ಟಿದ್ದಾನೆ. ಈಗ ರಾಮ್ ಕೊಟ್ಟ ಮಾತು ಸೀತಾ ಬಾಳಿಗೆ ದೊಡ್ಡ ಮುಳ್ಳಾಗುವುದರಲ್ಲಿ ಅನುಮಾನವಿಲ್ಲ.
ಮಗು ಬಗ್ಗೆ ಖುಷಿ ಹಂಚಿಕೊಂಡ ಶ್ಯಾಮ್
ಶ್ಯಾಮ್, ಶಾಲಿನಿ ಬಳಿ ತಮ್ಮ ಮಗು ಬಗ್ಗೆ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾನೆ. ಮಗು ಸತ್ತಿಲ್ಲ. ಬದುಕಿದೆ ಎಂದು ಡಾ.ಅನಂತಲಕ್ಷ್ಮೀ ಅವರೇ ಹೇಳಿದ್ದಾರೆ. ನಮ್ಮ ಮಗುವನ್ನು ನಾವು ವಾಪಸ್ ಕರೆದುಕೊಂಡು ಬರೋಣ ಎಂದು ಹೇಳುತ್ತಾನೆ. ಆದರೆ, ಶಾಲಿನಿಗೆ ಶ್ಯಾಮ್ ಮಾತು ಇಷ್ಟವಾಗುವುದಿಲ್ಲ. ಅಲ್ಲದೇ, ಶ್ಯಾಮ್ ಗೆ ಮಗು ಸತ್ತಿದೆ ಎಂದು ಸುಳ್ಳು ಹೇಳಿದ್ದೇ ಶಾಲಿನಿ. ಮಗು ಬೇಡ ಎಂದು ಜೀವನದಲ್ಲಿ ನಿರ್ಧರಿಸಿರುವ ಶಾಲಿನಿ, ಗಂಡನ ಆಸೆಗೆ ತಣ್ಣೀರು ಎರಚಿದ್ದಳು. ಈ ಸತ್ಯ ಶ್ಯಾಮ್ ಗೆ ಗೊತ್ತಿಲ್ಲ. ಶ್ಯಾಮ್ ಮಾತುಗಳನ್ನು ಕೇಳಿ ಶಾಳಿನಿ ಫುಲ್ ಶಾಕ್ ನಲ್ಲಿ ಇದ್ದಾಳೆ.

ಚಾಂದಿನಿ ಜೊತೆ ಶ್ಯಾಮ್ ಜಗಳ
ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವ ಚಾಂದಿನಿ ಏನದು ಮಗು. ನಿಮ್ಮಿಬ್ಬರ ಮಗು ಯಾವುದು ಎಂದು ಪ್ರಶ್ನಿಸುತ್ತಾಳೆ. ಆಗ ಶ್ಯಾಮ್ ನಮ್ಮ ವಿಚಾರದಲ್ಲಿ ಮೂಗು ತೂರಿಸಬೇಡ. ನೀನು ಫೋರ್ಜರಿ ಮಾಡಿದ್ದೀಯಾ ಎಂದು ಚಾಂದಿನಿಗೆ ಬೈಯುತ್ತಾನೆ. ನಿಮ್ಮ ಮಗು ಬಗ್ಗೆ ನನಗೆ ಗೊತ್ತಿದೆ ಅನಿಸುತ್ತಿದೆ. ಅದೇನು ಅಂತ ಕರೆಕ್ಟ್ ಆಗಿ ಕೇಳಿ ಎಂದು ಚಾಂದಿನಿ ಮತ್ತೆ ಕೇಳುತ್ತಾಳೆ. ಆಗ ಶ್ಯಾಮ್ ಕೋಪದಲ್ಲಿ ಚಾಂದಿನಿಗೆ ಈ ಮನೆಯಿಂದ ಹೊರಡು ಎಂದು ಹೇಳುತ್ತಾನೆ. ಇದರಿಂದ ಇವರ ಮನೆಯಲ್ಲಿ ಜಗಳ ಶುರುವಾಗುತ್ತದೆ.
ಗೊಂದಲದಲ್ಲಿ ಮುಳುಗಿದ ಸೀತಾ
ಇನ್ನು ರಾಮ್ ಸೀದಾ ಮನೆಗೆ ಬಂದು ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಅಲ್ಲದೇ, ಬಾಡಿಗೆ ತಾಯಿಯವರಿಗೆ ಎಷ್ಟು ಕೊಬ್ಬು ಇರಬೇಡ. ಬೇರೆಯವರ ಮಗುವನ್ನು ಹೇಗೆ ಕೊಡದೇ ಇರುತ್ತಾರೆ. ಪಾಪ, ಶ್ಯಾಮ್ ಮತ್ತು ಶಾಲಿನಿ ಎಂದು ಹೇಳುತ್ತಾನೆ. ಈ ಮಾತುಗಳನ್ನು ಕೇಳಿದ ಸೀತಾ ಮನದೊಳಗೆ ಕುಸಿದು ಬಿಟ್ಟಿದ್ದಾಳೆ. ಮನದಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ಮುಂದೆ ಏನು ಮಾಡುತ್ತಾಳೋ ಗೊತ್ತಿಲ್ಲ.


Click it and Unblock the Notifications











