Seetha Raama ; ಇಂದ್ರ- ವಾಣಿ ಸಾವಿನ ರಹಸ್ಯ ಹೊರ ಬಂದ ಬೆನ್ನಲ್ಲೇ ನಾಪತ್ತೆಯಾದ ಸೀತಾ, ಮುಂದೇನು ?

ಸೀತಾ ರಾಮ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇನ್ನೇನು ಈ ವಾರಾಂತ್ಯಕ್ಕೆ ಧಾರಾವಾಹಿ ಅಂತ್ಯವಾಗಲಿದೆ. ಈ ಹಿನ್ನೆಲೆ ಆತುರಾತುರವಾಗಿ ಅಡಗಿರುವ ಎಲ್ಲ ಸತ್ಯವನ್ನು ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನವನ್ನು ಧಾರಾವಾಹಿ ತಂಡ ಮಾಡುತ್ತಿದ್ದು ಸದ್ಯ ರಾಮನ ತಂದೆ ಮತ್ತು ತಾಯಿ ಇಂದ್ರ ಹಾಗೂ ವಾಣಿಯ ಕೊಲೆಗೆ ಭಾರ್ಗವಿಯೇ ನೇರ ಕಾರಣ ಎನ್ನುವ ವಿಚಾರ ಸೀತಾಗೆ ಗೊತ್ತಾಗಿದೆ.

ಹಳೆಯ ನೆಗೆಟಿವ್‌ಗಳನ್ನು ಪ್ರಿಂಟ್ ಮಾಡಿ ಸ್ಟುಡಿಯೋದ ಹುಡುಗ ಸೀತಾಗೆ ತಂದು ಕೊಟ್ಟಿದ್ದಾನೆ. ಪ್ರಿಂಟ್ ಹಳೆಯದ್ದಾದ ಕಾರಣ ಫೋಟೊಗಳು ಅಸ್ಪಷ್ಟವಾಗಿವೆ. ಅಸ್ಪಷ್ಟವಾದ ಫೋಟೊದಲ್ಲಿ ಸೀತಾ ಕಣ್ಣಿಗೆ ಒಬ್ಬಳು ಹೆಂಗಸು ಕಂಡಿದ್ದು ಪ್ರಿಯಾಗೆ ತೋರಿಸುತ್ತಾಳೆ. ಇಬ್ಬರು ಆತಂಕಕ್ಕೊಳಗಾಗುತ್ತಾರೆ. ಫೋಟೊವನ್ನು ಭಾರ್ಗವಿ ಅತ್ತೆಗೆ ತೋರಿಸಿ ಕೇಳುವುದಾ ಎಂದು ಪ್ರಿಯಾ ಬಳಿ ಸೀತಾ ಹೇಳಿದಾಗ ಪ್ರಿಯಾ ಬೇಡ ಸತ್ಯ ಚಿಕ್ಕಪ್ಪನ ಹತ್ರ ಕೇಳೋಣ ಎನ್ನುತ್ತಾಳೆ.

seetharama-kannada-serial-28th-May-episode-written-update

ಸತ್ಯ ಮಾತು ಕೇಳಿ ಶಾಕ್ ಆದ ಸೀತಾ

ಆ ನಂತರ ಇಬ್ಬರು ಸತ್ಯ ಬಳಿ ಹೋಗಿದ್ದು ಭಾವ ನೀವು ಕೊಟ್ಟಿದ್ದ ನೆಗೆಟಿವ್‌ನಲ್ಲಿ ಕೆಲ ಫೋಟೊಗಳು ಪ್ರಿಂಟ್ ಆಗಿವೆ, ಆದರೆ ಯಾರು ಗೊತ್ತಾಗುತ್ತಿಲ್ಲ ಎನ್ನುತ್ತಾಳೆ. ಫೋಟೊದಲ್ಲಿ ಒಬ್ಬರು ಇದ್ದಾರೆ ಅವರು ಯಾರೆಂದು ನೋಡಿ ಹೇಳ್ತೀರಾ ಎನ್ನುತ್ತಾಳೆ. ಫೋಟೊ ನೋಡುವ ಸತ್ಯ ಇದು ಭಾರ್ಗವಿ ಎಂದು ಹೇಳುತ್ತಾನೆ. ಇದರಿಂದ ಸೀತಾ ಮತ್ತು ಪ್ರಿಯಾ ಬೆಚ್ಚಿ ಬಿದ್ದಿದ್ದು ಸತ್ಯ ಅವತ್ತೇನಾಯ್ತು ಎಂದು ವಿವರಿಸುತ್ತಾನೆ.

