Seetharama: ಸಿಹಿ ಪತ್ರ ಭಾರ್ಗವಿ ಕೈಗೆ; ಮತ್ತೆ ಸತ್ಯ ಮುಚ್ಚಿ ಹೋಗುತ್ತಾ?
'ಸೀತಾರಾಮ' ಧಾರಾವಾಹಿಯಲ್ಲಿ ಸಿಹಿ ಸಾವಿನ ಬಗ್ಗೆ ಮನೆಯಲ್ಲಿ ಮಾತನಾಡಬಾರದು ಎಂಬುದು ಗೊತ್ತಿದ್ದರೂ ಪದೇ ಪದೇ ಭಾರ್ಗವಿ ತಪ್ಪು ಮಾಡಿದ್ದಾಳೆ.
ಬೇಕಂತಲೇ ಸೀತಾಳನ್ನು ಮಟ್ಟ ಹಾಕುವ ಸಲುವಾಗಿ ಭಾರ್ಗವಿ ಸಿಹಿಗೆ ಆಕ್ಸಿಡೆಂಟ್ ಆಗಿದ್ದ ವಿಚಾರವನ್ನು ಮಾತನಾಡಿದ್ದು, ಇದರಿಂದ ಮೊದಲ ಬಾರಿಗೆ ರಾಮ್ ಜಗಳ ಮಾಡಿದ್ದಾನೆ.

ಭಾರ್ಗವಿ ಚಿಕ್ಕಿಯನ್ನು ರಾಮ್ ಬೈದಿದ್ದಾನೆ. ಇದರಿಂದ ಮನೆಯಲ್ಲಿ ಎಲ್ಲರ ಮನಸ್ಸು ಮೌನ ತಾಳಿದ್ದು, ಕೊನೆಗೆ ಭಾರ್ಗವಿ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳುವ ನಾಟಕ ಮಾಡಿದ್ದಾಳೆ.
ತಂಡ ಕಟ್ಟಿದ ಅಶೋಕ್
ಇತ್ತ ಅಶೋಕ್‌ಗೆ ಸಿಹಿ ಕಾಣಿಸಿಕೊಳ್ಳುವ ಯತ್ನ ಮಾಡಿದ್ದಾಳೆ. ಆದರೆ, ಸುಬ್ಬಿಗೆ ಹೊರತು ಪಡಿಸಿ ಸಿಹಿ ಬೇರೆ ಯಾರಿಗೂ ಕಾಣಿಸಿಉವುದಿಲ್ಲ. ಅವಳ ಧ್ವನಿಯೂ ಕೂಡ ಬೇರೆಯವರಿಗೆ ಕೇಳುವುದಿಲ್ಲ. ಇದರಿಂದಾಗಿ ಅಶೋಕ್‌ನನ್ನು ಕೊಂಚ ಸಮಯ ಸತಾಯಿಸಿದ್ದು, ಅಶೋಕ್ ಗೆ ಸಿಹಿಯ ಆತ್ಮ ಇರುವ ಸತ್ಯ ಗೊತ್ತಾಗಿದೆ. ಹೀಗಾಗಿ ಅಶೋಕ್ ಸಿಹಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಡಲು ಹೊರಟಿದ್ದ ಕಾರ್ಯವನ್ನು ನಿಲ್ಲಿಸಿದ್ದಾನೆ. ಈಗ ಸಿಹಿ, ಸುಬ್ಬಿ ಮತ್ತು ಅಶೋಕ್ ಮೂವರು ಒಂದು ತಂಡವನ್ನು ರಚಿಸಿಕೊಂಡಿದ್ದಾರೆ. ಆ ತಂಡದ ಮೂಲಕ ಭಾರ್ಗವಿಯ ಅಂತ್ಯವನ್ನು ಮಾಡಲು ಮುಂದಾಗಿದ್ದಾರೆ.