ಅಣ್ಣ ಅತ್ತಿಗೆಗೆ ನಾನು ನೀರು ತಗೊಂಡು ಬರುವಾಗ ಅವರು ಜೋರಾಗಿ ಕಿರುಚಿದ ಶಬ್ದ ಬಂತು, ನಾನು ಬೆಟ್ಟ ಹತ್ತಿ ಮೇಲೆ ಹೋದಾಗ ಅಲ್ಲಿ ಇದ್ದ ಭಾರ್ಗವಿ ನನ್ನನ್ನು ನೋಡಿ ಯಾಕೋ ಭಾವ ಮತ್ತು ಅಕ್ಕನ ಯಾಕೆ ಕೊಂದೆ ಪಾಪಿ ಎಂದು ಕೀರುಚೋಕೆ ಶುರು ಮಾಡಿದಳು, ನೀವೆಲ್ಲ ಇದನ್ನು ನಂಬ್ತಿರೋ ಇಲ್ವೋ ಗೊತ್ತಿಲ್ಲ, ಆದರೆ ಅವಳೇ ದೇವರಂತಹ ನನ್ನ ಅಣ್ಣ ಅತ್ತಿಗೆಯನ್ನು ಕೊಲೆ ಮಾಡಿ ಆರೋಪ ನನ್ನ ಮೇಲೆ ಬರುವಂತೆ ಮಾಡಿದಳು ಎಂದು ಸೀತಾ ಮತ್ತು ಪ್ರಿಯಾ ಎದುರು ಸತ್ಯ ಹೇಳುತ್ತಾನೆ.

ಸತ್ಯನನ್ನು ತಡೆಯುವ ಸೀತಾ

ಇಷ್ಟು ದಿನ ಅವಳೇ ಕೊಲೆ ಮಾಡಿದ್ದು ಎನ್ನುವುದಕ್ಕೆ ನನ್ನ ಬಳಿ ಸಾಕ್ಷಿಗಳಿರಲಿಲ್ಲ ಹೀಗಾಗಿ ನಾನು ಸುಮ್ಮನೆ ಇದ್ದೆ ಇನ್ನೂ ನಾನು ಸುಮ್ಮನೆ ಇರುವುದಿಲ್ಲ ಎಂದು ಭಾರ್ಗವಿ ಬಳಿ ಹೋಗಲು ಸತ್ಯ ಮುಂದಾಗುತ್ತಾನೆ. ಆಗ ಸತ್ಯನನ್ನು ತಡೆಯುವ ಸೀತಾ ನನಗೆ ನಂಬೋಕೆ ಆಗ್ತಿಲ್ಲ ಎಂದು ಹೇಳುತ್ತಾಳೆ. ಮತ್ತೊಂದು ಕಡೆ ಪ್ರಿಯಾ ಫೋಟೊದಲ್ಲಿರುವ ಮುಖ ಅಸ್ಪಷ್ಟವಾಗಿದೆ ಹೀಗಾಗಿ ದುಡುಕುವುದು ಬೇಡ ರಾಮ್ ಸಹಾಯದಿಂದ ಸತ್ಯ ಬಯಲು ಮಾಡೋಣ ಎಂದು ಹೇಳುತ್ತಾಳೆ.

ಭಾರ್ಗವಿ ಮುಖಕ್ಕೆ ಫೋಟೊ ಎಸೆದ ಸೀತಾ

ಇದಕ್ಕೆ ಒಪ್ಪುವ ಸತ್ಯ ಫೋಟೊವನ್ನು ಸೀತಾ ಬಳಿ ನೀಡುತ್ತಾನೆ. ಸತ್ಯ ಬಳಿ ಫೋಟೊ ತೆಗೆದುಕೊಳ್ಳುವ ಸೀತಾ, ರಾಮ್‌ಗೆ ಕರೆ ಮಾಡುತ್ತಾಳೆ ಆಗ ಎದುರಾಗುವ ಭಾರ್ಗವಿ ಫೋನ್ ಕಿತ್ತುಕೊಂಡಿದ್ದಾಳೆ.

ಯಾಕೆ ಏನಾಯ್ತು, ಯಾಕೆ ಇಷ್ಟೊಂದು ಟೆನ್ಷನ್ ಮಾಡ್ಕೊಂಡಿದೀಯಾ, ಅಪ್ಪು ಹತ್ರ ಏನೋ ಮುಖ್ಯವಾದ ವಿಚಾರ ಮಾತನಾಡಬೇಕು ಅಂತಿದ್ದೆ ಅಲ್ಲ ಏನದು ಎಂದು ಭಾರ್ಗವಿ ಕೇಳುತ್ತಾಳೆ. ಆಗ ಸೀತಾ ನಂಬಿಕೆ ದ್ರೋಹ ಮಾಡಿದವರ ಜೊತೆ ಯಾವ ವಿಷಯ ಮಾತನಾಡಲು ಆಗಲ್ಲ ಎಂದು ಹೇಳುತ್ತಾಳೆ. ಇದರಿಂದ ಕೆರಳುವ ಭಾರ್ಗವಿ ನಂಬಿಕೆ ದ್ರೋಹಾನಾ ? ಏನಾಯ್ತು ಸೀತಾ ಎನ್ನುತ್ತಾಳೆ. ಆಗ ತನ್ನ ಬಳಿ ಇರುವ ಫೋಟೊವನ್ನು ಭಾರ್ಗವಿ ಮುಖಕ್ಕೆ ಸೀತಾ ಎಸೆದಿದ್ದು ಫೋಟೊಗಳನ್ನು ನೋಡಿ ಭಾರ್ಗವಿ ಶಾಕ್ ಆಗ್ತಾಳೆ.

ನಾಪತ್ತೆಯಾದ ಸೀತಾ

ಯಾವ ವಿಚಾರವನ್ನು ನಾನು ಹೊರಬರಬಾರದು ಅಂತ ಎಷ್ಟೋ ಪ್ರಯತ್ನ ಮಾಡಿದ್ದೇ ಆದರೆ ನೀನು ಹಾವಿನ ಬಾಲ ಹಿಡಿದು ಹುತ್ತನೇ ನೀನು ಕಂಡು ಹಿಡಿದೆ ಎನ್ನುತ್ತಾಳೆ. ಆಗ ಸೀತಾ ಎಲ್ಲ ವಿಚಾರವನ್ನು ರಾಮ್‌ಗೆ ಹೇಳ್ತೀನಿ ತೋರಸ್ತೀನಿ ಎಂದು ಸೀತಾ ಹೇಳಿದಾಗ ಜೋರಾಗಿ ನಗುವ ಭಾರ್ಗವಿ ನೀನು ಹೋಗಿ ರಾಮ್ ಬಳಿ ನಿಜಾ ಹೇಳುವವರೆಗೆ ನಾನು ಸುಮ್ನೆ ಇರ್ತಿನಿ ಎಂದುಕೊಂಡಿದೀಯಾ ಎನ್ನುತ್ತಾಳೆ.

ಸದ್ಯ ಸೀತಾನ ಹುಡುಕಿಕೊಂಡು ಪ್ರಿಯಾ ಬಂದಿದ್ದು ಸೀತಾ ಮನೆಯಲ್ಲಿ ಕಾಣುತ್ತಿಲ್ಲ. ಬದಲಿಗೆ ಸೀತಾ ಫೋನ್ ಮಾತ್ರ ಸಿಕ್ಕಿದೆ. ಇದರಿಂದ ಆತಂಕಕ್ಕೊಳಗಾಗುವ ಪ್ರಿಯಾ, ಸತ್ಯ ಬಳಿ ಹೋಗಿ ಸೀತಾ ಕಾಣ್ತಿಲ್ಲ ಎಂದು ಹೇಳುತ್ತಾಳೆ. ಭಾರ್ಗವಿ ಸದ್ಯ ಸೀತಾಳನ್ನು ಕಿಡ್ಯಾಪ್ ಮಾಡಿದ್ದು ಮುಂದೆ ಈ ಧಾರಾವಾಹಿಯ ಅಂತ್ಯ ಹೇಗಾಗಲಿದೆ ಎನ್ನುವುದನ್ನು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X