ಆಪರೇಷನ್ ಭಾರ್ಗವಿ
ಆಪರೇಷನ್ ಭಾರ್ಗವಿಗೆ ಹೊಸ ಸಾಹಸಕ್ಕೆ ಚಾಲನೆ ಕೊಟ್ಟಿದ್ದಾರೆ. ಟೀಂನ ಗುರಿಯಂತೆ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಇದಕ್ಕೋಸ್ಕರ ಸಿಹಿ ತನ್ನ ಸಾವಿಗೆ ಭಾರ್ಗವಿ ಕಾರಣ ಎಂಬುದನ್ನು ರಾಮ್‌ಗೆ ತಿಳಿಸಲು ಮುಂದಾಗಿದ್ದಾಳೆ. ತಾನು ಜೀವಂತವಾಗಿ ಇರದ ಕಾರಣ ಸಿಹಿ ಈಗ ಐಡಿಯಾ ಮಾಡಿದ್ದಾಳೆ. ತಾನೇ ಸ್ವತಃ ತನ್ನ ತಂದೆ ರಾಮ್‌ಗೆ ಪತ್ರ ಬರೆದಿದ್ದಾಳೆ. ಪತ್ರದಲ್ಲಿ ತನ್ನ ಸಾವಿಗೆ ಭಾರ್ಗವಿಯೇ ಕಾರಣ ಎಂದು ವಿವರಿಸಿದ್ದಾಳೆ. ಈ ಪತ್ರವನ್ನು ಹೇಗಾದರೂ ಮಾಡಿ ರಾಮ್‌ಗೆ ತಲುಪಿಸುವ ಜವಾಬ್ದಾರಿ ಅಶೋಕ್ ಮೇಲಿದೆ. ಸದ್ಯ ಸಿಹಿ ರಾಮ್‌ಗೆ ಸತ್ಯ ಹೇಳಿ ಪತ್ರ ಬರೆದಿದ್ದಾಳೆ.

ಪತ್ರ ಭಾರ್ಗವಿ ಬಳಿ
ಈ ಪತ್ರವನ್ನು ಅಶೋಕ್ ರಾಮ್ ಕೈಗೆ ಸಿಗಲಿ ಎಂದು ಫೈಲ್ ಒಂದರಲ್ಲಿ ಸೇರಿಸಿದ್ದಾನೆ. ಇದನ್ನು ನೋಡಿದ ಭಾರ್ಗವಿ ತನ್ನ ಆಟ ಆಡಿದ್ದಾಳೆ. ಫೈಲ್ ಅನ್ನು ಅಶೋಕ್ ರಾಮ್ ಕೈಗೆ ಕೊಟ್ಟಿದ್ದು, ಆ ಫೈಲ್ ಅನ್ನು ರಾಮ್ ತೆರೆಯುವ ಮುನ್ನವೇ ಭಾರ್ಗವಿ ಅಡ್ಡ ಬಂದಿದ್ದಾಳೆ. ಫೈಲ್ ಅನನು ಕಿತ್ತುಕೊಂಡು ವೇರ್ ಹೌಸ್‌ನಲ್ಲಿ ಸಮಸ್ಯೆ ಆಗಿದೆ. ಮೊದಲು ಅಲ್ಲಿಗೆ ಹೊರಡಿ ಎಂದು ರಾಮ್ ಮತ್ತು ಅಶೋಕ್‌ನನ್ನು ಹೊರಗೆ ಕಳಿಸಿದ್ದಾಳೆ. ಅಶೋಕ್ ಈಗ ಗಾಬರಿಯಾಗಿದ್ದಾನೆ. ಸಿಹಿ ಬರೆದ ಪತ್ರ ಭಾರ್ಗವಿ ಕೈ ಸೇರಿದೆ.
ಭಾರ್ಗವಿ ಕಥೆ ಮುಗೀತಾ?
ಸಿಹಿಯ ಪತ್ರವನ್ನು ಭಾರ್ಗವಿ ಓದಲು ಮುಂದಾಗಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅಶೋಕ್ ಪತ್ರವನ್ನು ಕಿತ್ತುಕೊಂಡಿದ್ದಾನೆ. ಇದರಲ್ಲಿ ನಿಮ್ಮ ಬಂಡವಾಳವೇ ಅಡಗಿದೆ. ವಾಣಿ ಅತ್ತೆ, ಪ್ರಸಾದ್ ಅಂಕಲ್ ಅನ್ನು ಕೊಂದಿದ್ದು ಯಾರು ಎಂಬುದು ಹಾಗೂ ಸಿಹಿಯ ಸಾವು ಆಕಸ್ಮಿಕ ಅಲ್ಲ. ಅದು ಕೊಲೆ ಎಂಬುದು ರಾಮ್‌ಗೆ ಗೊತ್ತಾಗುವ ಸಮಯ ಬಂದಿದೆ ಎಂದು ಭಾರ್ಗವಿ ಬಳಿ ಹೇಳಿ ಹೆದರಿಸಿದ್ದಾನೆ. ಈಗ ಭಾರ್ಗವಿ ತನ್ನನ್ನು ತಾನು ಉಳಿಸಿಕೊಳ್ಳಲು ಏನು ಮಾಡುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











